Sleeping Position: ನೀವು ಮಲಗುವ ಭಂಗಿ ಕೂಡ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ; ಹೇಗೆ ಮಲಗಿದ್ರೆ ಒಳ್ಳೆಯದು

ಒಳ್ಳೆಯ ವಿಶ್ರಾಂತಿಯ ನಿದ್ರೆಯನ್ನು ಪಡೆಯಲು ಅನೇಕ ಜನರು ಹೆಣಗಾಡುತ್ತಾರೆ. ನಿಮ್ಮ ನಿದ್ರೆಯ ಗುಣಮಟ್ಟವನ್ನು ನಿರ್ಧರಿಸುವಲ್ಲಿ ನಿಮ್ಮ ಜೀವನಶೈಲಿ (Lifestyle) ಮಹತ್ವದ ಪಾತ್ರ ವಹಿಸುತ್ತದೆ, ಆದರೆ ನೀವು ಹೇಗೆ ನಿದ್ರಿಸುತ್ತೀರಿ ಹಾಗೂ ನೀವು ನಿದ್ರಿಸುವ ಭಂಗಿ ಕೂಡ ಅಷ್ಟೇ ಮುಖ್ಯವಾಹಿರುತ್ತದೆ. ನಿದ್ರಿಸುವ ಪ್ರತಿಯೊಂದು ಭಂಗಿಗಳು ಆರೋಗ್ಯದ (Health) ಮೇಲೆ ಪರಿಣಾಮ ಬೀರುತ್ತದೆ. ಅದು ಹೇಗೆ ಅಂತ ಇಲ್ಲಿ ತಿಳ್ಕೊಳ್ಳಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಆಹಾರ (Food) ಮತ್ತು ವ್ಯಾಯಾಮದಂತೆಯೇ, ದೇಹದ ಆರೋಗ್ಯಕ್ಕೆ ರಾತ್ರಿಯ ನಿದ್ರೆಯೂ (Sleep) ಸಹ ತುಂಬಾ ಮುಖ್ಯವಾಗಿರುತ್ತದೆ. ಅನೇಕ ಜನರು ನಿದ್ರೆಯ ಅಭಾವದಿಂದ ಅನೇಕ ರೋಗಗಳಿಗೆ ತುತ್ತಾಗುವುದನ್ನು ನಾವು ನೋಡಿರುತ್ತೇವೆ. ಅದರಲ್ಲೂ ವಿಶೇಷವಾಗಿ ಸಾಂಕ್ರಾಮಿಕ ರೋಗದ (Infectious Disease) ನಂತರ ಒಳ್ಳೆಯ ವಿಶ್ರಾಂತಿಯ ನಿದ್ರೆಯನ್ನು ಪಡೆಯಲು ಅನೇಕ ಜನರು ಹೆಣಗಾಡುತ್ತಾರೆ. ನಿಮ್ಮ ನಿದ್ರೆಯ ಗುಣಮಟ್ಟವನ್ನು ನಿರ್ಧರಿಸುವಲ್ಲಿ ನಿಮ್ಮ ಜೀವನಶೈಲಿ (Lifestyle) ಮಹತ್ವದ ಪಾತ್ರ ವಹಿಸುತ್ತದೆ, ಆದರೆ ನೀವು ಹೇಗೆ ನಿದ್ರಿಸುತ್ತೀರಿ ಹಾಗೂ ನೀವು ನಿದ್ರಿಸುವ ಭಂಗಿ ಕೂಡ ಅಷ್ಟೇ ಮುಖ್ಯವಾಹಿರುತ್ತದೆ. ನಿದ್ರಿಸುವ ಪ್ರತಿಯೊಂದು ಭಂಗಿಗಳು ಆರೋಗ್ಯದ (Health) ಮೇಲೆ ಪರಿಣಾಮ ಬೀರುತ್ತದೆ. ಅದು ಹೇಗೆ ಅಂತ ಇಲ್ಲಿ ತಿಳ್ಕೊಳ್ಳಿ

 ಮಲಗುವ ಭಂಗಿಯ ಬಗ್ಗೆ ವೈದ್ಯರು ಏನು ಹೇಳಿದ್ದಾರೆ
ಅನೇಕ ಜನರು ತಾವು ಹೇಗೆ ಮಲಗುತ್ತೇವೆ ಎನ್ನುವುದರ ಮೇಲೆ ಗಮನ ಹರಿಸದೆ, ಸಂಭಾವ್ಯ ಆರೋಗ್ಯ ಪರಿಣಾಮಗಳನ್ನು ನಿರ್ಲಕ್ಷಿಸಿ ನಿದ್ರೆಗೆ ಜಾರುತ್ತಾರೆ. "ನಿಮ್ಮ ಹೊಟ್ಟೆ, ಬೆನ್ನು ಅಥವಾ ಒಂದು ಮಗ್ಗುಲಲ್ಲಿ ಮಲಗುವುದರಿಂದ ಗೊರಕೆ, ಸ್ಲೀಪ್ ಅಪ್ನಿಯಾ ರೋಗಲಕ್ಷಣಗಳು, ಕುತ್ತಿಗೆ ಮತ್ತು ಬೆನ್ನು ನೋವು ಮತ್ತು ಇತರ ವೈದ್ಯಕೀಯ ಕಾಳಜಿಗಳಲ್ಲಿ ವ್ಯತ್ಯಾಸವಾಗಬಹುದು" ಎಂದು ದೆಹಲಿಯ ಧರ್ಮಶಿಲಾ ನಾರಾಯಣ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯ ಆರ್ಥೋಪೆಡಿಕ್ಸ್, ಆರ್ಥ್ರೋಸ್ಕೋಪಿ ಮತ್ತು ಸ್ಪೈನ್ ಸರ್ಜರಿಯ ಮುಖ್ಯಸ್ಥ ಮತ್ತು ಹಿರಿಯ ಸಲಹೆಗಾರರಾದ ಡಾ.ವಿ.ಎ.ಸೆಂಥಿಲ್ ಕುಮಾರ್ ಹೇಳಿದ್ದಾರೆ.

ಶ್ರೀ ಬಾಲಾಜಿ ಆಕ್ಷನ್ ಮೆಡಿಕಲ್ ಇನ್ಸ್ಟಿಟ್ಯೂಟ್ ನ ಮೂಳೆಶಾಸ್ತ್ರ ವಿಭಾಗದ ಹಿರಿಯ ಸಲಹೆಗಾರ ಡಾ.ಯೋಗೇಶ್ ಕುಮಾರ್ ಅವರು ಅನುಚಿತ ಭಂಗಿಯಲ್ಲಿ ಮಲಗುವುದರಿಂದ ನಿದ್ರೆಗೆ ಅಡಚಣೆ, ಉದ್ವೇಗ ಮತ್ತು ಕಡಿಮೆ ರಕ್ತಪರಿಚಲನೆಗೆ ಕಾರಣವಾಗಬಹುದು ಎಂದು ಹೇಳಿದರು.

ನಿದ್ದೆ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ
"ಸಾಕಷ್ಟು ನಿದ್ರೆಯನ್ನು ಪಡೆಯದಿರುವುದು ನಮ್ಮ ರೋಗನಿರೋಧಕ ಶಕ್ತಿ, ಗಮನ ಮತ್ತು ಚಯಾಪಚಯ ಕ್ರಿಯೆಯ ಮೇಲೆ ಸಹ ಸಾಕಷ್ಟು ಪರಿಣಾಮ ಬೀರುತ್ತದೆ. ಆದ್ದರಿಂದ, ನೀವು ಮಲಗಲು ಯಾವ ಭಂಗಿ ಸೂಕ್ತವಾಗಿದೆ ಅಂತ ತಿಳಿದುಕೊಳ್ಳಿರಿ. ಸೊಂಟದಿಂದ ತಲೆಯ ಮೇಲ್ಭಾಗದವರೆಗೆ ಸರಿಯಾದ ಬೆನ್ನುಹುರಿ ಜೋಡಣೆಯನ್ನು ಉತ್ತೇಜಿಸುವ ಭಂಗಿಯೇ ಸೂಕ್ತವಾದ ನಿದ್ರೆಯ ಭಂಗಿಯಾಗಿದೆ" ಎಂದು ತಜ್ಞರು ಹೇಳುತ್ತಾರೆ.

ಇದನ್ನೂ ಓದಿ:  Sleep: ರಾತ್ರಿ ಮಲಗಿದ ಮೇಲೆ ಆಗಾಗ ಎಚ್ಚರವಾಗ್ತಿದ್ಯಾ? ಚಿಂತಿಸಬೇಡಿ, ನಿಮ್ಮ ಮೆಮೊರಿ ಪವರ್ ಹೆಚ್ಚಾಗ್ತಿದೆಯಂತೆ

ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಮಕ್ಕಳು ಪ್ರೌಢಾವಸ್ಥೆಗೆ ಸಮೀಪಿಸುವಾಗ ಎರಡು ಮಗ್ಗುಲುಗಳಲ್ಲಿ, ಬೆನ್ನಿನ ಮೇಲೆ ಮತ್ತು ಹೊಟ್ಟೆಯ ಮೇಲೆ ಸಮಾನವಾಗಿ ಮಲಗುತ್ತಾರೆ. ಇವುಗಳಲ್ಲಿ, ನೀವು ಮಗ್ಗುಲುಗಳಲ್ಲಿ ಅಥವಾ ನಿಮ್ಮ ಬೆನ್ನಿನ ಮೇಲೆ ಮಲಗಲು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಡಾ. ಸೆಂಥಿಲ್ ಹೇಳಿದರು.

ಮಗ್ಗುಲುಗಳಲ್ಲಿ ಮಲಗುವುದು
ವಯಸ್ಕರಲ್ಲಿ ಪ್ರಮುಖ ನಿದ್ರೆಯ ಭಂಗಿಯು ಇದಾಗಿರುತ್ತದೆ ಎಂದು ವಿವಿಧ ಅಧ್ಯಯನಗಳು ಸೂಚಿಸಿವೆ. ಡಾ. ಸೆಂಥಿಲ್ ಅವರ ಪ್ರಕಾರ, ಇದು ಅತ್ಯಂತ ಆರಾಮದಾಯಕ ಭಂಗಿಯಾಗಿದೆ ಮತ್ತು ಇದರಲ್ಲಿ, "ಬೆನ್ನೆಲುಬು ಸರಿಯಾದ ಹಾಸಿಗೆಯೊಂದಿಗೆ ವಿಸ್ತರಿಸಿದ ಮತ್ತು ಸಮಂಜಸವಾಗಿ ತಟಸ್ಥವಾಗಿ ಉಳಿಯಬಹುದು. ಇದು ಅನಗತ್ಯ ಕುತ್ತಿಗೆ, ಬೆನ್ನು ಮತ್ತು ಭುಜದ ನೋವನ್ನು ತಪ್ಪಿಸಲು ಸಹಾಯ ಮಾಡುತ್ತದೆ".

ಬೆನ್ನಿನ ಮೇಲೆ ಮಲಗುವುದು
ಬೆನ್ನಿನ ಮೇಲೆ ಮಲಗುವುದು ಎರಡನೇ ಅತ್ಯಂತ ಸಾಮಾನ್ಯವಾದ ಮಲಗುವ ಭಂಗಿಯಾಗಿದೆ. ಈ ಭಂಗಿಯು ನಿಮ್ಮ ಬೆನ್ನುಮೂಳೆಯನ್ನು ಹೆಚ್ಚು ನೈಸರ್ಗಿಕ ಸ್ಥಿತಿಯಲ್ಲಿರಿಸುತ್ತದೆ. ಇದು ಇತರ ಭಂಗಿಗಳೊಂದಿಗೆ ಬರುವ ಕೆಲವು ಕುತ್ತಿಗೆ, ಭುಜ ಮತ್ತು ಬೆನ್ನು ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ. ತಲೆಯನ್ನು ದಿಂಬಿನಿಂದ ಮೇಲಕ್ಕೆತ್ತುವ ಮೂಲಕ ಆಮ್ಲ ರಿಫ್ಲಕ್ಸ್ ಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡುವುದು ಸಹ ಪ್ರಯೋಜನಕಾರಿಯಾಗಬಹುದು.

ಇದನ್ನೂ ಓದಿ:   Cervical Cancer: ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ತಡೆಗೆ ಭಾರತದಲ್ಲಿ ಅಭಿವೃದ್ಧಿಪಡಿಸಲಾಗಿದೆ ಮೊದಲ ಸ್ಥಳೀಯ HPV ಲಸಿಕೆ

ಅತ್ಯಂತ ಕೆಟ್ಟ ನಿದ್ರೆಯ ಭಂಗಿ
ನಿಮ್ಮ ಹೊಟ್ಟೆ ಅಥವಾ ಎದೆಯ ಮೇಲೆ ಮಲಗುವುದು ತುಂಬಾನೇ ಹಾನಿಕಾರಕ ಎಂದು ತಜ್ಞರು ನಂಬುತ್ತಾರೆ, ಏಕೆಂದರೆ ಇದು "ನಿಮ್ಮ ಶ್ವಾಸಕೋಶ ಮತ್ತು ಎದೆಯ ಕುಹರದ ಮೇಲೆ ಸಾಕಷ್ಟು ಒತ್ತಡವನ್ನು ಹಾಕುತ್ತದೆ, ಇದು ನಿಮ್ಮ ಉಸಿರಾಟದ ಕಾರ್ಯವನ್ನು ಅಡ್ಡಿಪಡಿಸುತ್ತದೆ" ಎಂದು ಡಾ ಸೆಂಥಿಲ್ ಹೇಳಿದರು.

"ಇದು ನಿಮ್ಮ ತಲೆಯನ್ನು ನಿಮ್ಮ ದಿಂಬಿನ ಮೇಲೆ ಎತ್ತುತ್ತದೆ, ನಿಮ್ಮ ಬೆನ್ನುಮೂಳೆ ತಟಸ್ಥ ಸ್ಥಿತಿಯಲ್ಲಿ ವಿಶ್ರಾಂತಿ ಪಡೆಯುವುದನ್ನು ತಡೆಯುತ್ತದೆ. ಬೆನ್ನುಮೂಳೆಯ ಈ ಅತಿಯಾದ ತೂಗುವಿಕೆಯ ಪರಿಣಾಮವಾಗಿ ನಿಮ್ಮ ಬೆನ್ನು ಮತ್ತು ಕುತ್ತಿಗೆಯ ಮೇಲೆ ಹೆಚ್ಚುವರಿ ಒತ್ತಡ ಬೀಳಬಹುದು ಎಂದು ಇವರು ಹೇಳುತ್ತಾರೆ. ಹೊಟ್ಟೆಯ ಮೇಲೆ ಮಲಗುವುದರಿಂದ ದೇಹದಲ್ಲಿ ರಕ್ತದ ಹರಿವು ಕಡಿಮೆಯಾಗುತ್ತದೆ, ಇದರಿಂದ ನಿಮ್ಮ ಕೈಕಾಲುಗಳು ಮರಗಟ್ಟುತ್ತವೆ.

ನಿಮ್ಮ ಹೊಟ್ಟೆಯ ಮೇಲೆ ಮಲಗುವುದು ನಿಮ್ಮ ಬೆನ್ನಿನ ಕೆಳಭಾಗದ ಮೇಲೆ ಒತ್ತಡವನ್ನು ಉಂಟು ಮಾಡುತ್ತದೆ ಮತ್ತು ಕುತ್ತಿಗೆ ನೋವಿಗೆ ಕಾರಣವಾಗಬಹುದು ಎಂದು ಡಾ. ಕುಮಾರ್ ಹೇಳಿದರು. "ತಮ್ಮ ಹೊಟ್ಟೆಯ ಮೇಲೆ ಮಲಗುವ ಜನರು ಆರಾಮದಾಯಕವಾಗಿ ಮಲಗುವ ಪ್ರಯತ್ನದಲ್ಲಿ ನಿದ್ರೆಯಲ್ಲಿ ಚಡಪಡಿಕೆ ಹೆಚ್ಚಾಗುತ್ತದೆ" ಎಂದು ಅವರು ಹೇಳಿದರು. ನೀವು ತಪ್ಪಿಸಬೇಕಾದ ಮತ್ತೊಂದು ಮಲಗುವ ಭಂಗಿಯೆಂದರೆ ಭ್ರೂಣದ ಭಂಗಿ. ಈ ಭಂಗಿಯು ನಿಮ್ಮ ಬೆನ್ನುಮೂಳೆಗೆ "ಭಯಾನಕ" ಮತ್ತು ವಿವಿಧ ಬೆನ್ನಿನ ಸಮಸ್ಯೆಗಳು ಮತ್ತು ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಡಾ. ಸೆಂಥಿಲ್ ವಿವರಿಸಿದರು.

ಗರ್ಭಿಣಿಯರಿಗೆ ಅತ್ಯುತ್ತಮ ಮತ್ತು ಕೆಟ್ಟ ನಿದ್ರೆಯ ಭಂಗಿಗಳು
ಆರ್ಥೋಪೆಡಿಸ್ಟ್ ಗಳ ಪ್ರಕಾರ, ಗರ್ಭಾವಸ್ಥೆಯಲ್ಲಿ ಮಗ್ಗುಲಲ್ಲಿ ಮಲಗುವುದು ಅತ್ಯಂತ ಆದ್ಯತೆಯ ಭಂಗಿಯಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ಗರ್ಭಿಣಿಯರು ತಮ್ಮ ಬೆನ್ನು ಅಥವಾ ಹೊಟ್ಟೆಯ ಮೇಲೆ ಮಲಗಬಾರದು. "ನೀವು ಗರ್ಭಿಣಿಯಾಗಿದ್ದರೆ, ನಿಮ್ಮ ಎಡ ಮಗ್ಗುಲಲ್ಲಿ ಮಲಗಿ. ನಿಮ್ಮ ಎಡಭಾಗದಲ್ಲಿ ಮಲಗುವುದರಿಂದ ಜರಾಯು ಮತ್ತು ನಿಮ್ಮ ಮಗುವನ್ನು ತಲುಪುವ ರಕ್ತ ಮತ್ತು ಪೋಷಕಾಂಶಗಳ ಪ್ರಮಾಣವನ್ನು ಹೆಚ್ಚಿಸುತ್ತದೆ. ನಿಮಗೆ ಬೆನ್ನಿನ ಸಮಸ್ಯೆ ಇದ್ದರೆ, ಈ ಭಂಗಿಯು ತುಂಬಾನೇ ಪ್ರಯೋಜನಕಾರಿಯಾಗಿರುತ್ತದೆ" ಎಂದು ಡಾ ಸೆಂಥಿಲ್ ಹೇಳಿದರು. ಈ ಭಂಗಿಯು ನಿಮ್ಮ ದೇಹದ ಇತರ ಅಂಗಗಳ ಮೇಲೆ ಕನಿಷ್ಠ ಒತ್ತಡವನ್ನು ಹಾಕುತ್ತದೆ ಎಂದು ಡಾ. ಕುಮಾರ್ ಹೇಳಿದರು.

ಇದನ್ನೂ ಓದಿ:  Food Tips: ನಿಮ್ಮ ಆಹಾರ ಪದ್ದತಿ ಹೀಗಿದ್ರೆ ಆರೋಗ್ಯ ಸಮಸ್ಯೆಗಳು ಕಾಡಲ್ವಂತೆ ನೆನಪಿರಲಿ

ಹೊಟ್ಟೆಯ ಮೇಲೆ ಮಲಗಬೇಡಿ, ಏಕೆಂದರೆ ನಿಮ್ಮ ಕಿಬ್ಬೊಟ್ಟೆಯು ದೈಹಿಕವಾಗಿ ಬದಲಾಗುತ್ತದೆ, ಇದು ನಿಮ್ಮ ಹೊಟ್ಟೆಯ ಮೇಲೆ ಮಲಗಲು ಅನಾನುಕೂಲವಾಗುವಂತೆ ಮಾಡುತ್ತದೆ. ಗರ್ಭಾವಸ್ಥೆಯಲ್ಲಿ ನಿಮ್ಮ ಬೆನ್ನಿನ ಮೇಲೆ ಮಲಗುವುದು ಏಕೆ ಅತ್ಯಂತ ಕೆಟ್ಟ ಭಂಗಿಯಾಗಿದೆ ಎಂದು ವಿವರಿಸಿದ ಡಾ ಸೆಂಥಿಲ್ ಅವರು “ಬೆನ್ನಿನ ಮೇಲೆ ಮಲಗುವುದರಿಂದ ತಲೆ ತಿರುಗುವಿಕೆ ಮತ್ತು ತಲೆಸುತ್ತು ಉಂಟಾಗುತ್ತದೆ ಮತ್ತು ಜರಾಯು ಮತ್ತು ನಿಮ್ಮ ಬೆಳೆಯುತ್ತಿರುವ ಮಗುವಿಗೆ ರಕ್ತ ಮತ್ತು ಪೋಷಕಾಂಶಗಳ ಸಾಗಣೆಗೆ ಅಡ್ಡಿಯಾಗಬಹುದು ಎಂದು ಹೇಳಿದರು. ಇದಲ್ಲದೆ, ಇದು ಬೆನ್ನು ನೋವು, ಉಸಿರಾಟದ ತೊಂದರೆಗಳು, ಜೀರ್ಣಕಾರಿ ಸಮಸ್ಯೆಗಳು, ಕಡಿಮೆ ರಕ್ತದೊತ್ತಡ ಮತ್ತು ನಿಮ್ಮ ಮತ್ತು ಮಗುವಿನಲ್ಲಿ ಕಳಪೆ ರಕ್ತಪರಿಚಲನೆಗೆ ಕಾರಣವಾಗಬಹುದು ಎಂದು ಅವರು ಹೇಳಿದರು.
Published by:Ashwini Prabhu
First published: