• Home
 • »
 • News
 • »
 • lifestyle
 • »
 • Heart Health: ಸರಿಯಾಗಿ ನಿದ್ರೆ ಮಾಡಿಲ್ಲ ಅಂದ್ರೆ ಹೃದಯಾಘಾತಕ್ಕೆ ಕಾರಣವಾಗಬಹುದು ಎಚ್ಚರ

Heart Health: ಸರಿಯಾಗಿ ನಿದ್ರೆ ಮಾಡಿಲ್ಲ ಅಂದ್ರೆ ಹೃದಯಾಘಾತಕ್ಕೆ ಕಾರಣವಾಗಬಹುದು ಎಚ್ಚರ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

How Does Sleep Affect Your Heart Health: ನಿದ್ರಾಹೀನತೆಯಿಂದ ಮಾನವನ ದೇಹದಲ್ಲಿ ಉಂಟಾಗುವ ಹಾರ್ಮೋನ್ ಹೆಚ್ಚಳದಿಂದಾಗಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ಹಾರ್ಮೊನುಗಳು ನಿಮ್ಮ ಹೊಟ್ಟೆಯನ್ನು ಸಂಕುಚಿತಗೊಳಿಸಿ, ತುಂಬಾ ಹಸಿವು ಆಗ್ತಿರೋ ಹಾಗೆ ಹಸಿವಿನ ನೋವನ್ನು ಉಂಟುಮಾಡಲು ಕಾರಣವಾಗುತ್ತದೆ.

ಮುಂದೆ ಓದಿ ...
 • Share this:

ಮಾನವನ ದೇಹಕ್ಕೆ (Human Body) ಅತಿ ಅಗತ್ಯವಾದ ಒಂದು ಮೂಲಭೂತ ಕ್ರಿಯೆ ಎಂದರೆ ಅದು ನಿದ್ರೆ. ಊಟ (food) ಇಲ್ಲದೇ ಒಬ್ಬ ಮನುಷ್ಯ ಕೆಲವು ದಿನ ಆರಾಮವಾಗಿ ಇರಬಹುದು. ಆದರೆ ನಿದ್ರೆ ಇಲ್ಲದೇ ಇರೋದಕ್ಕೆ ಸಾಧ್ಯವೇ ಇಲ್ಲ. ಅಕಸ್ಮಾತ್ ಆ ರೀತಿ ಇದ್ದರೆ ಆ ಮನುಷ್ಯನ ದೈಹಿಕ ಮತ್ತು ಮಾನಸಿಕ (Physical And Mental Health)  ಆರೋಗ್ಯದಲ್ಲಿ ಗಂಭೀರ ಪರಿಣಾಮಗಳು (Health Problem) ಆಗುವುದು ಖಂಡಿತ. ಒಬ್ಬ ಮನುಷ್ಯನಿಗೆ ಸೂಕ್ತ ಸಮಯದಲ್ಲಿ ಸರಿಯಾಗಿ ನಿದ್ದೆ ಆಗದೇ ಇದ್ದರೆ ಅದು ಗಂಭೀರ ಪರಿಣಾಮಗಳ ಕಡೆ ತಿರುಗುವ ಸಾಧ್ಯತೆ ಇದೆ. ಇದನ್ನೇ ವೈದ್ಯರು ಸಹ ಹೇಳ್ತಿದಾರೆ. ಹೌದು, ನಾವು ಸರಿಯಾಗಿ ನಿದ್ರೆ ಮಾಡದಿದ್ದರೆ, ಹೃದಯದ ಅಪಾಯ ಸಹ ಉಂಟಾಗಬಹುದು. ಇದೊಂದೆ ಅಲ್ಲದೇ, ಇನ್ನೂ ಹಲವಾರು ರೀತಿಯ ತೊಂದರೆ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ವೈದ್ಯರು. ಈ ಬಗ್ಗೆ ಕೆಲ ಕುತೂಹಲಕಾರಿ ಮಾಹಿತಿ ಇಲ್ಲಿದೆ.


ಯುನೈಟೈಡ್‌ ಸ್ಟೇಟ್‌ರಾಷ್ಟ್ರೀಯ ಆರೋಗ್ಯ ಸಂಸ್ಥೆ ಏನ್‌ ಹೇಳ್ತಿದೆ?


"ಒಬ್ಬ ಸಾಮಾನ್ಯ ವಯಸ್ಕನಿಗೆ ದಿನಕ್ಕೆ ಕನಿಷ್ಠ ಏಳು ಗಂಟೆಗಳ ನಿದ್ರೆಯ ಅಗತ್ಯ ಇರುತ್ತದೆ. ಆದರೆ ದುರದೃಷ್ಟವಶಾತ್, 18 ರಿಂದ 65 ವರ್ಷ ವಯಸ್ಸಿನ ವಯಸ್ಕರಲ್ಲಿ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಜನರು ಅಗತ್ಯವಾದಷ್ಟು ನಿದ್ರೆಯನ್ನು ಮಾಡುತ್ತಿಲ್ಲ.


ದಿನಕ್ಕೆ ಆರು ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವ ವ್ಯಕ್ತಿಗಳಲ್ಲಿ, ಹೃದಯ ಸಮಸ್ಯೆಗಳ ಸಾಧ್ಯತೆ 20% ರಷ್ಟು ಹೆಚ್ಚಾಗುತ್ತದೆ ಮತ್ತು ಕಳಪೆ ಗುಣಮಟ್ಟದ ನಿದ್ರೆಗೆ ಸಂಬಂಧಿಸಿದಂತೆ ಉಂಟಾಗುವ ಪಾರ್ಶ್ವವಾಯು ಕಾಯಿಲೆಯ ಅಪಾಯವು 82% ರಷ್ಟು ಹೆಚ್ಚಾಗುತ್ತದೆ" ಎಂದು ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್ (ಸಿಡಿಸಿ), ಅಟ್ಲಾಂಟಾ, ಯುನೈಟೈಡ್‌ ಸ್ಟೇಟ್‌ನ ರಾಷ್ಟ್ರೀಯ ಆರೋಗ್ಯ ಏಜೆನ್ಸಿ ಹೇಳುತ್ತಿದೆ.


ʼನಿದ್ರೆ ನಿಸರ್ಗದ ಒಂದು ನಿಯಮʼ ಎನ್ನುವ ಯೂರೋಪಿಯನ್ ಹಾರ್ಟ್ ಅಸೋಸಿಯೇಷನ್


ಯೂರೋಪಿಯನ್ ಹಾರ್ಟ್ ಅಸೋಸಿಯೇಷನ್ ​​ಪ್ರಕಾರ " ರಾತ್ರಿ 10 ರಿಂದ 11:00 ಗಂಟೆಯೊಳಗೆ ಮಲಗಲು ಸೂಕ್ತ ಸಮಯ. ನಮ್ಮ ಜೈವಿಕ ಕ್ರಿಯೆಯ ಪ್ರಕಾರ ರಾತ್ರಿಯು ನಿದ್ರೆಗಾಗಿ ಮತ್ತು ಹಗಲು ಕೆಲಸಕ್ಕಾಗಿ ಎಂಬುದು ನಿಸರ್ಗವೇ ಮಾಡಿರುವ ಒಂದು ನಿಯಮ ಎಂದು ನಮಗೆಲ್ಲರಿಗೂ ತಿಳಿದಿದೆ.
ಆದ್ದರಿಂದ ನಿದ್ರೆಯ ಅಗತ್ಯವಾಗಿರುವ ಹಾರ್ಮೋನುಗಳು ರಾತ್ರಿಯೊತ್ತು ಬಿಡುಗಡೆಯಾಗುತ್ತವೆ. ಇದರಿಂದ ನಿದ್ರೆ ಉತ್ತಮವಾಗುತ್ತದೆ" ಎಂದು ಹೇಳಿದೆ.


ತಜ್ಞರ ಅಭಿಪ್ರಾಯವೇನು?


ಮುಂಬೈನ ಮಸಿನಾ ಆಸ್ಪತ್ರೆಯ ಇಂಟರ್‌ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ. ರುಚಿತ್ ಷಾ ಅವರ ಪ್ರಕಾರ “ರಾತ್ರಿ ತಡವಾಗಿ ಮಲಗುವುದು ಅಥವಾ ನಿದ್ರಾಹೀನತೆಯು ಅಧಿಕ ರಕ್ತದೊತ್ತಡಕ್ಕೆ ಸಂಬಂಧಿಸಿದ ಅನೇಕ ಕಾಯಿಲೆಗಳಿಗೆ ಕಾರಣವಾಗುತ್ತದೆ ಹೃದ್ರೋಗ, ಪಾರ್ಶ್ವವಾಯು ಮತ್ತು ಮಧುಮೇಹದ ಹೆಚ್ಚಿನ ಅಪಾಯಗಳು ಬರಲು ನಿದ್ರಾ ಕೊರತೆ ಮೂಲ ಸಮಸ್ಯೆ ಎನ್ನಲಾಗುತ್ತದೆ.


ನಿದ್ರಾಹೀನತೆಯು ಅಪಧಮನಿಗಳ ಉರಿಯೂತಕ್ಕೆ ಕಾರಣವಾಗಬಹುದು. ಇದು ಹೃತ್ಕರ್ಣದ ಕಂಪನದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಉರಿಯೂತವು ಹೃದಯ ವೈಫಲ್ಯ ಮತ್ತು ಪರಿಧಮನಿಯ ಕಾಯಿಲೆಗಳು ಮತ್ತು ಹೃದಯದಲ್ಲಿ ಉಂಟಾಗುವ ಬ್ಲಾಕ್ ಗಳಿಗೂ ಕಾರಣವಾಗಬಹುದು. ಕಳಪೆ ನಿದ್ರೆಯ ಅಭ್ಯಾಸಗಳು ಅನಾರೋಗ್ಯಕರ ಅಭ್ಯಾಸಗಳಿಗೆ ಕಾರಣವಾಗಬಹುದು.


ನಿದ್ರಾ ಹೀನತೆಯು ಹೆಚ್ಚಿದ ಒತ್ತಡ, ಹಗಲಿನಲ್ಲಿ ಕ್ರಿಯಾಶೀಲತೆ ಕಡಿಮೆಯಾಗುವುದು, ಅನಾರೋಗ್ಯಕರ ಆಹಾರ ಸೇವನೆ, ಧೂಮಪಾನ, ತಂಬಾಕು, ಮದ್ಯಪಾನ ಮತ್ತು ಮಾದಕ ದ್ರವ್ಯ ಸೇವನೆಯಂತಹ ಅನಾರೋಗ್ಯಕರ ಜೀವನ ಶೈಲಿಗೂ ದಾರಿ ಮಾಡಿಕೊಡುತ್ತದೆ. ಇದು ದೀರ್ಘಕಾಲದ ಹೃದ್ರೋಗಗಳು ಮತ್ತು ಬ್ಲಾಕ್ ಗಳಿಗೆ ಕಾರಣವಾಗಬಹುದು" ಎಂದು ವಿವರಿಸಿದರು.


ಸಂಶೋಧನೆಗಳು ಏನ್ ಹೇಳ್ತಿವೆ?


"ಕಡಿಮೆ ನಿದ್ರೆ ಮಾಡುವ ಜನರು ಕಡಿಮೆ ಬದುಕುತ್ತಾರೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ನಿದ್ರೆ ಮಾಡುವುದು ಒಂದು ಐಷಾರಾಮಿ ಜೀವನ ನಡೆಸಿದ ಹಾಗೆ ಅಲ್ಲ. ಅದು ಎಲ್ಲರಿಗೂ ಸಮಾನವಾಗಿ ಬೇಕಾಗಿರುವ ಒಂದು ಮೂಲಭೂತ ಅಗತ್ಯ ಎಂದು ಹೇಳಬಹುದು" ಎಂದು ಡಾ ರುಚಿತ್ ಶಾ ಅವರು ಹೇಳುತ್ತಾರೆ.


ʼಸರಿಯಾದ ಸಮಯಕ್ಕೆ ನಿದ್ರೆಗೆ ಜಾರುವುದು ಅವಶ್ಯಕʼ


“ಪ್ರತಿದಿನ ಸಮಯಕ್ಕೆ ಸರಿಯಾಗಿ ಮಲಗುವುದು ಮುಖ್ಯ ಎಂದು ನಾವು ಒತ್ತಿ ಹೇಳುತ್ತೇವೆ. ದಿನಕ್ಕೆ ಕನಿಷ್ಠ ಏಳರಿಂದ ಎಂಟು ಗಂಟೆಗಳ ನಿದ್ರೆ ಅತಿ ಅಗತ್ಯ. ನೀವು ಮಲಗುವ 30 ರಿಂದ 60 ನಿಮಿಷಗಳ ಮೊದಲು ಎಲ್ಲಾ ಎಲೆಕ್ಟ್ರಾನಿಕ್ ಸಾಧನಗಳನ್ನು ಆಫ್ ಮಾಡಿ. ಮಲಗುವ ಒಂದು ಗಂಟೆ ಮೊದಲು ಕೆಫೀನ್ ಅಥವಾ ಮಾದಕ ದ್ರವ್ಯಗಳಂತಹ ಪದಾರ್ಥಗಳ ಬಳಕೆಯನ್ನು ತಪ್ಪಿಸಿ. ಆರೋಗ್ಯಕರ ಆಹಾರವನ್ನು ಸೇವಿಸಿ ಮತ್ತು ಹಗಲು ಹೊತ್ತು ಹೆಚ್ಚು ಬೆಳಕಿಗೆ ಒಡ್ಡಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಿ.


ಅನಿವಾರ್ಯದ ಸಮಯದಲ್ಲಿ ಒಂದು ದಿನ ಅಥವಾ ಎರಡು ದಿನಗಳ ಕಾಲ ನಿದ್ರಾಹೀನತೆಯು ಯಾವುದೇ ರೀತಿಯಲ್ಲೂ ಹಾನಿಕಾರಕವಲ್ಲ. ಆದರೆ ಹಲವು ತಿಂಗಳು ಅಥವಾ ವರ್ಷಗಳ ಕಾಲ ನಿದ್ರಾಹೀನತೆ ಸಮಸ್ಯೆ ಇದ್ದರೆ ಅದು ಖಂಡಿತ ಬಹಳ ಅಪಾಯಕಾರಿ.


ದೀರ್ಘ ಕಾಲದ ನಿದ್ರಾಹೀನತೆಯು ಹೃದಯದ ಆರೋಗ್ಯ ಮತ್ತು ಆರಂಭಿಕ ಸಾವು ಮತ್ತು ಬಹಳಷ್ಟು ರೋಗಗಳಿಗೆ ಕಾರಣವಾಗಬಹುದು" ಎಂದು ಡಾ. ರುಚಿತ್ ಹೇಳುತ್ತಾರೆ.


ʼನಿದ್ರೆಯು ದೇಹಕ್ಕೆ ವಿಶ್ರಾಂತಿ ನೀಡುತ್ತದೆʼ ಎನ್ನುತ್ತಾರೆ ಡಾ. ಕುಲಕರ್ಣಿ


“ನಿದ್ರೆಯು ದೇಹದ ಒಂದು ಪ್ರಮುಖ ಮೂಲಭೂತ ಅಗತ್ಯವಾಗಿದೆ. ಇದು ವಿಶ್ರಾಂತಿ ಮತ್ತು ಶಕ್ತಿಯ ಮರುಹಂಚಿಕೆ ಮತ್ತು ನಿರ್ದಿಷ್ಟ ದಿನದ ಆಲೋಚನೆಗಳು ಮತ್ತು ಅನುಭವಗಳನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ. ಉತ್ತಮ ನಿದ್ರೆ ಒತ್ತಡವನ್ನು ಸಹ ಕಡಿಮೆ ಮಾಡುತ್ತದೆ. ಈ ನಿದ್ರೆಯನ್ನು ಮಾನವನ ಮೆದುಳೇ ಸಂಪೂರ್ಣವಾಗಿ ನಿಯಂತ್ರಿಸುತ್ತದೆ.


ಆದ್ದರಿಂದ ಅಡೆತಡೆಯಿಲ್ಲದ ನಿದ್ರೆಯು ಮರುದಿನ ಸಾಕಷ್ಟು ಉತ್ತಮವಾಗಿ ಕೆಲಸ ನಿರ್ವಹಿಸಲು ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.


ನಿದ್ರೆಯು ಹೃದಯ ಬಡಿತ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುವ ಬೈಯೋರಿಥಮ್‌ಗಳು ಎಂಬ ಹಾರ್ಮೋನ್ ಗಳಿ಼ಗೆ ಸಂಬಂಧಿಸಿದೆ. ಇದು ನಿದ್ರೆಯ ನಿಯಂತ್ರಣದ ಒಂದು ಪ್ರಮುಖ ಭಾಗವಾಗಿದೆ" ಎಂದು ಗ್ಲೋಬಲ್ ಹಾಸ್ಪಿಟಲ್ ಪರೇಲ್ ಮುಂಬೈನ ಹೃದಯರಕ್ತನಾಳದ ಮತ್ತು ಎದೆಗೂಡಿನ ಶಸ್ತ್ರಚಿಕಿತ್ಸೆಯ [ಸಿವಿಟಿಎಸ್] ಸಲಹೆಗಾರ ಡಾ.ಚಂದ್ರಶೇಖರ ಕುಲಕರ್ಣಿ ಅವರು ಬಹಿರಂಗಪಡಿಸಿದರು.


ಇದನ್ನೂ ಓದಿ: ಅಂಜೂರವನ್ನು ಹೀಗೆ ತಿಂದ್ರೆ ನಿಮ್ಮ ತೂಕ ಇಳಿಸೋಕೆ ಸಹಾಯ ಮಾಡುತ್ತೆ


“ನಿದ್ರೆಯು ದೇಹದ ಹಾರ್ಮೋನುಗಳನ್ನು ನಿಯಂತ್ರಿಸುತ್ತದೆ ಆಹಾರದ ಬಯಕೆಗಳು ಅಂದರೆ ಯಾವಾಗಲೂ ಏನಾದರೂ ತಿನ್ನಬೇಕು ಎನಿಸುವದನ್ನು ಸಹ ನಿದ್ರೆ ನಿಯಂತ್ರಿಸುತ್ತದೆ. ಆದ್ದರಿಂದ ತಡ ರಾತ್ರಿಯವರೆಗೂ ಎಚ್ಚರವಾಗಿರುವ ಜನರು ಮಧ್ಯರಾತ್ರಿ ಹಸಿವಿನಿಂದ ಬಳಲುತ್ತಿರುವುದನ್ನು ನಾವು ಸಾಮಾನ್ಯವಾಗಿ ನೋಡಿರುತ್ತೆವೆ. ನಮಗೂ ಕೆಲವು ಸಲ ಆ ರೀತಿಯ ಅನುಭವ ಆಗಿರಬಹುದು ಅಲ್ಲವೇ?


ಈ ರೀತಿ ಏಕೆ ಆಗುತ್ತದೆ ಎಂದು ನಿಮಗೆ ಗೊತ್ತೆ? ಅದು ನಿದ್ರಾಹೀನತೆಯಿಂದ ಮಾನವನ ದೇಹದಲ್ಲಿ ಉಂಟಾಗುವ ಹಾರ್ಮೋನ್ ಹೆಚ್ಚಳದಿಂದಾಗಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ಹಾರ್ಮೊನುಗಳು ನಿಮ್ಮ ಹೊಟ್ಟೆಯನ್ನು ಸಂಕುಚಿತಗೊಳಿಸಿ, ತುಂಬಾ ಹಸಿವು ಆಗ್ತಿರೋ ಹಾಗೆ ಹಸಿವಿನ ನೋವನ್ನು ಉಂಟುಮಾಡಲು ಉತ್ತೇಜಿಸುತ್ತದೆ.


ಈ ಹಾರ್ಮೋನ್ ಕೊಬ್ಬು ಮತ್ತು ಕಾರ್ಬೋಹೈಡ್ರೇಟ್‌ಗಳ ಚಯಾಪಚಯ ಕ್ರಿಯೆಗೆ ಸಂಬಂಧಿಸಿದೆ ಮತ್ತು ಅದರ ಅಸಹಜ ಪ್ರಮಾಣವು ಯಾವಾಗಲೂ ಇನ್ಸುಲಿನ್ ಅಗತ್ಯದಲ್ಲಿ ಬದಲಾವಣೆಗಳನ್ನು ಉಂಟುಮಾಡಬಹುದು. ಆದ್ದರಿಂದ ಅಂತಹ ರೋಗಿಗಳು ಪೂರ್ವ-ಮಧುಮೇಹ ಮತ್ತು ಪೂರ್ಣ ಪ್ರಮಾಣದ ಮಧುಮೇಹಕ್ಕೆ ಒಳಗಾಗುತ್ತಾರೆ" ಎಂದು ಡಾ. ಕುಲಕರ್ಣಿ ಅವರು ಹೇಳಿದರು. "ಸಾಮಾನ್ಯವಾಗಿ ತಡ ರಾತ್ರಿಯವರೆಗೂ ಎಚ್ಚರವಾಗಿರುವ ಜನರು, ಅವರು ರಾತ್ರಿಯಲ್ಲಿ ಸೇವಿಸುವ ಆಹಾರವು ಭಾರೀ ಕ್ಯಾಲೋರಿಯಿಂದ ಕೂಡಿರುತ್ತದೆ. ಹೆಚ್ಚು ಜಂಕ್ ಪುಡ್ ಮತ್ತು ಫಾಸ್ಟ್ ಪುಡ್ ಆಗಿರುತ್ತದೆ. ಇದು ಸಾಮಾನ್ಯವಾಗಿ ಹೆಚ್ಚಿನ ಪ್ರಮಾಣದ ಉಪ್ಪು ಮತ್ತು ಸ್ಯಾಚುರೇಟೆಡ್ ಕೊಬ್ಬುಗಳು ಮತ್ತು ಕೊಲೆಸ್ಟ್ರಾಲ್ ಅನ್ನು ಹೊಂದಿರುತ್ತದೆ” ಎಂದು ವಿವರಿಸಿದರು.


ಇದ್ದರಿಂದ ದೇಹದಲ್ಲಿ ರಕ್ಷಣಾತ್ಮಕ ಹಾರ್ಮೋನ್‌ಗಳ ಶಕ್ತಿ ಕಡಿಮೆಯಾಗುವ ಸಂಭವ ಹೆಚ್ಚಿರುತ್ತದೆ. ಇದು ನಿಮ್ಮ ಹೃದಯ, ಮನಸ್ಸು ತೀವ್ರ ಅಪಾಯಕ್ಕೆ ಒಳಗಾಗುವ ಅತ್ಯಂತ ಅಪಾಯಕಾರಿ ಪರಿಸ್ಥಿತಿಯನ್ನು ಉಂಟುಮಾಡಬಹುದು.


ಇದನ್ನೂ ಓದಿ: ಮಕ್ಕಳಿಗೆ ಈ ವಯಸ್ಸಿಗೆ ಕಥೆ ಹೇಳಿದ್ರೆ ಅವರ ಬುದ್ದಿ ಚುರುಕಾಗುತ್ತಂತೆ


ಇದು ತಡವಾಗಿ ಮಲಗುವ ಜನರಲ್ಲಿ ಮತ್ತು ಕನಿಷ್ಠ ಆರರಿಂದ ಏಳು ಗಂಟೆಗಳ ನಿರಂತರ ನಿದ್ರೆಯಲ್ಲಿ ರಾಜಿ ಮಾಡಿಕೊಳ್ಳುವ ಜನರಲ್ಲಿ ಹೃದ್ರೋಗ ಸಮಸ್ಯೆ ಬೇಗನೆ ಕಂಡುಬರುತ್ತದೆ.


ವಿಶೇಷವಾಗಿ ಕಾರ್ಮಿಕರಲ್ಲಿ ಅಥವಾ ಶಿಫ್ಟ್ ಕರ್ತವ್ಯಗಳನ್ನು ಮಾಡುವ ಜನರಲ್ಲಿಯೂ ಸಹ ಹೆಚ್ಚಾಗಿ ಕಂಡುಬರುತ್ತದೆ" ಎಂದು ಡಾ. ಕುಲಕರ್ಣಿ ಅವರು ಹೇಳಿದರು.


ನಿದ್ರಾಹೀನತೆಗೆ ತಜ್ಞರು ನೀಡಿರುವ ಸಲಹೆಗಳೇನು?


ಡಾ.ಚಂದ್ರಶೇಖರ ಕುಲಕರ್ಣಿ ಅವರು ನಿದ್ರಾಹೀನತೆಯಿದ ಹೊರಬರಲು ನೀಡಿರುವ ಕೆಲವು ಸಲಹೆಗಳು ಇಲ್ಲಿವೆ..


 • ಪ್ರತಿ ದಿನ ಕನಿಷ್ಠ ಏಳು ಗಂಟೆಗಳ ಕಾಲ ನಿರಂತರವಾದ ಮತ್ತು ಯಾವುದೇ ಅಡೆ ತಡೆಯಿಲ್ಲದೇ ನಿದ್ರೆ ಮಾಡುವುದು ಅತಿ ಅವಶ್ಯಕವಾಗಿದೆ.

 • ಸ್ವಲ್ಪ ನಿದ್ರೆ ಕಡಿಮೆಯಾದರೂ ಸಹ ಅದನ್ನು ಸರಿದೂಗಿಸಬೇಕು. ಮನುಷ್ಯನ ಜೈವಿಕ ನಿಯಮವನ್ನು ಸಾಧ್ಯವಾದಷ್ಟು ಸೂಕ್ತವಾಗಿ ನಿರ್ವಹಿಸಬೇಕು.

 • ವಿಶೇಷವಾಗಿ ಹೃದ್ರೋಗಕ್ಕೆ ಒಳಗಾಗುವ ಜನರಲ್ಲಿ ಗಮನಾರ್ಹವಾದ ಹೃದಯಾಘಾತವನ್ನು ತಡೆಗಟ್ಟಲು ಉತ್ತಮ ನಿದ್ರೆಯು ರೋಗವನ್ನು ದೂರ ಮಾಡುವ ಪ್ರಮುಖ ಸಾಧನವಾಗಿದೆ.

 • ಉತ್ತಮ ನಿದ್ರೆಗೆ ಜೀವನ ಶೈಲಿಯೂ ಪ್ರಮುಖವಾಗುತ್ತದೆ. ಆದ್ದರಿಂದ ಉತ್ತಮ ಜೀವನ ಶೈಲಿಯನ್ನು ರೂಢಿಸಿಕೊಳ್ಳಿ.

 • ಉತ್ತಮ ಪೌಷ್ಠಿಕಾಂಶದ ಆಹಾರ ಸೇವನೆಯು ಸಹ ನಿದ್ರಾಹೀನತೆಯಿಂದ ಹೊರಬರಲು ಇರುವ ಪ್ರಮುಖ ಸಾಧನವೆಂದೆ ಹೇಳಬಹುದು.

Published by:Sandhya M
First published: