Sleeping Tips: ನಿಮಗೆ ನಿದ್ದೆ ಬರ್ತಿಲ್ವಾ? ಈ ರೀತಿ ಮಾಡಿ, ಆಯಾಗಿ ಮಲಗಿಕೊಳ್ಳಿ

ಮನುಷ್ಯನಿಗೆ ನಿದ್ದೆ ತುಂಬಾ ಮುಖ್ಯ. ಒಬ್ಬ ಮನುಷ್ಯ 6 ತಾಸುಗಳ ಕಾಲ ಆದ್ರೂ ಮಲಗಿ ವಿಶ್ರಾಂತಿ ಮಾಡಬೇಕು. ವಯಸ್ಕರಿಗಿಂತ ಮಕ್ಕಳಿಗೆ ಹೆಚ್ಚು ನಿದ್ದೆ ಅವಶ್ಯಕ. ನವಜಾತ ಶಿಶುಗಳು ದಿನಕ್ಕೆ 18 ತಾಸು ಮಲಗಿದರೆ, ಒಂದು ವರ್ಷದ ಮಗುವಿಗೆ 14 ತಾಸು ಸಾಕಾಗುತ್ತದೆ. ವಯಸ್ಕರಿಗೆ ಕನಿಷ್ಟ 8 ಇಲ್ಲವೇ 6 ತಾಸು ನಿದ್ರೆ ಸಾಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮನುಷ್ಯನಿಗೆ ನಿದ್ದೆ (Sleep) ತುಂಬಾ ಮುಖ್ಯ. ಒಬ್ಬ ಮನುಷ್ಯ 6 ತಾಸುಗಳ (6 hours) ಕಾಲ ಆದ್ರೂ ಮಲಗಿ ವಿಶ್ರಾಂತಿ ಮಾಡಬೇಕು. ನಮ್ಮ ದೇಹವು ಒಂದು ಯಂತ್ರವಿದ್ದಂತೆ, ದಿನ ಪೂರ್ತಿ ನಮ್ಮ ಕಣ್ಣು (Eyes), ಕಾಲು, ಕೈ, ಕಿವಿ, ನಾಲಿಗೆ, ಮೆದುಳು, ಹೃದಯ ಬಡಿತ, ತೀವ್ರ ರಕ್ತ ಸಂಚಲನೆ, ಹೆಚ್ಚು ಉಸಿರಾಡುವ ಶ್ವಾಸಕೋಶ, ಹೀಗೆ ಇತರ ಪ್ರಮುಖ ದೇಹದ ಭಾಗಗಳಿಗೆ ವಿಶ್ರಾಂತಿ ಬಹುಮುಖ್ಯವಾಗಿ ಅವಶ್ಯಕತೆ ಇರುತ್ತದೆ. ಅದಕ್ಕೆ ನಿದ್ದೆ ಮಾಡಬೇಕಾಗುತ್ತೆ. ನಿದ್ರೆ ಯಾವಾಗ ಮತ್ತು ಎಷ್ಟು, ಇವೆರಡೂ ಮುಖ್ಯವಾದದ್ದು. ಇವು ಒಬ್ಬೊಬ್ಬರಿಗೆ ಒಂದೊಂದು ರೀತಿ ಇರುತ್ತದೆ. ಇದು ಆ ವ್ಯಕ್ತಿಯ ವಯಸ್ಸಿನ ಮೇಲೆ ಅವಲಂಬಿತ. ವಯಸ್ಕರಿಗಿಂತ ಮಕ್ಕಳಿಗೆ ಹೆಚ್ಚು ನಿದ್ದೆ ಅವಶ್ಯಕ. ನವಜಾತ ಶಿಶುಗಳು ದಿನಕ್ಕೆ 18 ತಾಸು ಮಲಗಿದರೆ, ಒಂದು ವರ್ಷದ ಮಗು (Child)ವಿಗೆ 14 ತಾಸು ಸಾಕಾಗುತ್ತದೆ. ವಯಸ್ಕರಿಗೆ ಕನಿಷ್ಟ 8 ಇಲ್ಲವೇ 6 ತಾಸು ನಿದ್ರೆ ಸಾಕು.

ನಿದ್ರೆ ಮಾಡಲು ಒಂದಿಷ್ಟು ಟಿಪ್ಸ್ ಗಳು ಇವು

ದಿನ ಒಂದೇ ಟೈಂಗೆ ಮಲಗಿ
ದಿನ ಒಂದೊಂದು ಟೈಮ್‍ಗೆ ಮಲಗಿದ್ರೂ ನಿದ್ದೆ ಬರೋದು ಕಷ್ಟ. ಅದಕ್ಕೆ ದಿನ ನೀವು ಯಾವ ಸಮಯಕ್ಕೆ ಮಲಗುತ್ತೀರೋ, ಅದನ್ನೇ ರೂಡಿ ಮಾಡಿಕೊಳ್ಳಿ. ಆಗ ನೀವು ನೆಮ್ಮದಿಯಾಗಿ ಮಲಗಬಹುದು. ಸಮಯ ಬದಲಾದ್ರೆ ನಿದ್ದೆ ಬಾರದೇ ಒದ್ದಾಡ ಬೇಕಾಗುತ್ತದೆ.

ಮೊಬೈಲ್‍ನಿಂದ ದೂರ ಇರಿ
ಎಲ್ಲರಿಗೂ ಗೊತ್ತೇ ಇರೋ ಹಾಗೆ ಇತ್ತೀಚೆಗೆ ಎಲ್ಲರು ಮೊಬೈಲ್‍ನಲ್ಲೇ ಮುಳುಗಿ ಹೋಗಿರುತ್ತಾರೆ. ಆದ ಕಾರಣ ಮಲಗುವಾಗ್ಲೂ ಮೊಬೈಲ್ ಹಿಡಿದೇ ಮಲಗಿರುತ್ತಾರೆ. ಅದರಿಂದಲೂ ನಿಮ್ಮ ನಿದ್ದೆ ಹೋಗಬಹುದು. ಆದ ಕಾರಣ ಆದಷ್ಟು ಮೊಬೈಲ್‍ನ್ನು ನಿಮ್ಮ ಕೋಣೆಯಿಂದ ಹೊರಗೆ ಇಟ್ರೆ ಒಳ್ಳೆಯದು.

ಯೋಗ, ವ್ಯಾಯಾಮ ಮಾಡಿ
ನಿಮಗೆ ಮಲಗಿದಾಗ ಒಂದು ವೇಳೆ ನಿದ್ದೆ ಬಾರದೇ ಹೋದ್ರೆ ಯೋಗ ಮಾಡಿ, ಉಸಿರಾಟಕ್ಕೆ ಸಂಬಂಧಿಸಿದ ಯೋಗ ಮಾಡಿದ್ರೆ ಒಳ್ಳೆಯದು. ಆಗ ನಿಮ್ಮ ಮನಸ್ಸು ಶಾಂತವಾಗುತ್ತದೆ. ನಿದ್ದೆಯೂ ಬರುತ್ತದೆ. ದಿನವೂ ವ್ಯಾಯಾಮ ಮಾಡಿದ್ರೆ ದೇಹದ ಪ್ರತಿಯೊಂದು ಅಂಗಕ್ಕೂ ಕಸರತ್ತು ಸಿಗುತ್ತದೆ. ಸಕ್ರಿಯವಾಗುತ್ತವೆ. ದೇಹ ದಣಿಯುತ್ತದೆ. ದಣಿದ ದೇಹ ಬೇಗ ನಿದ್ದೆಗೆ ಜಾರುತ್ತದೆ.

ಇದನ್ನೂ ಓದಿ: Sleeping Time: ನೀವು ಮಲಗುವ ವೇಳೆಗೂ ನಿಮ್ಮ ರಾಶಿ ಚಕ್ರಗಳಿಗೂ ಲಿಂಕ್ ಇದ್ಯಂತೆ ನೋಡಿ!

ಓದೋ ಅಭ್ಯಾಸ ಇದ್ರೆ ಒಳ್ಳೆ ಪುಸ್ತಕಳನ್ನು ಓದಿ
ನಿದ್ದೆ ಬರುತ್ತಿಲ್ಲ. ಏನಪ್ಪಾ ಮಾಡೋದು ಅನ್ನಿಸಿದ್ರೆ, ನಿಮಗೆ ಓದೋ ಅಭ್ಯಾಸ ಇದ್ರೆ ಒಳ್ಳೆಯ ಪುಸ್ತಕಗಳನ್ನು ಓದಿ. ಆಗ ನಿಮ್ಮ ಮನಸ್ಸಿನ ಚಿಂತೆಗಳು ಮಾಯವಾಗಿ, ನೀವು ಓದುತ್ತಲೇ ನಿದ್ರೆ ಮಾಡಿ ಬಿಡುತ್ತೀರಿ.

ರಾತ್ರಿ ವೇಳೆ ಕಾಫಿ, ಟೀ ಕುಡಿಯಬೇಡಿ
ಕೆಲವರಿಗೆ ರಾತ್ರಿ ಮಲಗುವುದಕ್ಕೂ ಮುಂಚೆ ಟೀ ಅಥವಾ ಕಾಫಿ ಕುಡಿಯೋ ಅಭ್ಯಾಸ ಇರುತ್ತೆ. ಅದನ್ನು ಬಿಟ್ಟುಬಿಡಿ ಏಕಂದ್ರೆ ಕಾಫಿ, ಟೀ ನಿಮ್ಮ ನಿದ್ದೆಯನ್ನು ಓಡಿಸುತ್ತವೆ.

ಸ್ವಚ್ಛವಾಗಿರಲಿ ನಿಮ್ಮ ಮಲಗುವ ಕೋಣೆ
ನೀವು ಮಲಗುವ ಕೋಣೆ ಸ್ವಚ್ಛವಾಗಿದ್ರೆ, ನಿಮ್ಮ ಆರೋಗ್ಯಕ್ಕೂ ಒಳ್ಳೆಯದು. ಹಾಗೂ ಮನಸ್ಸಿಗೆ ಖುಷಿಯು ಸಿಗುತ್ತದೆ. ಆದಷ್ಟು ನೀವು ಮಲಗೋ ಕೋಣೆಯನ್ನು ಸ್ವಚ್ಛವಾಗಿಡಿ.

ಇದನ್ನೂ ಓದಿ: Foods for Sleeping: ಉತ್ತಮ ನಿದ್ದೆಗಾಗಿ ಏನು ತಿನ್ನಬೇಕು? ಇಲ್ಲಿದೆ ಓದಿ, ಟ್ರೈ ಮಾಡಿ, ನಿದ್ದೆ ಮಾಡಿ!

ಚಿಂತೆಗೆ ಗುಡ್‍ಬೈ ಹೇಳಿ
ಎಲ್ಲರಿಗೂ ಜೀವನದಲ್ಲಿ ಒಂದಲ್ಲ ಒಂದು ಕಷ್ಟಗಳ ಇದ್ದೇ ಇರುತ್ತವೆ. ಬಂದ ಕಷ್ಟಗಳು ಒಂದು ದಿನ ಹೋಗೇ ಹೋಗುತ್ತವೆ. ಅದಕ್ಕೆ ಮಲಗಿದ ವೇಳೆ ಕಷ್ಟಗಳ ಬಗ್ಗೆ ಚಿಂತಿಸಬೇಡಿ. ಆಗ ನಿದ್ದೆಯೇ ಬರುವುದಿಲ್ಲ. ನೀವು ಒಂದು ಕಷ್ಟದ ಬಗ್ಗೆ ಚಿಂತಿಸಿ, ಆರೋಗ್ಯ ಎಂಬ ಸಮಸ್ಯೆಯ ಕಷ್ಟವನ್ನು ಬರಮಾಡಿಕೊಳ್ಳಬೇಡಿ. ಅದಕ್ಕೆ ನೀವು ಎಲ್ಲಾ ಚಿಂತೆಯನ್ನು ಗಂಟು ಮೂಟೆ ಕಟ್ಟಿ ಬೀಸಾಕಿ ಮಲಗಿಕೊಳ್ಳಿ.
Published by:Savitha Savitha
First published: