ವಾರದ ನಿದ್ರೆಯನ್ನೆಲ್ಲ ವೀಕೆಂಡ್​ನಲ್ಲಿ ಮುಗಿಸಿಬಿಡ್ತೀರಾ?; ಇನ್ನು ಹಾಗೆ ಮಾಡಬೇಡಿ

ವಾರವಿಡೀ ನಿದ್ರೆಯಾಗಿಲ್ಲ, ಹಾಗಾಗಿ ವೀಕೆಂಡ್​ ಸ್ವಲ್ಪ ಜಾಸ್ತಿ ಮಲಗಬೇಕು ಎಂದು ಪ್ರತಿಯೊಬ್ಬರೂ ಅಂದುಕೊಳ್ಳೋದು ಸಹಜ. ಆದರೆ, ಅದು ಕೆಟ್ಟ ಅಭ್ಯಾಸ ಎನ್ನುತ್ತದೆ ಸಮೀಕ್ಷೆ.

Sushma Chakre | news18
Updated:March 2, 2019, 10:31 PM IST
ವಾರದ ನಿದ್ರೆಯನ್ನೆಲ್ಲ ವೀಕೆಂಡ್​ನಲ್ಲಿ ಮುಗಿಸಿಬಿಡ್ತೀರಾ?; ಇನ್ನು ಹಾಗೆ ಮಾಡಬೇಡಿ
ಸಾಂದರ್ಭಿಕ ಚಿತ್ರ
  • News18
  • Last Updated: March 2, 2019, 10:31 PM IST
  • Share this:
ಗಾಢ ರಾತ್ರಿ... ಚೆಂದನೆಯ ರಾತ್ರಿಯಲ್ಲಿ ಸೊಂಪಾದ ನಿದ್ರೆಯಲ್ಲಿ ಏನೇನೋ ಕನಸು ಬೀಳತೊಡಗಿರುತ್ತದೆ. ಸೂರ್ಯ ಮೂಡುವ ಹೊತ್ತು ಸಮೀಪಿಸುತ್ತಿದ್ದಂತೆ ರೂಮೆಲ್ಲ ತಂಪಾಗಿ ಇನ್ನೂ ಸೊಂಪಾಗಿ ನಿದ್ರೆ ಹತ್ತುತ್ತದೆ. ಕನಸಿಗೆ ಕನಸು ಸೇರಿ ಯಾವುದೋ ಲೋಕದಲ್ಲಿ ಇದ್ದಂತೆ ಭಾಸವಾಗುತ್ತಿರುತ್ತದೆ. ಅಷ್ಟರಲ್ಲಿ ಏನೋ ಜೋರಾದ ಸದ್ದು ಕೇಳುತ್ತದೆ. ಏನಿರಬಹುದು? ಕನಸಲ್ಲಿ ಓಡುತ್ತಿದ್ದ ಕುದುರೆ ಆಯ ತಪ್ಪಿ ಬಿದ್ದಿತಾ? ಅಥವಾ ನಾನು ಮಲಗಿದ್ದ ಮಂಚವೇ ಮುರಿದುಬಿದ್ದಿತಾ? ಕಣ್ತೆರೆದು ನೋಡಬೇಕೆಂದುಕೊಂಡರೂ ಸಾಧ್ಯವಾಗುವುದೇ ಇಲ್ಲ. ಕಿವಿಗಳನ್ನು ಮುಚ್ಚಿಕೊಳ್ಳಬೇಕೆನಿಸಿದರೂ ಆ ಶಬ್ದ ಇನ್ನಷ್ಟು ಆಳವಾಗಿ ದೇಹದೊಳಗೆ ನೇರವಾಗಿ ಇಳಿದಂತೆ ಅನಿಸುತ್ತದೆ. ಇನ್ನು ಈ ಕರ್ಕಶ ಶಬ್ದವನ್ನು ಕೇಳಲು ಸಾಧ್ಯವೇ ಇಲ್ಲ ಎಂದು ಕಷ್ಟಪಟ್ಟು ಕಣ್ತೆರೆದರೆ ಅದು ಅಲಾರಾಂ!

ಹೌದು... ಬೆಳಗ್ಗೆ ಆಫೀಸಿಗೆ ಹೋಗಲೆಂದು ಮೊಬೈಲ್​ನಲ್ಲಿ ಅಲಾರಾಂ ಇಟ್ಟುಕೊಂಡಿದ್ದು ನಾನೇ ಅಲ್ಲವಾ? ನಾನು ಸುಲಭಕ್ಕೆ ಏಳುವವಳಲ್ಲ ಎಂದು ಐದೈದು ನಿಮಿಷಕ್ಕೊಂದು ಅಲಾರಾಂ ಸೆಟ್​ ಮಾಡಿಕೊಂಡಿದ್ದು ಮರೆತುಹೋಯ್ತ? ಆ ನಿದ್ರೆಗಣ್ಣಲ್ಲೂ ನನಗೆ ನಾನೇ ಬೈದುಕೊಳ್ಳುತ್ತಾ ಮೊಬೈಲನ್ನು ಬಿಸಾಡಲೂ ಆಗದೆ, ಕೋಪವನ್ನು ಹತ್ತಿಕ್ಕಿಕೊಳ್ಳಲೂ ಆಗದೆ ಕೊಸರಾಡುತ್ತಾ ಮುಸುಕೆಳೆದು ಮಲಗಿದ ತಕ್ಷಣ ಮತ್ತೆ ಅದೇ ಶಬ್ದ! ದಿನವಿಡೀ ನನ್ನ ಅಗತ್ಯಗಳನ್ನು, ಬೇಸರವನ್ನು ನೀಗಿಸುವ ಮೊಬೈಲ್​ ಅದ್ಯಾಕೋ ಆ ಕ್ಷಣಕ್ಕೆ ಶತ್ರುವಿನ ರೂಪ ತಾಳಿಬಿಡುತ್ತದೆ. ನಿದ್ರೆ ಹಾಳಾದ ಕೋಪದಲ್ಲೇ ಮೊಬೈಲ್​ ಎತ್ತಿ ನೋಡಿದರೆ ಅದಾಗಲೇ 7 ಗಂಟೆ. ಅಯ್ಯೋ, ಇನ್ನು ಒಂದು ಗಂಟೆಯೊಳಗೆ ಆಫೀಸಿಗೆ ಹೊರಡಬೇಕು ಎಂದು ನೆನಪಾಗಿದ್ದೇ ತಡ ಮೊಬೈಲ್​ ಎಲ್ಲೋ... ಬೆಡ್​ಶೀಟ್​ ಎಲ್ಲೋ... ನಾವೆಲ್ಲೋ...

ನೀವೂ ತೆಳ್ಳಗೆ ಕಾಣಬೇಕಾ?; ಸೊಂಟದ ಕೊಬ್ಬು ಕರಗಿಸೋದು ಬಹಳ ಸುಲಭ!ಇದು ಯಾರದೋ ಒಬ್ಬರ ಕತೆಯಲ್ಲ. ಪ್ರತಿಯೊಬ್ಬರ ಮನೆಯಲ್ಲೂ ಇಂತಹ ಸನ್ನಿವೇಶ ದಿನವೂ ನಡೆಯುತ್ತಲೇ ಇರುತ್ತದೆ. ಆಫೀಸಿಗೆ ಹೋಗುವವರ ಗೋಳು ಮುಂಜಾನೆಯ ಅಲಾರಾಂನೊಂದಿಗೇ ಆರಂಭವಾಗುತ್ತದೆ. ಈ ರೀತಿ ವಾರವಿಡೀ ಅರ್ಧಂಬರ್ಧ ನಿದ್ರೆ ಮಾಡಿಕೊಂಡು ಆಫೀಸಿಗೆ ಓಡುವವರು ವಾರಾಂತ್ಯ ಬಂದಕೂಡಲೆ ಮೈಮರೆತು ಮಧ್ಯಾಹ್ನದವರೆಗೂ ನಿದ್ರೆ ಮಾಡುತ್ತಾರೆ. ಈ ರೀತಿ ವಾರದ ನಿದ್ರೆಯನ್ನೆಲ್ಲ ಕಂತುಗಳಂತೆ ಕಾಪಾಡಿಕೊಂಡು ವೀಕೆಂಡ್​ನಲ್ಲಿ ಮಧ್ಯಾಹ್ನದವರೆಗೂ ರೂಮಿನ ಬಾಗಿಲು ತೆರೆಯದೆ ಮಲಗುವವರಲ್ಲಿ ನೀವೂ ಒಬ್ಬರಾಗಿದ್ದರೆ ಈ ಸುದ್ದಿಯನ್ನೊಮ್ಮೆ ಓದಿ.

ವಾರವಿಡೀ ನಿದ್ರೆಯಾಗಿಲ್ಲ, ಹಾಗಾಗಿ ವೀಕೆಂಡ್​ ಸ್ವಲ್ಪ ಜಾಸ್ತಿ ಮಲಗಬೇಕು ಎಂದು ಪ್ರತಿಯೊಬ್ಬರೂ ಅಂದುಕೊಳ್ಳೋದು ಸಹಜ. ಆದರೆ, ಅದು ಕೆಟ್ಟ ಅಭ್ಯಾಸ ಎನ್ನುತ್ತದೆ ಒಂದು ಸಮೀಕ್ಷೆ. ವೀಕೆಂಡ್​ನ 2 ದಿನ ಚೆನ್ನಾಗಿ ನಿದ್ರೆ ಮಾಡಿ ಮತ್ತೆ ಸೋಮವಾರದಿಂದ ಅರೆಬರೆ ನಿದ್ರೆ ಮಾಡಿದರೆ ಆರೋಗ್ಯ ಇನ್ನಷ್ಟು ಹದಗೆಡುವುದು ಗ್ಯಾರಂಟಿ ಎನ್ನುತ್ತದೆ ಅಧ್ಯಯನ. ವೀಕೆಂಡ್​ ಜಾಸ್ತಿ ಹೊತ್ತು ಮಲಗುವುದರಿಂದ ದೇಹಕ್ಕೆ ವಿಶ್ರಾಂತಿಯೇನೋ ಸಿಗುತ್ತದೆ ಆದರೆ, ಅದರಿಂದ ಬಾಕಿ ಉಳಿದ ನಿದ್ರೆಯನ್ನೆಲ್ಲ ಮುಗಿಸಬಹುದು ಎಂದುಕೊಳ್ಳುವುದು ತಪ್ಪು.

ನೀವು ಈರುಳ್ಳಿ- ಬೆಳ್ಳುಳ್ಳಿ ತಿನ್ನೋದಿಲ್ವ?; ಹಾಗಿದ್ದರೆ ಈ ಸುದ್ದಿ ಓದಿ...ಸಮೀಕ್ಷೆಯಲ್ಲೇನಿತ್ತು?:
18ರಿಂದ 39 ವರ್ಷದೊಳಗಿನ 36 ಆರೋಗ್ಯವಂತ ವ್ಯಕ್ತಿಗಳನ್ನು ಸಮೀಕ್ಷೆಗೆ ಒಳಪಡಿಸಲಾಯಿತು. 2 ವಾರಗಳ ಕಾಲ ಲ್ಯಾಬೋರೇಟರಿಯಲ್ಲಿ ಅವರನ್ನು ನಿಗಾದಲ್ಲಿ ಇರಿಸಲಾಯಿತು. ಅವರ ಆಹಾರ, ಬೆಳಕಿಗೆ ಎಷ್ಟು ಎಕ್ಸ್​ಪೋಸ್​ಆಗುತ್ತಾರೆ, ಎಷ್ಟು ಹೊತ್ತು ನಿದ್ರೆ ಮಾಡುತ್ತಾರೆ ಎಂಬುದನ್ನು ಸಮೀಕ್ಷೆಯಲ್ಲಿ ಗಮನಿಸಲಾಯಿತು. ನಂತರ ಅವರನ್ನು ನಾಲ್ಕೈದು ತಂಡಗಳಾಗಿ ಬೇರ್ಪಡಿಸಲಾಯಿತು.

ಆ ಗುಂಪಿನಲ್ಲಿ ಒಂದು ಗುಂಪಿನವರಿಗೆ 9 ರಾತ್ರಿ ದಿನಕ್ಕೆ 9 ಗಂಟೆಗಳ ಕಾಲ ನಿದ್ರೆ ಮಾಡಲು ಅವಕಾಶ ನೀಡಲಾಯಿತು. 2ನೇ ತಂಡದವರಿಗೆ ದಿನಕ್ಕೆ 5 ಗಂಟೆಗಳ ಕಾಲ ಮಾತ್ರ ನಿದ್ರೆ ಮಾಡಲು ಅವಕಾಶ ನೀಡಲಾಯಿತು. ಮತ್ತೊಂದು ತಂಡದವರಿಗೆ 5 ದಿನಗಳ ಕಾಲ ದಿನಕ್ಕೆ 5 ಗಂಟೆಗಳ ಕಾಲ ನಿದ್ರೆ ಮಾಡಲು ಅವಕಾಶ ನೀಡಲಾಯಿತು. ಹಾಗೇ, ಕೊನೆಯ 2 ದಿನಗಳ ಕಾಲ ನಿದ್ರೆಯನ್ನೇ ಮಾಡದಂತೆ ಸೂಚಿಸಲಾಯಿತು.

ಲೈಂಗಿಕ ಜೀವನದಲ್ಲಿ ಯಶಸ್ಸು ಕಾಣಲು ಇಲ್ಲಿವೆ ಕೆಲ ಸೂತ್ರಗಳು!

ಹೀಗೆ ನಿರ್ಬಂಧ ವಿಧಿಸಲಾದ ಎರಡು ಗುಂಪಿನವರು ರಾತ್ರಿಯಿಡೀ ಹೊರಳಾಡುತ್ತಿದ್ದರು. ಹಾಗೇ, ತೂಕವನ್ನು ಹೆಚ್ಚಿಸಿಕೊಂಡರು. ಅದೇ ವೀಕೆಂಡ್​ನಲ್ಲಿ ನಿದ್ರೆಯನ್ನು ಹೆಚ್ಚಾಗಿ ಮಾಡುತ್ತಿದ್ದವರಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿತು. ಆದರೆ, ಕೊನೆಗೂ ಹೆಚ್ಚೇನೂ ಬದಲಾವಣೆ ಕಂಡುಬರಲಿಲ್ಲ. ವೀಕೆಂಡ್​ನಲ್ಲಿ ಹೆಚ್ಚು ನಿದ್ರೆ ಮಾಡಿದ್ದರಿಂದ ಅವರ ದೇಹದಲ್ಲಾಗಲಿ, ಆರೋಗ್ಯದಲ್ಲಾಗಲಿ ಹೆಚ್ಚಿನ ಬದಲಾವಣೆಗಳು ಆಗಿರಲಿಲ್ಲ ಎನ್ನುತ್ತಾರೆ ಅಧ್ಯಯನ ನಡೆಸಿದ ಕ್ರಿಸ್​ ಡೆಪ್ನರ್​ ಎಂಬ ಸಂಶೋಧಕ.

ಸಮೀಕ್ಷೆಯ ಕೆಲವು ಹಂತಗಳಲ್ಲಿ ವೀಕೆಂಡ್​ ಹೆಚ್ಚು ನಿದ್ರೆ ಮಾಡುವವರಿಗಿಂತ ಬೇರೆಯವರೇ ಬೆಸ್ಟ್​ ಎನಿಸಿದ್ದರು. ಕಳೆದು ಹೋದ ದಿನಗಳ ನಿದ್ರೆಯನ್ನು ಒಂದೇ ಬಾರಿಗೆ ಮಾಡುತ್ತೇವೆ ಎಂದು ಹೇಳುವುದು ಮೂರ್ಖತನ. ನಿನ್ನೆಯ ನಿದ್ರೆಯನ್ನು ನಾವು ಇಂದು ಮಾಡಲು ಸಾಧ್ಯವೇ ಇಲ್ಲ. ನಿದ್ರೆಯ ಕೊರತೆಯಿಂದಲೇ ಹಲವು ಬಗೆಯ ತೊಂದರೆಗಳು ಕಂಡುಬರುತ್ತವೆ.

First published: March 2, 2019, 10:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading