ಇತ್ತೀಚಿನ ದಿನಗಳಲ್ಲಿ ಹಲವು ಸಮಸ್ಯೆಗಳು (Problem) ಜನರ (People) ನಿದ್ದೆಗೆಡಿಸಿವೆ. ಅದರಲ್ಲೂ ರಾತ್ರಿ (Night) ತುಂಬಾ ಹೊತ್ತು ನಿದ್ದೆ (Sleep) ಮಾಡದೇ ಮೊಬೈಲ್ (Mobile), ಕಂಪ್ಯೂಟರ್ ನೋಡುವುದು ಸಾಕಷ್ಟು ಸಮಸ್ಯೆ ಹೆಚ್ಚಿಸುತ್ತದೆ. ಅದರ ಜೊತೆಗೆ ನಿದ್ದೆ ಬಾರದಿರಲು ಹಾಗೂ ಬೆಳಗ್ಗೆ ತಡವಾಗಿ ಏಳಲು ಇದು ಕಾರಣವಾಗುತ್ತದೆ. ಅದೃಷ್ಟದಿಂದ ನೆಮ್ಮದಿಯ ನಿದ್ದೆ ಬರುತ್ತದೆ ಎಂಬ ಮಾತು ಇಂದಿನ ದಿನಗಳಲ್ಲಿ ಹಲವರ ವಿಷಯದಲ್ಲಿ ಇದು ನಿಜವಾಗಿದೆ. ಆದರೆ ಇಲ್ಲಿ ಅರ್ಥ ಸ್ವಲ್ಪ ವಿಭಿನ್ನ ಆಗಿದೆ. ಜಗತ್ತಿನಲ್ಲಿ ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಬರುತ್ತದೆ ಎಂಬ ಮಾತಿದೆ. ಆದರೆ ಈಗ ನಿದ್ದೆ ಮಾಡುವಾಗ ಹಾಗೂ ನಿದ್ದೆ ಮಾಡಲು ಜನರು ಒದ್ದಾಡಬೇಕಾದ ಸಮಸ್ಯೆ ಇದೆ.
ಸ್ಲೀಪ್ ಅಪ್ನಿಯಾ
ಒಮ್ಮೆ ಮಲಗಿದ ನಂತರ ಮತ್ತೆ ಬೆಳಿಗ್ಗೆ ಏಳುವುದು ಉತ್ತಮ ನಿದ್ರೆ ಹಾಗೂ ಆರೋಗ್ಯವನ್ನು ಚೆನ್ನಾಗಿ ಇಡುತ್ತದೆ. ಕೆಲವು ಜನರು ನಿದ್ರೆಯಲ್ಲಿ ಚಂಚಲತೆ ಅನುಭವಿಸುತ್ತಾರೆ. ಆಗಾಗ ಎಚ್ಚರಗೊಳ್ತಾರೆ. ಮತ್ತು ಉಸಿರಾಟದ ತೊಂದರೆ ಎದುರಿಸುತ್ತಾರೆ. ಇದು ಒಂದು ರೀತಿಯ ವೈದ್ಯಕೀಯ ಸ್ಥಿತಿ ಆಗಿದೆ. ಇದನ್ನು ವೈದ್ಯರು ಸ್ಲೀಪ್ ಅಪ್ನಿಯಾ ಎಂದು ಕರೆಯುತ್ತಾರೆ.
ವಿಶ್ವಾದ್ಯಂತ ಸುಮಾರು ಒಂದು ಶತಕೋಟಿ ಜನರು ಸ್ಲೀಪ್ ಅಪ್ನಿಯಾ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಸಂಶೋಧನೆ ಹೇಳಿದೆ. ಉಸಿರಾಡಲು ಸಾಧ್ಯವಾಗದೆ ಸಾವಿನ ಭಯವೂ ಉಂಟಾಗುತ್ತದೆ. ಸ್ಲೀಪ್ ಅಪ್ನಿಯಾ ರೋಗದ ಗಂಭೀರತೆ ನೀವು ಊಹಿಸಬಹುದು.
ಇದನ್ನೂ ಓದಿ: ನಾಲಿಗೆ ಮೇಲೆ ಈ ರೀತಿ ಆದಲ್ಲಿ ವಿಟಮಿನ್ ಡಿ ಕೊರತೆಯಂತೆ, ಎಚ್ಚರ ವಹಿಸಿ
ಇದು ಸಂಭವಿಸದಿದ್ದರೂ ಸಹ, ಈ ಕಾಯಿಲೆಯಿಂದ ಬಳಲುತ್ತಿರುವ ಜನರು ಹೃದಯ ಮತ್ತು ಉಸಿರಾಟದ ಅನೇಕ ಕಾಯಿಲೆಗೆ ಬಲಿಯಾಗುವ ಸಾಧ್ಯತೆ ಇದೆ. ಟೈಪ್ 2 ಮಧುಮೇಹ ಸಹ ಹೊಂದಿರಬಹುದು.
ರಕ್ತದೊತ್ತಡ ಮತ್ತು ಉಸಿರಾಟದ ಏರಿಳಿತ
ನಿದ್ದೆ ಮಾಡುವಾಗ ನಮ್ಮ ನಿದ್ರೆ ಹಲವ ಹಂತಗಳ ಮೂಲಕ ಹೋಗುತ್ತದೆ. ರಕ್ತದೊತ್ತಡ ಮತ್ತು ಉಸಿರಾಟದ ಏರಿಳಿತ ಸೇರಿದಂತೆ ನಿದ್ದೆ ಮಾಡುವಾಗ ನಮ್ಮ ಹೆಚ್ಚಿನ ಸ್ನಾಯುಗಳು ವಿಶ್ರಾಂತಿ ಭಂಗಿಯಲ್ಲಿ ಉಳಿಯುತ್ತವೆ. ಆದರೆ ಗಂಟಲಿನ ಸ್ನಾಯುಗಳು ತುಂಬಾ ಸಡಿಲಗೊಂಡರೆ, ಒಳಗೆ ಗಾಳಿಯ ಮಾರ್ಗವು ನಿರ್ಬಂಧಿಸಲ್ಪಡುತ್ತದೆ ಮತ್ತು ಉಸಿರಾಟ ಕಷ್ಟ ಆಗುತ್ತದೆ.
ಸ್ಲೀಪ್ ಅಪ್ನಿಯ ಕಾಯಿಲೆ ಎಂದರೇನು?
ಮೇಯೊ ಕ್ಲಿನಿಕ್ ಪ್ರಕಾರ, ನಿದ್ರೆಯಲ್ಲಿ ಉಸಿರುಕಟ್ಟುವಿಕೆ ಗಂಭೀರವಾದ ನಿದ್ರಾಹೀನತೆ ಆಗಿದೆ. ಇದರಲ್ಲಿ ಉಸಿರಾಟ ನಿಲ್ಲುತ್ತದೆ ಮತ್ತು ಪದೇ ಪದೇ ಪ್ರಾರಂಭವಾಗುತ್ತದೆ. ರಾತ್ರಿಯ ಪೂರ್ಣ ನಿದ್ರೆಯ ನಂತರ ನೀವು ಹೆಚ್ಚು ಗೊರಕೆ ಹೊಡೆಯುತ್ತಿದ್ದರೆ ಮತ್ತು ಆಯಾಸ ಅನುಭವಿಸಿದರೆ ನೀವು ಸ್ಲೀಪ್ ಅಪ್ನಿಯ ಹೊಂದಿರಬಹುದು. ನಿದ್ರೆಯಲ್ಲಿ ಮೂರು ವಿಧಗಳಿವೆ. ಕೇಂದ್ರ, ಪ್ರತಿಬಂಧಕ ಮತ್ತು ಸಂಕೀರ್ಣ ನಿದ್ರೆ. ಇವುಗಳಲ್ಲಿ ಅತ್ಯಂತ ಸಾಮಾನ್ಯವಾದದ್ದು ನಿದ್ರೆಯಲ್ಲಿ ಉಸಿರುಕಟ್ಟುವಿಕೆ.
ಯಾವ ಜನರು ಈ ರೋಗದ ಅಪಾಯವನ್ನು ಹೊಂದಿರುತ್ತಾರೆ?
ಅಮೆರಿಕಾ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಾರ ಬೊಜ್ಜು, ಆಲ್ಕೋಹಾಲ್ ಬಳಕೆ ಅಥವಾ ಧೂಮಪಾನ ಅಂಶಗಳು ಜನರು ನಿದ್ರೆಯಲ್ಲಿ ಉಸಿರುಕಟ್ಟುವಿಕೆಗೆ ಒಳಗಾಗುವ ಸಾಧ್ಯತೆ ಹೆಚ್ಚು. ಜೊತೆಗೆ ಈ ಸಮಸ್ಯೆ ಆನುವಂಶಿಕವಾಗಿರಬಹುದು. ಪುರುಷರು ಮತ್ತು ವಯಸ್ಸಾದವರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.
ನಿದ್ರೆಯಲ್ಲಿ ಉಸಿರುಕಟ್ಟುವಿಕೆ ಏಕೆ ಅಪಾಯಕಾರಿ?
ಈ ರೋಗ ಅಪಾಯಕಾರಿ. ವ್ಯಕ್ತಿಯು ಸ್ವತಃ ರೋಗ ನಿರ್ಣಯ ಮಾಡಲು ಕಷ್ಟವಾಗುತ್ತದೆ ಮಲಗಿರುವಾಗ ವ್ಯಕ್ತಿಯು ಪ್ರಕ್ಷುಬ್ಧನಾಗುತ್ತಾನೆ. ನಿದ್ರೆಯ ಕೊರತೆಯಿಂದ ಎದ್ದ ಮೇಲೆ ಆಯಾಸ, ತಲೆ ಮತ್ತು ದೇಹದಲ್ಲಿ ನೋವು, ಖಿನ್ನತೆಗೆ ಬಲಿಯಾಗುತ್ತಾನೆ. ನಿದ್ರೆಯಲ್ಲಿ ಉಸಿರಾಡಲು ಸಾಧ್ಯವಾಗುವುದಿಲ್ಲ ಎಂಬುದನ್ನು ಮಲಗಿದ ನಂತರ ಮೇಲ್ವಿಚಾರಣೆ ಮಾಡುವ ಮೂಲಕ ಮಾತ್ರ ಕಂಡು ಹಿಡಿಯಬಹುದು.
ಸ್ಲೀಪ್ ಅಪ್ನಿಯ ಅಪಾಯ
ಸ್ಲೀಪ್ ಅಪ್ನಿಯ ವಿವಿಧ ಆರೋಗ್ಯ ಸಮಸ್ಯೆ ಅಪಾಯ ಹೆಚ್ಚಿಸುತ್ತದೆ. ಇತ್ತೀಚಿನ ಮೂರು ಅಧ್ಯಯನಗಳ ಫಲಿತಾಂಶಗಳು ನಿದ್ರೆಯಲ್ಲಿ ಉಸಿರುಕಟ್ಟುವಿಕೆ, ಕ್ಯಾನ್ಸರ್, ಕಡಿಮೆ ಮಾನಸಿಕ ಆರೋಗ್ಯ ಮತ್ತು ರಕ್ತ ಹೆಪ್ಪುಗಟ್ಟುವಿಕೆ ಅಪಾಯ ಹೆಚ್ಚಿಸುತ್ತದೆ.
ಇದನ್ನೂ ಓದಿ: ಕೂದಲು ಮತ್ತು ತ್ವಚೆಯ ಆರೋಗ್ಯಕ್ಕೆ ಮಜ್ಜಿಗೆ ಬಳಸ್ತೀರಾ? ಹಾಗಾದ್ರೆ ತಪ್ಪದೇ ಓದಿ
ನಿದ್ರೆಯಲ್ಲಿ ಉಸಿರುಕಟ್ಟುವಿಕೆ ತಡೆಯಬಹುದೇ?
ಸ್ಲೀಪ್ ಅಪ್ನಿಯ ತಡೆಯಬಹುದು. ಇದಕ್ಕಾಗಿ ಜೀವನಶೈಲಿಯಲ್ಲಿ ಕೆಲವು ಬದಲಾವಣೆ ತರಬೇಕು. ಆರೋಗ್ಯಕರ ತಿನ್ನುವುದು, ತೂಕ ನಿಯಂತ್ರಣ, ಧೂಮಪಾನ ಮತ್ತು ಆಲ್ಕೊಹಾಲ್ ಸೇವನೆ ಸೀಮಿತಗೊಳಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ