• Home
  • »
  • News
  • »
  • lifestyle
  • »
  • Sleep loss: ಸತತ ಮೂರು ದಿನ ಸರಿಯಾಗಿ ನಿದ್ದೆ ಮಾಡಿಲ್ಲ ಅಂದ್ರೆ ಈ ಸಮಸ್ಯೆಯಿಂದ ಬಳಲುವುದು ಗ್ಯಾರಂಟಿ!

Sleep loss: ಸತತ ಮೂರು ದಿನ ಸರಿಯಾಗಿ ನಿದ್ದೆ ಮಾಡಿಲ್ಲ ಅಂದ್ರೆ ಈ ಸಮಸ್ಯೆಯಿಂದ ಬಳಲುವುದು ಗ್ಯಾರಂಟಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವಾರಾಂತ್ಯದಲ್ಲಿ ಹೆಚ್ಚು ನಿದ್ದೆ ಮಾಡಿ, ಉಳಿದ ದಿನ ಕಡಿಮೆ ಮಾಡಿದರೆ ಅಡ್ಡಿಯಿಲ್ಲ ಎಂಬುದು ಹಲವರ ನಂಬಿಕೆ. ಆದರೆ, ಇದು ಅನೇಕ ಸಮಸ್ಯೆಗೆ ಕಾರಣವಾಗುತ್ತದೆ.

  • Share this:

ಆರೋಗ್ಯಕರ ಜೀವನಕ್ಕೆ ನಿದ್ದೆ ಅತ್ಯವಶ್ಯಕ.ನಿರಂತರ ನಿದ್ರೆ ಇಲ್ಲದೇ ಬಳಲಿದರೆ ಆರೋಗ್ಯ ಸಮಸ್ಯೆಯಾಗುತ್ತದೆ ಎನ್ನತ್ತಾರೆ. ಆದರೆ, ಹೊಸ ಅಧ್ಯಯನದ ಆವಿಷ್ಕಾರ ಪ್ರಕಾರ ನಿಮ್ಮ ಮಾನಸಿಕ ಮತ್ತು ದೈಹಿಕ ಯೋಗಕ್ಷೇಮ ಹದಗೆಡಲು ಸತತ ಮೂರು ರಾತ್ರಿಯ ನಿರಂತರ ನಿದ್ರಾಹೀನತೆ ಸಾಕಂತೆ. ಬಿಹೇವಿಯರಲ್ ಮೆಡಿಸಿನ್‌ನ ಅನ್ನಲ್ಸ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನದ ಪ್ರಕಾರ ಎಂಟುಗಳ ನಿದ್ದೆ ಅವಧಿಯಲ್ಲಿ ಆರು ಗಂಟೆಗಳಿಗಿಂತ ಕಡಿಮೆ ನಿದ್ರೆಯಿಂದ ಆಗುವ ಪರಿಣಾಮಗಳನ್ನು ಅಧ್ಯಯನ ಮಾಡಲಾಯಿತಂತೆ. ತಜ್ಞರು ಹೇಳುವಂತೆ ಇದು ಸರಾಸರಿ ವಯಸ್ಕರಿಗೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಕನಿಷ್ಠ ನಿದ್ದೆ ಅವಶ್ಯಕವಂತೆ. ಅಧ್ಯಯನದ ಮೊದಲ ರಾತ್ರಿಯ ನಿದ್ರಾಹೀನತೆಯ ನಂತರ ರೋಗಲಕ್ಷಣಗಳು ಹೆಚ್ಚಿನ ಮಟ್ಟದಲ್ಲಿ ಏರಿಕೆ ಕಂಡಿದೆ ಎಂದು ದಕ್ಷಿಣ ಫ್ಲೋರಿಡಾದ ಸ್ಕೂಲ್ ಆಫ್ ಏಜಿಂಗ್ ರಿಸರ್ಚ್‌ನ ಸಹಾಯಕ ಪ್ರಾಧ್ಯಾಪಕ ಸೂಮಿ ಲೀ, ಪ್ರಮುಖ ಲೇಖಕರವರ ಅಧ್ಯನದಿಂದ ತಿಳಿದುಬಂದಿದೆ. ನಂತರ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳ ಸಂಖ್ಯೆ ಹದಗೆಡುತ್ತಲೇ ಇತ್ತು, ಮೂರನೇ ದಿನವೂ ಉತ್ತುಂಗಕ್ಕೇರಿತು. ಆ ಸಮಯದಲ್ಲಿ, ಭಾಗವಹಿಸಿದವರಲ್ಲಿ ಆರನೇ ದಿನದಂದು ಅತ್ಯಂತ ತೀವ್ರವಾದ ದೈಹಿಕ ಲಕ್ಷಣಗಳು ಕಂಡುಬಂದಿರುವುದಾಗಿ ವರದಿಗಳು ತಿಳಿಸಿವೆ.


"ನಮ್ಮಲ್ಲಿ ಹಲವರು ವಾರಾಂತ್ಯದಲ್ಲಿ ಹೆಚ್ಚು ಸಮಯ ನಿದ್ರೆ ಮಾಡಿದರೆ ಸಾಕು ಉಳಿದ ದಿನ ಕಡಿಮೆ ನಿದ್ದೆ ಮಾಡಿದರು ಪರವಾಗಿಲ್ಲ. ಇದರಿಂದ ಆರೋಗ್ಯ ಕಾಪಾಡಿಕೊಳ್ಳುತ್ತೇವೆ ಎಂದು ಭಾವಿಸುತ್ತೇವೆ. ಆದರೆ, ಮೇಲಿನ ಅಧ್ಯಯನದ ಪ್ರಕಾರ ಒಂದು ದಿನದ ನಿದ್ರೆಯ ಕೊರತೆಯು ನಮ್ಮಲ್ಲಿ ಹಲವು ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ಹಾಗೂ ನಮ್ಮನ್ನು ದುರ್ಬಲಗೊಳಿಸುತ್ತದೆ ಎಂದು ತೋರಿಸುತ್ತದೆ ಎಂದು ಹೇಳಿದ್ದಾರೆ.


ಯುನೈಟೆಡ್ ಸ್ಟೇಟ್ಸ್ ಅಧ್ಯಯನದಲ್ಲಿ ಮಿಡ್‌ಲೈಫ್‌ ಒದಗಿಸಿದ ದತ್ತಾಂಶವು ಸುಮಾರು 2,000 ಸಾವಿರ ಮಧ್ಯ ವಯಸ್ಕ ವಯಸ್ಕರನ್ನು ಒಳಗೊಂಡಿತ್ತು. ಅವರು ತುಲನಾತ್ಮಕವಾಗಿ ಆರೋಗ್ಯವಂತರು ಮತ್ತು ಸುಶಿಕ್ಷಿತರು. ಅವರಲ್ಲಿ, 42 ಪ್ರತಿಶತದಷ್ಟು ಜನರು ಕನಿಷ್ಠ ಒಂದು ರಾತ್ರಿಯ ನಿದ್ರಾಹೀನತೆ ಹೊಂದಿದ್ದರು, ಅವರ ವಿಶಿಷ್ಟ ದಿನಚರಿಗಳಿಗಿಂತ ಒಂದು ಮತ್ತು ಒಂದೂವರೆ ಗಂಟೆ ಕಡಿಮೆ ನಿದ್ರೆ ಮಾಡುತ್ತಿದ್ದರು. ಅವರು ಸತತ ಎಂಟು ದಿನಗಳ ಕಾಲ ಒಂದು ಮತ್ತು ಒಂದೂವರೆ ಗಂಟೆಗಳ ಕಡಿಮೆ ನಿದ್ರೆ ಮಾಡಲು ಆರಂಭಿಸಿದರು.


ತಮ್ಮ ಮಾನಸಿಕ ಮತ್ತು ದೈಹಿಕ ನಡವಳಿಕೆಗಳನ್ನು ಡೈರಿಯಲ್ಲಿ ದಾಖಲಿಸುತ್ತಿದ್ದರು, ನಿದ್ರೆ ಕೊರತೆಯಿಂದ ದೇಹದ ಮೇಲೆ ಆಗುವ ಪರಿಣಾಮಗಳನ್ನು ಹಾಗೂ ಮನಸಿನ ಮೇಲೆ ಆಗುವ ಪರಿಣಾಮಗಳನ್ನು ಪರಿಶೀಲಿಸಲು ಸಂಶೋಧಕರಿಗೆ ಅವರ ಡೈರಿ ಅನುವು ಮಾಡಿಕೊಡುತ್ತಿತ್ತು.


ಭಾಗವಹಿಸಿದವರಲ್ಲಿ ನಿದ್ರೆಯ ಕೊರತೆಯಿಂದಾಗಿ ಕೋಪ, ನರ, ಒಂಟಿತನ, ಕಿರಿಕಿರಿ ಮತ್ತು ಹತಾಶೆಯ ಭಾವನೆಗಳಂತಹ ಇತರೆ ಸಮಸ್ಯೆಗಳನ್ನು ವರದಿ ಮಾಡಿದ್ದಾರೆ. ಮೇಲ್ಭಾಗದ ಉಸಿರಾಟದ ತೊಂದರೆಗಳು, ನೋವುಗಳು, ಜಠರಗರುಳಿನ ತೊಂದರೆಗಳು ಮತ್ತು ಇತರ ಆರೋಗ್ಯ ಸಮಸ್ಯೆಗಳಂತಹ ಹೆಚ್ಚಿನ ದೈಹಿಕ ಲಕ್ಷಣಗಳನ್ನು ಸಹ ಅನುಭವಿಸಿದ್ದಾರೆ ಎಂದು ಅಧ್ಯಯನದ ಫಲಿತಾಂಶಗಳಿಂದ ತಿಳಿದುಬಂದಿದೆ.


ಇದನ್ನು ಓದಿ: ಪುರುಷರೇ ಈ ಐದು ಆಹಾರಗಳು ಸೇವಿಸುವ ಮುನ್ನ ಒಮ್ಮೆ ಯೋಚಿಸಿ!

ಯು.ಎಸ್. ವಯಸ್ಕರಲ್ಲಿ ಮೂರನೇ ಒಂದು ಭಾಗದಷ್ಟು ಜನರು ರಾತ್ರಿಗೆ ಆರು ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡಲು ಆರಂಭಿಸಿದರು. ಒಮ್ಮೆ ಅದು ಅಭ್ಯಾಸವಾಗಿ ಮಾರ್ಪಟ್ಟರೆ, ನಿಮ್ಮ ದೇಹವು ನಿದ್ರೆಯ ಕೊರತೆಯಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳುವುದು ಕಷ್ಟಕರವಾಗಿದೆ. ದೈನಂದಿನ ಯೋಗಕ್ಷೇಮವು ಹದಗೆಡುತ್ತ ಹೋಗುತ್ತದೆ. ಇದು ನಿಮ್ಮ ವೃತ್ತಿಪರ ಜೀವನದ ಮೇಲೆ ಪರಿಣಾಮ ಬೀರಬಹುದು ಎಂದು ಅಧ್ಯಯನದಿಂದ ತಿಳಿದುಬಂದಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.


ಲೀ ನೇತೃತ್ವದ ಹಿಂದಿನ ಅಧ್ಯಯನವು ಕೇವಲ 16 ನಿಮಿಷಗಳ ನಿದ್ರೆ ಕೊರತೆಯು ಕೆಲಸದ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಬಹುದು ಎಂದು ಕಂಡುಹಿಡಿದಿದೆ. ಸಣ್ಣ ನಿದ್ರೆಯ ಕೊರತೆಯು ದೈನಂದಿನ ಸಾವಧಾನತೆಯನ್ನು ಕಡಿಮೆ ಮಾಡುತ್ತದೆ ಎಂದು ಅವರ ಹಿಂದಿನ ಸಂಶೋಧನೆಗಳು ತೋರಿಸುತ್ತವೆ, ಇದು ಒತ್ತಡವನ್ನು ನಿರ್ವಹಿಸಲು ಮತ್ತು ಆರೋಗ್ಯಕರ ದಿನಚರಿಯನ್ನು ನಿರ್ವಹಿಸಲು ನಿರ್ಣಾಯಕ ಸಂಪನ್ಮೂಲವಾಗಿದೆ. ಪ್ರಬಲ ದೈನಂದಿನ ಕಾರ್ಯಕ್ಷಮತೆಯನ್ನು ಕಾಪಾಡಿಕೊಳ್ಳಲು ಉತ್ತಮ ಮಾರ್ಗವೆಂದರೆ ಪ್ರತಿ ರಾತ್ರಿ ಮಲಗಲು ಆರು ಗಂಟೆಗಳಿಗಿಂತ ಹೆಚ್ಚು ಸಮಯವನ್ನು ನಿಗದಿಪಡಿಸುವುದು ಎಂದು ಅಧ್ಯನದಿಂದ ತಿಳಿದುಬಂದಿದೆ.


First published: