ಕಡಿಮೆ ನಿದ್ರಿಸುವ ವ್ಯಕ್ತಿಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ

news18
Updated:June 7, 2018, 10:26 PM IST
ಕಡಿಮೆ ನಿದ್ರಿಸುವ ವ್ಯಕ್ತಿಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ
news18
Updated: June 7, 2018, 10:26 PM IST
ನ್ಯೂಸ್ 18 ಕನ್ನಡ

ದಿನಕ್ಕೆ ಏಳು ಗಂಟೆಗಳ ಕಾಲ ನಿದ್ರಿಸುವುದರಿಂದ ಹೃದಯವು ಯೌವನ ಭರಿತವಾಗಿರುತ್ತದೆ ಎಂದು ಹೊಸ ಸಂಶೋಧನೆಯಿಂದ ತಿಳಿದು ಬಂದಿದೆ. ಏಳು ಗಂಟೆ ಮಾತ್ರ ನಿದ್ರಿಸುವವರಲ್ಲಿ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಕಡಿಮೆಯಿರುತ್ತದೆ ಎಂದು ಕೂಡ ಈ ಅಧ್ಯಯನ ತಿಳಿಸಿದೆ.

ಪ್ರತಿನಿತ್ಯ ಏಳು ಗಂಟೆಗಿಂತ ಹೆಚ್ಚಿನ ಅಥವಾ ಕಡಿಮೆ ಅವಧಿ ನಿದ್ರೆ ಮಾಡುವುದರಿಂದ ಹೃದಯವು ಬೇಗ ವೃದ್ಧಾಪ್ಯ ಹೊಂದುತ್ತದೆ ಎಂದು ಈ ಸಂಶೋಧನೆಯಿಂದ ಸಾಬೀತಾಗಿದೆ. ಹಾಗೆಯೇ ಕಡಿಮೆ ಪ್ರಮಾಣದ ನಿದ್ರೆಯು ಹೃದಯದ ಆಯಸ್ಸನ್ನು ಕಡಿತಗೊಳಿಸಿದರೆ, ಅತೀ ಹೆಚ್ಚಿನ ನಿದ್ರೆಯು ಹೃದಯ ರಕ್ತನಾಳ ಸಂಬಂಧಿ ಕಾಯಿಲೆಯ ಅಪಾಯವನ್ನು ಉಂಟು ಮಾಡುತ್ತದೆ.

ನಿದ್ರಾ ಅವಧಿಯಿಂದ ವ್ಯಕ್ತಿಗಳ ಹೃದಯದ ರಕ್ತನಾಳದಲ್ಲಿ ಉಂಟಾಗುವ ಅಪಾಯವನ್ನು ತಿಳಿಸುವಲ್ಲಿ ಈ ಅಧ್ಯಯನ ಪ್ರಮುಖ ಪಾತ್ರವಹಿಸಿದೆ ಎಂದು ಜಾರ್ಜಿಯಾದ ಎಮೊರಿ ವಿಶ್ವವಿದ್ಯಾಲಯದ ಜೂಲಿಯ ಡರ್ಮರ್ ತಿಳಿಸಿದ್ದಾರೆ.

ಈ ಅಧ್ಯಯನಕ್ಕಾಗಿ 30 ರಿಂದ 74 ವಯಸ್ಸಿನವರ ನಡುವಿನ 12,775 ವ್ಯಕ್ತಿಗಳನ್ನು ಆರಿಸಿಕೊಳ್ಳಲಾಗಿತ್ತು. ಇವರನ್ನು ಐದು ವಿಭಾಗಗಳನ್ನಾಗಿ ವಿಂಗಡಿಸಿ ಈ ಸಂಶೋಧನೆ ನಡೆಸಲಾಗಿದೆ. 24 ಗಂಟೆಗಳ ಅವಧಿಯಲ್ಲಿ ಏಳು ಗಂಟೆಗಳ ಕಾಲ ನಿದ್ರಿಸುವ ವ್ಯಕ್ತಿಗಳ ಹೃದಯವು ತುಂಬ ಯೌವನದಿಂದ ಕೂಡಿರುತ್ತದೆ ಎಂದು ಫಲಿತಾಂಶದಿಂದ ತಿಳಿದು ಬಂದಿದೆ.

ವ್ಯಕ್ತಿಯ ತೂಕ, ವಯಸ್ಸು ಮತ್ತು ಅಭ್ಯಾಸಗಳಿಂದಲ್ಲದೆ, ಕಡಿಮೆ ನಿದ್ರಿಸುವ ವ್ಯಕ್ತಿಗಳಿಗೂ ಹೃದಯ ರಕ್ತನಾಳದ ತೊಂದರೆ ಮತ್ತು ಹೃದಯ ಸಂಬಂಧಿ ಕಾಯಿಲೆ ಉಂಟಾಗಲಿದೆ ಎಂದು ಅಮೆರಿಕ ಮೂಲದ ನ್ಯಾಷನಲ್ ಸ್ಲೀಪ್ ಫೌಂಡೇಶನ್ ತಿಳಿಸಿದೆ.

ನಿದ್ರೆಯ ಅವಧಿ ಕಡಿಮೆಯಾಗಲು ಚಯಾಪಚಯ ಕ್ರಿಯೆ, ರಕ್ತದೊತ್ತಡ ಮುಂತಾದ ಪ್ರಕ್ರಿಯೆಗಳು ಕಾರಣವಾಗಿದ್ದರೂ, ಇದು ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುವುದನ್ನು ಅಲ್ಲೆಗೆಳೆಯುವಂತಿಲ್ಲ ಎಂದು ಅಧ್ಯಯನ ತಂಡ ಹೇಳಿದೆ.
First published:June 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...