ಕಡಿಮೆ ನಿದ್ರೆ ಮಾಡಿದ್ರೆ ಅಪಾಯ: ಚೆನ್ನಾಗಿ ನಿದ್ರಿಸಿದರೆ ದೇಹ ತೂಕ ನಿಯಂತ್ರಣಕ್ಕೆ..!

ಹಾಗೆಯೇ 7 ಗಂಟೆಗಿಂತ ಕಡಿಮೆ ನಿದ್ರೆ ಮಾಡಿದರೆ ಹೃದಯಾಘಾತದ ಅಪಾಯ ಹೆಚ್ಚಿರುತ್ತದೆ ಎಂದು ಕೂಡ ಅಧ್ಯಯನ ತಂಡ ಎಚ್ಚರಿಸಿದೆ. ಅಪೂರ್ಣವಾದ ನಿದ್ರೆಯಿಂದ ದೇಹದ ಚಯಾಪಚಯ ಕ್ರಿಯೆಯು ಗೊಂದಲಕ್ಕೀಡಾಗಿ ಅನಾರೋಗ್ಯವನ್ನು ತಂದೊಡ್ಡುವ ಸಾಧ್ಯತೆಯಿದೆ.

zahir | news18
Updated:June 8, 2019, 4:58 PM IST
ಕಡಿಮೆ ನಿದ್ರೆ ಮಾಡಿದ್ರೆ ಅಪಾಯ: ಚೆನ್ನಾಗಿ ನಿದ್ರಿಸಿದರೆ ದೇಹ ತೂಕ ನಿಯಂತ್ರಣಕ್ಕೆ..!
@Ageless By Glynis Barber
  • News18
  • Last Updated: June 8, 2019, 4:58 PM IST
  • Share this:
ನಿದ್ರಾಹೀನತೆಯ ಸಮಸ್ಯೆಯು ಮಾನಸಿಕ ಮತ್ತು ದೈಹಿಕ ಕ್ರಿಯೆಗಳ ಮೇಲೆ ಪರಿಣಾಮ ಬೀರುತ್ತವೆ. ಹೀಗಾಗಿಯೇ ಸುಖಪೂರ್ವಕವಾಗಿ ನಿದ್ರಿಸಿದರೆ ಮಾತ್ರ ಉತ್ತಮ ಆರೋಗ್ಯವನ್ನು ಹೊಂದಬಹುದು. ಆದರೆ ಅದೇ ನಿದ್ದೆಯಿಂದ ಸ್ಥೂಲಕಾಯತೆ ಸಮಸ್ಯೆ ಕಾಡುತ್ತದೆ ಎಂಬ ಭಯ ಹಲವರಲ್ಲಿದೆ. ಏಕೆಂದರೆ ಹೆಚ್ಚು ಹೊತ್ತು ನಿದ್ರಿಸಿದರೆ ದೇಹ ತೂಕವು ಹೆಚ್ಚಾಗುತ್ತದೆ. ಶರೀರವು ದಪ್ಪಗಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ ಅಧ್ಯಯನ ತಂಡವೊಂದು ಅಧಿಕ ಸಮಯ ನಿದ್ದೆ ಮಾಡುವುದರಿಂದ ದೇಹ ತೂಕ ಕಡಿಮೆ ಮಾಡಿಕೊಳ್ಳಬಹುದು ಎಂಬುದನ್ನು ಸಾರಿದೆ.

ಉತ್ತಮವಾಗಿ ನಿದ್ರಿಸುವುದರಿಂದ ದೇಹದಲ್ಲಿರುವ ಸಕ್ಕರೆ ಅಂಶ ಕಡಿಮೆಯಾಗುತ್ತದೆ. ಇದರಿಂದ ಶರೀರದ ಕ್ಯಾಲೊರಿಗಳ ಪ್ರಮಾಣದಲ್ಲಿ ಇಳಿಕೆಯಾಗುತ್ತದೆ. ಇದರಿಂದ ಸ್ಥೂಲಕಾಯತೆ ಸಮಸ್ಯೆಯು ನಿಯಂತ್ರಣಕ್ಕೆ ಬರುತ್ತದೆ ಎಂಬುದು ಹೊಸ ಸಂಶೋಧನೆಯಿಂದ ಸಾಬೀತಾಗಿದೆ.

ಹಾಗೆಯೇ 7 ಗಂಟೆಗಿಂತ ಕಡಿಮೆ ನಿದ್ರೆ ಮಾಡಿದರೆ ಹೃದಯಾಘಾತದ ಅಪಾಯ ಹೆಚ್ಚಿರುತ್ತದೆ ಎಂದು ಕೂಡ ಅಧ್ಯಯನ ತಂಡ ಎಚ್ಚರಿಸಿದೆ. ಅಪೂರ್ಣವಾದ ನಿದ್ರೆಯಿಂದ ದೇಹದ ಚಯಾಪಚಯ ಕ್ರಿಯೆಯು ಗೊಂದಲಕ್ಕೀಡಾಗಿ ಅನಾರೋಗ್ಯವನ್ನು ತಂದೊಡ್ಡುವ ಸಾಧ್ಯತೆಯಿದೆ. ಆದರೆ ಹೆಚ್ಚು ನಿದ್ರಿಸುವುದರಿಂದ ಆರೋಗ್ಯ ಉತ್ತಮಗೊಳ್ಳುತ್ತದೆ. ಇದರೊಂದಿಗೆ ನೀವು ಕಡಿಮೆ ವ್ಯಾಯಾಮ ಮಾಡಿದರೂ ಬೇಗನೆ ಸ್ಥೂಲಕಾಯತೆ ಸಮಸ್ಯೆಗೆ ಪರಿಣಾಮ ಕಾಣಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾದ ಯುನಿವರ್ಸಿಟಿ ಆಫ್ ಕೇಪ್​ ಟೌನ್ ಸಂಶೋಧಕರು ನಡೆಸಿದ ಈ ಅಧ್ಯಯನದಲ್ಲಿ ಚೆನ್ನಾಗಿ ನಿದ್ರಿಸುವುದರಿಂದ ಹಸಿವು ಕೂಡ ನಿಯಂತ್ರಣಕ್ಕೆ ಬರುತ್ತದೆ ಎಂಬುದು ಸಾಬೀತಾಗಿದೆ. ಈ ಸಂಶೋಧನೆಯ ಪ್ರಕಾರ,  ಸುಖ ನಿದ್ದೆಯಿಂದ ದೇಹದಲ್ಲಿ ಇನ್ಸುಲಿನ್ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ನಿರಂತರ ಆಹಾರದ ಬಯಕೆ ಕಡಿಮೆಯಾಗುತ್ತದೆ. ಇದು ನಿಮ್ಮ ಸ್ಥೂಲಕಾಯತೆಯು ನಿಧಾನಕ್ಕೆ ನಿಯಂತ್ರಿಸಲಿದೆ. ಹಾಗಾಗಿ ಆಹಾರ ಸೇವಿಸಿದಷ್ಟು ಚೆನ್ನಾಗಿ ನಿದ್ರಿಸಿದರೂ ದೇಹ ತೂಕವನ್ನು ನಿಯಂತ್ರಿಸಿಕೊಳ್ಳಬಹುದು ಎಂದು ಈ ಅಧ್ಯಯನ ತಂಡ ಅಭಿಪ್ರಾಯ ಪಟ್ಟಿದೆ.

ಇದನ್ನೂ ಓದಿ: ಸ್ಯಾಂಡಲ್​ವುಡ್ ನಟಿಯೊಂದಿಗೆ ಟೀಂ ಇಂಡಿಯಾ ವೇಗಿ ಬುಮ್ರಾ ಲವ್ವಿ-ಡವ್ವಿ​?

;
First published:June 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ