ಫೆಬ್ರವರಿ 14 ರಂದು ಪ್ರೇಮಿಗಳ ದಿನಾಚರಣೆಯನ್ನು(Valentains Day) ಆಚರಿಸಲಾಗುತ್ತದೆ. ಅದಕ್ಕೂ ಮುನ್ನ ವ್ಯಾಲೆಂಟೈನ್ಸ್ ಡೇ ವೀಕ್ (Valentains Day Week) ಅನ್ನು 7 ದಿನಗಳ ಕಾಲ ಪ್ರೇಮಿಗಳು (Lovers) ಸಂಭ್ರಮದಿಂದ ಆಚರಿಸುತ್ತಾರೆ. ಫೆಬ್ರವರಿ 7 - ರೋಸ್ ಡೇ, ಫೆಬ್ರವರಿ 8 - ಪ್ರಪೋಸ್ ಡೇ, ಫೆಬ್ರವರಿ 9 - ಚಾಕೊಲೇಟ್ ಡೇ, ಫೆಬ್ರವರಿ 10 - ಟೆಡ್ಡಿ ಡೇ, ಫೆಬ್ರವರಿ 11 - ಪ್ರಾಮಿಸ್ ಡೇ, ಫೆಬ್ರವರಿ 12 - ಹಗ್ ಡೇ, ಫೆಬ್ರವರಿ 13 - ಕಿಸ್ ಡೇ, ಫೆಬ್ರವರಿ 14 - ಪ್ರೇಮಿಗಳ ದಿನ ಆಚರಿಸಲಾಯಿತು. ಈ ವ್ಯಾಲೆಂಟೈನ್ಸ್ ಡೇ ವೀಕ್ ಬಗ್ಗೆ ನಮ್ಮೆಲ್ಲರಿಗೂ ತಿಳಿದಿದೆ. ಆದರೆ ಫೆಬ್ರವರಿ 14ರ ನಂತರ ಪ್ರೇಮಿಗಳ ವಿರೋಧಿ ವಾರವನ್ನು (Anti Valentains Day Week) ಒಂದು ವಾರ ಆಚರಿಸಲಾಗುತ್ತದೆ. ಇದು ಫೆಬ್ರವರಿ 21 ಬ್ರೇಕ್ ಆಪ್ ಡೇ ಆಚರಣೆ ಮೂಲಕ ಕೊನೆಗೊಳ್ಳುತ್ತದೆ.
ಫೆಬ್ರವರಿ 14ರ ನಂತರ ಶುರು ಆಂಟಿ-ವ್ಯಾಲೆಂಟೈನ್ಸ್ ವೀಕ್
ಹೌದು, ಈ ಆಂಟಿ-ವ್ಯಾಲೆಂಟೈನ್ಸ್ ವೀಕ್ ಅನ್ನು ಫೆಬ್ರವರಿ 14 ರ ನಂತರದ ದಿನದಿಂದ ಆಚರಿಸಲಾಗುತ್ತದೆ, ಇದು ನಿಖರವಾಗಿ ಪ್ರೇಮಿಗಳ ದಿನದ ಅಂತ್ಯವಾಗಿದೆ. ಈ ಪ್ರೇಮ ವಿರೋಧಿ ವಾರವು ಸ್ಲ್ಯಾಪ್ ಡೇ, ಕಿಕ್ ಡೇ, ಪರ್ಫ್ಯೂಮ್ ಡೇ, ಫ್ಲರ್ಟ್ ಡೇ, ಕನ್ಫೂಷನ್ ಡೇ, ಮಿಸ್ಸಿಂಗ್ ಡೇ, ಬ್ರೇಕಪ್ ಡೇ ಇತ್ಯಾದಿಗಳನ್ನು ಒಳಗೊಂಡಿದೆ. ಆಂಟಿ-ವ್ಯಾಲೆಂಟೈನ್ಸ್ ವೀಕ್ ಅನ್ನು ಏಕಾಂಗಿ, ಹೃದಯ ಹೊಡೆದ ಅಥವಾ ಪ್ರೀತಿಯಲ್ಲಿ ನಂಬಿಕೆ ಇಲ್ಲದವರು ಆಚರಿಸುತ್ತಾರೆ.
ಫೆಬ್ರವರಿ 15 - ಸ್ಲ್ಯಾಪ್ ಡೇ: ಪ್ರೇಮ-ವಿರೋಧಿ ವಾರವು ಸ್ಲ್ಯಾಪ್ ಡೇಯೊಂದಿಗೆ ಪ್ರಾರಂಭವಾಗುತ್ತದೆ, ಇದನ್ನು ಸಿಂಗಲ್ಸ್ ಅಥವಾ ಪ್ರೀತಿಯನ್ನು ದ್ವೇಷಿಸುವವರು ಆಚರಿಸುತ್ತಾರೆ. ತಮಗೆ ಮೋಸ ಮಾಡಿ ನೋವುಂಟು ಮಾಡಿದ ಮಾಜಿ ಸಂಗಾತಿಗೆ ತಕ್ಕ ಉತ್ತರ ನೀಡುವುದು ಈ ದಿನದ ಉದ್ದೇಶ. ಅದಕ್ಕಾಗಿ ಕಪಾಳಮೋಕ್ಷ ಮಾಡುವ ಮೂಲಕ ನಿಮ್ಮ ಮಾಜಿ ಸಂಗಾತಿಯ ಯಾವುದೇ ನೆನಪುಗಳನ್ನು ಮರೆಯಲು ಈ ಟಿಪ್ಸ್ ಉಪಯೋಗಿಸುತ್ತಾರೆ. ಇದರಿಂದ ಅವರಲ್ಲಿ ಪಾಸಿಟಿವ್ ಆಲೋಚನೆಗಳು ಮೂಡುತ್ತದೆ. ಕೆಲವರು ತಮ್ಮ ಮಾಜಿ ಪ್ರೇಮಿ ಸಂಪರ್ಕದಲ್ಲಿದ್ದರೆ, ಅವರನ್ನು ವೈಯಕ್ತಿಕವಾಗಿ ಆಹ್ವಾನಿಸಿ, ಅವರು ಉಂಟು ಮಾಡಿದ ನೋವಿಗೆ ಕಪಾಳಕ್ಕೆ ಹೊಡೆಯುತ್ತಾರೆ.
ಫೆಬ್ರವರಿ 16 - ಕಿಕ್ ಡೇ: ಈ ದಿನವನ್ನು ಪ್ರೇಮಿಗಳ ವಿರೋಧಿ ವಾರದ ಎರಡನೇ ದಿನದಂದು ಆಚರಿಸಲಾಗುತ್ತದೆ. ಈ ದಿನ ನಿಮ್ಮ ಮಾಜಿ ಗೆಳೆಯ ಅಥವಾ ಗೆಳತಿ ನಿಮ್ಮ ಮನಸ್ಸಿನಲ್ಲಿ ಉಳಿದಿರುವ ಎಲ್ಲಾ ನೋವು ಮತ್ತು ಕೆಟ್ಟ ನೆನಪುಗಳನ್ನು ಮರೆಯಬೇಕು.
ಫೆಬ್ರವರಿ 17 – ಪರ್ಫ್ಯೂಮ್ ಡೇ: ಫೆಬ್ರವರಿ 17 ರಂದು ಈ ದಿನವನ್ನು ಆಚರಿಸಲಾಗುತ್ತದೆ, ಪರ್ಫ್ಯೂಮ್ ಡೇಯಂದು ಸಿಂಗಲ್ಸ್‌ಗೆ ತಮ್ಮನ್ನು ತಾವು ಪ್ರೀತಿಸಲು ಮತ್ತು ಸಮಾಧಾನ ಪಡಿಸಿಕೊಳ್ಳಲು ಇರುವ ದಿನವಾಗಿದೆ. ನೀವು ಶಾಪಿಂಗ್ ಮಾಡಲು ಮತ್ತು ನಿಮ್ಮ ನೆಚ್ಚಿನ ಪರ್ಫ್ಯೂಮ್ ಖರೀದಿಸಲು ಪ್ಲ್ಯಾನ್ ಮಾಡಿದ್ದರೆ ಇದು ವಿಶೇಷ ದಿನವಾಗಿದೆ. ಈ ದಿನ ಪ್ರೇಮಿ ಇಲ್ಲದೇ ಒಂಟಿಯಾಗಿರುವವರು ತಮಗಾಗಿ ಪರ್ಫ್ಯೂಮ್ ಅನ್ನು ಖರೀದಿಸುತ್ತಾರೆ.
ಫೆಬ್ರವರಿ 18 - ಫ್ಲರ್ಟ್ ಡೇ: ಆ್ಯಂಟಿ ಲವ್ ವೀಕ್‌ನ ಉದ್ದೇಶ ಸಂಪೂರ್ಣ ಆಲೋಚನೆಯು ಪ್ರೀತಿಯನ್ನು ತ್ಯಜಿಸುವುದಾಗಿದೆ. ಆದಾಗ್ಯೂ, ಫ್ಲರ್ಟ್ ಡೇ ಸ್ವಲ್ಪ ವಿಭಿನ್ನ ದಿನವಾಗಿದೆ. ಏಕೆಂದರೆ ಈ ದಿನದಂದು, ಹೊಸ ವರ್ಷ ಆರಂಭಿಸುವ ಬಯಕೆಯನ್ನು ವ್ಯಕ್ತಿ ಹೊಂದಿರುತ್ತಾರೆ. ಅಲ್ಲದೇ ಈ ದಿನವನ್ನು ಕೇವಲ ರೋಮ್ಯಾಂಟಿಕ್ ದೃಷ್ಟಿಯಿಂದ ನೋಡಬಾರದು. ಇದು ನಿಮ್ಮ ಮೋಹವನ್ನು ಹೊರಹಾಕಲೆಂದೇ ಇರುವ ದಿನವಾಗಿದೆ.
ಫೆಬ್ರವರಿ 19 - ಕನ್ಫೂಷನ್ ಡೇ: ಒಬ್ಬ ವ್ಯಕ್ತಿ ತನ್ನ ಪ್ರೀತಿಪಾತ್ರರಿಗೆ ತನ್ನ ಗುಪ್ತ ಭಾವನೆಗಳನ್ನು ಬಹಿರಂಗಪಡಿಸುವ ದಿನ. ಈ ದಿನವನ್ನು ಫೆಬ್ರವರಿ 19 ರಂದು ಆಚರಿಸಲಾಗುತ್ತದೆ. ನೀವು ಪ್ರೀತಿಸುವ ವ್ಯಕ್ತಿಯಿಂದ ನೀವು ಮರೆಮಾಡಿರುವ ನಿಮ್ಮ ಎಲ್ಲಾ ಗುಟ್ಟುಗಳನ್ನು ಒಪ್ಪಿಕೊಳ್ಳಲು ಇದು ಉತ್ತಮ ದಿನವಾಗಿದೆ.
ಫೆಬ್ರವರಿ 20 – ಮಿಸ್ಸಿಂಗ್ ಡೇ: ಮಿಸ್ಸಿಂಗ್ ಡೇ ಆ್ಯಂಟಿ ವ್ಯಾಲೆಂಟೈನ್ ವೀಕ್‌ನ ಆರನೇ ದಿನವಾಗಿದೆ. ಈ ದಿನ ನಿಮ್ಮ ಪ್ರೀತಿಪಾತ್ರರನ್ನು ನೀವು ಎಷ್ಟು ಮಿಸ್ ಮಾಡಿಕೊಳ್ಳುತ್ತೀರಾ ಎಂದು ಹೇಳಬಹುದು. ಕೆಲವರು ತಮ್ಮ ಮಾಜಿ ಪ್ರೇಮಿಯನ್ನು ಎಷ್ಟು ಕಳೆದುಕೊಳ್ಳುತ್ತಾರೆ ಎಂಬುದನ್ನು ವ್ಯಕ್ತಪಡಿಸಲು ಈ ದಿನವನ್ನು ಸೂಕ್ತವಾಗಿದೆ.
ಫೆಬ್ರವರಿ 21 - ಬ್ರೇಕಪ್ ಡೇ: ಪ್ರಸ್ತುತ ಸಂಬಂಧದಲ್ಲಿರುವ ವ್ಯಕ್ತಿಯೊಂದಿಗೆ ರಿಲೇಶನ್ ಶಿಪ್ ಬ್ರೇಕ್ ಮಾಡಿಕೊಳ್ಳಲು ಬಯಸುವವರು ಈ ದಿನವನ್ನು ಆಚರಿಸುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ