Breakfast: ಬೆಳಗ್ಗೆ ತಿಂಡಿ ಮಿಸ್ ಮಾಡ್ತೀರಾ? ಹುಷಾರ್, ಈ ಎಲ್ಲ ರೋಗಗಳು ನಿಮ್ಮ ದೇಹವನ್ನ ಸೇರ್ತಾವೆ!

ಬೆಳಗ್ಗಿನ ಬ್ರೆಕ್ ಫಾಸ್ಟ್ (Morning Breakfast) ಆರೋಗ್ಯಕರವಾಗಿದ್ದರೆ, ನಿಮ್ಮ ದಿನವೂ ಚೆನ್ನಾಗಿರುತ್ತದೆ. ಹೀಗಾಗಿ ಬೆಳಗಿನ ಉಪಾಹಾರವನ್ನು ತ್ಯಜಿಸಬಾರದು. ಬೆಳಗಿನ ಉಪಾಹಾರವನ್ನು ತ್ಯಜಿಸುವುದರಿಂದ ಹಲವಾರು ಅಡ್ಡಪರಿಣಾಮಗಳು ನಮ್ಮ ದೇಹದ ಮೇಲೆ ಪ್ರಭಾವ ಬೀರುತ್ತವೆ.

ಸರಿಯಾದ ಸಮಯಕ್ಕೆ ಬೆಳಗಿನ ತಿಂಡಿ ಸೇವಿಸಬೇಕು. ದಿನನಿತ್ಯದ ಕೆಲಸಳಿಗೆ ದೇಹಕ್ಕೆ ಶಕ್ತಿ ಬೇಕಾಗುತ್ತದೆ. ಹಾಗಾಗಿ ಬೆಳಗಿನ ತಿಂಡಿ ಮಿಸ್ ಮಾಡಿಕೊಳ್ಳುಬಾರದು.

ಸರಿಯಾದ ಸಮಯಕ್ಕೆ ಬೆಳಗಿನ ತಿಂಡಿ ಸೇವಿಸಬೇಕು. ದಿನನಿತ್ಯದ ಕೆಲಸಳಿಗೆ ದೇಹಕ್ಕೆ ಶಕ್ತಿ ಬೇಕಾಗುತ್ತದೆ. ಹಾಗಾಗಿ ಬೆಳಗಿನ ತಿಂಡಿ ಮಿಸ್ ಮಾಡಿಕೊಳ್ಳುಬಾರದು.

  • Share this:
ದಿನವನ್ನು ಪ್ರಾರಂಭಿಸಲು ಮತ್ತು ಇಡೀ ದಿನ ಚೈತನ್ಯದಿಂದಿರಲು ನಮ್ಮ ದೇಹ(Body)ಕ್ಕೆ ಶಕ್ತಿ(Energy)ಯ ಅಗತ್ಯವಿರುತ್ತದೆ, ಇದು ಪೌಷ್ಟಿಕಾಂಶದ ಆರೋಗ್ಯಕರ ಉಪಹಾರ(Healthy Breakfast)ದಿಂದ ಮಾತ್ರ ಒದಗಿಸಲ್ಪಡುತ್ತದೆ. ಆದಾಗ್ಯೂ, ಜೀವನದ ಒತ್ತಡದಲ್ಲಿ, ಜನರು ಸಾಮಾನ್ಯವಾಗಿ ದಿನದ ಪ್ರಮುಖ ಊಟ(Meal)ವನ್ನೇ ಬಿಟ್ಟುಬಿಡುತ್ತಾರೆ. ಆರೋಗ್ಯಕರ ಜೀವನಶೈಲಿ (Healthy Lifestyle)ಯನ್ನು ಕಾಪಾಡಿಕೊಳ್ಳಲು ಬಯಸುತ್ತೀರಾ ಎಂದರೆ ನಿಯಮಿತವಾದ, ಸ್ಥಿರವಾದ ಊಟದ ವೇಳಾಪಟ್ಟಿಯನ್ನು ಹೊಂದಿರಲೇಬೇಕು. ಬೆಳಗ್ಗಿನ ಬ್ರೆಕ್ ಫಾಸ್ಟ್ (Morning Breakfast) ಆರೋಗ್ಯಕರವಾಗಿದ್ದರೆ, ನಿಮ್ಮ ದಿನವೂ ಚೆನ್ನಾಗಿರುತ್ತದೆ. ಹೀಗಾಗಿ ಬೆಳಗಿನ ಉಪಾಹಾರವನ್ನು ತ್ಯಜಿಸಬಾರದು. ಬೆಳಗಿನ ಉಪಾಹಾರವನ್ನು ತ್ಯಜಿಸುವುದರಿಂದ ಹಲವಾರು ಅಡ್ಡಪರಿಣಾಮಗಳು ನಮ್ಮ ದೇಹದ ಮೇಲೆ ಪ್ರಭಾವ ಬೀರುತ್ತವೆ.

ಬೆಳಗಿನ ತಿಂಡಿ ಸ್ಕಿಪ್ ಮಾಡುವುದರಿಂದ ಏನೆಲ್ಲಾ ಸೈಡ್ ಎಫೆಕ್ಟ್ ಇದೆ ಅಂತಾ ನೀವೆ ನೋಡಿ.

1)ತೂಕ ಹೆಚ್ಚಿಸಿಕೊಳ್ಳುವುದು

ಕೆಲವರು ತೂಕ ಇಳಿಸಿಕೊಳ್ಳಲು ಊಟ ಸ್ಕಿಪ್ ಮಾಡಿದರೆ ಸಣ್ಣ ಆಗ್ತೀವಿ ಅಂತಾ ನಂಬಿರುತ್ತಾರೆ. ನೀವು ಸಣ್ಣ ಆಗಲು ಮೀಲ್ ಸ್ಕಿಪ್ ಮಾಡಿದ್ರೆ ಅದು ನಿಮಗೆ ಇನ್ನೊಂದು ತೊಂದರೆ ಉಂಟು ಮಾಡುವುದರಲ್ಲಿ ಸಂಶಯವೇ ಇಲ್ಲ. ಊಟವನ್ನು ಬಿಟ್ಟುಬಿಡುವುದು ನಿಮ್ಮ ತೂಕವನ್ನು ಕಳೆದುಕೊಳ್ಳಲು ಎಂದಿಗೂ ಸಹಾಯ ಮಾಡುವುದಿಲ್ಲ ಬದಲಾಗಿ ತೂಕ ಹೆಚ್ಚು ಮಾಡುತ್ತದೆ.

ದಿನದ ಮಧ್ಯಭಾಗದವರೆಗೆ ನೀವು ಹಸಿವಿನಿಂದ ಬಳಲುತ್ತಿದ್ದರೆ, ನಿಮ್ಮ ದೇಹವು ಹೆಚ್ಚಿನ ಕ್ಯಾಲೋರಿ ಆಹಾರವನ್ನು ಬಯಸುತ್ತದೆ. ಈ ಸಂದರ್ಭದಲ್ಲಿ ನೀವು ನಿಮ್ಮ ಹಸಿವನ್ನು ನಿಗ್ರಹಿಸಲು ಸಕ್ಕರೆ ಮತ್ತು ಕೊಬ್ಬಿನ ಆಹಾರವನ್ನು ಸೇವಿಸುತ್ತೀರಿ. ಇದು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಇದನ್ನೂ ಓದಿ:  Teeth Pain Remedies: ಅಬ್ಬಾ ಹಲ್ಲು ನೋವು ತಡೆಯಲು ಆಗ್ತಿಲ್ಲವೇ.. ಲವಂಗ ಮಾತ್ರವಲ್ಲ ಇವನ್ನೂ ಇಡಿ ಸರಿಯಾಗುತ್ತೆ

2)ಮಧುಮೇಹದ ಅಪಾಯ

ನೀವು ಬೆಳಗಿನ ಉಪಾಹಾರವನ್ನು ತಪ್ಪಿಸಿದಾಗ ಮತ್ತು ದೀರ್ಘಾವಧಿಯ ನಂತರ ತಿನ್ನುವಾಗ, ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಮ್ಮ ದೇಹಕ್ಕೆ ಶಕ್ತಿಯನ್ನು ಒದಗಿಸಲು ಇದ್ದಕ್ಕಿದ್ದಂತೆ ಹೆಚ್ಚಾಗುತ್ತದೆ. ಈ ಪ್ರಕ್ರಿಯೆಯಲ್ಲಿ, ಜನರು ಟೈಪ್ 2 ಮಧುಮೇಹಕ್ಕೆ ಹೆಚ್ಚು ಒಳಗಾಗುತ್ತಾರೆ. ನೀವು ಸೇವಿಸುವ ಊಟವು ನಿಮ್ಮ ಶಕ್ತಿಯ ಮಟ್ಟಗಳ ಮೇಲೆ ಮಹತ್ತರವಾದ ಪರಿಣಾಮವನ್ನು ಬೀರುತ್ತದೆ. ಆಯಾಸ ಶುರುವಾಗುತ್ತದೆ, ಕೆಲಸ ಮಾಡುವ ಚೈತನ್ಯ ಕುಗ್ಗುತ್ತದೆ.

3)ಬುದ್ಧಿಮಾಂದ್ಯತೆ

ಜಪಾನೀಸ್ ಜರ್ನಲ್ ಆಫ್ ಹ್ಯೂಮನ್ ಸೈನ್ಸಸ್ ಆಫ್ ಹೆಲ್ತ್-ಸೋಶಿಯಲ್ ಸರ್ವೀಸಸ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಬೆಳಗಿನ ಉಪಾಹಾರವನ್ನು ತ್ಯಜಿಸುವ ಜನರು ಮಾನಸಿಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಹೇಳಿದೆ. ಮೆದುಳಿನ ಕೋಶಗಳು ಕಾರ್ಯನಿರ್ವಹಣೆಯನ್ನು ನಿರ್ಬಂಧಿಸುತ್ತವೆ ಮತ್ತು ನಿಮ್ಮ ಅರಿವಿನ ಸಾಮರ್ಥ್ಯಗಳು ಡಿಮೆನ್ಶಿಯಾದಂತಹ ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತವೆ ಎಂದು ಸಂಶೋಧನೆ ಹೇಳಿದೆ.

4)ಮೈಗ್ರೇನ್

ಬೆಳಗಿನ ಉಪಾಹಾರವನ್ನು ಬಿಟ್ಟುಬಿಡುವುದು ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ, ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಅಧಿಕ ರಕ್ತದೊತ್ತಡದಿಂದ, ಆರಂಭದಲ್ಲಿ ಸಣ್ಣ ತಲೆನೋವು ಕಾಣಿಸಿಕೊಳ್ಳಬಹುದು ಅದು ನಂತರ ತೀವ್ರ ಮೈಗ್ರೇನ್ ಆಗಿ ಬದಲಾಗಿ ತೊಂದರೆ ಪಡಬೇಕಾಗುತ್ತದೆ.

5) ಚಯಾಪಚಯ ಕ್ರಿಯೆ ನಿಧಾನವಾಗುತ್ತದೆ.

ಬೆಳಗ್ಗಿನ ಉಪಹಾರ ಬಿಡುವುದರಿಂದ ಚಯಾಪಚಯ ಕ್ರಿಯೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ನಮ್ಮ ದೇಹವು ಬೆಳಿಗ್ಗೆ ಕಾರ್ಯನಿರ್ವಹಿಸಲು ಶಕ್ತಿಯ ಅಗತ್ಯವಿದೆ. ನೀವು ದಿನದ ಮೊದಲ ಊಟವನ್ನು ಬಿಟ್ಟುಬಿಟ್ಟರೆ, ಅದು ಚಯಾಪಚಯ ಚಟುವಟಿಕೆಯನ್ನು ತಡೆಯುತ್ತದೆ ಮತ್ತು ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.

6)ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ

ಬೆಳಗಿನ ಉಪಾಹಾರವು ದೇಹವು ಪ್ರತಿರಕ್ಷಣಾ ವ್ಯವಸ್ಥೆಯನ್ನು ಎಚ್ಚರಗೊಳಿಸಲು ಮತ್ತು ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ ವಿರುದ್ಧ ಹೋರಾಡಲು ಅಗತ್ಯವಾದ ಪೋಷಕಾಂಶಗಳನ್ನು ನೀಡುತ್ತದೆ. ಹೀಗೆ ಮೀಲ್ ಸ್ಕಿಪ್ ಮಾಡುವುದರಿಂದ ನಿಮ್ಮ ದೇಹಕ್ಕೆ ಅಗತ್ಯವಿರುವ ಪೌಷ್ಟಿಕಾಂಶವನ್ನು ಕಳೆದುಕೊಳ್ಳುತ್ತೀರಿ. ಬೆಳಗಿನ ಉಪಾಹಾರ ಸೇವಿಸದೇ ಇದ್ದರೆ ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸದೇ ನಿಮ್ಮನ್ನು ರೋಗಗಳಿಗೆ ಗುರಿ ಮಾಡುತ್ತದೆ.

ಇದನ್ನೂ ಓದಿ:   Eggs Side Effects: ಅತಿಯಾದ ಮೊಟ್ಟೆ ಸೇವನೆ ಶುಗರ್, ಹೃದಯಾಘಾತಕ್ಕೆ ಕಾರಣವಾಗುತ್ತೆ.. ಸರಿಯಾಗಿ ತಿಳಿದುಕೊಳ್ಳಿ

7) ಏಕಾಗ್ರತೆಯ ಮೇಲೆ ಪರಿಣಾಮ

ನಿಮ್ಮ ಮನಸ್ಥಿತಿ ಮತ್ತು ಏಕಾಗ್ರತೆಯ ಮೇಲೆ ಪರಿಣಾಮ ಬೀರಬಹುದು. ಇದು ಅಜೀರ್ಣ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಉಪಹಾರವನ್ನು ತ್ಯಜಿಸುವುದರಿಂದ ನಿಮ್ಮ ರಕ್ತದೊತ್ತಡದ ಮೇಲೆ ಪರಿಣಾಮ ಬೀರಬಹುದು.
Published by:Mahmadrafik K
First published: