• Home
 • »
 • News
 • »
 • lifestyle
 • »
 • Weight Loss And Food: ತೂಕ ಇಳಿಸೋಕೆ ಊಟ ಬಿಡೋದು ಈ ಸಮಸ್ಯೆಗಳಿಗೆ ಕಾರಣವಾಗಬಹುದು

Weight Loss And Food: ತೂಕ ಇಳಿಸೋಕೆ ಊಟ ಬಿಡೋದು ಈ ಸಮಸ್ಯೆಗಳಿಗೆ ಕಾರಣವಾಗಬಹುದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Skipping Meals Does Not Help: ದೇಹಕ್ಕೆ ಶಕ್ತಿಯನ್ನು ನೀಡುವುದು ಆಹಾರವಾಗಿರುವುದರಿಂದ, ಆಹಾರದ ತ್ಯಜಿಸುವಿಕೆಯಿಂದ ಶಕ್ತಿ ಕಳೆದುಕೊಳ್ಳಲು ಕಾರಣವಾಗುತ್ತದೆ. ಇದರಿಂದ ನಿಮ್ಮ ವ್ಯಾಯಾಮ ಪ್ರಮಾಣ ಕೂಡ ಕಡಿಮೆಯಾಗಿರುತ್ತದೆ. ಇದು ನಿಮಗೆ ಉಲ್ಲಾಸವನ್ನು ನೀಡುವುದಿಲ್ಲ.

 • Share this:

ಇಂದಿನ ದಿನಗಳಲ್ಲಿ ತೂಕ ಇಳಿಕೆ (Weight Loss) ಎಂಬುದು ಹೆಚ್ಚಿನವರ ಜೀವನದ ಗುರಿಯಾಗಿಯೇ ಮಾರ್ಪಟ್ಟಿದೆ. ಇಂಟರ್ನೆಟ್‌ಗಳಲ್ಲಿ (Internet) ಬರುವ ವಿಧ ವಿಧ ಡಯೆಟ್‌ಗಳನ್ನು (Diet) ಅನುಸರಿಸಿ ಅದೆಷ್ಟೋ ಜನರು ಆರೋಗ್ಯ (Health Care)  ಕೆಡಿಸಿಕೊಂಡಿದ್ದಾರೆ. ಜಿಮ್‌ಗಳಲ್ಲಿ ಬೆವರು ಹರಿಸಿ ತೆಳ್ಳನೆಯ ಮೈಮಾಟವನ್ನು ಹೊಂದುವ ಚಪಲಕ್ಕೆ ಬಿದ್ದವರು ಅದೆಷ್ಟೋ ಮಂದಿ. ಆದರೆ ತಜ್ಞರು ಹೇಳುವಂತೆ ತೂಕ ಇಳಿಕೆಗೆ ಪ್ರಮುಖ ಸೂತ್ರ ಡಯೆಟ್ ಹಾಗೂ ವ್ಯಾಯಾಮ ಎಂಬುದಾಗಿದೆ. ತೂಕ ಇಳಿಸುವುದು ಎಂದರೆ ಹೆಚ್ಚಿನವರು ಆಹಾರವನ್ನು ತ್ಯಜಿಸುವುದರ (Skipping Food) ಕಡೆಗೆ ಹೆಚ್ಚಿನ ಗಮನ ನೀಡುತ್ತಾರೆ. ಇದು ಮುಖ್ಯವಾಗಿ ಮಾಡುವ ತಪ್ಪಾಗಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.


ಡಯೆಟ್ ಎಂದರೆ ಆಹಾರ ತ್ಯಜಿಸುವುದೇ?


ಡಯೆಟ್ ಎಂದಾಕ್ಷಣ ಎಲ್ಲರೂ ತಿಳಿದುಕೊಳ್ಳುವುದು ಆಹಾರವನ್ನು ಬಿಡುವುದು ಎಂದಾಗಿದೆ. ಇಲ್ಲವೇ ತಮ್ಮ ಪ್ರೀತಿಯ ತಿನಿಸುಗಳಿಗೆ ಕಡಿವಾಣ ಹಾಕುವುದು ಎಂಬುದಾಗಿದೆ. ತಜ್ಞರ ಅಭಿಪ್ರಾಯದಂತೆ ಡಯೆಟ್ ಎಂಬುದು ಸರಿಯಾದ ಆಹಾರವನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುವುದು ಎಂದಾಗಿದೆ.


ನಿಮ್ಮ ಆಹಾರವು ಕಾರ್ಬೋಹೈಡ್ರೇಡ್, ಪ್ರೋಟೀನ್, ನ್ಯೂಟ್ರಿಶಿಯಸ್ ಹೀಗೆ ಎಲ್ಲಾ ವಿಧವಾದ ಆರೋಗ್ಯಕಾರಿ ಅಂಶಗಳನ್ನು ಒಳಗೊಂಡಿರಬೇಕು ಎಂಬುದು ತಜ್ಞರ ಕಿವಿಮಾತಾಗಿದೆ. ಇಂಟರ್ನೆಟ್‌ನಲ್ಲಿರುವ ಹಲವಾರು ವಿಧದ ಉಪವಾಸಗಳು ಜನಪ್ರಿಯವಾಗಿದ್ದು ಇದರಲ್ಲಿರುವ ಮುಖ್ಯ ಅಂಶ ಆಹಾರ ತ್ಯಜಿಸುವುದಾಗಿದೆ. ಇದು ನೀವು ಮಾಡುತ್ತಿರುವ ತಪ್ಪು ಎಂದು ಆಹಾರ ತಜ್ಞರು ಎಚ್ಚರಿಸುತ್ತಾರೆ.


ಕ್ಯಾಲೋರಿ ಕರಗಲು ಕಾರಣ


ಆಹಾರವನ್ನು ಬಿಡುವುದರಿಂದ ದೇಹವು ಕೆಲವೊಂದಿಷ್ಟು ಕ್ಯಾಲೋರಿಗಳ ನಷ್ಟಕ್ಕೆ ಒಳಗಾಗಬಹುದಾದರೂ ಇದರಿಂದ ದೀರ್ಘಕಾಲದ ಫಲಿತಾಂಶಗಳನ್ನು ಪಡೆಯುವುದು ಅಸಾಧ್ಯವಾಗಿದೆ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ. ವಯಸ್ಸು, ಸಾಮಾನ್ಯ ಆರೋಗ್ಯ ಮತ್ತು ವಿಷಯದ ಆಹಾರಕ್ರಮಕ್ಕೆ ಅನುಗುಣವಾಗಿ ಆಹಾರ ಬಿಡುವುದರಿಂದ ಉಂಟಾಗುವ ಪರಿಣಾಮಗಳು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ವಿಭಿನ್ನವಾಗಿರಬಹುದು ಎಂದು ಸಂಶೋಧನೆ ಸೂಚಿಸುತ್ತದೆ.


ಆಹಾರ ತ್ಯಜಿಸುವುದರಿಂದ ಕಂಡುಬರುವ ಸಮಸ್ಯೆಗಳೇನು?


 • ತೂಕ ಇಳಿಕೆಯ ತಪ್ಪಾದ ವಿಧಾನವನ್ನು ಅನುಸರಿಸುತ್ತಿರಬಹುದು

 • ಕೆಲವೊಂದು ರೋಗಗಳು ಹೆಚ್ಚಾಗಬಹುದು

 • ಆಹಾರವನ್ನು ಬಿಡುವುದು ನಿಮ್ಮಲ್ಲಿ ಜಂಕ್ ಫುಡ್‌ ಹೆಚ್ಚು ತಿನ್ನಬೇಕೆಂಬ ಭಾವನೆ ಮೂಡಿಸುತ್ತದೆ

 • ವ್ಯಾಯಾಮವು ಹೆಚ್ಚು ಪರಿಣಾಮ ಬೀರದೇ ಇರಬಹುದು ನಿಮ್ಮಲ್ಲಿ ಉತ್ಸಾಹವನ್ನು ಕುಂದಿಸಬಹುದು


ಇದನ್ನೂ ಓದಿ: ಈ 5 ಸೂಪರ್ ಫುಡ್​ಗಳಿದ್ರೆ ಸಾಕು ತೂಕ ಇಳಿಸೋದು ಬಹಳ ಸುಲಭ


ನೀವು ತಪ್ಪಾದ ರೀತಿಯಲ್ಲಿ ತೂಕ ಇಳಿಸುತ್ತಿರುವಿರಿ


ಆಹಾರವನ್ನು ಬಿಡುವುದು ದಿನಕ್ಕೆ ಸೇವಿಸುವ ಒಟ್ಟು ಕ್ಯಾಲೋರಿ ಪ್ರಮಾಣವನ್ನು ಕಡಿಮೆ ಮಾಡಬಹುದು. ಕಡಿಮೆ ಕ್ಯಾಲೋರಿಗಳು ತ್ವರಿತವಾದ ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಆದರೆ ಇದರ ಪರಿಣಾಮ ಕೂಡ ತಾತ್ಕಾಲಿಕವಾಗಿರುತ್ತದೆ ಏಕೆಂದರೆ ಇದು ದೇಹವನ್ನು ಹಸಿವಿನ ಸಮಸ್ಯೆಗೆ ತಳ್ಳುತ್ತದೆ. ದೇಹವು ಈ ಸ್ಥಿತಿಯನ್ನು ತಲುಪಿದಾಗ ಕೊಬ್ಬನ್ನು ಸಂಗ್ರಹಿಸಲು ಆರಂಭಿಸುತ್ತದೆ ಇದರಿಂದ ಹೊಟ್ಟೆಯಲ್ಲಿ ಕೊಬ್ಬು ಶೇಖರವಾಗುತ್ತದೆ.
ಕೆಲವೊಂದು ರೋಗಗಳಲ್ಲಿ ವೃದ್ಧಿ


ಬೆಳಗಿನ ಉಪಾಹಾರವನ್ನು ತ್ಯಜಿಸುವ ಜನರು ಟೈಪ್ 2 ಮಧುಮೇಹವನ್ನು ಅಭಿವೃದ್ಧಿಪಡಿಸುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ ಎಂದು ಸಂಶೋಧನೆ ತಿಳಿಸಿದೆ. ಇನ್ನೂ ಹೆಚ್ಚಿನ ಸಂಶೋಧನೆಯು ಉಪಾಹಾರವನ್ನು ಬಿಟ್ಟುಬಿಡುವ ಕೆಲವರು ಹೃದ್ರೋಗದ ಅಪಾಯಕ್ಕೆ ಹೆಚ್ಚು ಒಳಗಾಗುತ್ತಾರೆ ಎಂದು ಸೂಚಿಸುತ್ತದೆ.


ಕರಿದ ಪದಾರ್ಥಗಳತ್ತ ಹೆಚ್ಚು ಚಪಲ


ಆಹಾರ ತ್ಯಜಿಸುವುದರಿಂದ ಹೊರಗಿನ ಫಾಸ್ಟ್‌ಫುಡ್ ನಿಮ್ಮನ್ನು ಕೈಬೀಸಿ ಕರೆಯುವಂತೆ ಮಾಡುತ್ತದೆ. ನಿಮಗೆ ಗೊತ್ತೇ ಇಲ್ಲದಂತೆ ಕರಿದ ಪದಾರ್ಥಗಳು, ಬೇಕರಿ ತಿನಿಸುಗಳತ್ತ ನಿಮ್ಮ ದೃಷ್ಟಿ ಹೋಗುತ್ತದೆ.


ಇದನ್ನೂ ಓದಿ: ನಿಮ್ಮ ಲೈಫ್​ಸ್ಟೈಲ್​ ಈ ರೀತಿ ಬದಲಾದ್ರೆ ಮಧುಮೇಹ ಕಂಟ್ರೋಲ್ ಮಾಡ್ಬೋದು


ವ್ಯಾಯಾಮ ದೇಹಕ್ಕೆ ಉಲ್ಲಾಸ ನೀಡುವುದಿಲ್ಲ


ದೇಹಕ್ಕೆ ಶಕ್ತಿಯನ್ನು ನೀಡುವುದು ಆಹಾರವಾಗಿರುವುದರಿಂದ, ಆಹಾರದ ತ್ಯಜಿಸುವಿಕೆಯಿಂದ ಶಕ್ತಿ ಕಳೆದುಕೊಳ್ಳಲು ಕಾರಣವಾಗುತ್ತದೆ. ಇದರಿಂದ ನಿಮ್ಮ ವ್ಯಾಯಾಮ ಪ್ರಮಾಣ ಕೂಡ ಕಡಿಮೆಯಾಗಿರುತ್ತದೆ. ಇದು ನಿಮಗೆ ಉಲ್ಲಾಸವನ್ನು ನೀಡುವುದಿಲ್ಲ. ಸಂಪೂರ್ಣ ಆರೋಗ್ಯದ ಕೀಲಿಕೈ ಸೂಕ್ತ ವ್ಯಾಯಾಮ ಹಾಗೂ ಆಹಾರವಾಗಿರುವುದರಿಂದ ಎರಡನ್ನೂ ನಿಯಂತ್ರಣದಲ್ಲಿರಿಸಿಕೊಳ್ಳುವುದು ಮುಖ್ಯವಾಗಿದೆ.

Published by:Sandhya M
First published: