Skipping Benefits: ಪ್ರತಿದಿನ ಮಿಸ್ ಮಾಡ್ದೇ ಸ್ಕಿಪ್ಪಿಂಗ್ ಮಾಡಿ ಸಾಕು ಈ ಸಮಸ್ಯೆಗಳು ಹತ್ತಿರವೂ ಸುಳಿಯಲ್ಲ

ಪ್ರತಿ ದಿನ ಸ್ಕಿಪ್ಪಿಂಗ್ ಮಾಡಿದ್ರೆ ತುಂಬಾ ಒಳ್ಳೆಯದು. ಯಾಕಂದ್ರೆ ಸ್ಕಿಪ್ಪಿಂಗ್ ಈಡೀ ದೇಹಕ್ಕೆ ವ್ಯಾಯಾಮ ನೀಡುವ ಕಾರಣದಿಂದಾಗಿ ದೇಹವು ಫಿಟ್ ಆಗಿರುವುದು. ನೀವು ಆರೋಗ್ಯವಾಗಿರಲು ಸ್ಕಿಪ್ಪಿಂಗ್ ಸಹಾಯ ಮಾಡುತ್ತೆ. ತೂಕ ಇಳಿಸಲು ಬಯಸುವರಿಗೆ ಇದೊಂದು ಉತ್ತಮ ವ್ಯಾಯಾಮ ಆಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ವ್ಯಾಯಾಮಾ (Exercise) ಮಾಡಿದ್ರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಎಲ್ಲರಿಗೂ ತಿಳಿದಿರುತ್ತದೆ. ಅದಕ್ಕಾಗಿ ಕೆಲವುರು ಓಡಿದ್ರೆ, ಕೆಲವರು ವಾಕ್ (Walk) ಮಾಡುತ್ತಾರೆ. ಕೆಲವರು ಪಾರ್ಕ್ ಅಥವಾ ಮನೆಗಳಲ್ಲಿ ವ್ಯಾಯಾಮ ಮಾಡಿ ಆರೋಗ್ಯ ಕಾಪಾಡಿಕೊಳ್ಳುತ್ತಾರೆ. ಅದೇ ರೀತಿ, ಪ್ರತಿದಿನ ಸ್ಕಿಪ್ಪಿಂಗ್ (Skipping) ಮಾಡಿದ್ರೆ ತುಂಬಾ ಒಳ್ಳೆಯದು. ಯಾಕಂದ್ರೆ ಸ್ಕಿಪ್ಪಿಂಗ್ ಈಡೀ ದೇಹಕ್ಕೆ ವ್ಯಾಯಾಮ ನೀಡುವ ಕಾರಣದಿಂದಾಗಿ ದೇಹವು ಫಿಟ್ (Fit) ಆಗಿರುವುದು. ನೀವು ಆರೋಗ್ಯವಾಗಿರಲು ಸ್ಕಿಪ್ಪಿಂಗ್ ಸಹಾಯ ಮಾಡುತ್ತೆ. ತೂಕ ಇಳಿಸಲು ಬಯಸುವರಿಗೆ ಇದೊಂದು ಉತ್ತಮ ವ್ಯಾಯಾಮ ಆಗಿದೆ. ಪ್ರತಿ ದಿನ ನೀವು ಸ್ಕಿಪ್ಪಿಂಗ್ ಮಾಡುತ್ತಾ ಹೋದ್ರೆ, ನಿಮ್ಮ ತೂಕ ಕಡಿಮೆಯಾಗುತ್ತಾ ಹೋಗುತ್ತದೆ. ಇದು ಪ್ರತಿ ನಿಮಿಷಕ್ಕೆ 10-15 ಕ್ಯಾಲೋರಿ (Calories) ದಹಿಸುವುದು. ದೇಹದಲ್ಲಿ ಇರುವಂತಹ ಹೆಚ್ಚಿನ ತೂಕವನ್ನು ಇಳಿಸಿ, ಫಿಟ್ ಆಗಿ ಇಡುವುದು.

ಸ್ಕಿಪ್ಪಿಂಗ್‍ನಿಂದ ಆಗುವ ಅನುಕೂಲಗಳೇನು?

ಸಂಪೂರ್ಣ ದೇಹದ ವ್ಯಾಯಾಮ
ಸ್ಕಿಪ್ಪಿಂಗ್ ಒಂದು ಸಂಪೂರ್ಣ ದೇಹದ ವ್ಯಾಯಾಮ ಆಗಿದೆ. ಇದನ್ನು ಆಡುವುದರಿಂದ ದೇಹದ ಎಲ್ಲಾ ಭಾಗದಲ್ಲಿ ಇರುವಂತಹ ಕೊಬ್ಬನ್ನು ಕರಗಿಸುವುದು ಮತ್ತು ದೇಹವನ್ನು ಫಿಟ್ ಆಗಿ ಇಡುವುದು. ಪ್ರತಿದಿನ ಸ್ಕಿಪ್ಪಿಂಗ್ ಮಾಡುವುದು ಒಳ್ಳೆಯದು.

ಕ್ಯಾಲೋರಿ ದಹಿಸುವುದು
ಸ್ಕಿಪ್ಪಿಂಗ್ ವ್ಯಾಯಾಮ ಮಾಡುವುದರಿಂದ ಕ್ಯಾಲೋರಿ ದಹಿಸಿ, ಕೊಬ್ಬು ಕರಗಿಸುವುದು. ಬೇರೆ ವ್ಯಾಯಮಕ್ಕಿಂತಲೂ ಸ್ಕಿಪ್ಪಿಂಗ್ ಒಳ್ಳೆಯದು ಎಂದು ಸಂಶೋಧನೆಗಳೇ ಹೇಳಿವೆ. ಹತ್ತು ನಿಮಿಷ ತೀವ್ರವಾಗಿ ಸ್ಕಿಪ್ಪಿಂಗ್ ಮಾಡಿದರೆ ಅದು 8 ನಿಮಿಷ ಮೈಲಿ ಓಡುವುದಕ್ಕೆ ಸಮ ಎಂದು ತಿಳಿದು ಬಂದಿದೆ. ಅಲ್ಲದೇ ಇದು ಒಂದು ಗಂಟೆಗೆ ಸುಮಾರು 1300 ಕ್ಯಾಲೋರಿ ದಹಿಸುವುದು.

ಇದನ್ನೂ ಓದಿ: Weight Loss Tips: ತೂಕ ಇಳಿಕೆಗೆ ಜೇನುತುಪ್ಪ ಹೇಗೆ ಸಹಕಾರಿ? ಯಾವ ಪದಾರ್ಥಗಳು ಬೆಲ್ಲಿ ಫ್ಯಾಟ್ ಬರ್ನ್ ಮಾಡುತ್ತವೆ?

ಹೃದಯದ ಆರೋಗ್ಯ ಸುಧಾರಣೆ
ಸ್ಕಿಪ್ಪಿಂಗ್ ಮಾಡುವುದು ಅದ್ಭುತ ಹೃದಯದ ವ್ಯಾಯಾಮ ಆಗಿದೆ. ಇದು ಹೃದಯ ಬಡಿತ ಹೆಚ್ಚಿಸುವುದು, ಇದರಿಂದ ಹೃದಯದ ಸ್ನಾಯುಗಳು ತುಂಬಾ ಬಲವಾಗುತ್ತವೆ. ಮಕ್ಕಳ ಮೇಲೆ ನಡೆಸಿರುವ 12 ತಿಂಗಳ ಅಧ್ಯಯನದ ಪ್ರಕಾರ ಸ್ಕಿಪ್ಪಿಂಗ್ ಮಾಡಿದರೆ ಆಗ ಹೃದಯದ ಸಮಸ್ಯೆಗಳು ಗಣನೀಯವಾಗಿ ಕಡಿಮೆ ಆಗುತ್ತವೆ ಎಂದು ತಿಳಿದು ಬಂದಿದೆ.

ಶ್ವಾಸಕೋಶ ಕಾರ್ಯದ ಸುಧಾರಣೆ
ಸ್ಕಿಪ್ಪಿಂಗ್ ನಿಂದ ಉತ್ತಮವಾಗಿ ಉಸಿರಾಡಲು ಸಹಾಯವಾಗುತ್ತೆ. ಶ್ವಾಸಕೋಶದ ಸಾಮಥ್ರ್ಯವನ್ನು ವೃದ್ಧಿಸುವುದು. ದೀರ್ಘ ಕಾಲ ತನಕ ಸ್ಕಿಪ್ಪಿಂಗ್ ಮಾಡಿದರೆ ಅದರಿಂದ ಹೃದಯರಕ್ತನಾಳದ ಕಾರ್ಯಗಳ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಮತ್ತು ಆಮ್ಲಜನಕ ತೆಗೆದುಕೊಳ್ಳುವ ಪ್ರಮಾಣವನ್ನು ಹೆಚ್ಚಿಸುವುದು.

ಮಾನಸಿಕ ಆರೋಗ್ಯ ಸುಧಾರಣೆ
ದಿನವೂ ಸ್ಕಿಪ್ಪಿಂಗ್ ಮಾಡುವುದರಿಂದ ದೇಹದ ತಾಪಮಾನ ಹೆಚ್ಚಿಸುವುದು. ಮತ್ತು ಮೆದುಳಿನಲ್ಲಿ ರಕ್ತದ ಸರಬರಾಜನ್ನು ಅಧಿಕ ಮಾಡುವುದು. ಇದರಿಂದ ಒತ್ತಡ ಕಡಿಮೆ ಆಗುವುದು. ಆಗ ಮಾನಸಿಕ ಆರೋಗ್ಯ ಸುಧಾರಣೆಯಾಗುವುದು.

ಇದನ್ನೂ ಓದಿ: World Hepatitis Day 2022: ಯಕೃತ್ತಿಗೆ ಬಾಧಿಸುತ್ತೆ ಹೆಪಟೈಟಿಸ್! ತಪ್ಪಿಸಲು ಈ ಕೆಲವು ಆಹಾರ ನಿಮ್ಮ ತಟ್ಟೆಯಲ್ಲಿರಲಿ

ಏಕಾಗ್ರತೆಯನ್ನು ಹೆಚ್ಚಿಸುತ್ತದೆ
ಪ್ರತಿಯೊಂದು ಕಾರ್ಡಿಯೋ ವ್ಯಾಯಾಮವು ನಿಮ್ಮ ಗುರಿಯ ಮೇಲೆ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಸ್ಕಿಪ್ಪಿಂಗ್ ಸಹ ಅವುಗಳಲ್ಲಿ ಒಂದಾಗಿದೆ. ಹಗ್ಗವನ್ನು ಬಿಡುವುದು ನಿಮ್ಮ ದೇಹವನ್ನು ಶಾಂತಗೊಳಿಸುತ್ತದೆ ಮತ್ತು ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸುತ್ತದೆ.

ನಿಮ್ಮ ಮೂಳೆಗಳನ್ನು ಬಲಪಡಿಸುವುದು
ಸ್ಕಿಪ್ಪಿಂಗ್ ಹಗ್ಗವು ನಿಮ್ಮ ಮೂಳೆಗಳಿಗೆ ಬಲವನ್ನು ನೀಡುತ್ತದೆ ಮತ್ತು ಮೂಳೆ ಸಾಂದ್ರತೆಯನ್ನು ಹೆಚ್ಚಿಸುತ್ತದೆ.

ನಿಮ್ಮ ಚರ್ಮ ಹೊಳೆಯುತ್ತದೆ
ಸ್ಕಿಪ್ಪಿಂಗ್‍ನಂತಹ ವ್ಯಾಯಾಮಗಳು ಯಾವಾಗಲೂ ನಿಮಗೆ ಆರೋಗ್ಯಕರ, ಬ್ಲಶಿಂಗ್ ಮತ್ತು ಹೊಳೆಯುವ ಚರ್ಮವನ್ನು ನೀಡುತ್ತದೆ.

ಯಾರು ಸ್ಕಿಪ್ಪಿಂಗ್ ಮಾಡಬಾರದು
ಹೃದಯದ ಸಮಸ್ಯೆ ಇದ್ದರೆ ನೀವು ವೈದ್ಯರ ಸಲಹೆ ಪಡೆದ ಬಳಿಕ ಸ್ಕಿಪ್ಪಿಂಗ್ ಮಾಡಬೇಕು. ಗಂಭೀರ ಅನಾರೋಗ್ಯ ಮತ್ತು ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದರೆ ಸ್ಕಿಪ್ಪಿಂಗ್ ಮಾಡಬಾರದು. ಮೂಳೆ ಗಾಯದ ಸಮಸ್ಯೆ ಇರೋರು ಸಹ ಸ್ಕಿಪ್ಪಿಂಗ್ ಮಾಡಬಾರದು.
Published by:Savitha Savitha
First published: