• Home
  • »
  • News
  • »
  • lifestyle
  • »
  • Skin Care: ಸ್ಕಿನ್ ಟೋನ್ ಹಾಳಾಗಲು ನಾವು ಮಾಡುವ ಈ ತಪ್ಪೇ ಕಾರಣವಂತೆ

Skin Care: ಸ್ಕಿನ್ ಟೋನ್ ಹಾಳಾಗಲು ನಾವು ಮಾಡುವ ಈ ತಪ್ಪೇ ಕಾರಣವಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಚರ್ಮದ ಟೋನ್ ಅನ್ನು ಸರಿ ಮಾಡಲು ಅನೇಕ ಜನರು ಸಾಕಷ್ಟು ಖರ್ಚು ಮಾಡ್ತಾರೆ. ಆದರೆ ಸಮಸ್ಯೆ ಕಡಿಮೆ ಆಗುವುದಿಲ್ಲ. ಕೆಲವು ಅಂಶಗಳು ನಿಮ್ಮ ಚರ್ಮದ ಟೋನ್ ನ್ನು ಹಾಳು ಮಾಡುತ್ತವೆ. ಅವುಗಳಿಂದ ತ್ವಚೆಯನ್ನು ರಕ್ಷಿಸಿದರೆ ನೀವೂ ಸಹ ಆರೋಗ್ಯಕರವಾಗಿ ಮತ್ತು ಹೊಳೆಯುವ ತ್ವಚೆ ಪಡೆಯಲು ಸಾಧ್ಯ.

  • Share this:

    ಸಾಮಾನ್ಯವಾದ ಚರ್ಮದ ಸಮಸ್ಯೆಗಳಲ್ಲಿ (Skin Problems) ಅಸಮ ಚರ್ಮದ ಟೋನ್ (Skin Tone) ಕೂಡ ಒಂದಾಗಿದೆ. ಅಸಮ ಚರ್ಮದ ಟೋನ್ ಇದ್ದಾಗ ಚರ್ಮದ ಬಣ್ಣವು (Color) ಕೆಲವು ಭಾಗಗಳಲ್ಲಿ ಸ್ಪಷ್ಟವಾಗಿ ಇರುತ್ತದೆ. ಮತ್ತು ಕೆಲವು ಭಾಗಗಳಲ್ಲಿ ಗಾಢ ಆಗಿರುತ್ತದೆ. ಇದು ಕೂಡ ವಿಚಿತ್ರವಾಗಿ ಕಾಣುತ್ತದೆ. ಈ ಚರ್ಮದ ಟೋನ್ ಅನ್ನು ಸರಿ ಮಾಡಲು ಅನೇಕ ಜನರು (People) ಪಾರ್ಲರ್‌ ಗೆ ಹೋಗುತ್ತಾರೆ. ಮತ್ತು ಕೆಲವು ರಾಸಾಯನಿಕ ಭರಿತ ಉತ್ಪನ್ನ ಬಳಸಲು ಪ್ರಾರಂಭಿಸುತ್ತಾರೆ. ಇದು ಯಾವುದೇ ವಿಶೇಷ ಪ್ರಯೋಜನ ನೀಡುವುದಿಲ್ಲ. ಅಂತಹ ವೇಳೆ ತಜ್ಞರನ್ನು ಸಂಪರ್ಕಿಸಿ ಮಾಹಿತಿ ಮತ್ತು ಸಲಹೆ ಪಡೆಯುವುದು ತುಂಬಾ ಉತ್ತಮ.


    ಅಸಮ ಚರ್ಮದ ಟೋನ್ ತಡೆಯುವುದು ಹೇಗೆ?


    ಇದು ನಿಮ್ಮ ಜೇಬಿನ ಹೊರೆ ಮತ್ತು ವೆಚ್ಚವನ್ನು ಕಡಿಮೆ ಮಾಡುತ್ತದೆ. ಅದೇ ವೇಳೆ ಚರ್ಮವು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ. ಅಸಮ ಚರ್ಮದ ಟೋನ್ ಮತ್ತು ಅದರ ಚಿಕಿತ್ಸೆ ಹೇಗೆ ಪಡೆಯಬೇಕು ಎಂದು ನೋಡೋಣ.


    ಜನಪ್ರಿಯ ಚರ್ಮ ರೋಗ ತಜ್ಞೆ ಡಾ. ಜಯಶ್ರೀ ಶರದ್ ಅವರು ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಅಸಮ ತ್ವಚೆಯಿಂದ ಪರಿಹಾರ ಪಡೆಯಲು ಕೆಲವು ಸುಲಭ ಸಲಹೆ ನೀಡಿದ್ದಾರೆ. ಇದನ್ನು ಫಾಲೋ ಮಾಡಿದ್ರೆ ಅಸಮ ಚರ್ಮದ ಟೋನ್ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.


    ಇದನ್ನೂ ಓದಿ: ಅರಿಶಿನ ಫೇಸ್​ಪ್ಯಾಕ್​ ಹಾಕಿದ್ರೆ ಸಾಕು ತ್ವಚೆ ಒಣಗುವ ಸಮಸ್ಯೆಗೆ ಪರಿಹಾರ ಸಿಗುತ್ತೆ


    ಸ್ಕಿನ್ ಟೋನ್ ಅನ್ನು ಅಸಮಗೊಳಿಸುವ ಕಾರಣಗಳು


    ರಕ್ಷಣೆಯಿಲ್ಲದೆ ಬಿಸಿಲಿನಲ್ಲಿ ಹೋಗುವುದು


    ಅಸಮ ಚರ್ಮದ ಟೋನ್ ಅನ್ನು ತಪ್ಪಿಸಲು, ಸಾಧ್ಯವಾದಷ್ಟು ಮಧ್ಯಾಹ್ನದ ಬಿರು ಬಿಸಿಲಿಗೆ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡಿ. ಬಿಸಿಲಿಗೆ ಹೋದರೆ ಚರ್ಮ ಕಪ್ಪಾಗುತ್ತದೆ. ಹಾಗಾಗಿ ಎಸ್ ಪಿಎಫ್ ಕ್ರೀಂ ಹಚ್ಚಿರಿ.


    ವಿಪರೀತ ಎಕ್ಸ್ಫೋಲಿಯೇಶನ್


    ಸ್ವಚ್ಛ ಮತ್ತು ಮೃದುವಾದ ಚರ್ಮ ಪಡೆಯಲು, ಕಾಲ ಕಾಲಕ್ಕೆ ಚರ್ಮವನ್ನು ಎಫ್ಫೋಲಿಯೇಟ್ ಮಾಡದೇ ಇರುವುದು ಅಸಮ ಚರ್ಮದ ಟೋನ್ ಗೆ ಕಾರಣವಾಗುತ್ತದೆ. ಆದರೆ ನೀವು ಇದನ್ನು ಅತಿಯಾಗಿ ಮಾಡಿದರೆ, ಅದು ನಿಮ್ಮ ಚರ್ಮಕ್ಕೆ ಹಾನಿ ಮಾಡುತ್ತದೆ. ಎಫ್ಫೋಲಿಯೇಟಿಂಗ್ ಅನ್ನು ವಿವಿಧ ಚರ್ಮದ ಪ್ರಕಾರಕ್ಕೆ ತಕ್ಕಂತೆ ಮಾಡ್ತಾರೆ. ವಾರದಲ್ಲಿ ಎರಡು ಬಾರಿ ಎಕ್ಸ್‌ಫೋಲಿಯೇಟ್ ಮಾಡುವುದು ಒಳ್ಳೆಯದು.


    ಚರ್ಮದ ಮೇಲೆ ಸುಗಂಧ ಸಿಂಪಡಿಸುವುದು


    ಹೆಚ್ಚಿನ ಸುಗಂಧ ದ್ರವ್ಯಗಳು ಆಲ್ಕೋಹಾಲ್ ಅನ್ನು ಹೊಂದಿವೆ. ಇದು ನಿಮ್ಮ ಚರ್ಮಕ್ಕೆ ಹಾನಿ ಮಾಡುತ್ತದೆ. ತ್ವಚೆಯ ಮೇಲೆ ನೇರವಾಗಿ ಸುಗಂಧ ದ್ರವ್ಯವನ್ನು ದೀರ್ಘ ಕಾಲದವರೆಗೆ ಅನ್ವಯಿಸುವುದು ನಿಮ್ಮ ಚರ್ಮವು ಕಪ್ಪಾಗಲು ಕಾರಣ ಆಗುತ್ತದೆ. ಮತ್ತು ದದ್ದು ಸಮಸ್ಯೆ ಉಂಟು ಮಾಡುತ್ತದೆ.


    ಸಕ್ಕರೆ ಸೇವನೆ ಮಾಡುವುದು


    ಅಸಮ ಚರ್ಮದ ಟೋನ್ ಗೆ ಸಕ್ಕರೆ ಸೇವನೆಯು ಕಾರಣವಾಗಿದೆ. ಇದು ಮುಖಕ್ಕೆ ತುಂಬಾ ಹಾನಿಕಾರಕ. ನಿಮ್ಮ ಮುಖದ ಚರ್ಮವು ಬಹಳಷ್ಟು ಸಮಸ್ಯೆ ಹೊಂದಲು ಕಾರಣವಾಗಿದೆ. ಹೆಚ್ಚು ಸಿಹಿಯನ್ನು ಸೇವಿಸುವುದು ಮುಖವು ಕೆಂಪಾಗಲು ಮತ್ತು ಅಕಾಲಿಕ ವಯಸ್ಸಾಗುವಿಕೆ ಲಕ್ಷಣ ಗೋಚರಿಸುತ್ತವೆ. ಹಾಗಾಗಿ ಹೆಚ್ಚು ಸಕ್ಕರೆ ತಿನ್ನುವುದನ್ನು ತಪ್ಪಿಸಿ.


    ಧೂಮಪಾನ ಮಾಡುವುದು


    ತಜ್ಞರ ಪ್ರಕಾರ ಅಸಮ ಚರ್ಮದ ಟೋನ್ ಗೆ ಧೂಮಪಾನ ಕಾರಣವಾಗಿದೆ. ಇದು ಶ್ವಾಸಕೋಶದ ಮೇಲೆ ಮಾತ್ರವಲ್ಲದೆ ಚರ್ಮದ ಮೇಲೂ ಪರಿಣಾಮ ಬೀರುತ್ತದೆ. ಇದು ದೇಹದಲ್ಲಿ ಸ್ವತಂತ್ರ ರಾಡಿಕಲ್ಗಳನ್ನು ಹೆಚ್ಚಿಸುತ್ತದೆ.


    ಇದನ್ನೂ ಓದಿ: ಕೂದಲು ಉದುರುವಿಕೆ ಸಮಸ್ಯೆ ನಿವಾರಣೆಗೆ ಇಲ್ಲಿದೆ ವಿಶೇಷ ಹೇರ್ ಟಾನಿಕ್ ಮನೆಮದ್ದು!


    ಸಿಗರೇಟಿನಲ್ಲಿರುವ ವಿಷಕಾರಿ ಅಂಶ ದೇಹದಲ್ಲಿನ ಆಕ್ಸಿಡೇಟಿವ್ ಹೆಚ್ಚಿಸುತ್ತದೆ. ಇದು ಚರ್ಮಕ್ಕೆ ಆಮ್ಲಜನಕದ ಪೂರೈಕೆ ಕೊರತೆ ಉಂಟು ಮಾಡುತ್ತದೆ. ಅದಕ್ಕಾಗಿಯೇ ನೀವು ಧೂಮಪಾನ ತ್ಯಜಿಸಬೇಕು.

    Published by:renukadariyannavar
    First published: