Coffee Face Pack: ಟ್ಯಾನ್ ಆಗಿದ್ರೆ ಕಾಫಿ ಫೇಸ್​ ಪ್ಯಾಕ್ ಹಾಕಿ ಸಾಕು, ಆಮೇಲೆ ಮ್ಯಾಜಿಕ್ ನೋಡಿ

ಕಾಫಿ ತ್ವಚೆಯ ಸಮಸ್ಯೆಗೆ ಪರಿಹಾರ ನೀಡುವ ಜೊತೆಗೆ ಉಲ್ಲಾಸ ನೀಡುತ್ತದೆ. ಅನೇಕ ಚರ್ಮ ಸಂಬಂಧಿ ಸಮಸ್ಯೆ ಕಡಿಮೆ ಮಾಡುತ್ತದೆ. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಾರ ಕಾಫಿ ನಮ್ಮ ಚರ್ಮದ ಆರೋಗ್ಯಕ್ಕೆ ಪ್ರಯೋಜನಕಾರಿ. ಕಾಫಿ ತ್ವಚೆಯನ್ನು ಸಡಿಲಿಸುವುದರ ಜೊತೆಗೆ ಚರ್ಮದ ಉರಿಯೂತ ಕಡಿಮೆ ಮಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
     ಬಿಡುವಿಲ್ಲದ ಜೀವನಶೈಲಿಯಲ್ಲಿ (Lifestyle) ನಮ್ಮ ಬಗ್ಗೆ ಮತ್ತು ಸೌಂದರ್ಯದ (Beauty) ಕಾಳಜಿ (Care) ತೆಗೆದುಕೊಳ್ಳುವುದು ಕಷ್ಟಕರವಾಗುತ್ತದೆ. ಹೀಗಾಗಿ ನಮ್ಮ ಚರ್ಮದ ಆರೋಗ್ಯ (Skin health) ಹದಗೆಡಲು ಶುರು ಆಗುತ್ತದೆ. ಆದರೆ ಕೆಲಸದ ಜೊತೆ ಸಮಾನವಾಗಿ ಆರೋಗ್ಯ ಮತ್ತು ತ್ವಚೆಯ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ. ಉತ್ತಮ ಕಾಳಜಿ ವಹಿಸುವುದು ವಯಸ್ಸಾದವರಲ್ಲಿ ಆರೋಗ್ಯ ಮತ್ತು ಚರ್ಮವನ್ನು ರಕ್ಷಿಸುತ್ತದೆ. ಇದು ತ್ವಚೆಯ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರದಂತೆ ತಡೆಯುತ್ತದೆ. ಪ್ರತಿದಿನ ನೀವು ಕಾಫಿ ಸೇವಿಸಬಹುದು. ಕಾಫಿಯನ್ನು ತ್ವಚೆಗೆ ಫೇಸ್ ಪ್ಯಾಕ್ ರೀತಿ ಅನ್ವಯಿಸುವುದು, ತ್ವಚೆಯ ಸಮಸ್ಯೆಗೆ ಪರಿಹಾರ ನೀಡುತ್ತದೆ.

    ಕಾಫಿ ತ್ವಚೆಗೆ ಏಕೆ ವಿಶೇಷವಾಗಿದೆ?

    ಕಾಫಿ ತ್ವಚೆಯ ಸಮಸ್ಯೆಗೆ ಪರಿಹಾರ ನೀಡುವ ಜೊತೆಗೆ ಉಲ್ಲಾಸ ನೀಡುತ್ತದೆ. ಅನೇಕ ಚರ್ಮ ಸಂಬಂಧಿ ಸಮಸ್ಯೆ ಕಡಿಮೆ ಮಾಡುತ್ತದೆ. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಾರ, ಕಾಫಿ ನಮ್ಮ ಚರ್ಮದ ಆರೋಗ್ಯಕ್ಕೆ ಪ್ರಯೋಜನಕಾರಿ. ಕಾಫಿ ತ್ವಚೆಯನ್ನು ಸಡಿಲಿಸುವುದರ ಜೊತೆಗೆ ಚರ್ಮದ ಉರಿಯೂತ ಕಡಿಮೆ ಮಾಡುತ್ತದೆ. ಕಾಫಿಯಲ್ಲಿರುವ ವಿಟಮಿನ್ ಬಿ -3 ಚರ್ಮದ ಕ್ಯಾನ್ಸರ್ ನ್ನು ತಡೆಯುತ್ತದೆ. ಕಪ್ಪು ವಲಯ ಮತ್ತು ಕಲೆ ನಿವಾರಿಸುತ್ತದೆ.

    ಕಾಫಿ ಮತ್ತು ಮೊಸರು ಫೇಸ್ ಪ್ಯಾಕ್

    ಕಾಫಿ ಮತ್ತು ಮೊಸರು ಫೇಸ್ ಪ್ಯಾಕ್ ಚರ್ಮದ ಟ್ಯಾನಿಂಗ್ ತೆಗೆದು ಹಾಕುತ್ತದೆ. ಚರ್ಮವನ್ನು ಮೃದುಗೊಳಿಸುತ್ತದೆ. ಮೊಸರು ತ್ವಚೆಯನ್ನು ಬಿಳುಪು ಮತ್ತು ಚರ್ಮದ ಹೊಳಪನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

    ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಎಷ್ಟು ಕೆಜಿ ತೂಕ ಹೆಚ್ಚಾಗುವುದು ಆರೋಗ್ಯಕರ? ತಜ್ಞರು ಹೇಳೋದೇನು?

    ಕಾಫಿ ಮತ್ತು ಮೊಸರು ಫೇಸ್ ಪ್ಯಾಕ್ ತಯಾರಿಸುವ ವಿಧಾನ

    ಒಂದು ಬಟ್ಟಲಿನಲ್ಲಿ ಎರಡು ಚಮಚ ಮೊಸರು, ಎರಡು ಚಮಚ ಕಾಫಿ ಪುಡಿ ಎರಡನ್ನೂ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೀಗ ಅರ್ಧ ಚಮಚ ಅರಿಶಿನ ಬೆರೆಸಿ. ದಪ್ಪ ಪೇಸ್ಟ್ ತಯಾರಿಸಿ. ಮುಖಕ್ಕೆ ಹಚ್ಚಿರಿ. 15-20 ನಿಮಿಷಗಳ ಕಾಲ ಬಿಡಿ. ನಂತರ ತಣ್ಣೀರಿನಿಂದ ಸ್ವಚ್ಛಗೊಳಿಸಿ.

    ಕಾಫಿ ಮತ್ತು ಜೇನುತುಪ್ಪ ಫೇಸ್ ಪ್ಯಾಕ್

    ಕಾಫಿ ಮತ್ತು ಜೇನುತುಪ್ಪ ಫೇಸ್ ಪ್ಯಾಕ್, ಚರ್ಮವನ್ನು ಆಳವಾಗಿ ಸ್ವಚ್ಛಗೊಳಿಸುತ್ತದೆ. ಹಾಗೂ ಚರ್ಮದ ಸಮಸ್ಯೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಜೇನುತುಪ್ಪ ನಿಮ್ಮ ತ್ವಚೆಯನ್ನು ಹೈಡ್ರೇಟ್ ಮಾಡುತ್ತದೆ ಮತ್ತು ನೈಸರ್ಗಿಕ ಹೊಳಪು ನೀಡುತ್ತದೆ.

    ಕಾಫಿ ಮತ್ತು ಜೇನು ಫೇಸ್ ಪ್ಯಾಕ್ ತಯಾರಿಸುವುದು ಹೇಗೆ?

    ಒಂದು ಬಟ್ಟಲಿನಲ್ಲಿ ಎರಡು ಚಮಚ ಮೊಸರು, ಮೂರು ಚಮಚ ಜೇನುತುಪ್ಪ ಮಿಶ್ರಣ ಮಾಡಿ. ಪೇಸ್ಟ್ ತುಂಬಾ ದಪ್ಪವಾಗಿದ್ದರೆ, ನಿಂಬೆ ರಸ ಅಥವಾ ರೋಸ್ ವಾಟರ್ ಬೆರೆಸಿ. ಈಗ ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ. ಎರಡು ನಿಮಿಷ ಮಸಾಜ್ ಮಾಡಿ. 15 ನಿಮಿಷ ಬಿಡಿ. ಪೇಸ್ಟ್ ಒಣಗಿದ ನಂತರ ತಣ್ಣೀರಿನಿಂದ ಮುಖ ತೊಳೆಯಿರಿ.

    ಕಾಫಿ ಮತ್ತು ಆಲಿವ್ ಎಣ್ಣೆ ಫೇಸ್ ಪ್ಯಾಕ್

    ಕಾಫಿ ಮತ್ತು ಆಲಿವ್ ಆಯಿಲ್ ಫೇಸ್ ಪ್ಯಾಕ್, ಉತ್ತಮ ಸ್ಕ್ರಬ್ ಆಗಿದೆ. ಇದು ಚರ್ಮದ ರಂಧ್ರಗಳು ಮುಚ್ಚಿಹೋಗದಂತೆ ನೋಡಿಕೊಳ್ಳುತ್ತದೆ. ಚರ್ಮವನ್ನು ಸ್ವಚ್ಛ ಮತ್ತು ತೇವಗೊಳಿಸುತ್ತದೆ.

    ಕಾಫಿ ಮತ್ತು ಆಲಿವ್ ಎಣ್ಣೆ ಫೇಸ್ ಪ್ಯಾಕ್ ಹೀಗೆ ತಯಾರಿಸಿ

    ಒಂದು ಬಟ್ಟಲಿನಲ್ಲಿ ಒಂದು ಚಮಚ ಕಾಫಿ ಪುಡಿ, ಒಂದು ಚಮಚ ಕಂದು ಸಕ್ಕರೆ ಸೇರಿಸಿ. ಎರಡು ಚಮಚ ಆಲಿವ್ ಎಣ್ಣೆ ಬೆರೆಸಿ. ಈ ಪೇಸ್ಟ್ ಅನ್ನು ಮುಖದ ಮೇಲೆ ಸ್ಕ್ರಬ್ ಮಾಡಿ. 15 ನಿಮಿಷ ಬಿಡಿ. ನಂತರ ತಣ್ಣೀರಿನಿಂದ ಮುಖ ತೊಳೆಯಿರಿ.

    ಕಾಫಿ ಮತ್ತು ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್

    ಕಾಫಿ ಮತ್ತು ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್, ಚರ್ಮದ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಮೊಡವೆ ಹೋಗಲಾಡಿಸುತ್ತದೆ. ನೈಸರ್ಗಿಕ ಹೊಳಪು ತರುತ್ತದೆ ಮುಲ್ತಾನಿ ಮಿಟ್ಟಿ.

    ಇದನ್ನೂ ಓದಿ: ಓಟ್ಸ್ ಆಹಾರಕ್ಕಷ್ಟೇ ಅಲ್ಲ, ಸೌಂದರ್ಯಕ್ಕೂ ಬೇಕು! ಇಲ್ಲಿದೆ ಫೇಸ್ ಪ್ಯಾಕ್ ಮಾಡುವ ವಿಧಾನ

    ಕಾಫಿ ಮತ್ತು ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್ ಮಾಡುವುದು ಹೇಗೆ

    ಒಂದು ಬಟ್ಟಲಿನಲ್ಲಿ ಒಂದು ಚಮಚ ಕಾಫಿ, ಒಂದು ಚಮಚ ಮುಲ್ತಾನಿ ಮಿಟ್ಟಿ ಮತ್ತು ಗ್ರೀನ್ ಟೀ ಬೆರೆಸಿ, ಹಸಿ ಹಾಲನ್ನು ಸೇರಿಸಿ ಪೇಸ್ಟ್ ತಯಾರಿಸಿ. ಮುಖದ ಮೇಲೆ ಹಚ್ಚಿ ಮತ್ತು ಬಿಡಿ.  ಒಣಗಿದ ನಂತರ ತಣ್ಣೀರಿನಿಂದ ಮುಖ ತೊಳೆಯಿರಿ.
    Published by:renukadariyannavar
    First published: