• Home
  • »
  • News
  • »
  • lifestyle
  • »
  • Skin Care: ಪಿಗ್ಮೆಂಟೇಶನ್ ಸಮಸ್ಯೆ ಇದ್ರೆ ಈ ತರಕಾರಿ ಜ್ಯೂಸ್​ ಕುಡಿದು ನೋಡಿ

Skin Care: ಪಿಗ್ಮೆಂಟೇಶನ್ ಸಮಸ್ಯೆ ಇದ್ರೆ ಈ ತರಕಾರಿ ಜ್ಯೂಸ್​ ಕುಡಿದು ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತ್ವಚೆಯ ಅಂದ ಮತ್ತು ಹೊಳಪು ಕಾಪಾಡಲು ದಿನವೂ ಆರೈಕೆ ಮಾಡುವ ಅಗತ್ಯತೆ ಇದೆ. ನಿಮ್ಮ ಚರ್ಮದ ಟೋನ್ ಯಾವುದು ಎಂದು ತಿಳಿಯುವುದು ತುಂಬಾ ಮುಖ್ಯ. ಮತ್ತು ನಿಮ್ಮ ಸೌಂದರ್ಯವನ್ನು ಕಾಪಾಡಲು ಚರ್ಮದ ಟೋನ್ ಚೆನ್ನಾಗಿ ಇಟ್ಟುಕೊಳ್ಳುವುದು ಮುಖ್ಯ.

  • Share this:

    ತ್ವಚೆಯ ಆರೈಕೆ (Skin Care) ಮಾಡುವುದು ಸುಲಭದ (Easy) ಸಂಗತಿಯಲ್ಲ. ಪ್ರತಿಯೊಬ್ಬರಿಗೂ ಅವರದ್ದೇ ಆದ ಚರ್ಮದ ಟೋನ್ (Skin Tone) ಇದೆ. ಅದೇ ರೀತಿ ಚರ್ಮ ಸಮಸ್ಯೆಗಳು (Skin Problems) ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿವೆ (Different). ಅದರಲ್ಲೂ ತ್ವಚೆಯ ಅಂದ ಮತ್ತು ಹೊಳಪು ಕಾಪಾಡಲು ದಿನವೂ ಆರೈಕೆ ಮಾಡುವ ಅಗತ್ಯತೆ ಇದೆ. ನಿಮ್ಮ ಚರ್ಮದ ಟೋನ್ ಯಾವುದು ಎಂದು ತಿಳಿಯುವುದು ತುಂಬಾ ಮುಖ್ಯ. ಮತ್ತು ನಿಮ್ಮ ಸೌಂದರ್ಯವನ್ನು ಕಾಪಾಡಲು ಚರ್ಮದ ಟೋನ್ ಚೆನ್ನಾಗಿ ಇಟ್ಟುಕೊಳ್ಳುವುದು ಮುಖ್ಯ. ನೀವು ನಿಮ್ಮ ಚರ್ಮದ ಟೋನ್ ಸರಿಯಾಗಿ ಇಟ್ಟುಕೊಳ್ಳಲು ನೀವು ಏನು ಮಾಡುತ್ತಿದ್ದೀರಿ? ಅದು ನಿಮ್ಮ ತ್ವಚೆಗೆ ಸೂಕ್ತವೇ ಎಂಬುದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ.


    ಚರ್ಮದ ಸಮಸ್ಯೆಗಳು


    ಚರ್ಮದ ಸಮಸ್ಯೆಗಳಲ್ಲಿ ಗುಳ್ಳೆ, ಕಲೆ, ಸುಕ್ಕು ಮತ್ತು ಪಿಗ್ಮೆಂಟೇಶನ್ ಸಮಸ್ಯೆಯು ಸಾಕಷ್ಟು ಸಾಮಾನ್ಯವಾಗಿದೆ. ಪ್ರತಿಯೊಬ್ಬರೂ ಜೀವನದ ಒಂದು ಹಂತದಲ್ಲಿ ತ್ವಚೆಯ ಗುಳ್ಳೆ ಮತ್ತು ಕಲೆ ಸಮಸ್ಯೆ ಅನುಭವಿಸುತ್ತಾರೆ. ನಿಮ್ಮ ತ್ವಚೆಯ ಬಣ್ಣವು ಎಲ್ಲೋ ಫೇರ್ ಅಥವಾ ಡಾರ್ಕ್ ಆಗಿದ್ದರೆ ಅದು ಪಿಗ್ಮೆಂಟೇಶನ್ ಕಾರಣದಿಂದ ಆಗಿರಬಹುದು.


    ಹೈಪರ್ ರ್ಪಿಗ್ಮೆಂಟೇಶನ್ ಅಥವಾ ಮೆಲಸ್ಮಾ ಸಾಮಾನ್ಯ ತ್ವಚೆಯ ಸಮಸ್ಯೆ ಆಗಿದೆ. ಹಾಗಾದರೆ ನೀವು ಎಲ್ಲವನ್ನೂ ಪ್ರಯತ್ನಿಸಿದ್ದರೂ ಸಹ ಚರ್ಮದ ಬಣ್ಣ ಏಕೆ ಸಮವಾಗಿಲ್ಲ ಎಂದು ಯೋಚಿಸಿದರೆ ಇದರ ಹಿಂದೆ ಹಲವು ಕಾರಣಗಳು ಇರಬಹುದು.


    ಇದನ್ನೂ ಓದಿ: ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಬೇಕು ಎಂದರೆ ಈ ಆಹಾರಗಳನ್ನು ಸೇವಿಸಿ


    ಪಿಗ್ಮೆಂಟೇಶನ್ ಸಮಸ್ಯೆ ಬಗ್ಗೆ ಪೌಷ್ಟಿಕ ತಜ್ಞೆ ಪೂಜಾ ಮಖಿಜಾ ತನ್ನ ಹೊಸ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಪೋಸ್ಟ ಹಾಕಿದ್ದಾರೆ. ಸಮಸ್ಯೆಗೆ ಅವರು ಐದು ಕಾರಣ ನೀಡಿದ್ದಾರೆ. ಇದಕ್ಕೂ ಮೊದಲು ಪಿಗ್ಮೆಂಟೇಶನ್ ಬಗ್ಗೆ ತಿಳಿಯುವುದು ತುಂಬಾ ಮುಖ್ಯ.



    ಚರ್ಮದ ಪಿಗ್ಮೆಂಟೇಶನ್ ಎಂದರೇನು?


    ಚರ್ಮದ ವರ್ಣದ್ರವ್ಯವು ಮೂಲತಃ ನಿಮ್ಮ ಚರ್ಮದ ಬಣ್ಣದ್ದೇ ಆಗಿರುತ್ತದೆ. ಚರ್ಮದ ವರ್ಣದ್ರವ್ಯವನ್ನು ಮೆಲನಿನ್ ಪ್ರಮಾಣ ನಿರ್ಧರಿಸುತ್ತದೆ. ಇದು ಚರ್ಮ, ಕೂದಲು ಮತ್ತು ಕಣ್ಣುಗಳಿಗೆ ಬಣ್ಣ ನೀಡುತ್ತದೆ. ಮೆಲನಿನ್‌ನಲ್ಲಿನ ಯಾವುದೇ ಬದಲಾವಣೆಯು ಚರ್ಮದ ಬಣ್ಣವು ಗಾಢ ಅಥವಾ ಹಗುರವಾಗಿಸಬಹುದು. ಇದು ಪಿಗ್ಮೆಂಟೇಶನ್ ಆಗಿದೆ.


    ಪಿಗ್ಮೆಂಟೇಶನ್ ಗೆ ಮುಖ್ಯ ಕಾರಣಗಳು


    ಹಾರ್ಮೋನ್ ಅಸಮತೋಲನ


    ಹಾರ್ಮೋನ್ ಅಸಮತೋಲನ ಪಿಗ್ಮೆಂಟೇಶನ್‌ ಗೆ ಮುಖ್ಯ ಕಾರಣ ಎಂಬುದು ತಜ್ಞರ ಅಭಿಪ್ರಾಯ. ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಸೂರ್ಯನಿಗೆ ಒಡ್ಡಿಕೊಂಡಾಗ ಮೆಲನಿನ್ ಅಧಿಕ ಉತ್ಪಾದನೆಗೆ ಉತ್ತೇಜನ ನೀಡುತ್ತದೆ ಎನ್ನುತ್ತಾರೆ ತಜ್ಞರು.


    ನಿರ್ಜಲೀಕರಣ ಸಮಸ್ಯೆ


    ನೀವು ಸಾಕಷ್ಟು ನೀರು ಸೇವನೆ ಮಾಡದೇ ಇದ್ದರೆ, ಹೆಚ್ಚು ದ್ರವ ಪದಾರ್ಥಗಳ ಸೇವನೆ ಮಾಡದೇ ಹೋದರೆ ನಿರ್ಜಲೀಕರಣಕ್ಕೆ ಕಾರಣ ಆಗುತ್ತದೆ. ನಿರ್ಜಲೀಕರಣವು ಹೈಪರ್ ಪಿಗ್ಮೆಂಟೇಶನ್ ಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತದೆ. ಹಾಗಾಗಿ ನೀವು ಪ್ರತಿದಿನ 2 ರಿಂದ 3 ಲೀಟರ್ ನೀರು ಕುಡಿಯಬೇಕು ಎನ್ನುತ್ತಾರೆ ತಜ್ಞರು.


    ಪ್ರೋಟೀನ್ ಕಡಿಮೆ ಸೇವನೆ


    ನಿಮ್ಮ ಆಹಾರದಲ್ಲಿ ಸಾಕಷ್ಟು ಪ್ರೋಟೀನ್ ಸೇವನೆ ಮಾಡದೇ ಇದ್ದರೆ ಚರ್ಮ ಮತ್ತು ಪಿಗ್ಮೆಂಟೇಶನ್ ಸಮಸ್ಯೆ ನೀವು ಎದುರಿಸಬಹುದು. ಪಿಗ್ಮೆಂಟೇಶನ್ ಸಮಸ್ಯೆ ಹೊಂದಿರುವವರು ಮೂರು ಹೊತ್ತಿನ ಊಟದಲ್ಲಿ ಪ್ರೋಟೀನ್ ಸೇವಿಸುವುದು ಮುಖ್ಯ ಎನ್ನುತ್ತಾರೆ ತಜ್ಞರು.


    ಉತ್ತಮ ನಿದ್ರೆ ಮಾಡುವುದು


    ದಿನವೂ ಉತ್ತಮ ಮತ್ತು ಆಳ ನಿದ್ರೆ ಮಾಡುವುದು ಮುಖ್ಯ. ಪ್ರತಿದಿನ 7 ರಿಂದ 8 ಗಂಟೆಗಳ ನಿದ್ದೆ ಮಾಡಿ. ಆದಷ್ಟು ಬೇಗ ಮಲಗಿ ಮತ್ತು ಬೆಳಗ್ಗೆ ಬೇಗ ಏಳಿ. ನಿಮ್ಮ ಮಲಗುವ ಮತ್ತು ಬೆಳಗ್ಗೆ ಏಳುವ ಸಮಯದಲ್ಲಿ ಬದಲಾವಣೆಯಾಗದಂತೆ ನೋಡಿಕೊಳ್ಳಿ.


    ಪೋಷಕಾಂಶಗಳು


    ತ್ವಚೆಯ ಪಿಗ್ಮೆಂಟೇಶನ್ ಸಮಸ್ಯೆ ನಿಮ್ಮ ದೇಹವು ಸರಿಯಾದ ಪ್ರಮಾಣದ ಸೂಕ್ಷ್ಮ ಪೋಷಕಾಂಶಗಳನ್ನು ಪಡೆಯುತ್ತಿಲ್ಲ ಎಂಬುದರ ಸಂಕೇತ. ಚರ್ಮವನ್ನು ನಿರ್ವಿಷಗೊಳಿಸಲು ಜೀವಸತ್ವ ಮತ್ತು ಖನಿಜಗಳು ಬೇಕು. ಹಾಗಾಗಿ ಪ್ರತಿದಿನ ಒಂದು ಲೋಟ ತರಕಾರಿ ರಸ ಸೇವನೆ ಮಾಡಿ. ಇದು ಪಿಗ್ಮೆಂಟೇಶನ್ ಸಮಸ್ಯೆಯ ತೊಂದರೆಯಿಂದ ಕಾಪಾಡುತ್ತದೆ.


    ಇದನ್ನೂ ಓದಿ: ಪೈಲ್ಸ್ ಸಮಸ್ಯೆ ಹೊಂದಿರುವವರು ಈ ಆಹಾರ ದೂರವಿರಿ!


    ವಿಶೇಷ ತರಕಾರಿ ರಸದ ಪಾಕವಿಧಾನ ತಯಾರಿಸಿ ಸೇವಿಸಿ


    ಯಾವುದಾದರೂ ಮೂರು ವಿವಿಧ ಬಣ್ಣದ ತರಕಾರಿಗಳನ್ನು ಸ್ವಲ್ಪ ನೀರಿನ ಜೊತೆ ಬ್ಲೆಂಡರ್ ನಲ್ಲಿ ಮಿಶ್ರಣ ಮಾಡಿ. ಅದಕ್ಕೆ ಸ್ವಲ್ಪ ನಿಂಬೆರಸ ಸೇರಿಸಿ ತಕ್ಷಣ ಕುಡಿಯಿರಿ. ಈ ಪಾನೀಯವು ಹಣ್ಣುಗಳನ್ನು ಹೊಂದಿರಬಾರದು. ಟೊಮೆಟೊ, ಸೌತೆಕಾಯಿ ಮತ್ತು ಕ್ಯಾರೆಟ್ ನಂತಹ ತರಕಾರಿಗಳು ಮತ್ತು ಕೊತ್ತಂಬರಿ ಸೊಪ್ಪು ಹೊಂದಿರಲಿ.

    Published by:renukadariyannavar
    First published: