ತ್ವಚೆಯ ಆರೈಕೆಯಲ್ಲಿ (Skin Care) ಹಲವು ಪದಾರ್ಥಗಳನ್ನು (Ingredients) ನೀವು ಬಳಸುತ್ತೀರಿ. ಜೊತೆಗೆ ರೋಸ್ ವಾಟರ್ (Rose Water) ಸಹ ನೀವು ಬಳಕೆ ಮಾಡಿರಬಹುದು. ರೋಸ್ ವಾಟರ್ ಅನ್ನು ಶತಮಾನಗಳಿಂದ ಸೌಂದರ್ಯವರ್ಧಕ ಉತ್ಪನ್ನವಾಗಿ (Beauty Product) ಬಳಕೆ ಮಾಡುತ್ತಾ ಬರಲಾಗಿದೆ. ರೋಸ್ ವಾಟರ್ ತ್ವಚೆಯ ಆರೈಕೆಗೆ ಸಾಕಷ್ಟು ಪ್ರಯೋಜನ (Benefits) ನೀಡುತ್ತದೆ. ರೋಸ್ ನ ತಾಜಾ ಪರಿಮಳವು ತುಂಬಾ ಜನರನ್ನು ಸೆಳೆಯುತ್ತದೆ. ಪ್ರಾಚೀನ ಕಾಲದಲ್ಲಿ ರೋಸ್ ಅನ್ನು ಸುಗಂಧ ದ್ರವ್ಯವಾಗಿ ಬಳಕೆ ಮಾಡ್ತಾ ಇದ್ರು. ಸೌಂದರ್ಯ ತಜ್ಞರು ಹೇಳುವ ಪ್ರಕಾರ, ರೋಸ್ ವಾಟರ್ ಅನ್ನು ತ್ವಚೆಗೆ ಟೋನರ್ ಆಗಿ ಬಳಕೆ ಮಾಡಿದ್ರೆ ಚರ್ಮದಲ್ಲಿ ತಾಜಾತನ ಮತ್ತು ನೈಸರ್ಗಿಕ ಹೊಳಪು ಬರುತ್ತದೆಯಂತೆ.
ತ್ವಚೆಯ ಹಲವು ಸಮಸ್ಯೆಗಳ ನಿವಾರಣೆಗೆ ರೋಸ್ ವಾಟರ್ ಪರಿಣಾಮಕಾರಿ
ಕೆಲವೊಮ್ಮೆ ರೋಸ್ ವಾಟರ್ ಹಲವು ಮನೆಮದ್ದುಗಳ ಜೊತೆ ಬೆರೆಸಿ, ಫೇಸ್ ಪ್ಯಾಕ್ ಆಗಿ ಬಳಸಲಾಗುತ್ತದೆ. ರೋಸ್ ವಾಟರ್ ಅನ್ನು ಹಲವು ರೀತಿಯಲ್ಲಿ ನೀವು ತ್ವಚೆಯ ಆರೈಕೆಗೆ ಬಳಕೆ ಮಾಡಬಹುದು. ರೋಸ್ ವಾಟರ್ ಅನೇಕ ಆರೋಗ್ಯ ಹಾಗೂ ತ್ವಚೆಯ ಸಮಸ್ಯೆ ನಿವಾರಣೆಗೆ ಸಾಕಷ್ಟು ಸಹಕಾರಿ ಎಂದು ತಜ್ಞರು ಹೇಳುತ್ತಾರೆ.
ರೋಸ್ ವಾಟರ್ ಬಳಕೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳು
ತ್ವಚೆಗೆ ಯಾವುದೇ ಉತ್ಪನ್ನ ಅಥವಾ ಪದಾರ್ಥ ಬಳಸುವ ಮೊದಲು ಅದರ ಬಗ್ಗೆ ಮಾಹಿತಿ ಗೊತ್ತಿರಬೇಕು. ಅದೇ ರೀತಿ ನೀವು ರೋಸ್ ವಾಟರ್ ಬಳಸುವ ಮೊದಲು ಅದು ಯಾಕೆ ಮತ್ತು ಹೇಗೆ ತ್ವಚೆಯ ಆರೈಕೆಗೆ ಪರಿಣಾಮಕಾರಿ ಎಂದು ತಿಳಿಯುವುದು ತುಂಬಾ ಮುಖ್ಯ.
ರೋಸ್ ವಾಟರ್ ಮೇಲೆ ನಡೆದ ಸಂಶೋಧನೆ ಒಂದರ ಪ್ರಕಾರ, ರೋಸ್ ವಾಟರ್ ನಲ್ಲಿ ವಿಟಮಿನ್ ಸಿ ಹಾಗೂ ಫಿನಾಲಿಕ್ ಇದೆ. ಇದು ನಂಜು ನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣ ಹೊಂದಿದೆ.
ರೋಸ್ ವಾಟರ್ ಯಾಕೆ ಪ್ರಯೋಜನಕಾರಿಯಾಗಿದೆ?
ಗಾಯದ ಚಿಕಿತ್ಸೆ ನಿವಾರಣೆಗೆ ಸಹಕಾರಿ
ತ್ವಚೆಗೆ ಆದ ಸಣ್ಣ ಪುಟ್ಟ ಗಾಯಗಳನ್ನು ತ್ವರಿತವಾಗಿ ಗುಣಪಡಿಸಲು ರೋಸ್ ವಾಟರ್ ಅನ್ವಯಿಸುವುದು ಪ್ರಯೋಜನಕಾರಿ. ನಂಜು ನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣ ಹೊಂದಿರುವ ರೋಸ್ ವಾಟರ್ ಗಾಯಗಳನ್ನು ವೇಗವಾಗಿ ಗುಣಪಡಿಸುತ್ತದೆ.
ಇದು ಚರ್ಮದ ಸೋಂಕು ನಿವಾರಿಸುತ್ತದೆ. ಸುಟ್ಟ ಗಾಯಗಳು, ಕಡಿತ ಮತ್ತು ಮೂಗೇಟುಗಳ ಮೇಲಿನ ಗಾಯಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕಣ್ಣುಗಳಿಗೆ ವಿಶ್ರಾಂತಿ ನೀಡುತ್ತದೆ
ಶತಮಾನಗಳಿಂದಲೂ ರೋಸ್ ವಾಟರ್ ಅನ್ನು ಕಣ್ಣಿನ ಸಮಸ್ಯೆ ನಿವಾರಣೆಗೆ ಬಳಸುತ್ತಾರೆ. ಆಯುರ್ವೇದದ ಪ್ರಕಾರ ರೋಸ್ ವಾಟರ್‌ನಲ್ಲಿರುವ ಅಂಶಗಳು ಕಿರಿಕಿರಿ ಕಡಿಮೆ ಮಾಡಲು ಮತ್ತು ಕಣ್ಣುಗಳನ್ನು ಆರಾಮದಾಯಕವಾಗಿಸಲು ಪ್ರಯೋಜನಕಾರಿ ಆಗಿದೆ.
ಮನಸ್ಥಿತಿ ಸುಧಾರಿಸುತ್ತದೆ
ರೋಸ್ ವಾಟರ್ ಮನಸ್ಥಿತಿ ಸುಧಾರಿಸಲು ಮತ್ತು ಒತ್ತಡ ಕಡಿಮೆ ಮಾಡಲು ಪ್ರಯೋಜನಕಾರಿ. ರೋಸ್ ವಾಟರ್‌ನಲ್ಲಿ ಆಂಟಿ ಆಂಗ್ಯಾಜಿಟಿ ಮತ್ತು ಡಿಪ್ರೆಶನ್ ಕಡಿಮೆ ಮಾಡುವ ಗುಣಗಳಿವೆ. ರೋಸ್ ವಾಟರ್ ನರಮಂಡಲವನ್ನು ವಿಶ್ರಾಂತಿಗೊಳಿಸುತ್ತದೆ. ಕೈ ಅಥವಾ ದಿಂಬಿನ ಮೇಲೆ ಸಿಂಪಡಿಸಿ ಬಳಸಬಹುದು.
ಸೋಂಕು ಸಮಸ್ಯೆ ನಿವಾರಿಸುತ್ತದೆ
ಸೌಂದರ್ಯವರ್ಧಕ ಉತ್ಪನ್ನಗಳ ಜೊತೆಗೆ ರೋಸ್ ವಾಟರ್ ಅನ್ನು ಅನೇಕ ಔಷಧೀಯ ಚಿಕಿತ್ಸೆಗೆ ಬಳಸುತ್ತಾರೆ. ಇದು ಸೋಂಕನ್ನು ತಡೆಯಲು ಸಹಾಯ ಮಾಡುವ ನಂಜು ನಿರೋಧಕ ಗುಣ ಹೊಂದಿದೆ. ಇದು ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆ ನಿವಾರಣೆಗೆ ಸಹಕಾರಿ ಆಗಿದೆ.
ಚರ್ಮದ ಸಮಸ್ಯೆ ತಡೆಯುತ್ತದೆ
ರೋಸ್ ವಾಟರ್ ಅನ್ನು ಇತರ ಚರ್ಮ ಸಂಬಂಧಿ ಸಮಸ್ಯೆ ಕಡಿಮೆ ಮಾಡಲು ಬಳಸುತ್ತಾರೆ. ಇದು ಹಳೆಯ ಕಲೆ, ಕಡಿಮೆ ಮಾಡುತ್ತದೆ. ಚರ್ಮವನ್ನು ಮೃದುವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ. ವಯಸ್ಸಾದ ವಿರೋಧಿ ಗುಣಲಕ್ಷಣಗಳು ಚರ್ಮದ ಆರೋಗ್ಯ ಸುಧಾರಿಸುತ್ತದೆ.
ಗಂಟಲು ನೋವನ್ನು ಶಮನಗೊಳಿಸುತ್ತದೆ
ಗಂಟಲಿನ ಸಮಸ್ಯೆ ಕಡಿಮೆ ಮಾಡಲು ರೋಸ್ ವಾಟರ್ ಸಹಕಾರಿ. ರೋಸ್ ವಾಟರ್ ನೋಯುತ್ತಿರುವ ಗಂಟಲನ್ನು ಕಡಿಮೆ ಮಾಡಲು ಪರಿಣಾಮಕಾರಿ ಆಗಿದೆ.
ಇದನ್ನೂ ಓದಿ: y: ದೇಹದ ಆರೋಗ್ಯ ಕಾಪಾಡುವ ಸೌತೆಕಾಯಿ ಸೌಂದರ್ಯವನ್ನೂ ಹೆಚ್ಚಿಸುತ್ತದೆ! Cucumber for Beauty:
ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ
ಆಯುರ್ವೇದದ ಪ್ರಕಾರ ರೋಸ್ ವಾಟರ್ ಬಳಕೆಯು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆ ನಿವಾರಿಸುತ್ತದೆ. ಜೀರ್ಣಾಂಗ ವ್ಯವಸ್ಥೆ ಮತ್ತು ಸಮಸ್ಯೆ ಕಡಿಮೆ ಮಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ