• Home
  • »
  • News
  • »
  • lifestyle
  • »
  • Peas Benefits: ರುಚಿಗೆ ಮಾತ್ರವಲ್ಲ, ಚರ್ಮದ ಆರೋಗ್ಯ ಮತ್ತು ತೂಕ ನಿಯಂತ್ರಣಕ್ಕೂ ಬೇಕು ಬಟಾಣಿ ಕಾಳು

Peas Benefits: ರುಚಿಗೆ ಮಾತ್ರವಲ್ಲ, ಚರ್ಮದ ಆರೋಗ್ಯ ಮತ್ತು ತೂಕ ನಿಯಂತ್ರಣಕ್ಕೂ ಬೇಕು ಬಟಾಣಿ ಕಾಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬಟಾಣಿ ಕಾಳು ಕೆಲವರು ಸೇವಿಸಲು ಬೇಸರ ಮಾಡಿಕೊಳ್ಳುತ್ತಾರೆ. ತರಕಾರಿಗಳಿಂದ ಬಟಾಣಿ ಕಾಳು ತೆಗೆದು ಊಟ ಮಾಡುತ್ತಾರೆ ಕೆಲವರು. ಬಟಾಣಿ ಕಾಳು ಇಷ್ಟಪಡದವರಲ್ಲಿ ನೀವೂ ಒಬ್ಬರೇ ನಿಮ್ಮ ಉತ್ತರ ಹೌದು ಎಂದಾದರೆ ಹಾಗೆ ಮಾಡುವ ಮೊದಲು ಬಟಾಣಿಗಳ ಆರೋಗ್ಯ ಪ್ರಯೋಜನಗಳ ಬಗ್ಗೆ ಮೊದಲು ತಿಳಿಯಿರಿ.

  • Share this:

    ಚಳಿಗಾಲ (Winter) ಸಮೀಪಿಸುತ್ತಿದ್ದಂತೆ ತರಕಾರಿ ಅಂಗಡಿಗಳಲ್ಲಿ (Vegetable Shops) ವಟಾಣಿ (Peas) ಕಾಳು ಹೆಚ್ಚು ಕಾಣಿಸಿಕೊಳ್ಳುತ್ತದೆ. ತರಕಾರಿ ಮಾರುಕಟ್ಟೆಯಲ್ಲಿ (Market) ಹಸಿ ವಟಾಣಿ ಕಾಯಿಗಳು ಲಭ್ಯ ಇರುತ್ತವೆ. ಹಸಿ ವಟಾಣಿ ಕಾಳುಗಳ ಸೇವನೆ ಆರೋಗ್ಯಕ್ಕೆ ಹಲವು ರೀತಿ ಪ್ರಯೋಜನ (Benefits) ನೀಡುತ್ತವೆ. ಇದಾದ ನಂತರ ಆಲೂಗಡ್ಡೆ ಮತ್ತು ಬಟಾಣಿ ಸೇರಿಸಿ ಹಲವು ರುಚಿಕರ ಖಾದ್ಯಗಳನ್ನು ತಯಾರಿಸಿ ಸೇವಿಸಲಾಗುತ್ತದೆ. ಮಟರ್ ಪನೀರ್ ಸಬ್ಜಿ, ಮಟರ್ ಕಚೋರಿಸ್ ಮತ್ತು ಮಟರ್ ಪರಾಠ ತಯಾರಿಸುವ ಪ್ರಕ್ರಿಯೆ ಮನೆಗಳಲ್ಲಿ ಪ್ರಾರಂಭ ಆಗುತ್ತದೆ. ಪ್ರತಿ ತರಕಾರಿ ಜೊತೆ ಬಟಾಣಿ ಕಾಳುಗಳನ್ನು ಸೇರಿಸುವುದು ರೂಢಿಯಲ್ಲಿದೆ. ಮಟರ್ ರೈಸ್ ತುಂಬಾ ಜನಪ್ರಿಯವಾಗಿದೆ.


    ಮಟರ್ ರೈಸ್ ಸಾಕಷ್ಟು ಪೋಷಕಾಂಶ ನೀಡುತ್ತದೆ. ಬಟಾಣಿ ಕಾಳು ಕೆಲವರು ಸೇವಿಸಲು ಬೇಸರ ಮಾಡಿಕೊಳ್ಳುತ್ತಾರೆ. ತರಕಾರಿಗಳಿಂದ ಬಟಾಣಿ ಕಾಳು ತೆಗೆದು ಊಟ ಮಾಡುತ್ತಾರೆ ಕೆಲವರು. ಬಟಾಣಿ ಕಾಳು ಇಷ್ಟಪಡದವರಲ್ಲಿ ನೀವೂ ಒಬ್ಬರೇ? ನಿಮ್ಮ ಉತ್ತರ ಹೌದು ಎಂದಾದರೆ ಹಾಗೆ ಮಾಡುವ ಮೊದಲು, ಬಟಾಣಿಗಳ ಆರೋಗ್ಯ ಪ್ರಯೋಜನಗಳ ಬಗ್ಗೆ ಮೊದಲು ತಿಳಿಯಿರಿ.


    ಬಟಾಣಿ ಕಾಳು ಕಿರುಧಾನ್ಯಗಳಲ್ಲಿ ಆರೋಗ್ಯದ ದೊಡ್ಡ ನಿಧಿ ಅಡಗಿದೆ. ಪೌಷ್ಟಿಕ ತಜ್ಞ ಲೊವ್ನೀತ್ ಬಾತ್ರಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬಟಾಣಿಗಳ ಪ್ರಯೋಜನಗಳ ಬಗ್ಗೆ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಬಟಾಣಿ ಕಾಳುಗಳ ಸೇವನೆ ಮಾಡದಿದ್ದರೆ


    ಇದನ್ನೂ ಓದಿ: ಅಜೀರ್ಣ ಸಮಸ್ಯೆಗೆ ಈ ಕಾಳು ಪರಿಹಾರ ಅನ್ನುತ್ತೆ ಆಯುರ್ವೇದ!


    ನೀವು ಯಾವೆಲ್ಲಾ ಆರೋಗ್ಯ ಸೌಲಭ್ಯಗಳಿಂದ ವಂಚಿತರಾಗುತ್ತೀರಿ ಎಂಬುದನ್ನು ಹೇಳಿದ್ದಾರೆ. ಬಟಾಣಿ ಧಾನ್ಯಗಳ ಕೆಲವು ವಿಶೇಷ ಆರೋಗ್ಯ ಪ್ರಯೋಜನ ನಾವು ತಿಳಿಯೋಣ.


    ರಕ್ತದ ಸಕ್ಕರೆ ಹೆಚ್ಚುವ ಭಯವಿಲ್ಲ


    ಇತರೆ ಅನೇಕ ತರಕಾರಿಗಳಿಗೆ ಹೋಲಿಸಿದರೆ ಬಟಾಣಿಗಳು ಕಡಿಮೆ ಗ್ಲೈಸೆಮಿಕ್ ಸೂಚಿ ಹೊಂದಿವೆ. ಇದರಿಂದ ರಕ್ತದ ಸಕ್ಕರೆ ಹೆಚ್ಚುವ ಭಯವಿಲ್ಲ. ಬಟಾಣಿಯಲ್ಲಿ ನಾರಿನಂಶ ಹೇರಳವಾಗಿದೆ. ಬಟಾಣಿಯಲ್ಲಿ ಪ್ರೋಟೀನ್ ಕೊರತೆ ಇಲ್ಲ. ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸಲು ಇದು ಸುಲಭವಾದ ಕಾರಣಗಳಲ್ಲಿ ಒಂದಾಗಿದೆ.


    ಚರ್ಮದ ಆರೋಗ್ಯಕ್ಕೆ ಸಹಕಾರಿ


    ಬಟಾಣಿಯಲ್ಲಿ ಕೆಲವು ಪೋಷಕಾಂಶಗಳು ಇವೆ. ಇದು ತ್ವಚೆಯನ್ನು ಆರೋಗ್ಯಕರ ಆಗಿಸುತ್ತದೆ. ಬಟಾಣಿ ಕಾಳು ಬಿ6, ವಿಟಮಿನ್ ಸಿ ಮತ್ತು ಫೋಲಿಕ್ ಆಮ್ಲ ಹೊಂದಿದೆ. ಈ ಎಲ್ಲಾ ಪೋಷಕಾಂಶಗಳು ಉರಿಯೂತ ಕಡಿಮೆ ಮಾಡುತ್ತದೆ. ಇದು ಸ್ವತಂತ್ರ ರಾಡಿಕಲ್ಗಳಿಂದ ಚರ್ಮಕ್ಕೆ ಹಾನಿ ಆಗದಂತೆ ತಡೆಯುತ್ತದೆ.


    ಪ್ರೋಟೀನ್ ಅತ್ಯುತ್ತಮ ಮೂಲ


    ಬಟಾಣಿ ಕಾಳು ಪ್ರೋಟೀನ್‌ನ ಅತ್ಯುತ್ತಮ ಮೂಲವಾಗಿದೆ. ಪ್ರೋಟೀನ್ ಮಾತ್ರ ಸಸ್ಯ ಆಧಾರಿತ ಪ್ರೋಟೀನ್ಗಳನ್ನು ಅವಲಂಬಿಸಿರುವವರಿಗೆ ಬಟಾಣಿ ಕಾಳು ಅತ್ಯುತ್ತಮ ಆಯ್ಕೆ ಆಗಿದೆ. ಬಟಾಣಿ ಕಾಳುಗಳಲ್ಲಿ ನಾರಿನ ಪ್ರಮಾಣವೂ ಉತ್ತಮ ಆಗಿದೆ. ಪ್ರಾಣಿ ಮೂಲದ ಪ್ರೊಟೀನ್ ತೆಗೆದುಕೊಳ್ಳದವರು ಬಟಾಣಿ ಕಾಳು ತಿನ್ನುವುದರಿಂದ ಸಾಕಷ್ಟು ಪ್ರೊಟೀನ್ ಸಿಗುವುದು ಇದೇ ಕಾರಣಕ್ಕೆ ಆಗಿದೆ.


    ಕೊಲೆಸ್ಟ್ರಾಲ್ ನ್ನು ನಿಯಂತ್ರಿಸುತ್ತದೆ


    ಬಟಾಣಿ ತಿನ್ನುವುದರಿಂದ ಕೊಲೆಸ್ಟ್ರಾಲ್ ನಿಯಂತ್ರಣ ಉಳಿಯುತ್ತದೆ. ಬಟಾಣಿಯಲ್ಲಿ ನಿಯಾಸಿನ್ ಎಂಬ ಅಂಶ ಹೇರಳ ಆಗಿದೆ. ಈ ಅಂಶವು ಟ್ರೈಗ್ಲಿಸರೈಡ್‌ಗಳ ರಚನೆ ತಡೆಯುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡುವ ಮೂಲಕ ಉತ್ತಮ ಕೊಲೆಸ್ಟ್ರಾಲ್ ನ್ನು ಹೆಚ್ಚಿಸಲು ಬಟಾಣಿ ಕಾಳು ಸಹಕಾರಿ.


    ಜೀರ್ಣಕ್ರಿಯೆಗೆ ಉತ್ತಮ


    ಬಟಾಣಿ ಕಾಳು ಜೀರ್ಣಕ್ರಿಯೆಗೆ ಉತ್ತಮವೆಂದು ಪರಿಗಣಿಸಲಾಗಿದೆ. ಬಟಾಣಿಯಲ್ಲಿರುವ ನಾರಿನ ಗುಣಲಕ್ಷಣಗಳು ಜೀರ್ಣಾಂಗ ವ್ಯವಸ್ಥೆ ಸುಧಾರಿಸಲು ಸಹಾಯ ಮಾಡುತ್ತದೆ. ಅವುಗಳನ್ನು ಕರುಳು ಮತ್ತು ಹೊಟ್ಟೆಗೆ ಉತ್ತಮವೆಂದು ಪರಿಗಣಿಸಲಾಗುತ್ತದೆ. ಮಲಬದ್ಧತೆ ಮತ್ತು ಗ್ಯಾಸ್ ಸಮಸ್ಯೆ ಕಡಿಮೆ ಮಾಡಲು ಬಟಾಣಿ ಸೇವನೆ ಪ್ರಯೋಜನಕಾರಿ.


    ಇದನ್ನೂ ಓದಿ: ಹಣ್ಣುಗಳ ಸೇವನೆ ಎಷ್ಟು ಅನುಕೂಲಕರ? ಇವುಗಳ ಜೊತೆ ಬೇರೆ ಏನನ್ನು ತಿನ್ನಬೇಕು?


    ಬೊಜ್ಜು ಕಡಿಮೆ ಮಾಡುತ್ತದೆ


    ಫೈಬರ್ ಗುಣಲಕ್ಷಣಗಳು ಹಸಿರು ಬಟಾಣಿಗಳಲ್ಲಿ ಕಂಡು ಬರುತ್ತವೆ. ಬಟಾಣಿ ತೂಕ ನಷ್ಟಕ್ಕೆ ಪ್ರಯೋಜನಕಾರಿ. ಬಟಾಣಿ ಕಾಳುಗಳಲ್ಲಿ ಕ್ಯಾಲೊರಿ ಪ್ರಮಾಣ ತುಂಬಾ ಕಡಿಮೆ ಆಗಿದೆ. ಬಟಾಣಿ ಕಾಳು ತಿನ್ನುವುದರಿಂದ ಹೊಟ್ಟೆ ತುಂಬಾ ಹೊತ್ತು ತುಂಬಿದ ಅನುಭವವಾಗುತ್ತದೆ. ಇದರಿಂದ ನಾವು ಅತಿಯಾಗಿ ತಿನ್ನುವುದನ್ನು ತಪ್ಪಿಸಬಹುದು ಮತ್ತು ತೂಕ ನಿಯಂತ್ರಿಸಬಹುದು.

    Published by:renukadariyannavar
    First published: