• Home
  • »
  • News
  • »
  • lifestyle
  • »
  • Fruits Smoothie: ಸ್ಟ್ರಾಬೆರಿ ಮತ್ತು ಪೇರಳೆ ಸ್ಮೂಥಿ ಸೇವಿಸಿ, ಚರ್ಮದ ಆರೋಗ್ಯದ ಜೊತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

Fruits Smoothie: ಸ್ಟ್ರಾಬೆರಿ ಮತ್ತು ಪೇರಳೆ ಸ್ಮೂಥಿ ಸೇವಿಸಿ, ಚರ್ಮದ ಆರೋಗ್ಯದ ಜೊತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸ್ಟ್ರಾಬೆರಿ ಮತ್ತು ಪೇರಳೆ ಹಣ್ಣಿನ ಹೆಸರು ಕೇಳಿದ್ರೆ ಎಲ್ಲರೂ ತಿನ್ನಲು ಮುಂದಾಗ್ತಾರೆ. ಈ ಹಣ್ಣುಗಳನ್ನು ಬರಿ ತಿನ್ನೋದೊಂದೇ ಅಲ್ಲ ಜ್ಯೂಸ್ ಮತ್ತು ಸ್ಮೂಥಿ ರೂಪದಲ್ಲೂ ಸೇವನೆ ಮಾಡಬಹುದು. ಸ್ಟ್ರಾಬೆರಿ ಮತ್ತು ಪೇರಳೆ ಹಣ್ಣ ಸೂಪರ್‌ ಫುಡ್ ಆಗಿದೆ.

  • Share this:

    ಬೇಸಿಗೆಯಲ್ಲಿ (Summer) ಅನೇಕ ಪಾನೀಯಗಳು ಮತ್ತು ಸ್ಮೂಥಿಗಳನ್ನು ಸೇವಿಸುವ ಮೂಲಕ ಜನರು ದೇಹವನ್ನು (Body) ತಂಪಾಗಿ ಇಟ್ಟುಕೊಳ್ತಾರೆ. ಹಾಗೆಯೇ ದೇಹವನ್ನು ಹೈಡ್ರೇಟ್ ಆಗಿರಿಸುತ್ತಾರೆ. ಜೊತೆಗೆ ಪಾನೀಯ ಮತ್ತು ಜ್ಯೂಸ್ (Juice) ಹಾಗೂ ಸ್ಮಥಿಗಳು ದೇಹಕ್ಕೆ ತಾಜಾತನವನ್ನು ನೀಡುತ್ತವೆ. ಈಗ ಚಳಿಗಾಲ (Winter) ಪ್ರಾರಂಭವಾಗಿದೆ. ಜೊತೆಗೆ ಹಲವು ಹಣ್ಣುಗಳು ಮತ್ತು ತರಕಾರಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅದರಲ್ಲಿ ಪೇರಳೆ ಹಣ್ಣು ಕೂಡ ಒಂದು. ಈಗ ನೀವು ಮಾರುಕಟ್ಟೆಯಲ್ಲಿ ಎಲ್ಲಿ ಬೇಕಾದ್ರೂ ಪೇರಳೆ ಹಣ್ಣು ಮಾರುವವರನ್ನು ಕಾಣಬಹುದು. ಪೇರಳೆ ಹಣ್ಣು ಅನೇಕ ಪ್ರಮುಖ ಪೋಷಕಾಂಶಗಳಲ್ಲಿ (Nutrients) ಸಮೃದ್ಧವಾಗಿದೆ. ಮತ್ತು ಪೇರಳೆ ಹಣ್ಣನ್ನು ವಿವಿಧ ರುಚಿಕರ (Sweet) ಪಾಕ ವಿಧಾನಗಳಲ್ಲಿ ಬಳಕೆ ಮಾಡಲಾಗುತ್ತದೆ.


    ಸ್ಟ್ರಾಬೆರಿ ಮತ್ತು ಪೇರಳೆ ಹಣ್ಣು


    ಸ್ಟ್ರಾಬೆರಿ ಮತ್ತು ಪೇರಳೆ ಹಣ್ಣಿನ ಹೆಸರು ಕೇಳಿದ್ರೆ ಎಲ್ಲರೂ ತಿನ್ನಲು ಮುಂದಾಗ್ತಾರೆ. ಸ್ಟ್ರಾಬೆರಿ ಮತ್ತು ಪೇರಲ ಹಣ್ಣನ್ನು ಹಸಿಯಾಗಿ ತಿನ್ನಬಹುದು. ಇಲ್ಲವೇ ಜ್ಯೂಸ್ ಮತ್ತು ಸ್ಮೂಥಿ ರೂಪದಲ್ಲೂ ಸೇವನೆ ಮಾಡಬಹುದು. ಸ್ಟ್ರಾಬೆರಿ ಮತ್ತು ಪೇರಲ ಹಣ್ಣ ಸೂಪರ್‌ ಫುಡ್ ಆಗಿದೆ. ಸ್ಟ್ರಾಬೆರಿ ಮತ್ತು ಪೇರಲ ಹಣ್ಣಿನಲ್ಲಿ ಹೇರಳವಾಗಿರುವ ಪೋಷಕಾಂಶಗಳು ಒಟ್ಟಾರೆ ಆರೋಗ್ಯಕ್ಕೆ ತುಂಬಾ ಪ್ರಯೋಜನ ನೀಡುತ್ತವೆ.


    ಈ ಚಳಿಗಾಲದಲ್ಲಿ ಹೆಚ್ಚಿನ ಜನರು ಶೀತ ಮತ್ತು ಗಂಟಲು ನೀವು ಅನುಭವಿಸುತ್ತಾರೆ. ಇದನ್ನು ಕಡಿಮೆ ಮಾಡಲು ನೀವು ಸ್ಟ್ರಾಬೆರಿ ಮತ್ತು ಪೇರಲ ಹಣ್ಣಿನಿಂದ ತಯಾರಿಸಿದ ತುಂಬಾ ಟೇಸ್ಟಿ ಮತ್ತು ಆರೋಗ್ಯಕರ ಸ್ಮೂಥಿ ಮಾಡಿ ಸೇವಿಸುವುದು ಉತ್ತಮ. ಹಾಗಾದ್ರೆ ಇಂದು ನಾವು ಕಾಲೋಚಿತ ಹಣ್ಣುಗಳಾದ ಸ್ಟ್ರಾಬೆರಿ ಮತ್ತು ಪೇರಲ ಹಣ್ಣು ಬದಲಾಗುತ್ತಿರುವ ಋತುವಿನಲ್ಲಿ ಆರೋಗ್ಯಕ್ಕೆ ಹೇಗೆ ಸಹಕಾರಿ ಎಂದು ನೋಡೋಣ.


    ಇದನ್ನೂ ಓದಿ: ಮಹಿಳೆಯರ ಆರೋಗ್ಯಕ್ಕೆ ಸಮಸ್ಯೆಯಂತೆ ಈ ಮಧ್ಯಂತರ ಉಪವಾಸ


    ಆರೋಗ್ಯಕರ ಸ್ಟ್ರಾಬೆರಿ ಮತ್ತು ಪೇರಲ ಹಣ್ಣಿನ ಸ್ಮೂಥಿ ರೆಸಿಪಿ ಹೀಗಿದೆ


    ಬೇಕಾಗುವ ಪದಾರ್ಥಗಳು


    ಆರರಿಂದ ಎಂಟು ತಾಜಾ ಸ್ಟ್ರಾಬೆರಿ, ಎರಡು ಗುಲಾಬಿ ಬಣ್ಣದ ದೊಡ್ಡ ಪೇರಲ ಹಣ್ಣು, ಒಂದು ಲೋಟ ತೆಂಗಿನ ಹಾಲು, ರುಚಿಗೆ ಜೇನುತುಪ್ಪ ಅಥವಾ ಮೇಪಲ್ ಸಿರಪ್, ಅಲಂಕಾರಕ್ಕಾಗಿ ನಾಲ್ಕು ಬಾದಾಮಿ,


    ಸ್ಟ್ರಾಬೆರಿ ಮತ್ತು ಪೇರಳೆ ಹಣ್ಣಿನ ಸ್ಮೂಥಿ ಮಾಡವ ವಿಧಾನ


    ಮೊದಲು ಸ್ಟ್ರಾಬೆರಿಯನ್ನು ಸ್ಲೈಸ್ ಮಾಡಿ ಮತ್ತು ಪೇರಲ ಹಣ್ಣನ್ನ ಮಧ್ಯದಿಂದ ಕತ್ತರಿಸಿ ಅದರ ಬೀಜಗಳನ್ನು ತೆಗೆಯಿರಿ. ಈಗ ಕತ್ತರಿಸಿದ ಪೇರಲ, ಸ್ಟ್ರಾಬೆರಿ, ಹಾಲು, ಜೇನುತುಪ್ಪ / ಮೇಪಲ್ ಸಿರಪ್ ಅನ್ನು ಮಿಕ್ಸರ್ ಜಾರ್ ನಲ್ಲಿ ಹಾಕಿ ಚೆನ್ನಾಗಿ ರುಬ್ಬಿರಿ. ನಂತರ ಅದನ್ನು ಗ್ಲಾಸ್‌ ನಲ್ಲಿ ತೆಗೆದುಕೊಂಡು ಅದರ ಮೇಲೆ ಸ್ವಲ್ಪ ಬಾದಾಮಿ ತುಂಡು ಹಾಕಿ ಹಾಯಾಗಿ ಸೇವಿಸಿ.


    ಸ್ಟ್ರಾಬೆರಿ ಮತ್ತು ಪೇರಳೆ ಸ್ಮೂಥಿ ಆರೋಗ್ಯ ಪ್ರಯೋಜನಗಳು


    ವಿಟಮಿನ್ ಸಿ


    ಸ್ಟ್ರಾಬೆರಿ ಮತ್ತು ಪೇರಲ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ಚರ್ಮದ ಆರೋಗ್ಯ ಕಾಪಾಡಲು ಸಹಕಾರಿ ಆಗಿದೆ. ಹಾಗೆಯೇ ಎರಡೂ ಹಣ್ಣುಗಳು ಕಾಲೋಚಿತ ಸೋಂಕುಗಳ ವಿರುದ್ಧ ಹೋರಾಡಲು ಶಕ್ತಿ ನೀಡುತ್ತದೆ.


    ಪೋಷಕಾಂಶಗಳು


    ಪೇರಲ ಮತ್ತು ಸ್ಟ್ರಾಬೆರಿ ಎರಡೂ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಅವು ಉತ್ಕರ್ಷಣ ನಿರೋಧಕ, ಪೊಟ್ಯಾಸಿಯಮ್ ಮತ್ತು ಫೈಬರ್ ಅನ್ನು ಹೊಂದಿವೆ. ಇದು ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನಕಾರಿ ಆಗಿದೆ. ಜೊತೆಗೆ ತೆಂಗಿನ ಹಾಲಿನಲ್ಲಿ ಕ್ಯಾಲ್ಸಿಯಂ ಮತ್ತು ಸ್ವಲ್ಪ ಪ್ರಮಾಣದ ಪ್ರೋಟೀನ್ ಮತ್ತು ಉತ್ತಮ ಕೊಬ್ಬು ಇದೆ. ಇದು ದೇಹಕ್ಕೆ ಸರಿಯಾದ ಪ್ರಮಾಣದ ಶಕ್ತಿ ನೀಡುತ್ತದೆ.


    ಇದನ್ನೂ ಓದಿ: ಮಧುಮೇಹ ನಿಯಂತ್ರಣಕ್ಕೆ ಈ ಒಂದು ಮೂಲಿಕೆ ಪರಿಣಾಮಕಾರಿ!


    ಮಧುಮೇಹ ಸ್ನೇಹಿ ಸ್ಮೂಥಿ


    ಪೇರಲ ಮತ್ತು ಸ್ಟ್ರಾಬೆರಿ ಎರಡರಲ್ಲೂ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಇದೆ. ಎರಡೂ ಹಣ್ಣುಗಳು ಮಧುಮೇಹ ನಿಯಂತ್ರಣಕ್ಕೆ ಸಹಕಾರಿ. ಇದು ರಕ್ತದ ಸಕ್ಕರೆ ಹೆಚ್ಚಳವಾಗಲ್ಲ.

    Published by:renukadariyannavar
    First published: