ಚಾಕೊಲೇಟ್ ತಿನ್ನೋಕೆ ಯಾರಿಗೆ ತಾನೇ ಇಷ್ಟವಿಲ್ಲ? ಚಾಕೋಲೇಟ್ ಮಕ್ಕಳಿಂದ ವೃದ್ಧರವರೆಗೆ ಎಲ್ಲರಿಗೂ ಇಷ್ಟ. ಕೆಲವು ಅನಾರೋಗ್ಯದಲ್ಲಿ ಡಾರ್ಕ್ ಚಾಕೋಲೇಟ್ (Dark Chocolate) ಸೇವನೆ ತುಂಬಾ ಆರೋಗ್ಯಕ್ಕೆ (Health) ಪ್ರಯೋಜನಕಾರಿ (Benefits) ಎಂದು ಹೇಳಲಾಗುತ್ತದೆ. ಆದರೆ ಅತಿಯಾದ ಸಕ್ಕರೆ ಚಾಕೊಲೇಟ್ ಸೇವನೆ ಆರೋಗ್ಯಕ್ಕೆ ಸಾಕಷ್ಟು ಹಾನಿ ಉಂಟು ಮಾಡುತ್ತದೆ. ಚಾಕೋಲೇಟ್ ಕೇವಲ ತಿನ್ನೋಕೆ ಮಾತ್ರವಲ್ಲದೇ ಫೇಸ್ ಪ್ಯಾಕ್ ಗೆ (Face Pack) ಸಹ ಬಳಕೆ ಮಾಡ್ತಾರೆ. ಇತ್ತೀಚಿನ ದಿನಗಳಲ್ಲಿ ಹಲವು ರೀತಿಯ ಫೇಸ್ ಮಾಸ್ಕ್ ಗಳು ಮಾರುಕಟ್ಟೆಗೆ ಬಂದಿರುವುದು ನಿಮಗೆ ಗೊತ್ತೇ ಇದೆ. ಈ ಫೇಸ್ ಮಾಸ್ಕ್ ಗಳಲ್ಲಿ ಸಖತ್ ಫೇಮಸ್ ಆಗಿರೋದು ಚಾಕೊಲೇಟ್ ಫೇಸ್ ಮಾಸ್ಕ್.
ಮುಖದ ಅಂದಕ್ಕೆ ಹಚ್ಚಿರಿ ಚಾಕೋಲೇಟ್ ಫೇಸ್ ಮಾಸ್ಕ್
ಮೊಡವೆ, ಕಲೆ, ಮುಖ ಬಿರಿಯುವುದು, ಪಿಗ್ಮೆಂಟೇಶನ್ ಸಮಸ್ಯೆ ತ್ವಚೆಯ ಅಂದವನ್ನು ಹಾಳು ಮಾಡುತ್ತವೆ. ಹೊಳೆಯುವ ಚರ್ಮಕ್ಕಾಗಿ ನೀವು ಚಾಕೋಲೇಟ್ ಫೇಸ್ ಮಾಸ್ಕ್ ಅನ್ವಯಿಸಿ. ಹಾಗಾದ್ರೆ ಇಂದು ನಾವು ಚಾಕೊಲೇಟ್ ಫೇಸ್ ಮಾಸ್ಕ್ ತಯಾರಿಸುವ ವಿಧಾನದ ಬಗ್ಗೆ ತಿಳಿಯೋಣ.
ಚರ್ಮದ ಆರೋಗ್ಯಕ್ಕೆ ಚಾಕೊಲೇಟ್ ಫೇಸ್ ಮಾಸ್ಕ್ ಎಷ್ಟು ಪ್ರಯೋಜನಕಾರಿ?
ಚಾಕೊಲೇಟ್ ಚರ್ಮದ ಕೋಶಗಳಿಗೆ ಹಾನಿ ಮಾಡದಂತೆ ತಡೆಯುತ್ತದೆ. ತಜ್ಞರ ಪ್ರಕಾರ, ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ಚಾಕೊಲೇಟ್‌ಗಳಿಗಿಂತ ಡಾರ್ಕ್ ಚಾಕೊಲೇಟ್ ಸೇವನೆ ಹೆಚ್ಚು ಪ್ರಯೋಜನಕಾರಿ. ಚರ್ಮದ ಮೇಲೆ ಚಾಕೊಲೇಟ್ ಬಳಕೆ ವೇಳೆ ಡಾರ್ಕ್ ಚಾಕೊಲೇಟ್ ಹೆಚ್ಚು ಪರಿಣಾಮಕಾರಿಯಾಗಿದೆ ಅಂತಾರೆ ತಜ್ಞರು.
ಸಿದ್ಧಪಡಿಸಿದ ಚಾಕೊಲೇಟ್ ಅಷ್ಟೇ ಅಲ್ಲದೇ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಕೋಕೋ ಪೌಡರ್ ಕೂಡ ಚರ್ಮಕ್ಕಾಗಿ ಅದ್ಭುತ ಪ್ರಯೋಜನ ನೀಡುತ್ತದೆ. ಉತ್ಕರ್ಷಣ ನಿರೋಧಕಗಳು ಚರ್ಮದ ಕೋಶಗಳಿಗೆ ಹಾನಿ ಆಗದಂತೆ ತಡೆಯುತ್ತದೆ ಮತ್ತು ಕಾಲಜನ್ ಉತ್ಪಾದನೆ ಹೆಚ್ಚಿಸುತ್ತದೆ. ಇದು ಚರ್ಮ ಹೊಳೆಯಲು ಸಹಾಯ ಮಾಡುತ್ತದೆ.
ಡಾರ್ಕ್ ಚಾಕೊಲೇಟ್‌ನಲ್ಲಿ ಸತು ಇದೆ. ಇದು ಸ್ಪಷ್ಟ ಮತ್ತು ನಯವಾದ ಚರ್ಮಕ್ಕೆ ಸಹಕಾರಿ. ಸೂರ್ಯನ ಹಾನಿಕಾರಕ ಕಿರಣಗಳ ಪರಿಣಾಮಗಳಿಂದ ರಕ್ಷಿಸುತ್ತದೆ. ಇದು ಚರ್ಮದ ರಕ್ತದ ಹರಿವು ಹೆಚ್ಚಿಸುತ್ತದೆ. ಚರ್ಮದ ಜಲಸಂಚಯನಕ್ಕೆ ಇದು ತುಂಬಾ ಪ್ರಯೋಜನಕಾರಿ. ಮನೆಯಲ್ಲಿಯೇ ಚಾಕೊಲೇಟ್ ಫೇಸ್ ಮಾಸ್ಕ್ ತಯಾರಿಸಿ ಅನ್ವಯಿಸಿದರೆ ಉತ್ತಮ.
ಡಾರ್ಕ್ ಚಾಕೊಲೇಟ್ ಮತ್ತು ಜೇನುತುಪ್ಪದ ಫೇಸ್ ಮಾಸ್ಕ್
ಮೊದಲು ಡಾರ್ಕ್ ಚಾಕೊಲೇಟ್ ಅನ್ನು ಕರಗಿಸಿ. ಬಟ್ಟಲಿಗೆ ಹಾಕಿರಿ. ಅದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಮಿಕ್ಸ್ ಮಾಡಿ, ಚೆನ್ನಾಗಿ ಮುಖ ತೊಳೆದು ಒರೆಸಿ ನಂತರ ಈ ಪೇಸ್ಟ್ ಅನ್ವಯಿಸಿ. 20 ನಿಮಿಷದ ನಂತರ ಸಾಮಾನ್ಯ ನೀರಿನಿಂದ ಸ್ವಚ್ಛಗೊಳಿಸಿ.
ಕೋಕೋ ಪೌಡರ್ ಮತ್ತು ಕ್ರೀಮ್ ಫೇಸ್ ಪ್ಯಾಕ್
ಕೋಕೋ ಪೌಡರ್ ಮತ್ತು ಹಾಲಿನ ಕೆನೆ ಚೆನ್ನಾಗಿ ಮಿಶ್ರಣ ಮಾಡಿ. ಪೇಸ್ಟ್ ಅನ್ನು ಚರ್ಮದ ಮೇಲೆ ಹಚ್ಚಿ ಮತ್ತು 30 ನಿಮಿಷ ಬಿಡಿ. ನಂತರ ಸಾಮಾನ್ಯ ನೀರಿನಿಂದ ಸ್ವಚ್ಛಗೊಳಿಸಿ.
ಚಾಕೊಲೇಟ್ ಮತ್ತು ಹಣ್ಣಿನ ಫೇಸ್ ಮಾಸ್ಕ್
ಕೋಕೋ ಪೌಡರ್ ಅಥವಾ ಕರಗಿದ ಡಾರ್ಕ್ ಚಾಕೊಲೇಟ್ ಅನ್ನು ಬ್ಲೆಂಡರ್ನಲ್ಲಿ ತೆಗೆದುಕೊಳ್ಳಿ. ಇದಕ್ಕೆ ಸ್ಟ್ರಾಬೆರಿ, ಬಾಳೆಹಣ್ಣು ಮತ್ತು ಕೆಲವು ಕಿತ್ತಳೆ ತುಂಡು ಸೇರಿಸಿ ಮಿಶ್ರಣ ಮಾಡಿ. ಮುಖಕ್ಕೆ ಹಚ್ಚಿರಿ. ನಂತರ ಮಸಾಜ್ ಮಾಡಿ.
ಇದನ್ನೂ ಓದಿ: ಹೊಟ್ಟೆಯಲ್ಲಿ ಇಲಿ ಓಡಾಡಿದಂತೆ ಅನಿಸುತ್ತಾ? ಹಾಗಾದ್ರೆ ಈ ಹೆಲ್ದೀ ಡ್ರಿಂಕ್ ಕುಡಿಯಿರಿ
20 ನಿಮಿಷದ ನಂತರ ಉಗುರು ಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸಿ. ಇದು ಮುಖದ ಅಂದ ಹೆಚ್ಚು ಮಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ