Skin Care: ಹಣ್ಣಿನ ಫೇಸ್‌ ಮಾಸ್ಕ್ ಹಾಕಿ, ಮುಖದಲ್ಲಿನ ಕಪ್ಪು ಕಲೆ ಹೋಗಲಾಡಿಸಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಚರ್ಮವು ಕಪ್ಪು ಕಲೆ, ವಾತಾವರಣದ ಕಲುಷಿತ ಅಂಶಗಳಿಂದ ಹಾಳಾಗುವುದು ಸಹಜ. ಅದರಲ್ಲೂ ಬಿಸಿಲಿನಿಂದ ಮುಖದ ಅಂದ ಹಾಳಾಗುತ್ತದೆ. ಕೆಲವು ಹಣ್ಣುಗಳ ಮಾಸ್ಕನ್ನು ಮನೆಯಲ್ಲೇ ಹಾಕುವುದು ಚರ್ಮಕ್ಕೆ ತಾಜಾತನ ಮತ್ತು ಹೊಳಪು ನೀಡುತ್ತದೆ. ಜೊತೆಗೆ ಚರ್ಮದ ಆರೈಕೆಗೆ ಇದು ಸಾಕಷ್ಟು ಸಹಾಯ ಮಾಡುತ್ತದೆ. ಅವುಗಳ ಬಗ್ಗೆ ನೋಡೋಣ.

ಮುಂದೆ ಓದಿ ...
  • Share this:

    ತುಂಬಾ ಜನರು (People) ಬಿಸಿಲಿಗೆ ಹೋಗಲು ಭಯ ಪಡ್ತಾರೆ. ತಮ್ಮ ತ್ವಚೆ (Skin) ಮೊದಲೇ ಸೂಕ್ಷ್ಮ, ಎಲ್ಲಿ ಕಪ್ಪು ಕಲೆ (Black Spots), ಮೊಡವೆ (Acne), ಧೂಳು ಆವರಿಸಿ ಮತ್ತಷ್ಟು ಹಾಳಾಗಿ ಬಿಡುತ್ತದೋ ಎಂದು ತಲೆ ಬಿಸಿ ಮಾಡಿಕೊಳ್ತಾರೆ. ಆದರೆ ಕೆಲವು ಹಣ್ಣುಗಳ ಮಾಸ್ಕ್ (Fruits Mask) ನ್ನು ಮನೆಯಲ್ಲೇ ಹಾಕುವುದು ಚರ್ಮಕ್ಕೆ ತಾಜಾತನ ಮತ್ತು ಹೊಳಪು ನೀಡುತ್ತದೆ. ಜೊತೆಗೆ ಚರ್ಮದ ಆರೈಕೆಗೆ ಇದು ಸಾಕಷ್ಟು ಸಹಾಯ ಮಾಡುತ್ತದೆ. ಅವುಗಳ ಬಗ್ಗೆ ನೋಡೋಣ. ಚರ್ಮವು ಮಂದ ಮತ್ತು ಕಪ್ಪು ಕಲೆ, ಹಾಗೂ ವಾತಾವರಣದ ಕಲುಷಿತ ಅಂಶಗಳಿಂದ ಹಾಳಾಗುವುದು ಸಹಜ. ಅದರಲ್ಲೂ ಬಿಸಿಲಿನಿಂದ ಮುಖದ ಅಂದ ಹಾಳಾಗುತ್ತದೆ.


    ಮುಖದ ಮೊಡವೆ ಸಮಸ್ಯೆ ಹೋಗಲಾಡಿಸಲು ಫ್ರೂಟ್ಸ್ ಮಾಸ್ಕ್ ಹಾಕಿ


    ಮೇಕಪ್ ಬೆವರಿಗೆ ಇಳಿದು ಹೋಗುತ್ತದೆ. ಇದರಿಂದಾಗಿ ಕಲೆಗಳು ಕಾಣಿಸುತ್ತವೆ. ಅದನ್ನು ಹೋಗಲಾಡಿಸಲು ದಪ್ಪ ಮೇಕಪ್ ಮಾಡಿಕೊಳ್ಳಬೇಕಾಗುತ್ತದೆ. ಆದರೆ ಇದು ತ್ವಚೆಯನ್ನು ಮತ್ತಷ್ಟು ಕೆಡಿಸುತ್ತದೆ. ಮೊಡವೆ ಮತ್ತು ಪಿಗ್ಮೆಂಟೇಶನ್ ಸಮಸ್ಯೆ ಇದ್ದಾಗ ದಪ್ಪ ಮೇಕಪ್ ಹಾಕುವುದು ಚರ್ಮಕ್ಕೆ ಹಾನಿ ಮಾಡುತ್ತದೆ.


    ಹಣ್ಣುಗಳು ಮತ್ತು ತರಕಾರಿಗಳು ಪ್ರಬಲ ಉತ್ಕರ್ಷಣ ನಿರೋಧಕ ಹೊಂದಿವೆ. ಇವುಗಳು ಸೆಲ್ಯುಲಾರ್ ಹಾನಿ ಉಂಟು ಮಾಡುವ ಸ್ವತಂತ್ರ ರಾಡಿಕಲ್ಗಳಿಂದ ಚರ್ಮವನ್ನು ರಕ್ಷಿಸುತ್ತವೆ. ಹೆಚ್ಚಿನ ಪ್ರಮಾಣದ ಅಗತ್ಯ ಜೀವಸತ್ವಗಳು ಮತ್ತು ಖನಿಜಗಳು ಇದರಲ್ಲಿವೆ. ಇವು ಚರ್ಮವನ್ನು ಸ್ವಚ್ಛವಾಗಿಡುತ್ತವೆ.




    ಮುಖವನ್ನು ಶುದ್ಧವಾಗಿಸಲು ಮತ್ತು ಹೈಡ್ರೀಕರಿಸಲು ಫ್ರೂಟ್ಸ್ ಫೇಸ್ ಮಾಸ್ಕ್


    ಪಪ್ಪಾಯಿ ಹಣ್ಣಿನ ಮಾಸ್ಕ್


    ಪಪ್ಪಾಯಿ ಬೀಟಾ ಕ್ಯಾರೋಟಿನ್ ಅಂಶ ಹೊಂದಿದೆ. ಇದು ಫೈಟೊಕೆಮಿಕಲ್ಸ್, ವಿಟಮಿನ್ ಎ, ವಿಟಮಿನ್ ಇ ಹೊಂದಿದೆ. ಇದು ಎಫ್ಫೋಲಿಯೇಟಿಂಗ್ ಜೊತೆಗೆ, ಸುಕ್ಕುಗಳು ಮತ್ತು ಸೂಕ್ಷ್ಮ ರೇಖೆ ಸಮಸ್ಯೆ ತೊಡೆದು ಹಾಕುತ್ತದೆ. ಜೇನುತುಪ್ಪವು ಚರ್ಮವನ್ನು ಆರ್ಧ್ರಕಗೊಳಿಸಲು ಮತ್ತು ತೇವಾಂಶ ಕಾಪಾಡುತ್ತದೆ.


    ಪಪ್ಪಾಯಿ ಹಣ್ಣಿನ ಮಾಸ್ಕ್ ತಯಾರಿಸುವುದು ಹೇಗೆ?


    ಒಂದು ಬಟ್ಟಲಿನಲ್ಲಿ ಎರಡು ಚಮಚ ಪಪ್ಪಾಯಿ ತಿರುಳು ಒಂದು ಚಮಚ ಜೇನುತುಪ್ಪ ಮತ್ತು ಅಲೋವೆರಾ ಜೆಲ್ ತೆಗೆದುಕೊಳ್ಳಿ. ಮಿಕ್ಸ್ ಮಾಡಿ. ಮುಖಕ್ಕೆ ಚೆನ್ನಾಗಿ ಮಸಾಜ್ ಮಾಡಿ. 15 ನಿಮಿಷ ಬಿಟ್ಟು ತೊಳೆಯಿರಿ.


    ಬಾಳೆ ಹಣ್ಣಿನ ಮಾಸ್ಕ್


    ಬಾಳೆಹಣ್ಣು ಕಬ್ಬಿಣದಂಶ ಹೊಂದಿದೆ. ಪೊಟ್ಯಾಸಿಯಮ್, ವಿಟಮಿನ್ ಎ, ಸಿ, ಬಿ 6 ಸಹ ಹೆಚ್ಚಿನ ಪ್ರಮಾಣದಲ್ಲಿದೆ. ಆ್ಯಂಟಿಆಕ್ಸಿಡೆಂಟ್‌ ಗಳಿದ್ದು, ಚರ್ಮದ ಆರೋಗ್ಯ ಸುಧಾರಿಸುತ್ತವೆ. ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ. ಈ ಎಲ್ಲಾ ಅಂಶಗಳು ಚರ್ಮದ ಆರೋಗ್ಯ ಸುಧಾರಿಸುತ್ತವೆ.


    ಸಾಂದರ್ಭಿಕ ಚಿತ್ರ


    ಬಾಳೆ ಹಣ್ಣಿನ ಮಾಸ್ಕ್ ಮಾಡಲು, ಒಂದು ಬಟ್ಟಲಿನಲ್ಲಿ ಬಾಳೆಹಣ್ಣನ್ನು ಮ್ಯಾಶ್ ಮಾಡಿ. 3 ಚಮಚ ಮೊಸರು, ಅರ್ಧ ಟೀಚಮಚ ಅರಿಶಿನ ಬೆರೆಸಿ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಅನ್ನು ಮುಖ ಮತ್ತು ಕುತ್ತಿಗೆಗೆ ಅನ್ವಯಿಸಿ, 15 ನಿಮಿಷದ ನಂತರ ಸರಳ ನೀರಿನಿಂದ ಮುಖ ತೊಳೆಯಿರಿ.


    ಸ್ಟ್ರಾಬೆರಿ ಹಣ್ಣಿನ ಮಾಸ್ಕ್


    ಸ್ಟ್ರಾಬೆರಿಯಲ್ಲಿರುವ ಅಂಶಗಳು ಚರ್ಮದಿಂದ ಹೆಚ್ಚುವರಿ ಎಣ್ಣೆ ತೆಗೆದು ಮೊಡವೆ ಸಮಸ್ಯೆ ನಿವಾರಿಸುತ್ತದೆ. ಸ್ಟ್ರಾಬೆರಿಗಳ ಬಳಕೆ ಚರ್ಮದ ಟ್ಯಾನಿಂಗ್ ಅನ್ನು ತೆಗೆದು ಹಾಕುತ್ತದೆ. ಮೈಬಣ್ಣ ಸುಧಾರಿಸುತ್ತದೆ. ಕೋಕೋ ಪೌಡರ್ ಚರ್ಮವನ್ನು ಆಳವಾಗಿ ಸ್ವಚ್ಛಗೊಳಿಸಿ, ಮೃದು ಮತ್ತು ಹೊಳೆಯುವಂತೆ ಮಾಡುತ್ತದೆ.


    ಒಂದು ಬಟ್ಟಲಿನಲ್ಲಿ 7 ಸ್ಟ್ರಾಬೆರಿ ಮ್ಯಾಶ್ ಮಾಡಿ. ಒಂದು ಚಮಚ ಕೋಕೋ ಪೌಡರ್ ಮತ್ತು ಒಂದು ಚಮಚ ಜೇನುತುಪ್ಪ ಸೇರಿಸಿ. ಮುಖ ಮತ್ತು ಕುತ್ತಿಗೆಗೆ ಅನ್ವಯಿಸಿ ಮತ್ತು 20 ನಿಮಿಷ ನಂತರ ಸರಳ ನೀರಿನಿಂದ ಮುಖ ತೊಳೆಯಿರಿ.


    ಆಪಲ್ ಮತ್ತು ಕಿತ್ತಳೆ ಹಣ್ಣಿನ ಮಾಸ್ಕ್


    ವಿಟಮಿನ್ ಎ, ಬಿ ಮತ್ತು ವಿಟಮಿನ್ ಸಿ ಜೊತೆಗೆ ಚರ್ಮಕ್ಕೆ ಅಗತ್ಯವಾದ ಖನಿಜವು ಸೇಬುವಿನಲ್ಲಿದೆ. ಇದು ಚರ್ಮದ ಪಿಹೆಚ್ ಮಟ್ಟದ ಸಮತೋಲನ ಕಾಪಾಡುತ್ತದೆ. ಕಿತ್ತಳೆ ರಸ ಚರ್ಮದ ಸಮಸ್ಯೆ ತಡೆಯುತ್ತದೆ.


    ಇದನ್ನೂ ಓದಿ: ಹಲಸಿನ ಹಣ್ಣಿನಿಂದ ಆಗುವ ಪ್ರಯೋಜನಗಳನ್ನು ಕೇಳ್ತಾ ಇದ್ರೆ, ಈಗ್ಲೇ ಪಕ್ಕಾ ತಿನ್ನೋಕೆ ಸ್ಟಾರ್ಟ್​ ಮಾಡ್ತೀರ!


    ಒಂದು ಬಟ್ಟಲಿನಲ್ಲಿ ಎರಡು ಅಥವಾ ಮೂರು ಸೇಬು ಮತ್ತು ಕಿತ್ತಳೆ ತುಂಡು ಮ್ಯಾಶ್ ಮಾಡಿ. ಅರ್ಧ ಚಮಚ ಅರಿಶಿನ ಮತ್ತು ಚಮಚ ಜೇನುತುಪ್ಪ ಬೆರೆಸಿ, ಮುಖಕ್ಕೆ ಮಸಾಜ್ ಮಾಡಿ. 15 ನಿಮಿಷದ ನಂತರ ಸರಳ ನೀರಿನಿಂದ ಮುಖ ತೊಳೆಯಿರಿ.

    Published by:renukadariyannavar
    First published: