Skin Care: ಚಳಿಗಾಲದಲ್ಲಿ ದೇಹದ ಚರ್ಮ ಕಾಂತಿಹೀನವಾಗುತ್ತಿದೆಯೇ? ತಪ್ಪದೇ ಈ 5 ತರಕಾರಿಗಳನ್ನು ಸೇವಿಸಿ

ನಮ್ಮ ದೇಹ ಮತ್ತು ಚರ್ಮವನ್ನು ಸದಾ ಹೈಡ್ರೇಟ್ ಆಗಿಡಲು, ನಾವು ನೀರಿನಿಂದ ಸಮೃದ್ಧವಾಗಿರುವ ತರಕಾರಿಗಳನ್ನು ಸೇವಿಸಬೇಕು. ಅದು ನಮ್ಮ ದೇಹದ ಚರ್ಮದ ಮೇಲೆ ಪ್ರತಿಬಿಂಬಿಸುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತಮ್ಮ ದೇಹದ ಚರ್ಮವು (Skin) ಚೆನ್ನಾಗಿ ಸದಾ ಕಾಂತಿಯುತವಾಗಿ ಲಕ ಲಕ ಅಂತ ಹೊಳೆಯುತ್ತಿರಬೇಕು ಎಂದು ಬಹುತೇಕರು ಬಯಸುತ್ತಾರೆ ಮತ್ತು ಅದಕ್ಕಾಗಿ ಅನೇಕ ಸೌಂದರ್ಯವರ್ಧಕಗಳನ್ನು ಬಳಸುತ್ತಾರೆ ಎಂದರೆ ತಪ್ಪಾಗುವುದಿಲ್ಲ. ಕೆಲವೊಬ್ಬರಂತೂ ತಮ್ಮ ದೇಹದ ಚರ್ಮವು ಕಾಂತಿಯುತವಾಗಿ ಕಾಣಲು ಅನೇಕ ರೀತಿಯ ಸೌಂದರ್ಯ ಚಿಕಿತ್ಸೆ(Treatment)ಗಳನ್ನು ಮಾಡಿಸಿಕೊಳ್ಳುತ್ತಾರೆ. ಆದರೆ ಇಲ್ಲಿ ನಾವು ನಿಮಗೆ 5 ತರಕಾರಿಗಳ (Vegetables) ಬಗ್ಗೆ ಹೇಳುತ್ತೇವೆ, ಅವುಗಳನ್ನು ನೀವು ಚೆನ್ನಾಗಿ ತಿಂದರೆ ನಿಮ್ಮ ದೇಹದ ಚರ್ಮವು ಸದಾ ಕಾಂತಿಯುತವಾಗಿರುತ್ತದೆ ಎಂದು ಹೇಳಲಾಗುತ್ತಿದೆ. ನಾವು ತಿನ್ನುವ ಆಹಾರ ನಮ್ಮ ದೇಹದ ಚರ್ಮದ ಮೇಲೆ ಅದು ಪ್ರತಿಫಲಿಸುತ್ತದೆ ಎಂದು ಹೇಳಿದರೆ ಸುಳ್ಳಲ್ಲ. ವೈವಿಧ್ಯಮಯ ತರಕಾರಿ ಮತ್ತು ಹಣ್ಣುಗಳನ್ನು ನಾವು ಹೆಚ್ಚು ಹೆಚ್ಚು ಸೇವಿಸಿದಷ್ಟೂ ನಮ್ಮ ದೇಹವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.

ಚಳಿಗಾಲದಲ್ಲಿ ನಮ್ಮ ಚರ್ಮ ಒಣಗಿದಂತಾಗುವುದು ಸಹಜ. ನಾವು ಸೌಂದರ್ಯ ಚಿಕಿತ್ಸೆಗಳು ಮತ್ತು ಸೌಂದರ್ಯವರ್ಧಕಗಳಿಗೆ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುತ್ತೇವೆ ಮತ್ತು ಪಾರ್ಲರ್‌ಗಳಲ್ಲಿ ಸಾಕಷ್ಟು ಸಮಯ ಕಳೆಯುತ್ತೇವೆ.

ನಮ್ಮ ದೇಹ ಮತ್ತು ಚರ್ಮವನ್ನು ಸದಾ ಹೈಡ್ರೇಟ್ ಆಗಿಡಲು, ನಾವು ನೀರಿನಿಂದ ಸಮೃದ್ಧವಾಗಿರುವ ತರಕಾರಿಗಳನ್ನು ಸೇವಿಸಬೇಕು. ಅದು ನಮ್ಮ ದೇಹದ ಚರ್ಮದ ಮೇಲೆ ಪ್ರತಿಬಿಂಬಿಸುತ್ತದೆ. ಚಳಿಗಾಲವು ಮೆಂತ್ಯೆ, ಪಾಲಕ್, ಕೆಂಪು ಕ್ಯಾರೆಟ್‌ಗಳಂತಹ ತಾಜಾ ಹಸಿರು ಎಲೆಗಳ ತರಕಾರಿಗಳ ಋತುವಾಗಿದೆ. ಬನ್ನಿ ಹಾಗಾದರೆ ಬ್ಯೂಟಿಷಿಯನ್ ಶಹನಾಜ್ ಹುಸೇನ್ ನಮಗೆ ಕಾಂತಿಯುತ ಚರ್ಮವನ್ನು ನೀಡಬಲ್ಲ ಐದು ಚಳಿಗಾಲದ ತರಕಾರಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

1. ಪಾಲಕ್

ಕಬ್ಬಿಣಾಂಶ ಭರಿತ ಹಸಿರು ಎಲೆಗಳ ತರಕಾರಿ ಚರ್ಮದ ಆರೈಕೆಗೆ ಅತ್ಯುತ್ತಮ ಪರಿಹಾರವಾಗಿದೆ. ಇಂಟರ್ ನ್ಯಾಷನಲ್ ಜರ್ನಲ್ ಆಫ್ ಕ್ಯಾನ್ಸರ್ ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ, ಹೆಚ್ಚಿನ ಪ್ರಮಾಣದ ಪಾಲಕ್ ತಿನ್ನುವುದರಿಂದ ಚರ್ಮದಲ್ಲಿ ಕಾರ್ಸಿನೋಮಾ ಜೀವಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ.

ಇದನ್ನೂ ಓದಿ:  Cholesterol Controlling Fruits: ಕೊಲೆಸ್ಟ್ರಾಲ್ ನಿಯಂತ್ರಿಸಲು ನಿಮ್ಮ ಆಹಾರದಲ್ಲಿರಲಿ ಈ 5 ಹಣ್ಣುಗಳು

ಪಾಲಕ್ ಮೊಡವೆಗಳನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ ಮತ್ತು ಪ್ರತಿಯಾಗಿ, ಆರೋಗ್ಯಕರ ಹೊಳೆಯುವ ಚರ್ಮವನ್ನು ನೀಡುತ್ತದೆ.

2.ಲೆಟ್ಯೂಸ್

ಸಾಮಾನ್ಯವಾಗಿ ಲಭ್ಯವಿರುವ ತರಕಾರಿ ಸಲಾಡ್‌ಗಳನ್ನು ತಿನ್ನುವವರಿಗೆ ಇದು ನೆಚ್ಚಿನ ತರಕಾರಿಯಾಗಿದೆ. ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ, ಫೋಲಿಕ್ ಆಮ್ಲ ಮತ್ತು ಜಿಂಕ್‌ ಹೊಂದಿರುವ ಪೋಷಕಾಂಶಗಳ ಉಗ್ರಾಣವಾಗಿದೆ. ರಕ್ತ ಪರಿಚಲನೆ ಸುಧಾರಿಸುವುದರಿಂದ ಹಿಡಿದು ಬೂದು ಕೂದಲನ್ನು ತಡೆಯುವವರೆಗೆ, ಎಲೆಯುಕ್ತ ತರಕಾರಿಯು ನಿಮಗೆ ಕಾಂತಿಯುತವಾದ ಚರ್ಮವನ್ನು ನೀಡುತ್ತದೆ.

3. ಕ್ಯಾರೆಟ್

ಚಳಿಗಾಲದ ಬಗ್ಗೆ ಮಾತನಾಡುವಾಗ, ಕ್ಯಾರೆಟ್‌ ಸಹ ಒಂದು ಪ್ರಮುಖವಾದ ತರಕಾರಿ. ಕ್ಯಾರೆಟ್ ಅನ್ನು ಪ್ರೀತಿಸುವ ಯಾರಾದರೂ ರುಚಿಕರವಾದ ಕ್ಯಾರೆಟ್ ಪಲ್ಯ ಮತ್ತು ಕ್ಯಾರೆಟ್ ಹಲ್ವಾ ಮಾಡಿಕೊಂಡು ಸೇವಿಸಬಹುದು.

ಚಳಿಗಾಲದ ಋತುವಿಗಾಗಿ ಇದು ತುಂಬಾನೇ ಒಳ್ಳೆಯದು. ವಿಟಮಿನ್ ಎ ಇರುವ ತರಕಾರಿಯನ್ನು ನಿಮ್ಮ ಚರ್ಮಕ್ಕೆ ಹಚ್ಚಿಕೊಳ್ಳಬಹುದು. ಕ್ಯಾರೆಟ್‌ಗಳನ್ನು ಕುದಿಸಿ ಮತ್ತು ಮೃದುವಾದ ಪೇಸ್ಟ್ ಆಗಿ ಮ್ಯಾಶ್ ಮಾಡಿ ನಂತರ ಸ್ವಚ್ಛವಾದ ಮುಖದ ಮೇಲೆ ಅನ್ವಯಿಸಿ. ಸ್ವಲ್ಪ ಹೊತ್ತು ಹಾಗೆಯೇ ಕುಳಿತುಕೊಂಡು, ನಂತರ ನೀರಿನಿಂದ ತೊಳೆದುಕೊಳ್ಳಿರಿ.

ಇದನ್ನೂ ಓದಿ:  Skin Care Tips: ರಾತ್ರಿ ಮಲಗುವ ಮುನ್ನ ನಿಮ್ಮ ತ್ವಚೆಯ ಆರೈಕೆ ಹೀಗಿರಲಿ..!


4. ಎಲೆಕೋಸು (ಕ್ಯಾಬೇಜ್)

ಎಲೆಕೋಸಿನಲ್ಲಿ ವಿವಿಧ ಖನಿಜಗಳಿವೆ, ಅವು ಹೈಡ್ರೇಟಿಂಗ್ ಮತ್ತು ಆರೋಗ್ಯಕರ ಚರ್ಮಕ್ಕೆ ಉಪಯುಕ್ತವಾಗಿವೆ. ಎಲೆಕೋಸಿನ ನೀರನ್ನು ಚರ್ಮದ ಚಿಕಿತ್ಸೆಗೆ ಬಳಸಬಹುದು. ಸ್ವಲ್ಪ ಎಲೆಕೋಸನ್ನು ನೀರಿನಿಂದ ತುಂಬಿದ ಬಾಣಲೆಯಲ್ಲಿ ಕುದಿಸಿ. ನೀರನ್ನು ಸೋಸಿ ಮತ್ತು ಸ್ವಲ್ಪ ಸಮಯದವರೆಗೆ ತಣ್ಣಗಾಗಲು ಬಿಡಿ. ನಂತರ, ಎಲೆಕೋಸಿನ ನೀರಿನಿಂದ ಮುಖವನ್ನು ತೊಳೆಯಿರಿ.

5.ಟೊಮ್ಯಾಟೋ

ನಿಮ್ಮ ಮುಖದ ಮೇಲಿನ ಕಲೆಗಳನ್ನು ತೆಗೆದು ಹಾಕಿ ಪ್ರಕಾಶಮಾನವಾದ ಚರ್ಮವನ್ನು ನೀಡುವಲ್ಲಿ ಟೊಮ್ಯಾಟೋಗಳು ವಿಶ್ವಾಸಾರ್ಹ ಪರಿಹಾರವಾಗಿದೆ. ಚರ್ಮದ ಆರೈಕೆಗಾಗಿ ನಾವು ಸಾಕಷ್ಟು ಕಚ್ಚಾ ಟೊಮ್ಯಾಟೋ ಹ್ಯಾಕ್‌ಗಳನ್ನು ನೋಡಿದ್ದೇವೆ.

ಆದರೆ ನೀವು ಎಂದಾದರೂ ಬೇಯಿಸಿದ ಟೊಮ್ಯಾಟೋಗಳ ಬಗ್ಗೆ ಯೋಚಿಸಿದ್ದೀರಾ? ಬೇಯಿಸಿದ ಟೊಮ್ಯಾಟೋಗಳು ಕಚ್ಚಾ ಟೊಮ್ಯಾಟೋಗಳಿಗಿಂತ ಉತ್ತಮವಾಗಿವೆ. ಅವುಗಳಲ್ಲಿ ಲೈಕೋಪೀನ್ ಇರುತ್ತದೆ ಮತ್ತು ಇದು ಸಡಿಲವಾದ ಚರ್ಮ, ಸುಕ್ಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ
Published by:Mahmadrafik K
First published: