ತ್ವಚೆಯ ಆರೈಕೆಗೆ (Skin Care) ಹಗಲು ಮಾತ್ರವಲ್ಲ, ರಾತ್ರಿಯೂ (Night) ಸಹ ಕೇರ್ ಮಾಡಬೇಕಾಗುತ್ತದೆ. ಒಣ ತ್ವಚೆ (Dry Skin), ಬಿರಿಯುವ ಕಾಲು, ಒಡೆದ ಹಿಮ್ಮಡಿ, ಕಪ್ಪು ಕಲೆಗಳು, ಮೊಡವೆ ಸಮಸ್ಯೆ ನಿವಾರಣೆಗೆ ಹಲವು ರೀತಿಯ ಮನೆಮದ್ದು (Home Remedies) ಮತ್ತು ಮಾರುಕಟ್ಟೆಯಲ್ಲಿ ಸಿಗುವ ಉತ್ಪನ್ನಗಳನ್ನು ನೀವು ಬಳಕೆ ಮಾಡಿರುತ್ತೀರಿ. ಕೆಲವೊಮ್ಮೆ ಹಗಲು ಮತ್ತು ರಾತ್ರಿ ಎರಡೂ ಸಮಯವೂ ಸ್ಕಿನ್ ಕೇರ್ ಮಾಡಬೇಕಾಗುತ್ತದೆ. ಅದಕ್ಕಾಗಿ ನೀವು ರಾತ್ರಿ ಕೆಲವು ಫೇಸ್ ಪ್ಯಾಕ್ ಅನ್ವಯಿಸುವುದು ತುಂಬಾ ಪರಿಣಾಮಕಾರಿ. ಇದು ತ್ವಚೆಯ ಸಮಸ್ಯೆ ತೊಡೆದು ಹಾಕಲು ಸಹಾಯ ಮಾಡುತ್ತದೆ. ಚರ್ಮವನ್ನು ಸ್ವಚ್ಛವಾಗಿಸುವುದು ತುಂಬಾ ಮುಖ್ಯವಾಗುತ್ತದೆ.
ತ್ವಚೆಯ ಆರೈಕೆಗೆ ರಾತ್ರಿ ಫೇಶಿಯಲ್ ಅನ್ವಯಿಸುವುದು ಎಷ್ಟು ಪರಿಣಾಮಕಾರಿ?
ರಾತ್ರಿ ಸೌಂದರ್ಯ ಆರೈಕೆ ದಿನಚರಿಯು ತುಂಬಾ ಮುಖ್ಯ. ಇದು ತ್ವಚೆಗೆ ಹತ್ತಿದ ಧೂಳಿನ ಕಣಗಳು, ಮೇಕ್ಅಪ್, ಮಾಲಿನ್ಯಕಾರಕ, ಕೊಳಕು ಮತ್ತು ತ್ವಚೆಯ ಮೇಲೆ ಸಂಗ್ರಹವಾದ ಎಲ್ಲಾ ಕಲ್ಮಶಗಳನ್ನು ತೆಗೆದು ಹಾಕುತ್ತದೆ.
ನಿದ್ದೆ ಮಾಡುವಾಗ ಮತ್ತು ದೇಹವು ವಿಶ್ರಾಂತಿ ಪಡೆದಾಗ ಕೋಶ ನವೀಕರಣದ ಪ್ರಕ್ರಿಯೆ ರಾತ್ರಿ ನಡೆಯುತ್ತದೆ. ಹಾಗಾಗಿ ಚರ್ಮವನ್ನು ಸರಿಯಾಗಿ ಸ್ವಚ್ಛ ಮಾಡಬೇಕು. ಫೇಸ್ ಪ್ಯಾಕ್ ಅನ್ನು ಸಹ ಅನ್ವಯಿಸಬಹುದು.
ಎಲ್ಲಾ ಫೇಸ್ ಪ್ಯಾಕ್ ಗಳನ್ನು ರಾತ್ರಿ ಅನ್ವಯಿಸುವಂತಿಲ್ಲ. ಕೆಲವು ಫೇಸ್ ಪ್ಯಾಕ್ ಗಳು ಒಣಗಿದ ನಂತರ ಸ್ವಚ್ಛವಾಗಿ ತೊಳೆಯಬೇಕಾಗುತ್ತದೆ. ಇಂದು ನಾವು ರಾತ್ರಿ ಯಾವೆಲ್ಲಾ ಫೇಸ್ ಪ್ಯಾಕ್ ಅನ್ವಯಿಸಬಹುದು ಎಂಬುದನ್ನು ನೋಡೋಣ. ಇದು ನಿಮ್ಮ ತ್ವಚೆಗೆ ಹೊಳಪು ತರುತ್ತದೆ.
ಫೇಸ್ ಪ್ಯಾಕ್ ಏಕೆ ಅಗತ್ಯ?
ಮಂದ ತ್ವಚೆಯನ್ನು ಪುನರುಜ್ಜೀವನಗೊಳಿಸಲು ಮತ್ತು ತ್ವಚೆಯನ್ನು ಆರೋಗ್ಯವಾಗಿಡಲು ರಾತ್ರಿ ಹಾಕುವ ಫೇಸ್ ಪ್ಯಾಕ್ ಸಹಾಯ ಮಾಡುತ್ತದೆ. ರಾತ್ರಿ ಚರ್ಮವನ್ನು ಸ್ವಚ್ಛಗೊಳಿಸಿ ನಂತರ ಫೇಸ್ ಪ್ಯಾಕ್ ಅನ್ವಯಿಸಿ ಮತ್ತು ಬೆಳಿಗ್ಗೆ ಸ್ವಚ್ಛಗೊಳಿಸಿ.
ರಾತ್ರಿಗೆ ಮೊಸರು ಮತ್ತು ಜೇನುತುಪ್ಪದ ಫೇಸ್ ಪ್ಯಾಕ್ ಹಾಕಿರಿ
ಜೇನುತುಪ್ಪ ಮತ್ತು ಮೊಸರು ತೆಗೆದುಕೊಳ್ಳಿ. ಅದಕ್ಕೆ ಕೆಲವು ಚಮಚ ಕೆಂಪು ವೈನ್ ಸೇರಿಸಿ. ತ್ವಚೆಗೆ ಅನ್ವಯಿಸಿ. ಮುಖದ ಮೇಲೆ ರಾತ್ರಿಯಿಡೀ ಹಾಗೇ ಬಿಡಿ. ಮರುದಿನ ಬೆಳಿಗ್ಗೆ ಸರಳ ನೀರಿನಿಂದ ತೊಳೆಯಿರಿ.
ಅಲೋವೆರಾ ಮತ್ತು ಅವಕಾಡೊ ಫೇಸ್ ಪ್ಯಾಕ್
ಆವಕಾಡೊ ತಿರುಳನ್ನು ಅಲೋವೆರಾ ಜೆಲ್ ನೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿ ರಾತ್ರಿಯಿಡೀ ಬಿಡಿ. ಮರುದಿನ ಬೆಳಿಗ್ಗೆ ಸರಳ ನೀರಿನಿಂದ ತೊಳೆಯಿರಿ.
ಬಾಳೆಹಣ್ಣಿನ ಫೇಸ್ ಪ್ಯಾಕ್
ಬಾಳೆಹಣ್ಣಿನ ತಿರುಳಿಗೆ ಒಂದು ಚಮಚ ಜೇನುತುಪ್ಪ ಸೇರಿಸಿ. ರಾತ್ರಿಯಿಡೀ ಹಾಗೆ ಬಿಡಿ ಮತ್ತು ನಂತರ ತೊಳೆಯಿರಿ. ಚರ್ಮವು ಶುಷ್ಕವಾಗಿದ್ದರೆ, ಅರ್ಧ ಚಮಚ ಬಾದಾಮಿ ಎಣ್ಣೆ ಸೇರಿಸಿ.
ಸೌತೆಕಾಯಿ ಮತ್ತು ಮಾಗಿದ ಪಪ್ಪಾಯಿ ಫೇಸ್ ಪ್ಯಾಕ್
ಸೌತೆಕಾಯಿ ಮತ್ತು ಮಾಗಿದ ಪಪ್ಪಾಯಿ ತಿರುಳನ್ನು ಮೊಸರಿನ ಜೊತೆ ಮಿಶ್ರಣ ಮಾಡಿ. ಮುಖ ಮತ್ತು ಕುತ್ತಿಗೆಗೆ ಅನ್ವಯಿಸಿ. ಬೆಳಿಗ್ಗೆ ಅದನ್ನು ತೊಳೆಯಿರಿ. ಎಣ್ಣೆಯುಕ್ತ ಮತ್ತು ಮೊಡವೆ ಪೀಡಿತ ಚರ್ಮಕ್ಕಾಗಿ, ಹಸಿ ಹಾಲಿಗೆ ಟೊಮೆಟೊ ತಿರುಳು ಸೇರಿಸಿ ಮುಖಕ್ಕೆ ಹಚ್ಚಿ, ಮರುದಿನ ಬೆಳಿಗ್ಗೆ ಅದನ್ನು ಸರಳ ನೀರಿನಿಂದ ತೊಳೆಯಿರಿ.
ಹಸಿ ಹಾಲಿಗೆ ಚಿಟಿಕೆ ಅರಿಶಿನ ಬೆರೆಸಿ ಫೇಸ್ ಪ್ಯಾಕ್ ಅನ್ವಯಿಸಿ
ಹಸಿ ಹಾಲಿಗೆ ಚಿಟಿಕೆ ಅರಿಶಿನ ಬೆರೆಸಿ ಮುಖಕ್ಕೆ ಹಚ್ಚಿರಿ. ರಾತ್ರಿಯಿಡೀ ಬಿಡಿ. ಬೆಳಗ್ಗೆ ತೊಳೆಯಿರಿ. ಸೂಕ್ಷ್ಮ ಚರ್ಮಕ್ಕಾಗಿ ಎರಡು ಚಮಚ ಅಲೋವೆರಾ ಜೆಲ್, ಚಮಚ ಜೇನುತುಪ್ಪ ಬೆರೆಸಿ. ಅನ್ವಯಿಸಿ, ಬೆಳಗ್ಗೆ ಸ್ವಚ್ಛಗೊಳಿಸಿ.
ಇದನ್ನೂ ಓದಿ: ನಿಮ್ಮ ಮನಸ್ಸಿನಲ್ಲಿ ಆಗೋ ಬದಲಾವಣೆ ಥೈರಾಯ್ಡ್ ಕಾಯಿಲೆಯ ಸೂಚನೆಯಂತೆ!
ರಾತ್ರಿಯ ಫೇಸ್ ಪ್ಯಾಕ್ ಅನ್ನು ಮಲಗುವ ಅರ್ಧ ಗಂಟೆ ಮೊದಲು ಅನ್ವಯಿಸಿ. ಆದರೆ ರಾತ್ರಿಯ ಫೇಸ್ ಪ್ಯಾಕ್ ಹೆಚ್ಚು ಬಳಸಬಾರದು. ವಾರಕ್ಕೊಮ್ಮೆ ಅಥವಾ ಹತ್ತು ದಿನಗಳಲ್ಲಿ ಒಮ್ಮೆ ಮಾತ್ರ ಬಳಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ