Skin Care: ಈ ಒಂದು ವಸ್ತು ಇದ್ರೆ ಸಾಕು ನಿಮ್ಮ ಮೊಡವೆ ಸಮಸ್ಯೆಗೆ ಮುಕ್ತಿ ಸಿಗುತ್ತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪ್ರಾಚೀನ ಆಯುರ್ವೇದ ವ್ಯವಸ್ಥೆ ಬಕುಚಿಯೋಲ್ ನ್ನು ಬಳಕೆ ಮಾಡಲಾಗುತ್ತಿತ್ತು. ಬಕುಚಿಯೋಲ್ ಅನ್ನು ಬಾಬ್ಚಿ ಎಂಬ ಸಸ್ಯದಿಂದ ಪಡೆಯಲಾಗಿದೆ. ಇದು ಭಾರತದಲ್ಲಿದೆ. ಆಯುರ್ವೇದದಲ್ಲಿಯೂ ಬಕುಚಿಯೋಲ್ ಬಳಕೆ ಇದೆ. ಬಕುಚಿಯೋಲ್ ನಿಮ್ಮ ಚರ್ಮದ ಆರೈಕೆಗೆ ಎಷ್ಟು ಪ್ರಯೋಜನಕಾರಿ ಎಂದು ಇಲ್ಲಿ ತಿಳಿಯೋಣ.

ಮುಂದೆ ಓದಿ ...
  • Share this:

    ಚರ್ಮದ ಆರೈಕೆಗೆ (Skin Care) ನೀವು ಸಾಕಷ್ಟು ಫೇಶಿಯಲ್ (Facial), ಚಿಕಿತ್ಸೆ ಪಡೆದಿರಬಹುದು. ಆದರೆ ತ್ವಚೆಯನ್ನು ಚೆನ್ನಾಗಿರಿಸಲು ಮತ್ತು ಏಜಿಂಗ್ ಸಮಸ್ಯೆ (Aging Problem) ನಿಯಂತ್ರಿಸಲು ಬಕುಚಿಯೋಲ್ (Bakuchiol) ಬಳಕೆ ಸಾಕಷ್ಟು ಪರಿಣಾಮಕಾರಿ ಎಂದು ಹೇಳಲಾಗಿದೆ. ನೀವು ಬಕುಚಿಯೋಲ್ ಬಗ್ಗೆ ಕೇಳಿರಬಹುದು. ಅಥವಾ ಕೇಳಿರದೇ ಇರಬಹುದು. ಇತ್ತೀಚಿನ ದಿನಗಳಲ್ಲಿ ನೀವು ತ್ವಚೆಯ ಆರೋಗ್ಯ (Skin Health) ಹಾಳು ಮಾಡುವ ಹಲವು ವಿಷಯಗಳಿಂದ ಬೇಸರಗೊಂಡಿರಬಹುದು. ಧೂಳು, ಮೊಡವೆ, ಕಲೆ, ಅಲರ್ಜಿ ಹೀಗೆ ವಿವಿಧ ಸಮಸ್ಯೆಗಳು ಮುಖದ ಅಂದವನ್ನು ಹಾಳು ಮಾಡುತ್ತವೆ. ಇದು ಮಹಿಳೆಯರನ್ನು ಸಾಕಷ್ಟು ಚಿಂತೆಗೀಡು ಮಾಡುತ್ತದೆ. ಈ ಸಮಸ್ಯೆಗಳಿಂದ ಹೊರ ಬರಲು ಬಕುಚಿಯೋಲ್ ಬಳಕೆ ಸಾಕಷ್ಟು ಪರಿಣಾಮಕಾರಿ ಆಗಿದೆ.


    ಚರ್ಮದ ಸಮಸ್ಯೆ ತೊಡೆದು ಹಾಕಲು ಬಕುಚಿಯೋಲ್ ಬಳಕೆ


    ಪ್ರಾಚೀನ ಆಯುರ್ವೇದ ವ್ಯವಸ್ಥೆ ಬಕುಚಿಯೋಲ್ ನ್ನು ಬಳಕೆ ಮಾಡಲಾಗುತ್ತಿತ್ತು. ಬಕುಚಿಯೋಲ್ ಅನ್ನು ಬಾಬ್ಚಿ ಎಂಬ ಸಸ್ಯದಿಂದ ಪಡೆಯಲಾಗಿದೆ. ಇದು ಭಾರತದಲ್ಲಿದೆ. ಆಯುರ್ವೇದದಲ್ಲಿಯೂ ಬಕುಚಿಯೋಲ್ ಬಳಕೆ ಇದೆ.


    ಆಕ್ಸಿಜನ್ ಶ್ರೇಣಿಯ ಚರ್ಮದ ಆರೈಕೆ ಉತ್ಪನ್ನಗಳಲ್ಲಿ ಹಾಗೂ ಇತರೆ ಸೌಂದರ್ಯವರ್ಧಕ ಹಾಗೂ ಪದಾರ್ಥಗಳಲ್ಲಿ ಬಕುಚಿಯೋಲ್ ಬಳಕೆ ಮಾಡಲಾಗುತ್ತದೆ. ಬಕುಚಿಯೋಲ್ ನಿಮ್ಮ ಚರ್ಮದ ಆರೈಕೆಗೆ ಎಷ್ಟು ಪ್ರಯೋಜನಕಾರಿ ಎಂದು ಇಲ್ಲಿ ತಿಳಿಯೋಣ.




    ಬಕುಚಿಯೋಲ್ ಪ್ರಯೋಜನಗಳು


    ಬಕುಚಿಯೋಲ್ ತ್ವಚೆಗೆ ಆರೋಗ್ಯಕರ ಎಂಬುದರ ಹಿಂದೆ ವೈಜ್ಞಾನಿಕ ಪ್ರಯೋಜನಗಳು ಇದೆ ಅಂತಾರೆ ತಜ್ಞರು. ಆಧುನಿಕ ಸಂಶೋಧನೆಯಲ್ಲಿ  ಬಾಬ್ಚಿ ಮತ್ತು ಬಕುಚಿಯೋಲ್ ತ್ವಚೆಗೆ ಸಾಕಷ್ಟು ಪ್ರಯೋಜನಕಾರಿ ಎಂದು ಹೇಳಲಾಗಿದೆ.


    ಬಕುಚಿಯೋಲ್ ರೆಟಿನಾಲ್ ಗೆ ಉತ್ತಮ ಪರ್ಯಾಯ ಎಂದು ಹೇಳಲಾಗಿದೆ. ರೆಟಿನಾಲ್ ನ್ನು ಮೊಡವೆಗಳಿಗೆ ಚಿಕಿತ್ಸೆ ನೀಡಲು ಮತ್ತು ಕಪ್ಪು ಕಲೆ ನಿವಾರಣೆಗೆ ಬಳಸುತ್ತಾರೆ.


    ಬಕುಚಿಯೋಲ್ ಅನ್ನು ಬಳಸಲು ಸುರಕ್ಷಿತವಾದ ಮತ್ತು ಚರ್ಮಕ್ಕೆ ಹಾನಿಯಾಗದ ಸಸ್ಯ ಎಂದು ಹೇಳಲಾಗುತ್ತದೆ.


     ಬಕುಚಿಯೋಲ್ ಆರ್ಧ್ರಕ ಏಜೆಂಟ್ ಆಗಿ ಕೆಲಸ ಮಾಡುತ್ತದೆ


    ಕೆಲವೊಮ್ಮೆ ರೆಟಿನಾಲ್ ಹಾನಿ ಉಂಟು ಮಾಡಬಹುದು. ಬಕುಚಿಯೋಲ್ ಉತ್ತಮ ಮಾಯಿಶ್ಚರೈಸರ್ ಆಗಿ ಕೆಲಸ ಮಾಡುತ್ತದೆ. ಅದರ ಬಳಕೆಯು ಚರ್ಮವನ್ನು ಹೈಡ್ರೀಕರಿಸುತ್ತದೆ. ಆಗ ಮಾಯಿಶ್ಚರೈಸರ್ ಅಗತ್ಯವಿರಲ್ಲ. ತ್ವಚೆಯ ಆರೈಕೆ ಮತ್ತು ವಯಸ್ಸಾದ ವಿರೋಧಿ ಪ್ರಯೋಜನ ನೀಡುತ್ತದೆ ಬಕುಚಿಯೋಲ್.


    ಆ್ಯಂಟಿ ಏಜಿಂಗ್ ಆಗಿ ಕೆಲಸ ಮಾಡುತ್ತದೆ


    ಬಕುಚಿಯೋಲ್ ಚರ್ಮದ ಪೋಷಣೆ ಮಾಡುತ್ತದೆ. ಕಾಲಜನ್ ಮತ್ತು ಎಲಾಸ್ಟಿನ್ ಹೆಚ್ಚಿಸುತ್ತದೆ. ಅಂಗಾಂಶಗಳನ್ನು ಬಲಪಡಿಸುತ್ತದೆ. ದೀರ್ಘಕಾಲದವರೆಗೆ ಚರ್ಮವನ್ನು ಯವ್ವನವಾಗಿರಿಸುತ್ತದೆ. ಬಕುಚಿಯೋಲ್ ಸೀರಮ್ ಚರ್ಮವನ್ನು ಮೃದುವಾಗಿಸಿ, ಹೊಳಪು ನೀಡುತ್ತದೆ. ಅಡ್ಡ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ.


    ಸಾಂದರ್ಭಿಕ ಚಿತ್ರ


    ಬಕುಚಿಯೋಲ್ ಉತ್ಕರ್ಷಣ ನಿರೋಧಕವಾಗಿದೆ. ಕಪ್ಪು ಕಲೆ ತೆಗೆದು ಹಾಕುತ್ತದೆ. ಆ್ಯಂಟಿ ಏಜಿಂಗ್ ಆಗಿ ಕೆಲಸ ಮಾಡುತ್ತದೆ. ಇದು ತ್ವಚೆಯ ಹೊಳಪು ಹೆಚ್ಚಿಸುತ್ತದೆ. ಚರ್ಮದ ಆರೈಕೆ ಉತ್ಪನ್ನಗಳಲ್ಲಿ ಬಳಕೆ ಮಾಡಲಾಗುತ್ತದೆ.


    ಇದು ಎಲ್ಲಾ ರೀತಿಯ ಚರ್ಮಕ್ಕೆ ಸೂಕ್ತವಾಗಿದೆ. ರಾಸಾಯನಿಕ ವಾಯು ಮಾಲಿನ್ಯಕಾರಕಗಳು ಮತ್ತು ಹಾನಿಕಾರಕ ಪರಿಸರ ಪರಿಣಾಮದ ವಿರುದ್ಧ ರಕ್ಷಣೆ ನೀಡುತ್ತದೆ.


    ತ್ವಚೆಯ ಬಕುಚಿಯೋಲ್ ಉತ್ಪನ್ನವು ತೇವಾಂಶ ಕಾಪಾಡುತ್ತದೆ


    ಬಕುಚಿಯೋಲ್ ವಿಟಮಿನ್ ಸಿ, ನಿಯಾಸಿನಾಮೈಡ್ ಮತ್ತು ಹೈಲುರಾನಿಕ್ ಆಮ್ಲ ಹೊಂದಿದೆ. ಇದು ಚರ್ಮದ ತೇವಾಂಶವನ್ನು ಕಾಪಾಡುತ್ತದೆ. ಬಿಸಿಲಿನಿಂದ ಚರ್ಮ ಕಪ್ಪಾಗುವಿಕೆ ಮತ್ತು ಮೊಡವೆ ಸಮಸ್ಯೆಯಿಂದ ರಕ್ಷಣೆ ನೀಡುತ್ತದೆ.


    ಇದನ್ನೂ ಓದಿ: ಬೆಳಗ್ಗಿನ ತಿಂಡಿಗೆ ತಯಾರಿಸಿ ವೆಜ್ ಪರೋಟ, ಸಲಾಡ್, ಇಲ್ಲಿದೆ ರೆಸಿಪಿ!


    ಮುಖದ ಎಣ್ಣೆ ಅಥವಾ ಸೀರಮ್‌ ಚರ್ಮದ ಆರೈಕೆಗೆ ಸಹಕಾರಿ. ಮುಖದ ಆರೈಕೆಗೆ ಹಾಗೂ ಆ್ಯಂಟಿ ಏಜಿಂಗ್ ಆಗಿ ಬಕುಚಿಯೋಲ್ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

    Published by:renukadariyannavar
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು