• Home
  • »
  • News
  • »
  • lifestyle
  • »
  • Skin Care: ತ್ವಚೆಯ ಆರೈಕೆಗೆ ಹಾಗೂ ಮೊಡವೆ ಹೋಗಲಾಡಿಸಲು ಕೇಸರಿಯನ್ನು ಹೀಗೆ ಬಳಸಿ!

Skin Care: ತ್ವಚೆಯ ಆರೈಕೆಗೆ ಹಾಗೂ ಮೊಡವೆ ಹೋಗಲಾಡಿಸಲು ಕೇಸರಿಯನ್ನು ಹೀಗೆ ಬಳಸಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೇಸರಿ ತ್ವಚೆಯ ಮೇಲೆ ಉಂಟಾಗುವ ಅನೇಕ ಸಮಸ್ಯೆ ಹೋಗಲಾಡಿಸಲು ಸಹ ಪರಿಣಾಮಕಾರಿ ಆಗಿದೆ. ಚರ್ಮಕ್ಕೆ ಸಂಬಂಧಿಸಿದ ಎಂತಹುದ್ದೇ ಸಮಸ್ಯೆಯಿದ್ದರೂ ಸಹ ಅದನ್ನು ಹೋಗಲಾಡಿಸುತ್ತದೆ. ಹಾಗಾದ್ರೆ ಕೇಸರಿಯನ್ನು ತ್ವಚೆಯ ಆರೈಕೆಗೆ ಹೇಗೆ ಬಳಸುತ್ತಾರೆ ಅಂತಾ ಇಲ್ಲಿ ನಾವು ತಿಳಿಯೋಣ.

  • Share this:

    ಕೇಸರಿ ಬಣ್ಣದ (Orange Color) ತೆಳುವಾದ (Thin) ದಾರದಂತೆ ಕಾಣುವ ಪಾಯಸದಲ್ಲಿ ಬಳಸುವ ಕೇಸರಿಯು (Kesar) ವಿಶ್ವದ ಅತ್ಯಂತ ದುಬಾರಿ ಮಸಾಲೆ ಪದಾರ್ಥಗಳಲ್ಲಿ (Masala Ingredient) ಒಂದಾಗಿದೆ. ಕೇಸರಿಯನ್ನು ಕೆಂಪು ಚಿನ್ನ ಎಂದು ಕರೆಯುತ್ತಾರೆ. ಕೇಸರಿ ಕೇವಲ ಭಕ್ಷ್ಯಗಳ ರುಚಿ ಹೆಚ್ಚಿಸಲು ಮಾತ್ರವಲ್ಲದೇ ಅದನ್ನು ಚರ್ಮದ ಆರೈಕೆಗೂ (Skin Care) ಬಳಸುತ್ತಾರೆ. ಇದು ನಿಮ್ಮ ತ್ವಚೆಯ ಮೇಲೆ ಉಂಟಾಗುವ ಅನೇಕ ಸಮಸ್ಯೆ ಹೋಗಲಾಡಿಸಲು ಸಹ ಪರಿಣಾಮಕಾರಿ ಆಗಿದೆ. ಚರ್ಮಕ್ಕೆ ಸಂಬಂಧಿಸಿದ ಎಂತಹುದ್ದೇ ಸಮಸ್ಯೆಯಿದ್ದರೂ ಸಹ ಅದನ್ನು ಹೋಗಲಾಡಿಸುತ್ತದೆ. ಹಾಗಾದ್ರೆ ಕೇಸರಿಯನ್ನು ತ್ವಚೆಯ ಆರೈಕೆಗೆ ಹೇಗೆ ಬಳಸುತ್ತಾರೆ ಅಂತಾ ಇಲ್ಲಿ ನಾವು ತಿಳಿಯೋಣ.


    ಕೇಸರಿ ಚರ್ಮಕ್ಕೆ ಏಕೆ ಪ್ರಯೋಜನಕಾರಿ?


    ಎನ್‌ ಸಿಬಿಐ ನಲ್ಲಿ ಪ್ರಕಟವಾದ ಸಂಶೋಧನೆ ಪ್ರಕಾರ, ಚರ್ಮವನ್ನು ಮೃದುಗೊಳಿಸಲು ಮತ್ತು ತೇವಗೊಳಿಸಲು ಕೇಸರಿ ಬಳಕೆ ಪರಿಣಾಮಕಾರಿ ಆಗಿದೆ. ಜೊತೆಗೆ ಕೇಸರಿಯು ಹೊಳೆಯುವ ಮತ್ತು ಸ್ಪಷ್ಟ ಚರ್ಮ ಪಡೆಯಲು ಸಹ ಪ್ರಯೋಜನಕಾರಿ ಆಗಿದೆ. ಕೇಸರಿ ಸೋರಿಯಾಸಿಸ್, ಎಸ್ಜಿಮಾ, ಮೊಡವೆ ಮತ್ತು ಗಾಯದಂತಹ ಅನೇಕ ಚರ್ಮದ ಸಮಸ್ಯೆ ನಿವಾರಿಸುತ್ತದೆ.


    ಚರ್ಮದ ಆರೈಕೆಗೆ ಕೇಸರಿ ಪ್ರಯೋಜನಗಳು ಹೀಗಿವೆ


    ಕಪ್ಪು ವಲಯ ಕಡಿಮೆ ಮಾಡುತ್ತದೆ


    ಕೇಸರಿ ಹಲವು ವರ್ಷಗಳಿಂದ ಗಿಡಮೂಲಿಕೆ ಔಷಧಿಯಾಗಿ ಬಳಕೆ ಮಾಡಲಾಗ್ತಿದೆ. ಕೇಸರಿ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಇದು ಕಣ್ಣಿನ ಕೆಳಗಿನ ಕಪ್ಪು ವರ್ತುಲಗಳ ಸಮಸ್ಯೆಗೆ ಪರಿಹಾರ ನೀಡುತ್ತದೆ. ಇದು ಮೈಬಣ್ಣ ಸುಧಾರಿಸುತ್ತದೆ. ಕೇಸರಿ ಬಳಕೆ ಸೂರ್ಯನ ಹಾನಿಕಾರಕ ಯುವಿ ಕಿರಣಗಳ ಪರಿಣಾಮ ತೊಡೆದು ಹಾಕಲು ಸಹಕಾರಿ. ಕೇಸರಿಯು ಉರಿಯೂತ ಕಡಿಮೆ ಮಾಡುತ್ತದೆ.




    ಕೇಸರಿ ಮೊಡವೆ ಕಡಿಮೆ ಮಾಡುತ್ತದೆ


    ಮೊಡವೆ ಸಮಸ್ಯೆಗೆ ಕೇಸರಿ ಪರಿಹಾರ ನೀಡುತ್ತದೆ. ಕೇಸರಿಯಲ್ಲಿರುವ ಸಫ್ರಾನಲ್ ಅಂಶವು ಮೊಡವೆಗಳ ಸಮಸ್ಯೆ ಮೇಲೆ ಪರಿಣಾಮಕಾರಿ ಆಗಿದೆ. ಮೊಡವೆ ಸಮಸ್ಯೆಯಿಂದ ಪರಿಹಾರ ನೀಡುತ್ತದೆ.


    ಕೇಸರಿಯನ್ನು ತ್ವಚೆಗೆ ಹೇಗೆ ಬಳಸುವುದು?


    ಒಂದು ಬಟ್ಟಲಿನಲ್ಲಿ 3 ಕೇಸರಿ ಎಳೆ, ಟೀಚಮಚ ಹಾಲನ್ನು ಮಿಶ್ರಣ ಮಾಡಿ. ಈಗ ಅದನ್ನು ಕ್ಲೀನ್ ಮುಖಕ್ಕೆ ಹಚ್ಚಿ, 25 ನಿಮಿಷ ನಂತರ ಸರಳ ನೀರಿನಿಂದ ಸ್ವಚ್ಛಗೊಳಿಸಿ. ನಿಯಮಿತವಾಗಿ ಬಳಸಿ.


    ರೋಸ್ ವಾಟರ್ ಮತ್ತು ಕೇಸರಿ ಟೋನರ್


    ಒಂದು ಬಟ್ಟಲಿನಲ್ಲಿ 3 ಎಳೆ ಕೇಸರಿ ಮತ್ತು 4 ರಿಂದ 5 ಟೀ ಚಮಚ ರೋಸ್ ವಾಟರ್ ಮಿಶ್ರಣ ಮಾಡಿ. ಈಗ ಅದನ್ನು ಟೋನರ್ ಆಗಿ ಬಳಸಿ. ಈ ಟೋನರ್ ಪ್ರತಿದಿನ ಬಳಸಿ.


    ಕೇಸರಿ ಫೇಸ್ ಪ್ಯಾಕ್


    ಹೊಳೆಯುವ ಚರ್ಮಕ್ಕಾಗಿ ಎರಡು ಚಮಚ ಹಾಲಿನ ಪುಡಿ, 6 ಕೇಸರಿ ಎಳೆ, ಅಗತ್ಯವಿರುವಂತೆ ನೀರು ಬೆರೆಸಿ ದಪ್ಪ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ, ಅರ್ಧ ಗಂಟೆಯ ನಂತರ ಮುಖವನ್ನು ಸ್ವಚ್ಛಗೊಳಿಸಿ.


    ಕೇಸರಿ ಮತ್ತು ಚಂದನದ ಫೇಸ್ ಪ್ಯಾಕ್


    ಒಂದು ಚಮಚ ಶ್ರೀಗಂಧದ ಪುಡಿ, ರೋಸ್ ವಾಟರ್‌, 6 ಕೇಸರಿ ಎಳೆ ಮಿಶ್ರಣ ಮಾಡಿ. ಮುಖದ ಮೇಲೆ ಹಚ್ಚಿ, 45 ನಿಮಿಷ ನಂತರ ಸರಳ ನೀರಿನಿಂದ ಮುಖವನ್ನು ಸ್ವಚ್ಛಗೊಳಿಸಿ.


    ಇದನ್ನೂ ಓದಿ: ಮೃದುವಾದ ಮತ್ತು ಹೊಳೆಯುವ ಕೂದಲು ಬೇಕೇ? ಹಾಗಾದ್ರೆ ಪ್ರತಿದಿನ ಈ ಹೂವುಗಳ ಹೇರ್ ಮಾಸ್ಕ್ ಹಾಕೊಳ್ಳಿ


    ಆಂಟಿ ಟ್ಯಾನಿಂಗ್ ಕೇಸರಿ ಮಾಸ್ಕ್


    ಕಂದು ಬಣ್ಣದ ಚರ್ಮ ನಿವಾರಣೆಗೆ 4 ಕೇಸರಿ ಎಳೆ, ಚಮಚ ಜೇನುತುಪ್ಪ, ಅರ್ಧ ಚಮಚ ಹಾಲು ಮತ್ತು ಒಂದು ಚಮಚ ಶ್ರೀಗಂಧದ ಪುಡಿ ಮಿಶ್ರಣ ಮಾಡಿ. ಮುಖಕ್ಕೆ ಹಚ್ಚಿ, ಅರ್ಧ ಗಂಟೆಯ ನಂತರ ಉಗುರುಬೆಚ್ಚಗಿನ ನೀರಿನಿಂದ ಮುಖವನ್ನು ಸ್ವಚ್ಛಗೊಳಿಸಿ.

    Published by:renukadariyannavar
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು