Skin Care: ತ್ವಚೆಯ ಅಂದಕ್ಕೆ ಹಾಗೂ ಚರ್ಮದ ಸೋಂಕು ನಿವಾರಣೆಗೆ ತುಳಸಿಯನ್ನು ಹೀಗೆ ಬಳಸಿ

ತುಳಸಿ ಅದರ ಗುಣಲಕ್ಷಣಗಳು ಮತ್ತು ಪೋಷಕಾಂಶಗಳಿಂದ ಚರ್ಮಕ್ಕೆ ಪ್ರಯೋಜನಕಾರಿ ಆಗಿದೆ. ತುಳಸಿಯು ಬೀಟಾ ಕ್ಯಾರೋಟಿನ್ ಮತ್ತು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲ. ಇದು ಚರ್ಮದ ಕೋಶಗಳನ್ನು ಹಾನಿಯಿಂದ ರಕ್ಷಿಸುತ್ತದೆ. ತುಳಸಿ ಶುದ್ಧೀಕರಿಸುವ ಪರಿಣಾಮ ಹೊಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಚರ್ಮದ ಆರೋಗ್ಯ (Skin Health) ಕಾಪಾಡಲು ಮತ್ತು ಸುಂದರವಾದ ಹಾಗೂ ಹೊಳೆಯುವ (Beautiful And Brighten) ತ್ವಚೆಗೆ ಹಲವು ಮನೆಮದ್ದುಗಳು (Home Remedies) ಉತ್ತಮ ಫಲಿತಾಂಶ ನೀಡುತ್ತವೆ. ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ವೆಚ್ಚದ ಕ್ರೀಮ್ ಮತ್ತು ರಾಸಾಯನಿಕ ಉತ್ಪನ್ನಗಳು ಪ್ರತಿ ಬಾರಿ ನಿಮ್ಮ ತ್ವಚೆಯ ಅಂದ ಕಾಪಾಡುವಲ್ಲಿ ವಿಫಲವಾಗಬಹುದು. ಕೆಲವೊಮ್ಮೆ ಪ್ರಯೋಜನ ನೀಡುವ ಬದಲು ಅವು ನಿಮ್ಮ ತ್ವಚೆಯನ್ನು ಹಾಳು ಮಾಡುತ್ತವೆ. ಹಾಗಾಗಿ ನೈಸರ್ಗಿಕ, ಗಿಡಮೂಲಿಕೆ ಮತ್ತು ಆಯುರ್ವೇದ ಗಿಡಮೂಲಿಕೆ ಮತ್ತು ಮನೆಮದ್ದುಗಳ ಬಳಕೆ ನಿಮಗೆ ಸಕಾರಾತ್ಮಕ ಫಲಿತಾಂಶ ನೀಡುತ್ತದೆ. ಹಾಗಾಗಿ ಇವುಗಳ ಬಳಕೆಗೆ ತಜ್ಞರು ಶಿಫಾರಸು ಮಾಡುತ್ತಾರೆ. ತ್ವಚೆಯ ಅಂದ ಕಾಪಾಡುವ ನೈಸರ್ಗಿಕ ಮೂಲಿಕೆಗಳಲ್ಲಿ ತುಳಸಿ ಸಹ ಒಂದಾಗಿದೆ.

    ತುಳಸಿ ಗಿಡಮೂಲಿಕೆಯನ್ನು ಆಯುರ್ವೇದದಲ್ಲಿ ಸಂಜೀವನಿ ಎಂದು ಕರೆಯುತ್ತಾರೆ. ಇದು ಋತುಮಾನದ ಸೋಂಕುಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಜೊತೆಗೆ ನಿಮ್ಮ ತ್ವಚೆಗೆ ಬೇಕಾದ ಹೊಳಪು ನೀಡುತ್ತದೆ.

    ತುಳಸಿ ತ್ವಚೆಗೆ ಹೇಗೆ ಪ್ರಯೋಜನಕಾರಿ?

    ತುಳಸಿ ಅದರ ಗುಣಲಕ್ಷಣಗಳು ಮತ್ತು ಪೋಷಕಾಂಶಗಳಿಂದ ಚರ್ಮಕ್ಕೆ ಪ್ರಯೋಜನಕಾರಿ ಆಗಿದೆ. ಅಮೇರಿಕನ್ ಜರ್ನಲ್ ಆಫ್ ಎಥ್ನೋಮೆಡಿಸಿನ್ ನಡೆಸಿದ ಸಂಶೋಧನೆ ಪ್ರಕಾರ, ವಿಟಮಿನ್ ಎ ಮತ್ತು ಸಿ ಯಂತಹ ಪೋಷಕಾಂಶ ಹೊಂದಿದೆ ಎಂದು ಹೇಳಿದೆ. ತುಳಸಿಯು ಬೀಟಾ ಕ್ಯಾರೋಟಿನ್ ಮತ್ತು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲ. ಇದು ಚರ್ಮದ ಕೋಶಗಳನ್ನು ಹಾನಿಯಿಂದ ರಕ್ಷಿಸುತ್ತದೆ.

    ಇದನ್ನೂ ಓದಿ: ವಾರವಾದ್ರೂ ಅತಿಸಾರ ಕಡಿಮೆ ಆಗ್ತಿಲ್ಲ ಅಂದ್ರೆ ಅದು ಅಪಾಯದ ಸೂಚನೆ

    ಹೊಳೆಯುವ ಚರ್ಮಕ್ಕಾಗಿ ತುಳಸಿ ಬಳಕೆ

    ಇತ್ತೀಚಿನ ಸಂಶೋಧನಾ ಪ್ರಬಂಧದ ಪ್ರಕಾರ, ತುಳಸಿ ಶುದ್ಧೀಕರಿಸುವ ಪರಿಣಾಮ ಹೊಂದಿದೆ. ಇದು ರಕ್ತವನ್ನು ಶುದ್ಧೀಕರಿಸುತ್ತದೆ. ತುಳಸಿ ರಕ್ತ ಶುದ್ಧೀಕರಣದ ಮೂಲಕ ಚರ್ಮದ ಮೇಲೆ ಹೊಳಪು ತರುತ್ತದೆ. ಇದಕ್ಕಾಗಿ ತುಳಸಿ ಬಳಸಬಹುದು ಮತ್ತು ಫೇಸ್ ಪ್ಯಾಕ್ ಹಾಕಬಹುದು.

    ಚರ್ಮದ ಸೋಂಕು ನಿವಾರಿಸುತ್ತದೆ

    ತುಳಸಿ ಚರ್ಮದ ಸೋಂಕನ್ನು ಹೋಗಲಾಡಿಸುತ್ತದೆ. ಇಂಟರ್ನ್ಯಾಷನಲ್ ರಿಸರ್ಚ್ ಜರ್ನಲ್ ಆಫ್ ಇಂಟಿಗ್ರೇಟೆಡ್ ಮೆಡಿಸಿನ್ & ಸರ್ಜರಿ ನಡೆಸಿದ ಸಂಶೋಧನೆ ಪ್ರಕಾರ, ತುಳಸಿ ಉತ್ಕರ್ಷಣ ನಿರೋಧಕ ಪರಿಣಾಮ ಹೊಂದಿದೆ. ಆಕ್ಸಿಡೇಟಿವ್ ಒತ್ತಡ ಕಡಿಮೆ ಮಾಡುತ್ತದೆ. ಇದು ಎಸ್ಜಿಮಾ ಅಂದ್ರೆ ತುರಿಕೆ, ಕೆಂಪು ದದ್ದು ಸೇರಿದಂತೆ ಗಂಭೀರ ಚರ್ಮದ ಸಮಸ್ಯೆ ನಿವಾರಿಸುತ್ತದೆ. ಮೊಡವೆಗೆ ಪರಿಹಾರ ನೀಡುತ್ತದೆ.

    ಮೊಡವೆ ಹೋಗಲಾಡಿಸಲು ತುಳಸಿ ಎಲೆಗಳಿಂದ ತೆಗೆದ ಎಣ್ಣೆ ಬಳಸಬಹುದು. ಇದು ಬ್ಯಾಕ್ಟೀರಿಯಾ ವಿರೋಧಿ ಪರಿಣಾಮ ಹೊಂದಿದೆ. ಇದು ಮೊಡವೆ ಕಡಿಮೆ ಮಾಡುತ್ತದೆ. ಲಿನೋಲಿಕ್ ಆಮ್ಲವು ಮೊಡವೆಗಳಲ್ಲಿನ ಉರಿಯೂತ ಕಡಿಮೆ ಮಾಡುತ್ತದೆ.

    ತುಳಸಿ ತ್ವಚೆಯ ಟೋನರ್ ಆಗಿದೆ

    ತುಳಸಿಯನ್ನು ಸ್ಕಿನ್ ಟೋನರ್ ಆಗಿ ಬಳಸಬಹುದು. ಉತ್ಕರ್ಷಣ ನಿರೋಧಕ ಹೊಂದಿರುವ ಗಿಡಮೂಲಿಕೆಗಳು ಚರ್ಮವನ್ನು ಟೋನ್ ಮಾಡುತ್ತವೆ.

    ತುಳಸಿ ಎಲೆಗಳನ್ನು ನೀರಿನಲ್ಲಿ ಕುದಿಸಿ. ನೀರಿನ ಬಣ್ಣವು ಹಸಿರು ಬಣ್ಣಕ್ಕೆ ತಿರುಗಿದಾಗ, ನಂತರ ಗ್ಯಾಸ್ ಅನ್ನು ಆಫ್ ಮಾಡಿ ಮತ್ತು ಅದು ತಣ್ಣಗಾದ ನಂತರ, ಈ ನೀರನ್ನು ಸ್ಪ್ರೇ ಬಾಟಲಿಗೆ ಹಾಕಿ, ಟೋನರ್ ಆಗಿ ಬಳಸಿ.

    ತುಳಸಿ ಮತ್ತು ಅರಿಶಿನ ಫೇಸ್ ಪ್ಯಾಕ್

    ನೀವು ತುಳಸಿ ಜೊತೆ ಅರಿಶಿನ ಫೇಸ್ ಪ್ಯಾಕ್ ಮಾಡಿ ಅನ್ವಯಿಸಿ. ಹಸಿ ಅರಿಶಿನ ಪುಡಿಯನ್ನು ತುಳಸಿ ಎಲೆಗಳ ಕುದಿಸಿದ ನೀರಿನೊಂದಿಗೆ ಬೆರೆಸಿ ಮುಖಕ್ಕೆ ಬಳಸಬಹುದು.

    ಜೇನುತುಪ್ಪ ಮತ್ತು ತುಳಸಿ ಫೇಸ್ ಪ್ಯಾಕ್

    ತುಳಸಿ ಟೋನರಿನಲ್ಲಿ ಜೇನುತುಪ್ಪ ಬೆರೆಸಿ ಬಳಸಿ. ತುಳಸಿ ಪೇಸ್ಟ್ ನಲ್ಲಿ ಜೇನುತುಪ್ಪವನ್ನು ಮುಖಕ್ಕೆ ಹಚ್ಚಬಹುದು. ಫೇಸ್ ಪ್ಯಾಕ್ ಒಣಗಿಸಿದ ನಂತರ, ಸರಳ ನೀರಿನಿಂದ ಮುಖ ತೊಳೆಯಿರಿ.

    ತುಳಸಿ ಮತ್ತು ಮೊಸರು

    ತುಳಸಿ ಪೇಸ್ಟ್ ನಲ್ಲಿ ಮೊಸರು ಬೆರೆಸಿ ಮುಖಕ್ಕೆ ಹಚ್ಚಿ. 5-10 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆಯಿರಿ.

    ಇದನ್ನೂ ಓದಿ: ಕೊಬ್ಬಿನಾಂಶ ಇದ್ದರೂ ತೂಕ ಇಳಿಸುತ್ತೆ ಈ ಆಹಾರ ಪದಾರ್ಥಗಳು!

    ತುಳಸಿ ಮತ್ತು ರೋಸ್ ವಾಟರ್

    ತುಳಸಿಯ ಪೇಸ್ಟ್ ಮಾಡಿ ಅದಕ್ಕೆ ಕೆಲವು ಹನಿ ರೋಸ್ ವಾಟರ್ ಹಾಕಿ ಮುಖಕ್ಕೆ ಅನ್ವಯಿಸಿ. ತುಳಸಿ ಟೋನರ್ ಗೆ ರೋಸ್ ವಾಟರ್ ಬೆರೆಸಿ ಬಳಸಬಹುದು.
    Published by:renukadariyannavar
    First published: