• Home
  • »
  • News
  • »
  • lifestyle
  • »
  • Collagen Foods: ಚರ್ಮ ಮತ್ತು ಮೂಳೆಗಳ ಆರೋಗ್ಯಕ್ಕೆ ಈ ಪದಾರ್ಥಗಳು ಸಹಕಾರಿ

Collagen Foods: ಚರ್ಮ ಮತ್ತು ಮೂಳೆಗಳ ಆರೋಗ್ಯಕ್ಕೆ ಈ ಪದಾರ್ಥಗಳು ಸಹಕಾರಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಾರುಕಟ್ಟೆಯಲ್ಲಿ ಬರುವ ಅನೇಕ ಸೌಂದರ್ಯ ವರ್ಧಕ ಉತ್ಪನ್ನಗಳಲ್ಲಿ ಕಾಲಜನ್ ಇದೆ. ಆದರೆ ಚರ್ಮವನ್ನು ನೈಸರ್ಗಿಕವಾಗಿ ಆರೋಗ್ಯವಾಗಿಡುವುದು ಮುಖ್ಯ. ಆರೋಗ್ಯಕರ ಆಹಾರ ಮಾತ್ರ ಉತ್ತಮ ಮಾರ್ಗ ಆಗಿದೆ. ನೈಸರ್ಗಿಕವಾಗಿ ಕಾಲಜನ್ ಅನ್ನು ಹೆಚ್ಚಿಸಲು ಸಹಾಯ ಮಾಡುವ ಆಹಾರಗಳ ಬಗ್ಗೆ ಇಲ್ಲಿ ತಿಳಿಯೋಣ.

ಮುಂದೆ ಓದಿ ...
  • Share this:

    ಚರ್ಮವನ್ನು (Skin) ಆರೋಗ್ಯವಾಗಿ ಮತ್ತು ಹೊಳೆಯುವಂತೆ (Health And Brighten) ಮಾಡುವುದು ಸುಲಭ (Easy). ಆದರೆ ಒಳಗಿನಿಂದ ಆರೋಗ್ಯಕರವಾಗಿಡಲು ಸರಿಯಾದ ಪ್ರಮಾಣದ ಕಾಲಜನ್ (Collagen) ನ್ನು ಹೊಂದಿರುವುದು ತುಂಬಾ ಮುಖ್ಯ. ಕಾಲಜನ್ ಎಲ್ಲರ ದೇಹದಲ್ಲಿ ಕಂಡು ಬರುವ ಅತ್ಯಗತ್ಯ ಪ್ರೋಟೀನ್ ಆಗಿದೆ. ಇದು ಚರ್ಮ ಮತ್ತು ಕೂದಲನ್ನು (Skin And Hair) ಆರೋಗ್ಯ ಕಾಪಾಡಲು ಮತ್ತು ಮೂಳೆಗಳನ್ನು ಬಲಪಡಿಸಲು ತುಂಬಾ ಅವಶ್ಯಕವಾಗಿ ಬೇಕು. ತಜ್ಞರ ಪ್ರಕಾರ ಚರ್ಮವನ್ನು ಮೃದುವಾಗಿಡಲು ಮತ್ತು ಸ್ನಾಯುಗಳನ್ನು ಆರೋಗ್ಯ ಕಾಪಾಡಲು ಕಾಲಜನ್ ಬಹಳ ಮುಖ್ಯ. ವಯಸ್ಸಾಗುತ್ತಾ ಹೋದಂತೆ ದೇಹದಲ್ಲಿ ಕಾಲಜನ್ ಪ್ರಮಾಣವು ಕಡಿಮೆ ಆಗುತ್ತದೆ. ಇದು ಮುಖದ ಮೇಲೆ ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳ ಸಮಸ್ಯೆಗೆ ಕಾರಣ ಆಗುತ್ತದೆ.


    ಕಾಲಜನ್ ಕಾಪಾಡಲು ಈ ಪದಾರ್ಥ ಸೇವಿಸಿ


    ಮಾರುಕಟ್ಟೆಯಲ್ಲಿ ಬರುವ ಅನೇಕ ಸೌಂದರ್ಯ ವರ್ಧಕ ಉತ್ಪನ್ನಗಳಲ್ಲಿ ಕಾಲಜನ್ ಇದೆ. ಆದರೆ ಚರ್ಮವನ್ನು ನೈಸರ್ಗಿಕವಾಗಿ ಆರೋಗ್ಯವಾಗಿಡುವುದು ಮುಖ್ಯ. ಆರೋಗ್ಯಕರ ಆಹಾರ ಮಾತ್ರ ಉತ್ತಮ ಮಾರ್ಗ ಆಗಿದೆ. ನೈಸರ್ಗಿಕವಾಗಿ ಕಾಲಜನ್ ಅನ್ನು ಹೆಚ್ಚಿಸಲು ಸಹಾಯ ಮಾಡುವ ಆಹಾರಗಳ ಬಗ್ಗೆ ಇಲ್ಲಿ ತಿಳಿಯೋಣ.


    ದೇಹವು ಸಾಕಷ್ಟು ಕಾಲಜನ್ ನೀಡುವ ಪದಾರ್ಥಗಳಿವು!


    ಸಿಟ್ರಸ್ ಹಣ್ಣುಗಳ ಸೇವನೆ ಹೆಚ್ಚಿಸಿ


    ಸಿಟ್ರಸ್ ಹಣ್ಣುಗಳು ಸಾಕಷ್ಟು ಫೋಲೇಟ್, ತಾಮ್ರ, ಪೊಟ್ಯಾಸಿಯಮ್, ಆಹಾರದ ಫೈಬರ್ ಮತ್ತು ಇತರ ಪೋಷಕಾಂಶ ಹೊಂದಿವೆ. ಇದು ವಿಟಮಿನ್-ಸಿ ಯ ಅತ್ಯುತ್ತಮ ಮೂಲ ಆಗಿದೆ. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಜೊತೆಗೆ ನೈಸರ್ಗಿಕವಾಗಿ ಕಾಲಜನ್ ಅನ್ನು ಹೆಚ್ಚಿಸುತ್ತದೆ.




    ಸಿಟ್ರಸ್ ಹಣ್ಣುಗಳಲ್ಲಿ ವಿಟಮಿನ್ ಸಿ ಇದೆ. ಇದು ಕಾಲಜನ್ ಪ್ರಮಾಣ ಹೆಚ್ಚಿಸುತ್ತದೆ. ಇದು ತ್ವಚೆಯನ್ನು ಹೈಡ್ರೀಕರಿಸುತ್ತದೆ. ಹಾಗೂ ನಿರ್ವಿಷಗೊಳಿಸಲು ಸಹಕಾರಿ.


    ಟೊಮ್ಯಾಟೋ ಪ್ರಯೋಜನಕಾರಿ


    ಟೊಮ್ಯಾಟೋ ಸೇವನೆ ಆರೋಗ್ಯಕ್ಕೆ ಹಾಗೂ ತ್ವಚೆಗೆ ಮುಖ್ಯ. ಇದರಲ್ಲಿ ಇರುವ ಪೋಷಕಾಂಶಗಳಾದ ವಿಟಮಿನ್ ಇ, ವಿಟಮಿನ್ ಸಿ, ಬೀಟಾ ಕ್ಯಾರೋಟಿನ್, ಕೆರೊಟಿನಾಯ್ಡ್ ಗಳು ದೀರ್ಘಕಾಲ ಆರೋಗ್ಯ ಕಾಪಾಡುತ್ತವೆ. ಕಾಲಜನ್ ಅನ್ನು ಹೆಚ್ಚಿಸುವ ಉತ್ತಮ ಮೂಲ ಆಗಿದೆ.


    ಟೊಮೆಟೊ ದೇಹದಲ್ಲಿ ಲೈಕೋಪೀನ್ ಎಂಬ ಆಂಟಿಆಕ್ಸಿಡೆಂಟ್ ನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮಧ್ಯಮ ಗಾತ್ರದ ಟೊಮೆಟೊ 30 ಪ್ರತಿಶತ ಕಾಲಜನ್ ನೀಡುತ್ತದೆ. ಕಾಲಜನ್‌ನ ಉತ್ತಮ ಮೂಲ ಆಗಿದೆ.


    ಅಲೋವೆರಾ ಬಳಸಿ


    ಅಲೋವೆರಾವನ್ನು ದೀರ್ಘಕಾಲ ಗಾಯ ಗುಣಪಡಿಸಲು ಬಳಸಲಾಗುತ್ತದೆ. ಆ್ಯಂಟಿಆಕ್ಸಿಡೆಂಟ್‌ಗಳು ಚರ್ಮದಲ್ಲಿ ಕಾಲಜನ್ ಅನ್ನು ಹೆಚ್ಚಿಸುತ್ತವೆ. ಅಲೋವೆರಾ ಸೇವನೆಯು ಕಾಲಜನ್ ಹೆಚ್ಚಿಸುತ್ತದೆ. ಚರ್ಮವನ್ನು ಸುಧಾರಿಸುತ್ತದೆ. ಅಗತ್ಯ ಅಂಶಗಳು ಹೊಟ್ಟೆ ಮತ್ತು ಮಧುಮೇಹಕ್ಕೆ ಸಂಬಂಧಿಸಿದ ಸಮಸ್ಯೆ ನಿವಾರಿಸಲು ಪರಿಣಾಮಕಾರಿ. ಅಲೋವೆರಾ ಜ್ಯೂಸ್ ಅಥವಾ ಜೆಲ್ ರೂಪದಲ್ಲಿದೆ.


    ಮೀನು ಮತ್ತು ಮೊಟ್ಟೆ ಬಿಳಿ ಭಾಗ


    ದೇಹದಲ್ಲಿ ಕಾಲಜನ್ ಪ್ರಮಾಣ ಹೆಚ್ಚಿಸಲು ಮೀನು ಮತ್ತು ಮೊಟ್ಟೆ ಬಿಳಿ ಭಾಗ ಸಹಕಾರಿ. ಮೊಟ್ಟೆಯ ಬಿಳಿ ಭಾಗವು ಪ್ರೋಲಿನ್ ಎಂಬ ಅತ್ಯಗತ್ಯ ಅಮೈನೋ ಆಮ್ಲ ಹೊಂದಿದೆ. ಕಾಲಜನ್ ಅನ್ನು ಹೆಚ್ಚಿಸಲು ಇದು ಅತ್ಯಗತ್ಯ ಅಂಶ ಆಗಿದೆ. ಇದು ಮೀನಿನ ಚರ್ಮವನ್ನು ಕಾಲಜನ್‌ ಉತ್ತಮ ಮೂಲ ಆಗಿದೆ.


    ಇದನ್ನೂ ಓದಿ: ಸಿಹಿ ಗೆಣಸು, ತಿಂದರೆ ಆರೋಗ್ಯಕ್ಕೆ ಸೊಗಸು! ಮಧುಮೇಹ ನಿಯಂತ್ರಣಕ್ಕೆ ಇದರಲ್ಲಿದೆ ಮದ್ದು!


    ಕೊತ್ತಂಬರಿ ಸೊಪ್ಪು


    ಕೊತ್ತಂಬರಿ ಸೊಪ್ಪು ಆರೋಗ್ಯಕ್ಕೆ ಮೂಲಿಕೆಯಾಗಿದೆ. ಹೊಟ್ಟೆಯ ಸಮಸ್ಯೆಗಳಿಂದ ಜೀರ್ಣಾಂಗ ವ್ಯವಸ್ಥೆ ಆರೋಗ್ಯವಾಗಿಡುತ್ತದೆ. ಉತ್ತಮ ಪ್ರಮಾಣದ ವಿಟಮಿನ್ ಸಿ ಇದೆ. ಕಾಲಜನ್ ಅನ್ನು ಹೆಚ್ಚಿಸುತ್ತದೆ. ಕೊತ್ತಂಬರಿ ಲಿನೋಲೆನಿಕ್ ಆಮ್ಲ ಚರ್ಮದ ಮೇಲೆ ವಯಸ್ಸಾಗುವಿಕೆ ತೆಗೆಯುತ್ತದೆ.

    Published by:renukadariyannavar
    First published: