• Home
 • »
 • News
 • »
 • lifestyle
 • »
 • Skin Aging: ಚರ್ಮದ ವಯಸ್ಸಾಗುವಿಕೆ ನಿಧಾನಗೊಳಿಸಲು ಈ ಸಲಹೆ ಪ್ರಯೋಜನಕಾರಿ, ಒಮ್ಮೆ ಪ್ರಯತ್ನಿಸಿ ನೋಡಿ

Skin Aging: ಚರ್ಮದ ವಯಸ್ಸಾಗುವಿಕೆ ನಿಧಾನಗೊಳಿಸಲು ಈ ಸಲಹೆ ಪ್ರಯೋಜನಕಾರಿ, ಒಮ್ಮೆ ಪ್ರಯತ್ನಿಸಿ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಡರ್ಮಾ ಮತ್ತು ಸೌಂದರ್ಯವರ್ಧಕಗಳು ಚರ್ಮದ ಮೇಲಿನ ವಯಸ್ಸಿನ ಗೋಚರ ಚಿಹ್ನೆಗಳನ್ನು ನಿಯಂತ್ರಿಸಿದೆ. ಚರ್ಮದ ವಯಸ್ಸಾಗುವಿಕೆ ಚಿಹ್ನೆಗಳನ್ನು ಕಡಿಮೆ ಮಾಡಲು ಪರಿಹಾರ ಕಂಡುಕೊಳ್ಳುವುದು ಮುಖ್ಯ. ಮನೆಯ ಹೊರಗೆ ಕಚೇರಿ ಅಥವಾ ಜಿಮ್‌ಗೆ ಹೋಗುತ್ತಿದ್ದರೆ ಸನ್‌ಸ್ಕ್ರೀನ್ ಬಳಸುವುದು ಉತ್ತಮ.

 • Share this:

  ವಯಸ್ಸು (Age) ಹೆಚ್ಚಾದಂತೆ ಚರ್ಮದ ವಯಸ್ಸು (Skin Age) ಹೆಚ್ಚಾಗುತ್ತದೆ. ಹೆಚ್ಚುತ್ತಿರುವ ವಯಸ್ಸಿನಲ್ಲಿ ಮುಖದ ಚರ್ಮ (Face Skin) ಶುಷ್ಕ, ತೆಳುವು ಮತ್ತು ಸಡಿಲವಾಗಬಹುದು. ಜೊತೆಗೆ ಕಣ್ಣುಗಳ (Eyes) ಸುತ್ತ ಸುಕ್ಕು ಕಾಣಿಸಿಕೊಳ್ಳುವುದು ಚರ್ಮದ ವಯಸ್ಸಾಗುವಿಕೆಯ (Aging) ಸಂಕೇತವಾಗಿದೆ. ಅದನ್ನು ತಡೆಯಲು ಸಾಧ್ಯವಿಲ್ಲ. ಆದರೆ ನಿಧಾನಗೊಳಿಸುವ ಕೆಲವು ಕ್ರಮಗಳಿವೆ. ಡರ್ಮಾ ಮತ್ತು ಸೌಂದರ್ಯವರ್ಧಕಗಳು ಚರ್ಮದ ಮೇಲಿನ ವಯಸ್ಸಿನ ಗೋಚರ ಚಿಹ್ನೆಗಳನ್ನು ನಿಯಂತ್ರಿಸಿದೆ. ಚರ್ಮದ ವಯಸ್ಸಾಗುವಿಕೆ ಚಿಹ್ನೆಗಳನ್ನು ಕಡಿಮೆ ಮಾಡಲು ಪರಿಹಾರ ಕಂಡುಕೊಳ್ಳುವುದು ಮುಖ್ಯ. ಮನೆಯ ಹೊರಗೆ ಕಚೇರಿ ಅಥವಾ ಜಿಮ್‌ಗೆ ಹೋಗುತ್ತಿದ್ದರೆ ಸನ್‌ಸ್ಕ್ರೀನ್ ಬಳಸುವುದು ಉತ್ತಮ. ಸೂರ್ಯನ ಬೆಳಕಿಗೆ ಹೆಚ್ಚು ಒಡ್ಡಿಕೊಳ್ಳುವುದು ಕಡಿಮೆ ಮಾಡಿ.


  ಧೂಮಪಾನ ತ್ಯಜಿಸುವುದು


  ಧೂಮಪಾನ ಚರ್ಮವನ್ನು ನಿರ್ಜಲೀಕರಣಗೊಳಿಸುತ್ತದೆ. ಮತ್ತು ವಯಸ್ಸಾಗುವಿಕೆ ವೇಗ ಹೆಚ್ಚಿಸುತ್ತದೆ. ಮುಖದ ಚರ್ಮದ ಬಣ್ಣವು ಬದಲಾಗುತ್ತದೆ. ಸುಕ್ಕು ಉಂಟಾಗದಂತೆ ತಡೆಯಲು ಧೂಮಪಾನ ತ್ಯಜಿಸಿ.


  ಫೇಸ್ ವಾಶ್ ಬದಲಾಯಿಸಿ


  ವಯಸ್ಸಾದಂತೆ ಚರ್ಮವು ಹೆಚ್ಚು ಸೂಕ್ಷ್ಮವಾಗುತ್ತದೆ. ಕಡಿಮೆ ಎಣ್ಣೆಯುಕ್ತವಾಗುತ್ತದೆ. ಹಾಗಾಗಿ ವೈದ್ಯರ ಸಂಪರ್ಕದ ನಂತರ ಮುಖಕ್ಕೆ ಯಾವ ಫೇಸ್ ವಾಶ್ ಬಳಸಬೇಕೆಂದು ಸಲಹೆ ಪಡೆಯಿರಿ.


  ಇದನ್ನೂ ಮಾಡಿ: ಹಬ್ಬಗಳಲ್ಲಿ ತೂಕ ಇಳಿಕೆ ಜರ್ನಿ ಸುಲಭವಾಗ್ಬೇಕಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ


  ಮುಖದ ಹಾವಭಾವ


  ನಿಮ್ಮ ಮುಖದ ಹಾವಭಾವ ಹೇಗೆ ಮಾಡುತ್ತಿರುತ್ತಿರಿ ಎಂಬುದರ ಬಗ್ಗೆ ಗಮನಹರಿಸಿ. ಮುಖದ ಹಾವಭಾವ ಮಾಡಿದಾಗ ಅದಕ್ಕೆ ಆಧಾರವಾಗಿರುವ ಸ್ನಾಯುಗಳು ಸಂಕುಚಿತಗೊಳ್ಳುತ್ತವೆ. ಇದು ಮುಖವನ್ನು ಸುಕ್ಕುಗಟ್ಟುವಂತೆ ಮಾಡುತ್ತದೆ.


  ಸಮತೋಲಿತ ಆಹಾರ ಸೇವಿಸಿ


  ಸಮತೋಲಿತ ಆಹಾರ ಸೇವನೆ ಮಾಡುವುದು ಚರ್ಮದ ಆರೋಗ್ಯಕ್ಕೆ ಬಹಳ ಮುಖ್ಯ. ಇದಕ್ಕಾಗಿ ನಿಯಮಿತ ಆಹಾರದಲ್ಲಿ ತಾಜಾ ಹಣ್ಣುಗಳು, ತರಕಾರಿಗಳು, ವಿಟಮಿನ್ ಭರಿತ ಆಹಾರ ಸೇರಿಸಿ. ಏಕೆಂದರೆ ಉತ್ತಮ ಆಹಾರ ಮತ್ತು ಹೆಚ್ಚು ಹೆಚ್ಚು ನೀರು ಕುಡಿಯುವುದು ಚರ್ಮದ ಆರೋಗ್ಯಕ್ಕೆ ಪ್ರಯೋಜನಕಾರಿ.


  ಕ್ಲೀನ್ ಟೋನ್


  ಪ್ರತಿದಿನ ಮತ್ತು ರಾತ್ರಿ ನಿಮ್ಮ ಚರ್ಮ ತೇವಗೊಳಿಸಿ. ಮಾಯಿಶ್ಚರೈಸಿಂಗ್ ಹಚ್ಚಿಕೊಳ್ಳಬೇಕು. ಚರ್ಮಕ್ಕೆ ತೇವಾಂಶ ಲಾಕ್ ಮಾಡುತ್ತದೆ. ಸುಕ್ಕುಗಳು ಆಳವಾಗುವುದನ್ನು ತಡೆಯುತ್ತದೆ.


  ಮದ್ಯಪಾನ ತಪ್ಪಿಸಿ


  ಆಲ್ಕೋಹಾಲ್ ಚರ್ಮವನ್ನು ನಿರ್ಜಲೀಕರಣಗೊಳಿಸುತ್ತದೆ ಮತ್ತು ರಕ್ತನಾಳ ಹಿಗ್ಗಿಸುತ್ತದೆ. ಇದು ಚರ್ಮಕ್ಕೆ ರಕ್ತ ಮತ್ತು ಪೋಷಕಾಂಶಗಳ ಪೂರೈಕೆ ಕಡಿಮೆ ಮಾಡುತ್ತದೆ. ಚರ್ಮದ ವಯಸ್ಸಾಗುವಿಕೆ ನಿಯಂತ್ರಿಸಲು ಚರ್ಮಶಾಸ್ತ್ರಜ್ಞರನ್ನು ಸಂಪರ್ಕಿಸಿ.


  ದಿನಚರಿಯಲ್ಲಿ ರೆಟಿನಾಲ್‌ ಸೇರಿಸುವುದು


  ನಿಮ್ಮ ರಾತ್ರಿ ದಿನಚರಿಯಲ್ಲಿ ರೆಟಿನಾಲ್ ಸೇರಿಸುವುದು ಸೂರ್ಯನ ಹಾನಿ ಮತ್ತು ಮೊಡವೆಗಳ ವಿರುದ್ಧ ಹೋರಾಡುತ್ತದೆ. ಜೀವಕೋಶದ ನವ ಯೌವನ ಪಡೆಯುವಿಕೆಗೆ ಸಹಕಾರಿ.


  ಉತ್ಕರ್ಷಣ ನಿರೋಧಕ ಮತ್ತು ಪೆಪ್ಟೈಡ್‌ಗಳು


  ಹಸಿರು ಚಹಾವು ವಿಟಮಿನ್ ಎ, ಸಿ ಮತ್ತು ಇ ನಂತಹ ಸರಳ ಪದಾರ್ಥ ಹೊಂದಿದ್ದು, ಚರ್ಮವನ್ನು ಹಾನಿಯಿಂದ ರಕ್ಷಿಸುತ್ತದೆ. ನಿಮ್ಮ ಮಾಯಿಶ್ಚರೈಸರ್ ಬಳಸುವ ಮೊದಲು ಅವುಗಳನ್ನು ಬಳಸಿ.


  ಬೊಟಾನಿಕಲ್ಸ್


  ಸಸ್ಯಗಳಿಂದ ಹುಟ್ಟಿಕೊಂಡಿವೆ ಮತ್ತು ಕಾಲಜನ್ ಸಂಶ್ಲೇಷಣೆಯಲ್ಲಿ ಅವಶ್ಯಕವಾಗಿದೆ ಮತ್ತು ಕಿಣ್ವದ ಹಾನಿಯಿಂದ ಚರ್ಮವನ್ನು ರಕ್ಷಿಸುತ್ತದೆ. ನೀವು ಅವುಗಳನ್ನು ಸೀರಮ್ ಮತ್ತು ಮಾಯಿಶ್ಚರೈಸರ್ ಆಗಿ ಬಳಸಬಹುದು.


  ಬೊಟೊಕ್ಸ್ ಮತ್ತು ಫಿಲ್ಲರ್ಸ್


  ಚರ್ಮವನ್ನು ಪುನರ್ಯೌವನಗೊಳಿಸುತ್ತದೆ ಮತ್ತು ಸುಕ್ಕುಗಳು ಮತ್ತು ರೇಖೆಗಳನ್ನು ನಿಯಂತ್ರಿಸುತ್ತದೆ. ಚರ್ಮವನ್ನು ಮೃದುಗೊಳಿಸಲು ಸಹಾಯ ಮಾಡುತ್ತದೆ.


  ಚರ್ಮದ ಸಮಸ್ಯೆಗಳಾದ ಮೊಡವೆ ಕಲೆಗಳು, ಸೂಕ್ಷ್ಮ ಗೆರೆಗಳು, ವಯಸ್ಸಿನ ಕಲೆಗಳು ಇತ್ಯಾದಿ ಮತ್ತು ಅದರ ಕೆಳಗೆ ಮೃದುವಾಗಿ ಕಾಣುವ ಚರ್ಮವನ್ನು ಬಹಿರಂಗ ಪಡಿಸುತ್ತದೆ.


  ಕೈ ಕಾಲುಗಳ ಬಗ್ಗೆಯೂ ಕಾಳಜಿ ವಹಿಸಿ


  ನಿಮ್ಮ ಮುಖದ ಜೊತೆಗೆ ಕೈಗಳು ಮತ್ತು ಪಾದಗಳು ಸಹ ನಿಮ್ಮ ವಯಸ್ಸನ್ನು ಹೇಳುತ್ತವೆ. ಆದ್ದರಿಂದ, ಮನೆಯಿಂದ ಹೊರಡುವಾಗ, ಕೈ ಮತ್ತು ಪಾದಗಳಿಗೆ ಸನ್‌ಸ್ಕ್ರೀನ್ ಅನ್ನು ಅನ್ವಯಿಸಿ. ಒಣ ಚರ್ಮವನ್ನು ತಡೆಗಟ್ಟಲು ನಿಮ್ಮ ಕೈಗಳನ್ನು ನಿಯಮಿತವಾಗಿ ಹ್ಯಾಂಡ್ ಕ್ರೀಮ್‌ನಿಂದ ಮಸಾಜ್ ಮಾಡಿ.


  ಇದನ್ನೂ ಮಾಡಿ: ಕಣ್ಣುಗಳ ಕೆಳಗಿನ ಊತ ನಿವಾರಿಸಲು ಈ ಉಪಾಯ ಟ್ರೈ ಮಾಡಿ ನೋಡಿ!


  ಇದು ನಿಮ್ಮ ಉಗುರುಗಳು ಮತ್ತು ಹೊರಪೊರೆ ಪೋಷಿಸುತ್ತದೆ. ಸತ್ತ ಚರ್ಮದ ಕೋಶಗಳನ್ನು ತೆಗೆದು ಹಾಕಲು ವಾರಕ್ಕೊಮ್ಮೆ ಬಾಡಿ ಸ್ಕ್ರಬ್ ಬಳಸಿ.

  Published by:renukadariyannavar
  First published: