ಮೊಬೈಲ್ ಮೂಲಕ ಗಲಭೆಗೆ ನಡೆದಿತ್ತು ಸ್ಕೆಚ್; ವಶಕ್ಕೆ ಪಡೆದ ಮೊಬೈಲ್ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ?

ಸದ್ಯ ಬಂಧನವಾಗಿರುವ ಎಲ್ಲರ ಮೊಬೈಲ್​ಗಳಲ್ಲಿ ಅಡಕವಾಗಿರಬಹುದಾದ ಮಾಹಿತಿಗಳನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ‌. ಗಲಭೆ ಬೆನ್ನಲೇ ಪೊಲೀಸರಿಗೆ ಹೆದರಿ ಪ್ರಮುಖ ಆರೋಪಿ  ಮುಜಾಮಿಲ್ ಪಾಷಾ ಹೊರತುಪಡಿಸಿ ಬಂಧಿತರೆಲ್ಲರೂ ತಮ್ಮ ಮೊಬೈಲ್​ಗಳಿಗೆ ಬಂದಿದ್ದ ಸಂದೇಶಗಳನ್ನು ಡಿಲೀಟ್ ಮಾಡಿದ್ದಾರೆ.

news18-kannada
Updated:August 14, 2020, 9:49 PM IST
ಮೊಬೈಲ್ ಮೂಲಕ ಗಲಭೆಗೆ ನಡೆದಿತ್ತು ಸ್ಕೆಚ್; ವಶಕ್ಕೆ ಪಡೆದ ಮೊಬೈಲ್ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ?
ಡಿಜೆ ಹಳ್ಳಿ ಗಲಭೆಯಲ್ಲಿ ಹಾನಿಗೀಡಾದ ಪೊಲೀಸ್ ಠಾಣೆ
  • Share this:
ಬೆಂಗಳೂರು; ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರಿಗೆ ಪ್ರಮುಖ ಸಾಕ್ಷ್ಯ ಸಿಕ್ಕಿದೆ‌. ಗಲಭೆ ನಡೆಯುವ ಮುನ್ನ ಕೆಲವು ಗಂಟೆಗಳಲ್ಲಿ ಗಲಭೆಕೋರರು ರಚಿಸಿಕೊಂಡಿದ್ದ ವಾಟ್ಸಾಪ್ ಗ್ರೂಪ್​ಗಳಲ್ಲಿ ಆಲ್ ಗ್ಯಾದರ್ ಇನ್ ಡಿ.ಜಿ‌‌.ಹಳ್ಳಿ ಪೊಲೀಸ್ ಸ್ಟೇಷನ್ ಎಂಬ ಸಂದೇಶ ರವಾನೆಯಾಗಿದೆ.

ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್​ಡಿಪಿಐ) ಮುಖಂಡ ಮುಜಾಮಿಲ್ ಪಾಷಾ ಈ ಮೆಸೇಜ್ ಕಳುಹಿಸಿದ್ದಾರೆ‌‌‌‌‌‌ ಎನ್ನಲಾಗಿದೆ. ಒಂದೇ ಮೊಬೈಲ್​ನಿಂದ ಏಳು ವಾಟ್ಸಾಪ್ ಗ್ರೂಪ್​ಗಳಿಗೆ ಸಂದೇಶ ಕಳುಹಿಸಿದ್ದ ಬೆನ್ನಲೇ ಗ್ರೂಪ್ ಸದಸ್ಯರು ಒಕೆ ಎಂದೇಳಿ ಕೆಲವೇ ಕ್ಷಣಗಳಲ್ಲಿ ಡಿ.ಜಿ.ಹಳ್ಳಿ ಪೊಲೀಸ್ ಠಾಣೆ ಬಳಿ ಜಮಾಯಿಸಿದ್ದಾರೆ.‌ ವಾಟ್ಸಾಪ್ ಗ್ರೂಪ್​ಗಳಿಗೆ ಎಲ್ಲರೂ ಡಿ.ಜಿ.ಹಳ್ಳಿ ಠಾಣೆ ಬಳಿ ಬನ್ನಿ ಸಂದೇಶ ಕಳುಹಿಸುತ್ತಿದ್ದಂತೆ ಸದಸ್ಯರು ಕೇವಲ ಹತ್ತೇ ನಿಮಿಷಗಳಲ್ಲಿ ಠಾಣೆ ಬಳಿ ಬಂದಿದ್ದಾರೆ. ಪೂರ್ವನಿಯೋಜಿತದಂತೆ ಎಲ್ಲರೂ ಬಂದಿರುವುದನ್ನು ಖಾತ್ರಿ ಪಡಿಸಿಕೊಂಡು‌ ಒಂದು ಗಂಟೆ ಬಳಿಕ ಪೊಲೀಸ್ ಠಾಣೆ ಹಾಗೂ ಪೊಲೀಸ್ ವಾಹನಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ.

ಗಲಭೆ ಸಂಬಂಧ ಮುಜಾಮಿಲ್ ಸೇರಿದಂತೆ 15 ಆರೋಪಿಗಳನ್ನು ಬಂಧಿಸಿ, ಅವರ ಮೊಬೈಲ್​ಗಳನ್ನು ವಶಪಡಿಸಿಕೊಂಡಾಗ ವಾಟ್ಸಾಪ್ ಗ್ರೂಪ್ ರಚನೆ ಹಾಗೂ ಗಲಭೆಕೋರರು ಚಾಟ್ ಮಾಡಿಕೊಂಡಿರುವುದು ತನಿಖೆ ವೇಳೆ ಬಹಿರಂಗವಾಗಿದೆ ಎನ್ನಲಾಗುತ್ತಿದೆ‌. ಮುಜಾಮಿಲ್ ಕ್ರಿಯೆಟ್ ಮಾಡಿಕೊಂಡಿರುವ ಗ್ರೂಪ್​ನಲ್ಲಿ ಸುಮಾರು 250 ಸದಸ್ಯರಿದ್ದಾರೆ. ಗ್ರೂಪ್​ನಲ್ಲಿ ಇತರ ಸದಸ್ಯರು ಬಗ್ಗೆ ಸಿಸಿಬಿ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಇನ್ನೊಂದೆಡೆ  ಗಲಭೆ ಬಳಿಕ ಎಸ್​ಡಿಪಿಐ ಕಾರ್ಯಕರ್ತರು ಪೊಲೀಸರಿಗೆ ಸಿಗದೆ ಪರಾರಿಯಾಗಿದ್ದರು. ಮೊದಲ ಹಂತದಲ್ಲಿ ಪೊಲೀಸರು ಬಂಧಿಸಿದ್ದ 150 ಆರೋಪಿಗಳ ಪೈಕಿ ಯಾರೊಬ್ಬರು ಎಸ್​ಡಿಪಿಐ ಕಾರ್ಯಕರ್ತರು ಇರಲಿಲ್ಲ. ಮುಜಾಮಿಲ್ ಪಾಷನನ್ನು ಬಂಧಿಸಿದ ಬಳಿಕವೇ 10ಕ್ಕೂ ಹೆಚ್ಚು ಸದಸ್ಯರನ್ನು ಸೆರೆ ಹಿಡಿದಿದ್ದರು.

ಇದನ್ನು ಓದಿ: ರಸ್ತೆ, ಓಣಿ, ಗಲ್ಲಿ, ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವಂತಿಲ್ಲ; ಸರ್ಕಾರದ ಮಾರ್ಗಸೂಚಿ

ಸದ್ಯ ಬಂಧನವಾಗಿರುವ ಎಲ್ಲರ ಮೊಬೈಲ್​ಗಳಲ್ಲಿ ಅಡಕವಾಗಿರಬಹುದಾದ ಮಾಹಿತಿಗಳನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ‌. ಗಲಭೆ ಬೆನ್ನಲೇ ಪೊಲೀಸರಿಗೆ ಹೆದರಿ ಪ್ರಮುಖ ಆರೋಪಿ  ಮುಜಾಮಿಲ್ ಪಾಷಾ ಹೊರತುಪಡಿಸಿ ಬಂಧಿತರೆಲ್ಲರೂ ತಮ್ಮ ಮೊಬೈಲ್​ಗಳಿಗೆ ಬಂದಿದ್ದ ಸಂದೇಶಗಳನ್ನು ಡಿಲೀಟ್ ಮಾಡಿದ್ದಾರೆ.‌‌ ಸಂದೇಶದ ಬಗ್ಗೆ ತನಿಖಾಧಿಕಾರಿಗಳು ಈ ಬಗ್ಗೆ ಪ್ರಶ್ನಿಸಿದರೆ ಗಲಭೆಗೂ ನಮಗೂ ಯಾವುದೇ ಸಂಬಂಧ ಇಲ್ಲ. ಅನ್ಯಾಯ ಆಗಿದೆ ಅಂದಿದ್ದಕ್ಕೆ ನಾವೆಲ್ಲ ಹೋಗಿದ್ದೆವು. ಘಟನೆ ಹಿಂದೆ ಎಸ್​ಡಿಪಿಐಗೆ ಸಂಬಂಧ ಇಲ್ಲ ಎನ್ನುತ್ತಿದ್ದಾರೆ ಎನ್ನಲಾಗಿದೆ. ಬಂಧಿತರಿಂದ ವಶಪಡಿಸಿಕೊಂಡ ಮೊಬೈಲ್​ಗಳನ್ನು ಎಫ್​ಎಸ್​ಎಲ್‌ ಕಳುಹಿಸಲು ಸಿಸಿಬಿ ಅಧಿಕಾರಿಗಳು ತೀರ್ಮಾನಿದ್ದಾರೆ ಎಂದು‌ ಮೂಲಗಳು ತಿಳಿಸಿವೆ. ಸದ್ಯ ಮುಜಾಮಿಲ್‌ಪಾಷ ಸೇರಿ‌ 15 ಜನರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
Published by: HR Ramesh
First published: August 14, 2020, 9:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading