ಚಳಿಗಾಲದಲ್ಲಿ ರಕ್ತದಲ್ಲಿನ ಹಿಮೋಗ್ಲೋಬಿನ್ ಹೆಚ್ಚಿಸಲು ಈ ಆಹಾರಗಳನ್ನು ಹೆಚ್ಚಾಗಿ ಸೇವಿಸಿ

ಬೆಲ್ಲವನ್ನು ಕಬ್ಬಿಣದ ಪ್ರಮುಖ ಮೂಲವೆಂದು ಪರಿಗಣಿಸಲಾಗುತ್ತದೆ. ಗಂಟಲು ನೋವು ಮತ್ತು ಶೀತದ ಸಮಸ್ಯೆಗಳಿಗೆ ಶುಂಠಿಯೊಂದಿಗೆ ಬೆಲ್ಲವನ್ನು ತಿನ್ನುವುದು ಉತ್ತಮ. ಹಾಗೆಯೇ ಪ್ರತಿದಿನ ತುಂಡು ಬೆಲ್ಲವನ್ನು ಸೇವಿಸುವುದರಿಂದ ರಕ್ತ ಪರಿಚಲನೆ ಹೆಚ್ಚಾಗುತ್ತದೆ. ಅದರೊಂದಿಗೆ ಹಿಮೋಗ್ಲೋಬಿನ್ ಸಮಸ್ಯೆ ಕೂಡ ದೂರವಾಗುತ್ತವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಆರೋಗ್ಯವಾಗಿರಲು, ದೇಹದಲ್ಲಿ ರಕ್ತ ಪರಿಚಲನೆ ಸರಿಯಾಗಿ ನಡೆಯುವುದು ಬಹಳ ಮುಖ್ಯ. ಇದು ಮಾತ್ರವಲ್ಲ, ರಕ್ತದಲ್ಲಿನ ಹಿಮೋಗ್ಲೋಬಿನ್ ಪ್ರಮಾಣವು ಕಡಿಮೆಯಾದರೆ, ಜನರು ಅನೇಕ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇಂತಹ ಸಮಯದಲ್ಲಿ ರಕ್ತದಲ್ಲಿನ ಹಿಮೋಗ್ಲೋಬಿನ್ ಪ್ರಮಾಣವು ಕಡಿಮೆಯಾಗದಂತೆ ನೋಡಿಕೊಳ್ಳುವುದು ಕೂಡ ಬಹಳ ಮುಖ್ಯ. ಅದರಲ್ಲೂ ವಿಶೇಷವಾಗಿ ಚಳಿಗಾಲದಲ್ಲಿ ಅನಾರೋಗ್ಯದ ಸಮಸ್ಯೆಗಳು ಜಾಸ್ತಿ ತಲೆದೂರುತ್ತವೆ. ಈ ವೇಳೆ ಕೆಲವು ಆಹಾರವನ್ನು ಸೇವಿಸಿ ಹಿಮೋಗ್ಲೊಬಿನ್ ಪ್ರಮಾಣವನ್ನು ನಿಯಂತ್ರಣದಲ್ಲಿರಿಸಬೇಕಾಗುತ್ತದೆ. ಯಾವ ಆಹಾರವನ್ನು ಸೇವಿಸುವುದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸಬಹುದು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

  ಬೀಟ್ರೂಟ್: ಬೀಟ್ರೂಟ್ ಸೇವಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ದೇಹದಲ್ಲಿನ ರಕ್ತದ ಪ್ರಮಾಣವನ್ನು ಹೆಚ್ಚಿಸುವುದಲ್ಲದೆ ರಕ್ತವನ್ನು ಶುದ್ಧೀಕರಿಸುತ್ತದೆ. ಅನೇಕ ಜನರು ಬೀಟ್ರೂಟ್​ನ್ನು ಕಚ್ಚಾ ಸಲಾಡ್ ಆಗಿ ತಿನ್ನುತ್ತಾರೆ. ಇದು ಅತ್ಯುತ್ತಮ ವಿಧಾನ ಎನ್ನಬಹುದು. ಹಾಗೆಯೇ ಇದನ್ನು ಜ್ಯೂಸ್ ಮಾಡಿ ಕುಡಿಯುವುದು ಕೂಡ ಉತ್ತಮ. ಏಕೆಂದರೆ ಬೀಟ್ರೂಟ್​ ದೇಹವನ್ನು ನಿರ್ವಿಷಗೊಳಿಸುವ ಜೊತೆಗೆ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸಲು ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಬೀಟ್ರೂಟ್ ಅನ್ನು ವಾರಕ್ಕೆ ಎರಡು ಬಾರಿಯಾದರೂ ಸೇವಿಸುವ ಜನರು ರಕ್ತ ಮತ್ತು ಹಿಮೋಗ್ಲೋಬಿನ್ ಸಮಸ್ಯೆಗಳ ಅಪಾಯಗಳಿಂದ ದೂರವಿರಬಹುದು.

  ದಾಳಿಂಬೆ: ದೇಹದಲ್ಲಿ ರಕ್ತದ ಪ್ರಮಾಣವನ್ನು ಹೆಚ್ಚಿಸಲು, ದಾಳಿಂಬೆ ಸೇವಿಸುವಂತೆ ಸೂಚಿಸಲಾಗುತ್ತದೆ. ಇದಲ್ಲದೆ, ಸಂಶೋಧನೆಯ ಪ್ರಕಾರ, ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸಲು ದಾಳಿಂಬೆ ಸೇವಿಸುವುದನ್ನು ಬಹಳ ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ. ದಾಳಿಂಬೆಯನ್ನು ತಿನ್ನುವುದು ಅಥವಾ ಜ್ಯೂಸ್ ಮಾಡಿ ಕುಡಿಯುವುದು ಆರೋಗ್ಯಕ್ಕೆ ಉತ್ತಮ. ಕುಡಿಯಲು ನೀವು ಇದನ್ನು ರಸವಾಗಿ ಬಳಸಲು ಬಯಸಬಹುದು.

  ಕ್ಯಾರೆಟ್: ಕ್ಯಾರೆಟ್ ಹಲವು ರೀತಿಯಲ್ಲಿ ಸೇವಿಸಲಾಗುತ್ತದೆ. ಕೆಲವರು ಸಲಾಡ್ ಆಗಿ ತಿಂದರೆ, ಮತ್ತೆ ಕೆಲವರು ಜ್ಯೂಸ್ ಆಗಿ ಸೇವಿಸುತ್ತಿರುತ್ತಾರೆ. ಹೀಗೆ ಸೇವಿಸುತ್ತಿರುವುದು ಆರೋಗ್ಯಕ್ಕೆ ಉತ್ತಮ. ಏಕೆಂದರೆ ಇದರಲ್ಲಿರುವ ಬೀಟಾ ಕ್ಯಾರೋಟಿನ್ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಆದಾಗ್ಯೂ, ಗರ್ಭಾವಸ್ಥೆಯಲ್ಲಿ ಹೆಚ್ಚು ಕ್ಯಾರೆಟ್ ಸೇವಿಸಬಾರದು.

  ಟೊಮ್ಯಾಟೊ: ಟೊಮ್ಯಾಟೊದಲ್ಲಿ ಇರುವ ಉತ್ಕರ್ಷಣ ನಿರೋಧಕಗಳ ಪ್ರಮಾಣವು ಹಿಮೋಗ್ಲೋಬಿನ್ ಹೆಚ್ಚಿಸಲು ಸಹಾಯ ಮಾಡುತ್ತದೆ. ಟೊಮ್ಯಾಟೊ ಸೇವಿಸುವುದರಿಂದ, ದೇಹವು ಸಾಕಷ್ಟು ಪ್ರಮಾಣದ ವಿಟಮಿನ್-ಸಿ ಅನ್ನು ಸಹ ಪಡೆಯುತ್ತದೆ. ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಇದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ನೀವು ಟೊಮ್ಯಾಟೊ ಜ್ಯೂಸ್ ಅಥವಾ ಸೂಪ್​ನಂತೆ ಕುಡಿಯಬಹುದು.

  ಕಿತ್ತಳೆ: ವಿಟಮಿನ್-ಸಿ ಆಹಾರಗಳ ಪ್ರಮುಖ ಮೂಲವೆಂದರೆ ಕಿತ್ತಳೆ. ಇದನ್ನು ರಸವಾಗಿ ಅಥವಾ ಸಾಮಾನ್ಯ ರೀತಿಯಲ್ಲಿ ಸೇವಿಸಬಹುದು. ಕಿತ್ತಳೆ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ಹಿಮೋಗ್ಲೋಬಿನ್ ಸಮಸ್ಯೆಯ ಅಪಾಯವನ್ನು ಹಲವಾರು ಪಟ್ಟು ಕಡಿಮೆ ಮಾಡಬಹುದು.

  ಬೆಲ್ಲ: ಬೆಲ್ಲವನ್ನು ಕಬ್ಬಿಣದ ಪ್ರಮುಖ ಮೂಲವೆಂದು ಪರಿಗಣಿಸಲಾಗುತ್ತದೆ. ಗಂಟಲು ನೋವು ಮತ್ತು ಶೀತದ ಸಮಸ್ಯೆಗಳಿಗೆ ಶುಂಠಿಯೊಂದಿಗೆ ಬೆಲ್ಲವನ್ನು ತಿನ್ನುವುದು ಉತ್ತಮ. ಹಾಗೆಯೇ ಪ್ರತಿದಿನ ತುಂಡು ಬೆಲ್ಲವನ್ನು ಸೇವಿಸುವುದರಿಂದ ರಕ್ತ ಪರಿಚಲನೆ ಹೆಚ್ಚಾಗುತ್ತದೆ. ಅದರೊಂದಿಗೆ ಹಿಮೋಗ್ಲೋಬಿನ್ ಸಮಸ್ಯೆ ಕೂಡ ದೂರವಾಗುತ್ತವೆ.
  Published by:zahir
  First published: