Honeymoon: ಹನಿಮೂನ್ ಗೆ ತೆರಳುವ ಜೋಡಿ ಅಪ್ಪಿ ತಪ್ಪಿಯೂ ಈ 8 ತಪ್ಪುಗಳನ್ನು ಮಾಡಬೇಡಿ

ಕೆಲವೊಮ್ಮೆ ಹನಿಮೂನ್ ನಲ್ಲಾಗುವ ಸಣ್ಣ ಸಣ್ಣ ತಪ್ಪು ಅಥವಾ ಮನಸ್ತಾಪ ನಿಮ್ಮ ಇಡೀ ಟ್ರಿಪ್ ನ್ನು ಹಾಳು ಮಾಡುತ್ತೇವೆ, ಹಾಗಾದ್ರೆ ಹನಿಮೂನ್ ನಲ್ಲಿ ಜೋಡಿ ಯಾವ ತಪ್ಪುಗಳನ್ನು ಮಾಡಬಾರದು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ

ಜೋಡಿ

ಜೋಡಿ

  • Share this:
ಯಾವುದೇ ಜೋಡಿ (Couple) ಇರಲಿ ತಮ್ಮ ಹನಿಮೂನ್ ದಿನಗಳು (Honeymoon Days) ಜೀವನ (Life)  ಪರ್ಯಂತ ನೆನಪಿನಲ್ಲಿ ಇರಬೇಕು ಎಂದು ಬಯಸುತ್ತಾರೆ. ಅದಕ್ಕಾಗಿಯೇ ಸ್ಥಳದ ಆಯ್ಕೆ (Honeymoon Place Selection) ಸೇರಿದಂತೆ ಹಲವು ಪ್ಲಾನ್ ಗಳನ್ನು ಮಾಡಿಕೊಂಡಿರುತ್ತಾರೆ. ಹನಿಮೂನ್ ನಲ್ಲಿ ಕಳೆಯುವ ಪ್ರತಿ ಕ್ಷಣವೂ ರೊಮ್ಯಾಂಟಿಕ್ (Romantic) ಆಗಿರಬೇಕು ಅಂತೆಲ್ಲ ಕನಸು ಕಾಣುತ್ತಾರೆ. ಒಂದು ರೀತಿ ಹನಿಮೂನ್ ಒಬ್ಬರೊನ್ನಬ್ಬರು ಅರ್ಥ ಮಾಡಿಕೊಳ್ಳಲು ಒಳ್ಳೆಯ ಸಂದರ್ಭ. ಹನಿಮೂನ್ ತೆರಳುವ ಬಗ್ಗೆ ಜನ ಗೂಗಲ್ (Google) ಮೊರೆ ಹೋಗುತ್ತಾರೆ. ಕೆಲವೊಮ್ಮೆ ಹನಿಮೂನ್ ನಲ್ಲಾಗುವ ಸಣ್ಣ ಸಣ್ಣ ತಪ್ಪು ಅಥವಾ ಮನಸ್ಥಾಪ ನಿಮ್ಮ ಇಡೀ ಟ್ರಿಪ್ ನ್ನು ಹಾಳು ಮಾಡುತ್ತೇವೆ, ಹಾಗಾದ್ರೆ ಹನಿಮೂನ್ ನಲ್ಲಿ ಜೋಡಿ ಯಾವ ತಪ್ಪುಗಳನ್ನು ಮಾಡಬಾರದು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ

1. ಬುಕ್ಕಿಂಗ್ ವೇಳೆ ಇರಲಿ ಎಚ್ಚರ

ನಿಮಗೆ ಹನಿಮೂನ್ ಹೋಗಬೇಕು ಅಂತ ಮೊದಲೇ ಸ್ಥಳ ಅಯ್ಕೆ ಮಾಡಿರ್ತೀರಿ. ಆದ್ರೆ ನೀವು ಹೋಗುತ್ತಿರುವ ಸಮಯ ಸೂಕ್ತನಾ ಎಂಬುದನ್ನು ಖಚಿತಪಡಿಸಿಕೊಳ್ಳಿ. ತಂಪಾದ ಗಾಳಿ, ಸುತ್ತಲೂ ಹಸಿರು, ಇಬ್ಬನಿ ಇರುವ ಪ್ರದೇಶಗಳು ಚಳಿಗಾಲಕ್ಕೆ ಸೂಕ್ತ. ಅದೇ ಇಂತಹ ಸ್ಥಳಗಳಿಗೆ ಬೇಸಿಗೆಯಲ್ಲಿ ಹೋದ್ರೆ ಅಲ್ಲಿ ಯಾವುದೇ ಈ ತರಹದ ವಾತಾವರಣ ಇರಲ್ಲ. ಇದರಿಂದ ನಿಮ್ಮ ಇಡೀ ಟ್ರಿಪ್ ಪ್ಲಾನ್ ವೇಸ್ಟ್ ಆಗಲಿದೆ. ಟಿಕೆಟ್ ಬುಕ್ ಮಾಡುವ ಮೊದಲೇ ಎಲ್ಲಿ, ಯಾವಾಗ ಎಂಬುದನ್ನು ಪ್ಲಾನ್ ಮಾಡಿಕೊಳ್ಳಬೇಕು.

2. ಆರೋಗ್ಯದ ಬಗ್ಗೆ ಗಮನ ಇರಲಿ

ನೀವು ಯಾವುದೇ ಸ್ಥಳ ಆಯ್ಕೆ ಮಾಡಿಕೊಳ್ಳಿ. ಆದ್ರೆ ಅಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನವಹಿಸಬೇಕು. ಒಂದು ವೇಳೆ ಅನಾರೋಗ್ಯಕ್ಕೆ ಒಳಗಾದ್ರೆ ಪ್ರವಾಸ ರದ್ದುಗೊಳಿಸುವ ಸಾಧ್ಯತೆಗಳೂ ಇರುತ್ತವೆ. ನೀವು ಆಯ್ಕೆ ಮಾಡುವ ಸ್ಥಳದ ವಾತಾವರಣದ ಬಗ್ಗೆ ಹೊರಡುವ ಮುನ್ನವೇ ತಿಳಿದುಕೊಳ್ಳಿ. ಅಲ್ಲಿ ಹೋಗಿ ತೊಂದರೆ ಸಿಲುಕಿಕೊಳ್ಳುವದಕ್ಕಿಂತ ಹನಿಮೂನ್ ಕೆಲ ದಿನ ಮುಂದೂಡಬಹುದು.

ಇದನ್ನೂ ಓದಿ: Dating: ವಿವಾಹಿತ ಪುರುಷನೊಂದಿಗೆ ಡೇಟಿಂಗ್ ಮಾಡ್ತಾ ಇದ್ದೀರಾ? ಹಾಗಿದ್ರೆ, ನೀವು ಮಾಡ್ತಿರೋದು ಸರಿನಾ?

3. ಸರಿಯಾದ ಟ್ರಾವೆಲ್ ಪ್ಲಾನ್

ಟ್ರಾವೆಲ್ ಪ್ಲಾನಿಂಗ್ ಮಾಡುವಾಗ ಸಣ್ಣ ಸಣ್ಣ ಅಂಶಗಳನ್ನು ಗಮನದಲ್ಲಿರಿಸಿಕೊಳ್ಳಬೇಕು. ಎಲ್ಲಿಂದ ಎಲ್ಲಿಗೆ ಹೋಗಬೇಕು? ಅಲ್ಲಿ ನೀವು ಯಾವ ಸಾರಿಗೆ ಬಳಸಬೇಕು? ವಿದೇಶಕ್ಕೆ ತೆರಳುತ್ತಿದ್ರೆ ವಿಮಾನಗಳ ಸಮಯ ಮತ್ತು ವಿಮಾನ ಬದಲಾವಣೆ ಮಾಡೋದು ಹೇಗೆ ಎಂಬಿತ್ಯಾದಿ ಅಂಶಗಳನ್ನು ಗಮನಿಸಬೇಕು, ಜರ್ನಿಯಲ್ಲಿ ಹೆಚ್ಚು ಸಮಯ ಹೇಗೆ ವ್ಯಯ ಆಗುತ್ತೆ ಎಂಬುದರ ಕುರಿತು ಮೊದಲೇ ಪ್ಲಾನ್ ಮಾಡಬೇಕು. ಅವಸರವಾಗಿ ಹನಿಮೂನ್ ಪ್ಲಾನ್ ಮಾಡಿಡ್ರೆ ಇಂತಹ ಸಮಸ್ಯೆಗಳು ಎದುರಿಸಬೇಕಾಗುತ್ತದೆ.

4. ಸೋಶಿಯಲ್ ಮೀಡಿಯಾದಿಂದ ದೂರ ಇರಿ

ಹನಿಮೂನ್ ಅಂದ್ರೆ ಜೋಡಿ ಏಕಾಂತದಲ್ಲಿ ಹೆಚ್ಚು ಸಮಯ ಕಳೆಯಬೇಕು. ಇಬ್ಬರೇ ಜೊತೆಯಲ್ಲಿದ್ದಾಗ ಮೊಬೈಲ್ ನಿಂದ ದೂರವಿರಿ. ಜೊತೆಯಾಗಿ ಕ್ವಾಲಿಟಿ ಸಮಯ ಕಳೆಯೋದರಿಂದ ಒಬ್ಬರಿಗಬೊಬ್ಬರು ಸನೀಹಕ್ಕೆ ಬರಲು ಸಾಧ್ಯವಾಗುತ್ತದೆ. ಸಾಧ್ಯವಾದಷ್ಟು ಸೋಶಿಯಲ್ ಮೀಡಿಯಾ ಖಾತೆ, ಆಫಿಸ್ ವರ್ಕ್ ನಿಂದ ದೂರ ಇರಿ.

5. ಜೊತೆಯಾಗಿ ಸುತ್ತಾಡಿ

ಹನಿಮೂನ್ ಅಂದ್ರೆ ಕೆಲವರು ಬೆಡ್ ರೂಮಿನಲ್ಲಿ ಹೆಚ್ಚು ಸಮಯ ಕಳೆಯಲು ಇಚ್ಛಿಸುತ್ತಾರೆ. ಆದ್ರೆ ಒಂದೇ ಕೋಣೆಯಲ್ಲಿ ಸಮಯ ಕಳೆಯೋದರಿಂದ ನಿಮ್ಮ ಸಂಗಾತಿಗೆ ಬೇಸರ ಉಂಟಾಗಬಹುದು. ಹಾಗಾಗಿ ಸುಂದರ ಸ್ಥಳಕ್ಕೆ ಬರಲು ಸಾಕಷ್ಟು ಹಣ ವ್ಯಯ ಮಾಡಿರುತ್ತೀರಿ. ಆದ್ದರಿಂದ ಜೊತೆಯಾಗಿ ಅಲ್ಲಿಯ ಸ್ಥಳಗಳಿಗೆ ಭೇಟಿ ಮಾಡುತ್ತಾ ಸುಂದರ ಕ್ಷಣಗಳನ್ನು ಆನಂದಿಸಿ.

ಇದನ್ನೂ ಓದಿ: Viral News: ಹೆಂಡತಿಯ ಹುಟ್ಟುಹಬ್ಬ ಮರೆತರೆ ಗಂಡಂದಿರು ಜೈಲು ಪಾಲಾಗೋದು ಖಂಡಿತ - ಸುಂದರ ದ್ವೀಪದಲ್ಲೊಂದು ವಿಚಿತ್ರ ಕಾನೂನು

6. ಬಜೆಟ್ ಬಗ್ಗೆ ಗಮನ ಇರಲಿ

ನೀವೂ ಹನಿಮೂನ್ ಗೆ ತೆರಳುವ ಮುನ್ನವೇ ನಿಮ್ಮ ಬಜೆಟ್ ಕುರಿತು ಲಕ್ಷ್ಮಣ ರೇಖೆ ಎಳೆದುಕೊಳ್ಳಬೇಕು. ಅನಾವಶ್ಯಕ ಶಾಪಿಂಗ್ ನಂತರ ಖರ್ಚುಗಳಿಗೆ ಬ್ರೇಕ್ ಹಾಕಬೇಕು. ಹನಿಮೂನ್ ದಿನ ಕಳೆಯುತ್ತಾ ಹೆಚ್ಚು ಹಣ ಪೋಲಾದ್ರೆ ಜೋಡಿ ಮಧ್ಯೆ ಮನಸ್ತಾಪ ಉಂಟಾಗಬಹುದು.

ಹೀಗೆ ಹನಿಮೂನ್ ಗೆ ತೆರಳುವ ಜೋಡಿ ಸಣ್ಣ ಸಣ್ಣ ವಿಷಯಗಳ ಬಗ್ಗೆಯೂ ಗಮನ ನೀಡಬೇಕು. ಹೊರಗೆ ಇರುವಷ್ಟು ದಿನ ಸೇವಿಸುವ ಆಹಾರದ ಕುರಿತು ಕಾಳಜಿ ತೆಗೆದುಕೊಳ್ಳಬೇಕು. ಆಹಾರ ಪದ್ದತಿ ಸ್ಥಳದಿಂದ ಸ್ಥಳಕ್ಕೆ ಬೇರೆಯಾಗಿರುತ್ತದೆ. ಇದರ ಜೊತೆಗೆ ಹೆಚ್ಚುವರಿ ಹಣ, ಮೊಬೈಲ್, ಬಟ್ಟೆ ಹೀಗೆ ಎಲ್ಲವನ್ನೂ ತೆರಳುವ ಮುನ್ನವೇ ಜೋಡಿಸಿಕೊಳ್ಳಬೇಕು.
Published by:Mahmadrafik K
First published: