• Home
  • »
  • News
  • »
  • lifestyle
  • »
  • Piles Problem: ಟಾಯ್ಲೆಟ್ ಸೀಟ್ ಮೇಲೆ ದೀರ್ಘಕಾಲ ಕುಳಿತುಕೊಳ್ಳುವುದು ಪೈಲ್ಸ್​ಗೆ ಕಾರಣವಾಗುತ್ತೆ!

Piles Problem: ಟಾಯ್ಲೆಟ್ ಸೀಟ್ ಮೇಲೆ ದೀರ್ಘಕಾಲ ಕುಳಿತುಕೊಳ್ಳುವುದು ಪೈಲ್ಸ್​ಗೆ ಕಾರಣವಾಗುತ್ತೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪೈಲ್ಸ್ ಹೊಂದಿರುವ ಜನರು ಕರುಳಿನ ಚಲನೆ ರಕ್ತಸ್ರಾವ ಮತ್ತು ತುರಿಕೆ ಅಥವಾ ಸುಡುವ ಸಂವೇದನೆ ಸಮಸ್ಯೆ ಎದುರಿಸುತ್ತಾರೆ. ಮೂಲವ್ಯಾಧಿ ಸಾಮಾನ್ಯವಾಗಿ ಗುದದ್ವಾರ ಮತ್ತು ಕೆಳಗಿನ ಗುದನಾಳದ ಸುತ್ತಲೂ ಊದಿಕೊಂಡ ಅಥವಾ ಉಬ್ಬುವ ಮಾಂಸದ ಉಂಡೆ ಆಗಿದೆ. ಗುದದ್ವಾರ ಅಥವಾ ಕಡಿಮೆ ಗುದನಾಳದ ಬಳಿ ರಕ್ತನಾಳಗಳ ಮೇಲೆ ಒತ್ತಡ ಹೆಚ್ಚುತ್ತದೆ. ಆಗ ಮೂಲವ್ಯಾಧಿ ಸಮಸ್ಯೆ ಶುರು ಆಗುತ್ತದೆ.

ಮುಂದೆ ಓದಿ ...
  • Share this:

    ಪೈಲ್ಸ್ (Piles) ಅಥವಾ ಹೆಮೊರೊಯಿಡ್ಸ್ ಎಂಬುದು ಒಂದು ದೈಹಿಕ ಅಸ್ವಸ್ಥತೆ (Body Unhealth) ಆಗಿದೆ. ಪೈಲ್ಸ್ ಅಂದ್ರೆ ಮೂಲವ್ಯಾಧಿ ಎಂಬುದು ಎಲ್ಲಾ ವಯಸ್ಸಿನ ಜನರ (People) ಮೇಲೆ ಪರಿಣಾಮ ಬೀರುವ ವೈದ್ಯಕೀಯ ಸ್ಥಿತಿ ಆಗಿದೆ. ಎಷ್ಟೋ ಜನರಿಗೆ ಪೈಲ್ಸ್ ಬಗ್ಗೆ ಹೇಳಿಕೊಳ್ಳಲು ಚಿಕಿತ್ಸೆ ಪಡೆಯಲು ಮುಜುಗರ ಪಡುತ್ತಾರೆ. ಆದ್ರೆ ಪೈಲ್ಸ್ ಬಗ್ಗೆ ಮುಜುಗರ ಪಟ್ಟರೆ ಅದು ಸ್ಥಿತಿಯನ್ನು ಹೆಚ್ಚು ಗಂಭೀರವಾಗಿಸುತ್ತದೆ. ಪೈಲ್ಸ್ ನಲ್ಲಿ ಹಲವು ವಿಧಗಳಿವೆ. ಪೈಲ್ಸ್ ಇರುವವರಿಗೆ ಮಲ ವಿಸರ್ಜನೆಗೆ ತೊಂದರೆ ಸೇರಿದಂತೆ ಹಲವು ಸಮಸ್ಯೆ ಉಂಟಾಗುತ್ತದೆ. ಪೈಲ್ಸ್ ಸಮಸ್ಯೆ ಹೋಗಲಾಡಿಸಲು ಕೆಲವರು ಮನೆಮದ್ದು ಟ್ರೈ ಮಾಡ್ತಾರೆ. ಇನ್ನು ಕೆಲವರು ಚಿಕಿತ್ಸೆ ಪಡೆದುಕೊಳ್ತಾರೆ.


    ಬಾಧಿಸುವ ಮೂಲವ್ಯಾಧಿ ಸಮಸ್ಯೆ


    ಪೈಲ್ಸ್ ಹೊಂದಿರುವ ಜನರು ಕರುಳಿನ ಚಲನೆ, ರಕ್ತಸ್ರಾವ ಮತ್ತು ಗುದದ್ವಾರದ ಸುತ್ತಲೂ ತುರಿಕೆ ಅಥವಾ ಸುಡುವ ಸಂವೇದನೆ ಸಮಸ್ಯೆ ಎದುರಿಸುತ್ತಾರೆ. ಮೂಲವ್ಯಾಧಿ ಸಾಮಾನ್ಯವಾಗಿ ಗುದದ್ವಾರ ಮತ್ತು ಕೆಳಗಿನ ಗುದನಾಳದ ಸುತ್ತಲೂ ಊದಿಕೊಂಡ ಅಥವಾ ಉಬ್ಬುವ ಮಾಂಸದ ಉಂಡೆ ಆಗಿದೆ.


    ಗುದದ್ವಾರ ಅಥವಾ ಕಡಿಮೆ ಗುದನಾಳದ ಬಳಿ ರಕ್ತನಾಳಗಳ ಮೇಲೆ ಒತ್ತಡ ಹೆಚ್ಚುತ್ತದೆ. ಆಗ ಮೂಲವ್ಯಾಧಿ ಸಮಸ್ಯೆ ಶುರು ಆಗುತ್ತದೆ. ಮೂಲವ್ಯಾಧಿ ಸಮಸ್ಯೆಗೆ ನಿಮ್ಮ ಅನೇಕ ಕೆಟ್ಟ ಅಭ್ಯಾಸ, ದಿನಚರಿ ಕೂಡ ಪೈಲ್ಸ್‌ಗೆ ಕಾರಣ ಆಗಿರುತ್ತವೆ. ಹಾಗಾದ್ರೆ ಪೈಲ್ಸ್ ಸಮಸ್ಯೆಗೆ ಮುಖ್ಯ ಕಾರಣಗಳ ಬಗ್ಗೆ ತಿಳಿಯೋಣ.




    ಟಾಯ್ಲೆಟ್ ಸೀಟ್ ಮೇಲೆ ದೀರ್ಘಕಾಲ ಕುಳಿತುಕೊಳ್ಳುವುದು ಪೈಲ್ಸ್ ಗೆ ಕಾರಣ


    ಮೇಯೊ ಕ್ಲಿನಿಕ್ ಪ್ರಕಾರ ಟಾಯ್ಲೆಟ್ ಸೀಟ್ ಮೇಲೆ ದೀರ್ಘಕಾಲ ಕುಳಿತುಕೊಳ್ಳುವುದು ಪೈಲ್ಸ್ ಸಮಸ್ಯೆ ಉಂಟಾಗಲು ಕಾರಣ ಆಗಿದೆ. ಟಾಯ್ಲೆಟ್ ಸೀಟಿನ ಮೇಲೆ ಕುಳಿತುಕೊಳ್ಳುವುದು ಕಡಿಮೆ ಗುದನಾಳದ ರಕ್ತನಾಳಗಳ ಮೇಲೆ ಒತ್ತಡ ಉಂಟು ಮಾಡುತ್ತದೆ.


    ಆಗ ಇದು ಕರುಳಿನ ಚಲನೆಯನ್ನು ಸುಲಭಗೊಳಿಸುತ್ತದೆ. ಆದರೆ ನೀವು ಟಾಯ್ಲೆಟ್ ಸೀಟ್ ಮೇಲೆ ಒಂದೇ ಭಂಗಿಯಲ್ಲಿ ದೀರ್ಘಕಾಲ ಕುಳಿತರೆ ಒತ್ತಡ ಹೆಚ್ಚುತ್ತದೆ.  ಇದು ನಂತರ ಪೈಲ್ಸ್‌ಗೆ ಕಾರಣವಾಗುತ್ತದೆ. ಹಾಗಾಗಿ ತಜ್ಞರು ಟಾಯ್ಲೆಟ್ ಸೀಟ್ ಅಥವಾ ಕುರ್ಚಿ ಮೇಲೆ ಒಂದೇ ಸ್ಥಳದಲ್ಲಿ ದೀರ್ಘಕಾಲ ಕುಳಿತುಕೊಳ್ಳದಂತೆ ಸಲಹೆ ನೀಡುತ್ತಾರೆ.


    ಹೆಚ್ಚು ಭಾರ ಎತ್ತುವುದರಿಂದ ಮೂಲವ್ಯಾಧಿ ಸಮಸ್ಯೆ ಉಂಟಾಗುತ್ತದೆ


    ಹೆಚ್ಚು ಭಾರವನ್ನು ಹಠಾತ್ ಎತ್ತುವುದರಿಂದ ಹೊಟ್ಟೆ ಮತ್ತು ಗುದದ ಗೋಡೆಗಳ ಮೇಲೆ ಒತ್ತಡ ಬೀಳುತ್ತದೆ. ಇದು ಕ್ರಮೇಣ ರಕ್ತದ ನಾಳಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಪೈಲ್ಸ್ ಅಪಾಯಕ್ಕೆ ಕಾರಣವಾಗುತ್ತದೆ. ಭಾರವಾದ ತೂಕ ಎತ್ತುವುದು ನಿಮ್ಮ ಕೆಲಸದ ಭಾಗ ಆಗಿದ್ರೆ, ಅದನ್ನು ತುಸುವೇ ಮಾಡಿ. ನಿಧಾನವಾಗಿ ಅಭ್ಯಾಸ ಮಾಡಿ.


    ದಿನಕ್ಕೆ ಅನೇಕ ಬಾರಿ ಮಲ ವಿಸರ್ಜನೆ ಹೋಗುವುದು ಪೈಲ್ಸ್ ಅಪಾಯಕ್ಕೆ ಕಾರಣ


    ದಿನಕ್ಕೆ ಹಲವು ಬಾರಿ ಕರುಳಿನ ಚಲನೆ ಹೊಂದುವುದು, ಅತಿಸಾರದಿಂದ ಕೂಡಿದ್ದರೂ ಸಹ ಪೈಲ್ಸ್ ಅಪಾಯ ಹೆಚ್ಚಿಸುತ್ತದೆ. ಆಗಾಗ್ಗೆ ಕರುಳಿನ ಚಲನೆಯ ಕಾರಣ ತಕ್ಷಣ ಚಿಕಿತ್ಸೆ ನೀಡುವುದು ಕೂಡ ಪೈಲ್ಸ್ ಅಪಾಯದಿಂದ ರಕ್ಷಿಸುತ್ತದೆ.


    ಮಸಾಲೆಯುಕ್ತ ಜಂಕ್ ಫುಡ್ ಪೈಲ್ಸ್ ಗೆ ಕಾರಣ


    ನಿಮ್ಮ ಆಹಾರಕ್ರಮವು ಹೆಚ್ಚಾಗಿ ಪೈಲ್ಸ್‌ ಗೆ ಕಾರಣವಾಗುತ್ತೆ. ಹೆಚ್ಚು ಮಸಾಲೆಯುಕ್ತ ಅಥವಾ ಎಣ್ಣೆಯುಕ್ತ ಆಹಾರ ಸೇವನೆ ಪೈಲ್ಸ್‌ ಹಾಗೂ ಸಮಸ್ಯೆ ಉಂಟು ಮಾಡುತ್ತದೆ. ಆರೋಗ್ಯಕರ, ಸಮತೋಲಿತ ಆಹಾರ ಸೇವನೆ ಪೈಲ್ಸ್‌  ತೊಡಕು ತಡೆಗೆ ಸಹಕಾರಿ.


    ಇದನ್ನೂ ಓದಿ: ಶವರ್ಮಾ ತಿಂದ ಕೂಡಲೇ ಬಾಲಕಿ ಸತ್ತಿದ್ದು ಹೇಗೆ? ಶಿಗೆಲ್ಲ ಬ್ಯಾಕ್ಟೀರಿಯಾ ಎಂದರೇನು? ವೈರಸ್ ಇಷ್ಟು ಬೇಗ ಜೀವ ತೆಗೆಯುತ್ತಾ?


    ಕಡಿಮೆ ನೀರು ಕುಡಿಯುವುದು ಪೈಲ್ಸ್ ಗೆ ಕಾರಣ


    ದೇಹದಲ್ಲಿ ನೀರಿನ ಕೊರತೆ ಪೈಲ್ಸ್ ಗೆ ಕಾರಣವಾಗುತ್ತದೆ. ಮಲಬದ್ಧತೆಯನ್ನು ನಿಯಂತ್ರಿಸಲು ಆಹಾರದಲ್ಲಿ ಫೈಬರ್ ಅನ್ನು ಸೇರಿಸಿ, ನೀರು ಕುಡಿಯದೇ ಹೋದ್ರೆ ಅದು ಮಲಬದ್ಧತೆಗೆ ಕಾರಣವಾಗುತ್ತೆ.

    Published by:renukadariyannavar
    First published: