ಒಂದು ನಿಂಬೆಯಿಂದ ಪಡೆಯಬಹುದು 5 ಆರೋಗ್ಯಕಾರಿ ಪ್ರಯೋಜನಗಳು

ಬೊಜ್ಜಿನ ಸಮಸ್ಯೆ ಅನೇಕ ಕಾಯಿಲೆಗಳಿ ಕಾರಣವಾಗುತ್ತದೆ. ಇದು ಅಧಿಕ ರಕ್ತದೊತ್ತಡ, ಹೃದಯಾಘಾತ, ಪಾರ್ಶ್ವವಾಯು ಮತ್ತು ಇತರ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿಸುತ್ತದೆ.

lemon

lemon

 • Share this:
  ಆರೋಗ್ಯವೇ ಭಾಗ್ಯ, ಆಧುನಿಕ ಜೀವನಶೈಲಿಯಲ್ಲಿ ಆರೋಗ್ಯವಾಗಿರಲು ಮಾಡುವ ಕಸರತ್ತು ಒಂದೆರಡಲ್ಲ. ಆದರೆ ಪ್ರತಿದಿನ ಕೇವಲ ಒಂದು ನಿಂಬೆಯ ಬಳಕೆಯ ಮೂಲಕ ಅತ್ಯುತ್ತಮ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಎಂಬುದು ಎಷ್ಟು ಜನರಿಗೆ ಗೊತ್ತಿದೆ. ಹೌದು, ನಮ್ಮ ದಿನನಿತ್ಯದ ಆಹಾರದೊಂದಿಗೆ ನಿಂಬೆ ಹಣ್ಣಿನ ಬಳಕೆಯು ಹಲವು ರೀತಿಯ ಗಂಭೀರ ಕಾಯಿಲೆಗಳನ್ನು ದೂರ ಮಾಡುತ್ತದೆ. ಅದು ಹೇಗೆ ಎಂಬುದನ್ನು ತಿಳಿಯೋಣ.

  ಜೀರ್ಣಕ್ರಿಯೆ ಸಮಸ್ಯೆಗೆ ಪರಿಹಾರ: ಹೊಟ್ಟೆ ಸರಿಯಾಗಿದ್ದರೆ ಆರೋಗ್ಯವು ಸರಿಯಿರುತ್ತದೆ. ಹಲವು ಸಮಸ್ಯೆಗಳು ಆರಂಭವಾಗುವುದದೇ ಜೀರ್ಣಕ್ರಿಯೆ ಸಮಸ್ಯೆಯಿಂದ ಎಂದು ವೈದ್ಯರು ಅಭಿಪ್ರಾಯ ಪಡುತ್ತಾರೆ. ಆದರೆ ಪ್ರತಿದಿನ ನೀವು ಉಗುರು ಬೆಚ್ಚಗಿನ ನೀರಿನಲ್ಲಿ ನಿಂಬೆ ಹಿಂಡಿ ಕುಡಿಯುವುದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ದೂರ ಮಾಡಬಹುದು. ಅದರಲ್ಲೂ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆ ಪಾನೀಯ ಕುಡಿಯುವುದರಿಂದ ಹಲವು ತೊಂದರೆಗಳು ನಿವಾರಣೆಯಾಗುತ್ತವೆ. ಇದಲ್ಲದೆ, ನಿಮ್ಮ ತೂಕವನ್ನು ನಿಯಂತ್ರಣದಲ್ಲಿಡುತ್ತದೆ. ಈ ಪಾನೀಯವು ದೇಹದಿಂದ ಎಲ್ಲಾ ವಿಷಾಂಶವನ್ನು ಹೊರಹಾಕುತ್ತದೆ. ಇನ್ನು ನಿಂಬೆ ರಸವನ್ನು ಕುಡಿಯುವುದು ಕಷ್ಟಕರ ಎಂದಾದರೆ ರುಚಿಗೆ ಅದಕ್ಕೆ ಕಪ್ಪು ಉಪ್ಪನ್ನು ಸೇರಿಸಬಹುದು.

  ಶೀತದ ಸಮಸ್ಯೆಗೆ ಪರಿಹಾರ: ನಿಯಮಿತವಾಗಿ ಉಗುರು ಬೆಚ್ಚಗಿನ ನೀರಿನಲ್ಲಿ ನಿಂಬೆ ಹಿಂಡಿ ಕುಡಿಯುವುದರಿಂದ ನೆಗಡಿ, ಶೀತ, ಕೆಮ್ಮು ಮತ್ತು ಗಂಟಲು ಸಂಬಂಧಿತ ಕಾಯಿಲೆಗಳಿಗೆ ದೂರವಾಗುತ್ತದೆ. ನಿಂಬೆಯಲ್ಲಿರುವ ಸಿಟ್ರಿಕ್ ಆಮ್ಲವು ಗಂಟಲಿನಲ್ಲಿ ಸೋಂಕನ್ನು ಉಂಟಾಗುವುದನ್ನು ತಡೆಯುತ್ತದೆ.

  ಮೂತ್ರಪಿಂಡದ ಆರೋಗ್ಯ: ವೈದ್ಯರ ಪ್ರಕಾರ , ನೀವು ಪ್ರತಿದಿನ ಬೆಳಿಗ್ಗೆ ನಿಂಬೆ ರಸವನ್ನು ನೀರಿನೊಂದಿಗೆ ಸೇವಿಸಿದರೆ, ಕಿಡ್ನಿ ಸ್ಟೋನ್ ಸಮಸ್ಯೆ ಇರುವುದಿಲ್ಲ. ಏಕೆಂದರೆ ಸಿಟ್ರಿಕ್ ಆಮ್ಲವು ದೇಹದಲ್ಲಿ ಕಲ್ಲುಗಳು ಬೆಳೆಯಲು ಅನುಮತಿಸುವುದಿಲ್ಲ. ಮೂತ್ರಪಿಂಡದ ಕಲ್ಲುಗಳನ್ನು ತಡೆಗಟ್ಟುವಲ್ಲಿ ನಿಂಬೆ ರಸವು ತುಂಬಾ ಪರಿಣಾಮಕಾರಿಯಾಗಿದೆ.

  ನಿರ್ಜಲೀಕರಣವನ್ನು ತಡೆಯುತ್ತದೆ: ದೇಹದಲ್ಲಿ ನಿರ್ಜಲೀಕರಣದ ಸಮಸ್ಯೆ ಉಂಟಾದಾಗ, ಬಾಯಿ ಒಣಗುವುದು, ಚರ್ಮ ಒಣಗುವಿಕೆ, ಆಗಾಗ್ಗೆ ಬಾಯಾರಿಕೆಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯಲು ನಿಂಬೆ ಪಾನೀಯ ಪರಿಣಾಮಕಾರಿ. ಇದಕ್ಕಾಗಿ ನೀವು ಬೆಳಿಗ್ಗೆ ನಿಯಮಿತವಾಗಿ ನಿಂಬೆ ಪಾನೀಯ ಸೇವಿಸಬೇಕು. ಹಾಗೆಯೇ ಮೊಳಕೆ ಹೊಡೆದ ಧಾನ್ಯಗಳಿಗೆ ನಿಂಬೆ ಹಿಂಡಿ ತಿನ್ನುವುದರಿಂದ ಸಹ ನಿರ್ಜಲೀಕರಣ ಮತ್ತು ಶುಷ್ಕತೆಯ ಸಮಸ್ಯೆಗಳನ್ನು ದೂರ ಮಾಡಬಹುದು,

  ತೂಕ ನಿಯಂತ್ರಣ: ಬೊಜ್ಜಿನ ಸಮಸ್ಯೆ ಅನೇಕ ಕಾಯಿಲೆಗಳಿ ಕಾರಣವಾಗುತ್ತದೆ. ಇದು ಅಧಿಕ ರಕ್ತದೊತ್ತಡ, ಹೃದಯಾಘಾತ, ಪಾರ್ಶ್ವವಾಯು ಮತ್ತು ಇತರ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿಸುತ್ತದೆ. ಹೀಗಾಗಿ ನಿಮ್ಮ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಮುಖ್ಯ. ಇದಕ್ಕಾಗಿ ಪ್ರತಿನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆ ರಸವನ್ನು ಕುಡಿಯಬೇಕು. ಇದರಿಂದ ಬೊಜ್ಜಿನ ಸಮಸ್ಯೆ ದೂರವಾಗುವುದಲ್ಲದೆ, ಆರೋಗ್ಯವನ್ನು ಹೆಚ್ಚಿಸಬಹುದು.

  ಇದನ್ನೂ ಓದಿ:  ನಾನು ಬ್ಯಾಟಿಂಗ್ ವೇಳೆ ರಾಹುಲ್ ಬಳಿ ಕ್ಷಮೆ ಕೇಳಿದ್ದೇನೆ..!
  Published by:zahir
  First published: