• Home
  • »
  • News
  • »
  • lifestyle
  • »
  • Healthy Food: ಗೋಧಿ ಹಿಟ್ಟಿಗೆ ಉತ್ತಮ ಪರ್ಯಾಯ ಈ ವಸ್ತುವಂತೆ, ಪ್ರಯೋಜನಗಳೆಷ್ಟು ನೋಡಿ

Healthy Food: ಗೋಧಿ ಹಿಟ್ಟಿಗೆ ಉತ್ತಮ ಪರ್ಯಾಯ ಈ ವಸ್ತುವಂತೆ, ಪ್ರಯೋಜನಗಳೆಷ್ಟು ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಗೋಧಿ ಹಿಟ್ಟು ಉದರ ಅಂದ್ರೆ ಹೊಟ್ಟೆಯ ಸಮಸ್ಯೆ ಮತ್ತು ಕಾಯಿಲೆ ಇರುವವರಿಗೆ ಉತ್ತಮ ಆಹಾರವಲ್ಲ ಎಂದು ಹೇಳಲಾಗುತ್ತದೆ. ನಾನ್ ಸೆಲಿಯಾಕ್ ಗ್ಲುಟನ್ ಸೆನ್ಸಿಟಿವಿಟಿ ಇರುವವರಿಗೆ ಸಹ ಗೊಧಿ ಹಿಟ್ಟು ಸೂಕ್ತವಲ್ಲ. ಅಂತಹ ವೇಳೆ ನೀವು ಸಿಂಘಾಡಾ ಹಿಟ್ಟನ್ನು ಬಳಕೆ ಮಾಡುವುದು ಉತ್ತಮ ಮತ್ತು ಆರೋಗ್ಯಕರ ಆಯ್ಕೆ ಆಗಿದೆ.

ಮುಂದೆ ಓದಿ ...
  • Share this:

    ಗೋಧಿ ಹಿಟ್ಟನ್ನು (Wheat Atta) ಹೆಚ್ಚಾಗಿ ಚಪಾತಿ ಮಾಡಲು ಬಳಕೆ ಮಾಡುತ್ತಾರೆ. ಗೋಧಿ ಹಿಟ್ಟನ್ನು ಆರೋಗ್ಯಕರ (Healthy) ಎಂದು ಪರಿಗಣಿಸಲಾಗಿದೆ. ಇದು ಪ್ರೋಟೀನ್ (Protein), ಫೈಬರ್ ಮತ್ತು ವಿವಿಧ ಜೀವಸತ್ವ ಮತ್ತು ಖನಿಜಗಳ ಉತ್ತಮ ಮೂಲ ಆಗಿದೆ. ಆದರೆ ಇದು ಗ್ಲುಟನ್ ಅನ್ನು ಒಳಗೊಂಡಿದೆ. ಹೀಗಾಗಿ ಗೋಧಿ ಹಿಟ್ಟು ಉದರ ಅಂದ್ರೆ ಹೊಟ್ಟೆಯ ಸಮಸ್ಯೆ (Stomach Problem) ಮತ್ತು ಕಾಯಿಲೆ ಇರುವವರಿಗೆ ಉತ್ತಮ ಆಹಾರವಲ್ಲ ಎಂದು ಹೇಳಲಾಗುತ್ತದೆ. ನಾನ್-ಸೆಲಿಯಾಕ್ ಗ್ಲುಟನ್ ಸೆನ್ಸಿಟಿವಿಟಿ ಇರುವವರಿಗೆ ಸಹ ಗೊಧಿ ಹಿಟ್ಟು ಸೂಕ್ತವಲ್ಲ. ಅಂತಹ ವೇಳೆ ನೀವು ಸಿಂಘಾಡಾ ಹಿಟ್ಟನ್ನು ಬಳಕೆ ಮಾಡುವುದು ಉತ್ತಮ ಮತ್ತು ಆರೋಗ್ಯಕರ ಆಯ್ಕೆ ಆಗಿದೆ.


    ಗೋಧಿ ಹಿಟ್ಟಿಗೆ ಉತ್ತಮ ಪರ್ಯಾಯ ಸಿಂಘಾಡಾ ಹಿಟ್ಟು


    ಕ್ಲಿನಿಕಲ್ ನ್ಯೂಟ್ರಿಷನಿಸ್ಟ್ ಲೊವ್ನೀತ್ ಬಾತ್ರಾ ಅವರು, ಇತ್ತೀಚೆಗೆ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. ಅದರಲ್ಲಿ ಅವರು ಸಿಂಘಾಡಾ ಹಿಟ್ಟು ಹೇಗೆ ಪ್ರಯೋಜನಕಾರಿ ಎಂದು ಹೇಳಿದ್ದಾರೆ. ಸಿಂಘಾಡಾ ಹಿಟ್ಟು ಗೋಧಿ ಹಿಟ್ಟಿಗೆ ಉತ್ತಮ ಪರ್ಯಾಯ ಎಂದು ಪೋಸ್ಟ್ ನಲ್ಲಿ ವಿವರಿಸಿದ್ದಾರೆ.


    ಈ ಪೋಸ್ಟ್ನಲ್ಲಿ ಅವರು ಚೆಸ್ಟ್ನಟ್ ಅನ್ನು ಒಣಗಿದ ಚೆಸ್ಟ್ನಟ್ನಿಂದ ತಯಾರಿಸುತ್ತಾರೆ ಎಂದು ತಿಳಿಸಿದ್ದಾರೆ. ಸಿಂಘಾಡಾ ಹಿಟ್ಟಿನ ರುಚಿಯ ಜೊತೆಗೆ ಹಲವು ಔಷಧೀಯ ಗುಣಗಳು ಇದರಲ್ಲಿ ಕಂಡು ಬರುತ್ತವೆ. ಶೀತ ದಿನಗಳಲ್ಲಿ ಆರೋಗ್ಯ ಮತ್ತು ರೋಗ ನಿರೋಧಕ ಶಕ್ತಿ ಕಾಪಾಡಲು ಇದು ಕೆಲಸ ಮಾಡುತ್ತದೆ. ಅನೇಕ ಪ್ರಯೋಜನಗಳ ಹೊರತಾಗಿ ದೊಡ್ಡ ಪ್ರಮಾಣದ ನೀರಿನ ಚೆಸ್ಟ್ನಟ್ ಹಿಟ್ಟನ್ನು ಸೇವಿಸುವುದು ತಪ್ಪಿಸಬೇಕು ಎಂದಿದ್ದಾರೆ.


    ಇದನ್ನೂ ಓದಿ: ಮಹಿಳೆಯರ ಆರೋಗ್ಯಕ್ಕೆ ಸಮಸ್ಯೆಯಂತೆ ಈ ಮಧ್ಯಂತರ ಉಪವಾಸ


    ತೂಕ ಕಡಿಮೆ ಮಾಡಲು ಸಿಂಘಾಡಾ ಹಿಟ್ಟು ಪ್ರಯೋಜನಕಾರಿ


    ನಿಮಗೆ ಪದೇ ಪದೇ ಹಸಿವು ಆಗುತ್ತಿದ್ದರೆ ಹೆಚ್ಚು ತಿನ್ನಬೇಕು ಎಂದು ಅನಿಸಿದರೆ ನೀವು ಸಿಂಘಾಡಾ ಹಿಟ್ಟು ಪದಾರ್ಥಗಳ ಸೇವನೆ ಮಾಡುವುದು ನಿಮಗೆ ಪ್ರಯೋಜನಕಾರಿ ಎಂದು ತಜ್ಞರು ಹೇಳುತ್ತಾರೆ. ಇದು ಕಡಿಮೆ ಕ್ಯಾಲೋರಿ ಜೊತೆಗೆ ಹೆಚ್ಚು ಕಾಲ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಇದು ತೂಕ ಕಡಿಮೆ ಮಾಡಲು ಅಥವಾ ಆರೋಗ್ಯಕರ ತೂಕ ಕಾಪಾಡಲು ಸಹಾಯ ಮಾಡುತ್ತದೆ.


    ಕ್ಯಾನ್ಸರ್ ತಡೆಗಟ್ಟಲು ಸಿಂಘಾಡಾ ಹಿಟ್ಟು ಸಹಾಯಕ


    ಸಿಂಘಾಡಾ ಹಿಟ್ಟು ಫೆರುಲಿಕ್ ಆಸಿಡ್ ಎಂಬ ಆಂಟಿಆಕ್ಸಿಡೆಂಟ್ ಕಂಡು ಬರುತ್ತದೆ ಎಂದು ಆಹಾರ ತಜ್ಞರು ಹೇಳುತ್ತಾರೆ. ಕ್ಯಾನ್ಸರ್ ಕೋಶಗಳ ಬೆಳವಣಿಗೆ ನಿಧಾನಗೊಳಿಸುವಲ್ಲಿ ಇದು ದೊಡ್ಡ ಪಾತ್ರ ವಹಿಸುತ್ತದೆ.


    ಅಧಿಕ ಬಿಪಿ ನಿಯಂತ್ರಿಸುತ್ತದೆ


    ಸಿಂಘಾಡಾ ಹಿಟ್ಟು ವಿಟಮಿನ್ಗಳ ಅತ್ಯುತ್ತಮ ಮೂಲ ಆಗಿದೆ. ಸ್ನಾಯುಗಳು ಮತ್ತು ನರಗಳ ಸುಗಮ ಕಾರ್ಯ ನಿರ್ವಹಣೆಗೆ ಇದು ಮುಖ್ಯ ಆಗಿದೆ. ಜೊತೆಗೆ ಇದು ದೇಹದಲ್ಲಿನ ಸೋಡಿಯಂ ಪ್ರಮಾಣ ಸಮತೋಲನದಲ್ಲಿರಿಸುತ್ತದೆ. ಈ ಮೂಲಕ ನೀರು ಒಂದೇ ಸ್ಥಳದಲ್ಲಿ ಸಂಗ್ರಹವಾಗದಂತೆ ತಡೆಯುತ್ತದೆ.


    ಸಿಂಘಾಡಾ ಹಿಟ್ಟು ಕೂದಲನ್ನು ಬಲಪಡಿಸುತ್ತದೆ


    ಸಿಂಘಾಡಾ ಹಿಟ್ಟು  ಕೂದಲಿಗೆ ಸಹ ಪ್ರಯೋಜನಕಾರಿ ಆಗಿದೆ. ಇದು ಸತು, ಬಿ ಜೀವಸತ್ವಗಳು ಮತ್ತು ವಿಟಮಿನ್ ಇ ನಂತಹ ಅಗತ್ಯ ಪೋಷಕಾಂಶಗಳಿಂದ ಕೂಡಿದೆ. ಆರೋಗ್ಯಕರ ಕೂದಲು ಹೊಂದಲು ಇವುಗಳನ್ನು ಬಹಳ ಮುಖ್ಯ ಅಂತಾ ಹೇಳಲಾಗಿದೆ.


    ಇದನ್ನೂ ಓದಿ: ಮಧುಮೇಹ ನಿಯಂತ್ರಣಕ್ಕೆ ಈ ಒಂದು ಮೂಲಿಕೆ ಪರಿಣಾಮಕಾರಿ!


    ನಿದ್ರಾಹೀನತೆಗೆ ಮನೆಮದ್ದು


    ಸಿಂಘಾಡಾ ಹಿಟ್ಟು ವಿಟಮಿನ್ ಬಿ -6 ಅನ್ನು ಹೊಂದಿದೆ. ಇದು ನಿಮ್ಮ ಮನಸ್ಥಿತಿಯನ್ನು ಸಮತೋಲನದಲ್ಲಿಡುತ್ತದೆ. ನಿದ್ರೆಗೆ ಸಂಬಂಧಿಸಿದ ಸಮಸ್ಯೆ ತೆಗೆದು ಹಾಕಲು ಇದು ಪ್ರಯೋಜನಕಾರಿ ಆಗಿದೆ. ಸಿಂಘಾಡಾ ಹಿಟ್ಟು ಮನಸ್ಥಿತಿ ಮತ್ತು ನಿದ್ರೆಗೆ ಪರಿಣಾಮಕಾರಿ ನರಪ್ರೇಕ್ಷಕಗಳನ್ನು ಉತ್ಪಾದಿಸುತ್ತದೆ.

    Published by:renukadariyannavar
    First published: