Fitness Tips: ಕೇವಲ 6 ವಾರಗಳಲ್ಲಿ 6 ಕೆಜಿ ತೂಕ ಇಳಿಸಿಕೊಂಡಿದ್ದರಂತೆ ಗಾಯಕ ಆದಿತ್ಯ ನಾರಾಯಣ್! ಇವರ ಫಿಟ್ನೆಸ್ ಸೀಕ್ರೆಟ್ ನೀವೂ ತಿಳ್ಕೊಳ್ಳಿ

ಭಾರತೀಯ ಗಾಯಕ, ನಿರೂಪಕ ಮತ್ತು ನಟ ಆದಿತ್ಯ ನಾರಾಯಣ್ ಅವರು ಆರು ವಾರಗಳಲ್ಲಿ ಆರು ಕೆಜಿ ತೂಕ ಕಳೆದುಕೊಂಡು ಸಕತ್ ಫಿಟ್ ಆಗಿದ್ದಾರೆ. ತಮ್ಮ ಫಿಟ್ನೆಸ್ ಸೆಷನ್‌ಗಳ ವಿಡಿಯೋವನ್ನು ಇನ್ ಸ್ಟಾಗ್ರಾಂ ಪೇಜ್‌ನಲ್ಲಿ ಹಂಚಿಕೊಂಡಿದ್ದು, ತೂಕ ಇಳಿಕೆಯ ಪ್ರಯತ್ನ ಮಾಡುತ್ತಿರುವವರಿಗೆ ನಿಜಕ್ಕೂ ಸ್ಪೂರ್ತಿಯಾಗಿದ್ದಾರೆ. 

ಆದಿತ್ಯ ನಾರಾಯಣ್

ಆದಿತ್ಯ ನಾರಾಯಣ್

  • Share this:
ಭಾರತೀಯ ಗಾಯಕ, ನಿರೂಪಕ ಮತ್ತು ನಟ ಆದಿತ್ಯ ನಾರಾಯಣ್ (Aditya Narayan) ಅವರು ಆರು ವಾರಗಳಲ್ಲಿ ಆರು ಕೆಜಿ ತೂಕ ಕಳೆದುಕೊಂಡು ಸಕತ್ ಫಿಟ್ ಆಗಿದ್ದಾರೆ. ತಮ್ಮ ಫಿಟ್ನೆಸ್ (Fitness) ಸೆಷನ್ ಗಳ ವಿಡಿಯೋವನ್ನು ಇನ್ ಸ್ಟಾಗ್ರಾಂ (Instagram) ಪೇಜ್ ನಲ್ಲಿ ಹಂಚಿಕೊಂಡ 34 ವರ್ಷದ ಗಾಯಕ ತೂಕ ಇಳಿಕೆಯ ಪ್ರಯಾಣದಲ್ಲಿರುವವರಿಗೆ ನಿಜಕ್ಕೂ ಸ್ಪೂರ್ತಿಯಾಗಿದ್ದಾರೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿದ ಆದಿತ್ಯ ನಾರಾಯಣ್ ಅವರ ವೈದ್ಯೆ ಡಾ. ವಿಶಾಖ ಶಿವದಾಸಿನಿ ಮಾತನಾಡಿ, ಆದಿತ್ಯ ಈ ಬಗ್ಗೆ ತುಂಬಾ ಪ್ರೇರೇಪಿತರಾಗಿದ್ದಾರೆ (Motivate). ಅವರು ಇನ್ನು 3-4 ಕೆ.ಜಿ ತೂಕ ಕಳೆದುಕೊಳ್ಳಲು ಬಯಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಫಿಸಿಷಿಯನ್ ಗೆ ಧನ್ಯವಾದ ತಿಳಿಸಿದ ಆದಿತ್ಯ 
"ನನ್ನ ಮುಂಬರುವ ಮ್ಯೂಸಿಕ್ ವಿಡಿಯೋಗಳಲ್ಲಿ ಹಾಗು ನನ್ನ ಸಾಮಾನ್ಯ ಜೀವನದಲ್ಲಿ ಅದ್ಭುತವಾಗಿ ಕಾಣಲು ಕಳೆದ ಎರಡು ತಿಂಗಳಿಂದ ಅತ್ಯುತ್ತಮ ಆಹಾರ ಮತ್ತು ಪೌಷ್ಟಿಕಾಂಶವನ್ನು ಒದಗಿಸಿದಕ್ಕಾಗಿ ಧನ್ಯವಾದಗಳು. 6 ವಾರಗಳಲ್ಲಿ 6 ಕೆಜಿ ತೂಕ ಕಳೆದುಕೊಂಡಿದ್ದೇನೆ." ಎಂದು ಅವರು ತಮ್ಮ ಫಿಸಿಷಿಯನ್ ಡಾ.ವಿಶಾಖ ಶಿವದಾಸಿನಿ ಅವರ ಬಗ್ಗೆ ಇನ್ ಸ್ಟಾಗ್ರಾಂನಲ್ಲಿ ಬರೆದು ಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಡಾ. ವಿಶಾಖ ಅವರು “ನೀವು ನಿಮ್ಮ ಹೊಸ ವಿಡಿಯೋ ಗಳಲ್ಲಿ ತುಂಬಾ ಫಿಟ್ ಆಗಿ ಕಾಣುತ್ತಿದ್ದೀರಾ” ಎಂದು ಕಾಮೆಂಟ್ ಮಾಡಿದ್ದಾರೆ.

ಇದಕ್ಕೆ ಡಾ. ವಿಶಾಖ ಹೇಳಿದ್ದೇನು ನೋಡಿ 
ಡಾ. ವಿಶಾಖ ಅವರು ಸುದ್ದಿ ಮಾಧ್ಯಮದ ಜೊತೆ ಮಾತನಾಡುತ್ತಾ, ಆದಿತ್ಯ ಅವರು ತಮ್ಮ ಹೊಸ ಆಲ್ಬಂ ಸಾಂಗ್ನಲ್ಲಿ ಫಿಟ್ಟಾಗಿ ಕಾಣಲು ಬಯಸಿದ್ದರು. ಅದಕ್ಕೆ ತೂಕ ಕಳೆದು ಕೊಳ್ಳುವ ಸಲುವಾಗಿ ಅವರು ನನ್ನನ್ನು ಸಂಪರ್ಕಿಸಿದರು ಎಂದು ಬಹಿರಂಗ ಪಡಿಸಿದರು. “ಅವರು ಕನಿಷ್ಟ 5 ಕೆಜಿ ತೂಕ ಕಳೆದುಕೊಳ್ಳಲು ಬಯಸಿದ್ದರು; ತೂಕ ಕಳೆದುಕೊಳ್ಳುವುದು ಸುಲಭವಲ್ಲ. ನಾವು ಮೊದಲು ಕೊಬ್ಬು ಕರಗಿಸುವುದರ ಬಗ್ಗೆ ಗಮನಹರಿಸುತ್ತೇವೆ, ಅದು ಅವರನ್ನು ಟೋನ್ ಆಗಿ ಕಾಣುವಂತೆ ಮಾಡುತ್ತದೆ, ವಾಸ್ತವವಾಗಿ ಅದು ತೂಕವನ್ನು ಕಳೆದುಕೊಳ್ಳುವ ಆರೋಗ್ಯಕರ ಮಾರ್ಗವಾಗಿದೆ” ಎಂದು ವಿಶಾಖ ತಿಳಿಸಿದ್ದಾರೆ.

ಇದನ್ನೂ ಓದಿ: Bigg Boss: ಬಿಗ್ ಬಾಸ್​ ಹುಟ್ಟಿನ ಹಿಂದಿದೆ ಇಂಟ್ರೆಸ್ಟಿಂಗ್​ ಕಹಾನಿ! ಅಂದು ವಿಜ್ಞಾನಿಗಳ ಮಾಡಿದ ಆ ಒಂದು ಪ್ರಯೋಗ ವರದಾನವಾಯ್ತು

ಇದಲ್ಲದೆ, ಬೊಜ್ಜು , ಟೈಪ್ 2 ಡಯಾಬಿಟೀಸ್, ಪಿಸಿಒಎಸ್ ಮತ್ತು ಇತರ ಜೀವನಶೈಲಿಯ ಕಾಯಿಲೆಗಳನ್ನು ಹಿಮ್ಮೆಟ್ಟಿಸುವಲ್ಲಿ ಪರಿಣಿತಿ ಹೊಂದಿರುವ ಡಾ. ವಿಶಾಖ ಅವರು ತಮ್ಮ ಆಹಾರ ಮತ್ತು ಫಿಟ್ನೆಸ್ ದಿನಚರಿಯ ವಿವರಗಳನ್ನು ಹಂಚಿಕೊಂಡಿದ್ದಾರೆ. ಆದಿತ್ಯ ಅವರಿಗೆ ಹಾಡಿನ ಚಿತ್ರೀಕರಣದ ವೇಳೆ ಎನರ್ಜಿ ಜಾಸ್ತಿ ಇರಬೇಕು. ಆದ್ದರಿಂದ" ಅವರ ಶುಗರ್ ಲೆವೆಲ್ ಯಾವಾಗಲು ನಿಯಂತ್ರಣದಲ್ಲಿರುವಂತೆ ಆಹಾರವನ್ನು ರೂಪಿಸಲಾಯಿತು. ಕಾರ್ಬೊಹೈಡ್ರೇಟ್ಗಳು, ಪ್ರೋಟೀನ್ಗಳು ಮತ್ತು ಅವುಗಳನ್ನು ಸೇವಿಸುವ ಸಮಯ ಎಲ್ಲವನ್ನು ಅವರಿಗೆ ಅನುಗಣವಾಗಿ ನಿಗದಿಪಡಿಸಲಾಗಿದೆ" ಎಂದು ಡಾ. ವಿಶಾಖ ಹೇಳಿದರು.

ಆದಿತ್ಯ ಅವರ ಆಹಾರ ಪದ್ಧತಿ ಹೀಗಿತ್ತು 
ಆದಿತ್ಯ ಅವರು ತೂಕ ಕಡಿಮೆ ಮಾಡಲು ಪ್ರಾರಂಭಿಸಿದಾಗ, ಪ್ರೋಟೀನ್ ಸೇರಿ ದಿನಕ್ಕೆ 4 ಸಲದಂತೆ ಆಹಾರ ಪದ್ದತಿಯನ್ನು ನಿಗದಿಪಡಿಸಲಾಗಿತ್ತು. ಆದರೆ ಅದನ್ನು ಉಪಹಾರ, ಊಟ ಮತ್ತು ರಾತ್ರಿಯ ಊಟ ಹೀಗೆ ದಿನಕ್ಕೆ 3 ಊಟಕ್ಕೆ ಇಳಿಸಲಾಯಿತು. ಆದಿತ್ಯ ಅವರಿಗೆ ಶೂಟಿಂಗ್ ಇಲ್ಲದ ವೇಳೆ ಪ್ರೋಟೀನ್ ನೀಡುವುದನ್ನು ನಿಲ್ಲಿಸಿದೆವು ಎಂದು ವಿಶಾಖ ಅವರು ಹೇಳಿದರು. ಅದಲ್ಲದೆ ನಾನು ಪ್ರತಿ ಎರಡು ಗಂಟೆಗೊಮ್ಮೆ ಅಥವಾ ಮಧ್ಯ-ಮಧ್ಯದಲ್ಲಿ ಆಹಾರ ಸೇವಿಸುವ ಪದ್ದತಿಯನ್ನು ನಾನು ಒಪ್ಪುವುದಿಲ್ಲ ಎಂದು ವಿಶಾಖ ತಿಳಿಸಿದ್ದರು.

ಅದಲ್ಲದೆ ವಿಶಾಖ ಅವರು ರೀಹೈಡ್ರೇಶನ್ ಬಗ್ಗೆ ಒತ್ತಿ ಹೇಳಿದರು,"ಸಾಕಷ್ಟು ನೀರು ಎಂದರೆ ಸಾಕಷ್ಟು ಎಲೆಕ್ಟ್ರೋಲೈಟ್ಸ್” ಜಾಸ್ತಿ ಸಮಯ ಕೆಲಸ ಮಾಡುವ ವ್ಯಕ್ತಿಗಳಿಗೆ ಸಪ್ಲಿಮೆಂಟ್ಸ್ ಅಥವಾ  ಸ್ಟೆರಾಯ್ಡ್ಸ್ ಅವಶ್ಯಕತೆ ಇರುವುದಿಲ್ಲ ಆಹಾರಗಳ ಮೂಲಕ ನೈಸರ್ಗಿಕವಾಗಿ ನಾವು ಅವರಿಗೆ ಪೌಷ್ಟಿಕಾಂಶವನ್ನು ಪೂರೈಸಬೇಕು. ಇದು ಆದಿತ್ಯ ಅವರ ವಿಷಯದಲ್ಲಿ ಸಹ ಆಗಿತ್ತು. ಹಾಗು ನಾನು ಅವರ ಫುಡ್ ಅಲರ್ಜಿಗಳನ್ನು ಸಹ ಗಮನದಲ್ಲಿಟ್ಟು ಕೊಳ್ಳಬೇಕಾಗಿತ್ತು ಎಂದು ಡಾಕ್ಟರ್ ಹೇಳಿದ್ದಾರೆ.

ಮನೆಯಲ್ಲಿ ತಯಾರಿಸಿದ ಊಟ ಎಂದರೆ ಅಚ್ಚುಮೆಚ್ಚು
ಆದಿತ್ಯ ಅವರಿಗೆ ಮನೆಯಲ್ಲಿ ತಯಾರಿಸಿದ ಊಟ ಎಂದರೆ ಬಹಳ ಇಷ್ಟ ಎಂದು ಅವರು ಹೇಳಿದ್ದಾರೆ. ಅದರೆ ನಾನು ಅದಕ್ಕೆ ಅವರಿಗೊಂದು ಸಲಹೆ ನೀಡಿದೆ, ಅವರು ಏನು ಇಷ್ಟ ಪಡುತ್ತಾರೊ ಅದನ್ನೆಲ್ಲ ತಿನ್ನಬಹುದು ಆದರೆ ಸಣ್ಣ ಬದಲಾವಣೆಯೊಂದಿಗೆ ಉದಾಹರಣೆಗೆ ಅವರಿಗೆ ಪಾಸ್ತಾ ತಿನ್ನಬೇಕು ಎನಿಸಿದರೆ ಕುಂಬಳಕಾಯಿ ಇಂದ ಮಾಡಿದ ಜ಼ುಚಿನಿ ಪಾಸ್ತಾ, ಅವರಿಗೆ ಅನ್ನ ತಿನ್ನಬೇಕು ಎನಿಸಿದರೆ ಅವರು ಕಾಲಿಫ್ಲವರ್ ರೈಸ್ ಅನ್ನು ತಿನ್ನಬಹುದು ಎಂದು ಆದಿತ್ಯ ಡಯೆಟ್ ಬಗ್ಗೆ ವಿವರಿಸಿದ್ದಾರೆ.

ಇದನ್ನೂ ಓದಿ:  Kiccha Sudeep: ಮುಂದುವರೆದ ಕಿಚ್ಚನ ಸಮಾಜಮುಖಿ ಕಾರ್ಯ, ಈ ಬಾರಿ ಮಾಡಿರೋ ಸಹಾಯ ನೋಡಿದ್ರೆ ನಿಮಗೂ ಸ್ಫೂರ್ತಿ ಬರುತ್ತೆ!

ಇದನ್ನೆಲ್ಲಾ ವಿವಿರಿಸುತ್ತ ವಿಶಾಖ, ಆದಿತ್ಯ ಅವರ ಆಹಾರ ಕ್ರಮ ಸರಳವಾಗಿದೆ, ಮುಂಜಾನೆ ಅವರು ಕ್ಯಾಲೋರಿಸ್ ಬರ್ನ್ ಮಾಡುವುದರಿಂದ ಅವರು ಏನು ಬೇಕಾದರು ತಿನ್ನಬಹುದು ಆದರೆ ಮಧ್ಯಾಹ್ನದ ಊಟ ಕಡಿಮೆ ಇರಬೇಕು. ಅವರು ದಿನದಲ್ಲಿ ಎಷ್ಟು ಕ್ಯಾಲೋರಿಗಳನ್ನು ಬರ್ನ್ ಮಾಡುತ್ತಾರೆ? ಹಾಗು ಎಷ್ಟು ಆಹಾರವನ್ನು ಸೇವಿಸುತ್ತಾರೆ? ಎಂಬುದರ ಮೇಲೆ ನಾನು ಅವರ ಆಹಾರ ಪ್ರಮಾಣವನ್ನು ನಿಗದಿಪಡಿಸುತ್ತೇನೆ. ಕಾರ್ಬೊಹೈಡ್ರೇಟ್ಸ್ ಜೊತೆ ಪ್ರೋಟೀನ್ ಹಾಗು ತರಕಾರಿಗಳು ಪ್ರತಿದಿನ ಇರಬೇಕು ಎನ್ನುತ್ತಾರೆ ತಜ್ಞೆ ವಿಶಾಖ.

ಆದಿತ್ಯ ಅವರು ವಾರದಲ್ಲಿ5-6 ದಿನ ಜಿಮ್ ಗೆ ಹೋಗುತ್ತಾರೆ. ದಿನದಲ್ಲಿ 1.1/2 ಗಂಟೆ ವ್ಯಾಯಾಮ ಮಾಡುತ್ತಾರೆ. ಆದಿತ್ಯ ಅವರು ಸರಿಯಾದ ಕ್ರಮದಲ್ಲಿ ವ್ಯಾಯಾಮ ಮಾಡುವುದನ್ನು ಅರಿತಿದ್ದಾರೆ ಎಂದು ವಿಶಾಖ ಹೇಳುತ್ತಾರೆ. ಅವರು ಅತಿಯಾಗಿ ವ್ಯಾಯಾಮ ಮಾಡುವುದಿಲ್ಲ ಅವರು ಅದರ ಪರಿಣಾಮಗಳ ಬಗ್ಗೆ ತಿಳಿದಿದ್ದಾರೆ. ಆದಿತ್ಯ ಅವರು 3-4 ಕೆಜಿ ತೂಕ ಕಡಿಮೆ ಮಾಡಲು ಬಯಸಿದ್ದರು ಅವರು ತಮ್ಮ ಬೊಜ್ಜು ಕಡಿಮೆ ಆಗುತ್ತಿರುವುದನ್ನು ಕಂಡು ಕೊಂಡಿದ್ದಾರೆ ಎಂದು ವಿಶಾಖ ಹೇಳಿದ್ದಾರೆ.
Published by:Ashwini Prabhu
First published: