'ಸಿಂಗಾಪೂರ್ ಏರ್ಲೈನ್ಸ್'ಗೆ ಮೊದಲ ಸ್ಥಾನ: ಭಾರತದ ವೈಮಾನಿಕ ಕಂಪನಿಗಳ ಸ್ಥಾನ ಏನು ಗೊತ್ತಾ..?
news18
Updated:July 18, 2018, 6:51 PM IST
news18
Updated: July 18, 2018, 6:51 PM IST
-ನ್ಯೂಸ್ 18 ಕನ್ನಡ
ವಿಶ್ವದ ಅತ್ಯಂತ ಪವರ್ಫುಲ್ ಪಾಸ್ಪೋರ್ಟ್ ಹೊಂದಿರುವ ಪಟ್ಟಿಯಲ್ಲಿ ಮೊದಲೆರೆಡು ಸ್ಥಾನ ಪಡೆದಿದ್ದ ಸಿಂಗಾಪೂರ್ ಮತ್ತು ಜಪಾನ್ ದೇಶಗಳು ಮತ್ತೊಮ್ಮೆ ವಿಶ್ವದ ಗಮನ ಸೆಳೆದಿದೆ. ಕಳೆದ ಬಾರಿ ಪಾಸ್ಪೋರ್ಟ್ ಆಗಿದ್ದರೆ ಈ ಬಾರಿ ಪ್ರಯಾಣ ವ್ಯವಸ್ಥೆಯಿಂದ ಎಂಬುದಷ್ಟೇ ವ್ಯತ್ಯಾಸ.
ಹೌದು, ಪ್ರಪಂಚದ ಟಾಪ್ 10 ವಿಮಾನಯಾನ ಸೇವೆ ನೀಡುವ ಏರ್ಲೈನ್ಸ್ ಕಂಪನಿಗಳ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳನ್ನು ಏಷ್ಯಾದ ಮೂರು ವಿಮಾನಯಾನ ಕಂಪನಿಗಳು ಪಡೆದುಕೊಂಡಿದೆ. 'ಸ್ಕೈಟ್ರಾಕ್ಸ್ ಎಡಿಟರ್ಸ್' ನೀಡಿರುವ ರ್ಯಾಂಕಿಂಗ್ನಲ್ಲಿ 'ಸಿಂಗಾಪೂರ್ ಏರ್ಲೈನ್ಸ್' ಅಗ್ರಸ್ಥಾನಗಳಿಸಿದೆ. ದ್ವಿತೀಯ ಸ್ಥಾನದಲ್ಲಿ 'ಕತಾರ್ ಏರ್ವೇಸ್' ಮತ್ತು ತೃತೀಯ ರ್ಯಾಂಕ್ ಅನ್ನು ಜಪಾನಿನ 'ಆಲ್ ನಿಪ್ಪೊನ್ ಏರ್ವೇಸ್' ಪಡೆದಿದೆ.
ಸಿಂಗಾಪೂರ್ ಏರ್ಲೈನ್ಸ್ ಸಂಸ್ಥೆಯು ಪ್ರಪಂಚದ ಆರು ಖಂಡಗಳಿಗೂ ವಿಮಾನಯಾನ ಸೇವೆ ನೀಡುತ್ತಿದೆ. ಅಲ್ಲದೆ ಈ ಸಂಸ್ಥೆಯ ಸೇವೆಯ ಬಗ್ಗೆ ಪ್ರಯಾಣಿಕರಲ್ಲಿ ಉತ್ತಮ ಅಭಿಪ್ರಾಯವಿದ್ದು, ವಿಮಾನಯಾನ ಸೇವೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳುವಲ್ಲಿ ಈ ಕಂಪನಿ ಯಶಸ್ವಿಯಾಗಿದೆ ಎಂದು ಸ್ಕೈಟ್ರಾಕ್ಸ್ ವಕ್ತಾರ ಎಡ್ವರ್ಡ್ ತಿಳಿಸಿದ್ದಾರೆ.ಕೆಲ ತಿಂಗಳ ಹಿಂದೆಯಷ್ಟೇ ಸಿಂಗಾಪೂರ್ ಏರ್ಲೈನ್ಸ್ ಡಬಲ್ ಡೆಕ್ಕರ್ A380 ವಿಮಾನಯಾನವನ್ನು ಪ್ರಾರಂಭಿಸಿತ್ತು. ಇದರ ಒಳಾಂಗಣದ ಮೇಲ್ಭಾಗವನ್ನು ಆರು ಖಾಸಗಿ ಅಪಾರ್ಟ್ಮೆಂಟ್ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಪ್ರತಿ ಕೋಣೆಯಲ್ಲೂ ಡಬಲ್ ಫ್ಲಾಟ್ ಬೆಡ್ ಮತ್ತು ಲೆದರ್ ಕುರ್ಚಿಗಳನ್ನು ಇರಿಸಲಾಗಿದ್ದು, ವ್ಯಾನಿಟಿ ಕೌಂಟರ್ಗಳು ಮತ್ತು ಐಷಾರಾಮಿ ಹಾಸಿಗೆಯ ಸೌಲಭ್ಯವನ್ನು ಇದರಲ್ಲಿ ನೀಡಲಾಗಿದೆ. ಇಂತಹದೊಂದು ವಿಮಾನಯಾನ ಸೇವೆಯ ಮೂಲಕ ವಿಶ್ವದ ಗಮನ ಸೆಳೆದಿದ್ದ ಸಿಂಗಾಪೂರ್ ಏರ್ಲೈನ್ಸ್ ಈಗ ನಂಬರ್ 1 ಗೌರವಕ್ಕೆ ಪಾತ್ರವಾಗಿದೆ.
www.worldairlinesurvey.com ನಡೆಸಿದ ಈ ಆನ್ಲೈನ್ ಸಮೀಕ್ಷೆಯಲ್ಲಿ 20.36 ಮಿಲಿಯನ್ ಜನರು ಮತ ಚಲಾಯಿಸಿದ್ದಾರೆ. ವಿಶ್ವದ 335 ವಿಮಾನಯಾನ ಸಂಸ್ಥೆಗಳು ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದು, 100 ರಾಷ್ಟ್ರಗಳ ಪ್ರಯಾಣಿಕರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇಂಗ್ಲೀಷ್, ಫ್ರೆಂಚ್, ಸ್ಪ್ಯಾನಿಷ್, ಚೀನಿ, ರಷ್ಯನ್ ಮತ್ತು ಜಪಾನೀಸ್ ಭಾಷೆಯಲ್ಲಿ ನಡೆಸಲಾದ ಈ ಸಮೀಕ್ಷೆಯ ರ್ಯಾಂಕಿಂಗ್ನ ಟಾಪ್ 20 ಯಲ್ಲೂ ಭಾರತದ ಯಾವುದೇ ಏರ್ಲೈನ್ಸ್ ಸಂಸ್ಥೆ ಸ್ಥಾನಗಿಟ್ಟಿಸಿಕೊಂಡಿಲ್ಲ.
ಪ್ರಪಂಚದ ಟಾಪ್ 10 ಏರ್ಲೈನ್ಸ್ ಸಂಸ್ಥೆಗಳ ಪಟ್ಟಿ1. ಸಿಂಗಾಪೂರ್ ಏರ್ಲೈನ್ಸ್
2. ಕತಾರ್ ಏರ್ವೇಸ್
3. ಆಲ್ ನಿಪ್ಪೊನ್ ಏರ್ವೇಸ್
4. ಎಮಿರೇಟ್ಸ್
5. ಈವ ಏರ್
6. ಕಾಥೆ ಫೆಸಿಪಿಕ್
7. ಲುಫ್ತಾನ್ಸಾ
8. ಹೈನಾನ್ ಏರ್ಲೈನ್ಸ್
9. ಗರುಡ ಇಂಡೋನೇಷ್ಯಾ
10. ಥಾಯ್ ಏರ್ವೇಸ್

ಪ್ರಪಂಚದ ಟಾಪ್ 10 ಏರ್ಲೈನ್ಸ್ ಸಂಸ್ಥೆಗಳ ಪಟ್ಟಿ
Loading...
2. ಕತಾರ್ ಏರ್ವೇಸ್
3. ಆಲ್ ನಿಪ್ಪೊನ್ ಏರ್ವೇಸ್
4. ಎಮಿರೇಟ್ಸ್
5. ಈವ ಏರ್
6. ಕಾಥೆ ಫೆಸಿಪಿಕ್
7. ಲುಫ್ತಾನ್ಸಾ
8. ಹೈನಾನ್ ಏರ್ಲೈನ್ಸ್
9. ಗರುಡ ಇಂಡೋನೇಷ್ಯಾ
10. ಥಾಯ್ ಏರ್ವೇಸ್
Loading...