ಇಡ್ಲಿ, ದೋಸೆ, ರೊಟ್ಟಿ, ಚಪಾತಿ, ಪಲಾವ್, ವೈಟ್ ರೈಸ್ ಹೀಗೆ ಎಲ್ಲಾ ರೀತಿಯ ಆಹಾರಕ್ಕೂ ನಂಚಿಕೊಂಡು ತಿನ್ನಲು ಚಟ್ನಿ ಬೆಸ್ಟ್ ಅಂತನೇ ಹೇಳಬಹುದು. ಅಲ್ಲದೇ ಚಟ್ನಿಯಲ್ಲಿ ವೆರೈಟಿಗಳಿದೆ. ಎಲ್ಲದಕ್ಕೂ ಸಾಮಾನ್ಯವಾಗಿ ತೆಂಗಿನಕಾಯಿಯನ್ನು ಬಳಸಲಾಗುತ್ತದೆ. ಆದರೆ ತೆಂಗಿನ ಕಾಯಿ ಇಲ್ಲದೇ ಚಟ್ನಿ ಮಾಡುವುದು ಹೇಗೆ ಅಂತ ನಿಮಗೆ ಗೊತ್ತಿದ್ಯಾ? ಹೌದು ನಾವು ಇಂದು ನಿಮಗೆ ತೆಂಗಿನ ಕಾಯಿ ಇಲ್ಲದೇ ಇಲ್ಲದೇ ಚಟ್ನಿ ಮಾಡುವುದು ಹೇಗೆ ಎಂಬುವುದನ್ನು ಹೇಳಿಕೊಡುತ್ತೇವೆ. ಮನೆಯಲ್ಲಿ ತೆಂಗಿನ ಕಾಯಿ ಇಲ್ಲದೇ ಇರುವಾಗ ನೀವು ಈ ಚಟ್ನಿಯನ್ನು ಸುಲಭವಾಗಿ ಮಾಡಿಕೊಂಡು ಸವಿಯಬಹುದು. ಇದರ ಜೊತೆಗೆ ಒಣ ಮೆಣಸಿನಕಾಯಿ ಚಟ್ನಿ ಮಾಡುವುದು ಹೇಗೆ ಎಂಬುವುದನ್ನು ಕೂಡ ನಾವು ನಿಮಗೆ ಹೇಳಿಕೊಡುತ್ತೇವೆ. ಅಲ್ಲದೇ ಈ ಎರಡೂ ಚಟ್ನಿ ಕೂಡ ಮನೆ ಮಂದಿಗೆಲ್ಲಾ ಇಷ್ಟವಾಗುವುದರಲ್ಲಿ ಮಾತಿಲ್ಲ ಎಂದೇ ಹೇಳಬಹುದು.
![]()
ಚಟ್ನಿ
ತೆಂಗಿನಕಾಯಿ ಇಲ್ಲದೇ ಇರುವ ಚಟ್ನಿ ಮಾಡಲು ಬೇಕಾಗುವ ಸಾಮಾಗ್ರಿಗಳು
- ಕಡಲೆ - 1/4 ಕಪ್
- ಎಣ್ಣೆ - 2 ಟೀಸ್ಪೂನ್
- ಹಸಿರು ಮೆಣಸಿನಕಾಯಿ - 2
- ಸಾಸಿವೆ - 1/2
- ಕರಿಬೇವಿನ ಎಲೆಗಳು - ಸ್ವಲ್ಪ
- ಈರುಳ್ಳಿ - 1
- ಹುಣಸೆಹಣ್ಣು - ಸ್ವಲ್ಪ
- ಬೆಳ್ಳುಳ್ಳಿ - ಸ್ವಲ್ಪ
- ಲವಂಗ - 2
![]()
ಚಟ್ನಿ
ಮಾಡುವ ವಿಧಾನ
- ಬಾಣಲೆಗೆ ಎಣ್ಣೆ ಹಾಕಿ ಆರಿದ ನಂತರ ಹಸಿಮೆಣಸಿನಕಾಯಿ, ಬೆಳ್ಳುಳ್ಳಿ ಮತ್ತು ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ.
- ನಂತರ ಮಿಶ್ರಣ ತಣ್ಣಗಾದಾಗ ಮಿಕ್ಸರ್ ಜಾರ್ ಗೆ ಹಾಕಿ ಕಡಲೆಬೇಳೆಯೊಂದಿಗೆ ರುಬ್ಬಿಕೊಳ್ಳಿ.
- ರುಬ್ಬಿಕೊಂಡ ಮಿಶ್ರಣಕ್ಕೆ ಅಗತ್ಯಕ್ಕೆ ತಕ್ಕಷ್ಟು ಉಪ್ಪು ಬೆರೆಸಿ ಮತ್ತೆ ಚೆನ್ನಾಗಿ ರುಬ್ಬಿ. ಆದರೆ ಹೆಚ್ಚು ನುಣ್ಣಗೆ ರುಬ್ಬಬೇಡಿ ಇದರಿಂದ ರುಚಿ ಹಾಳಾಗಬಹುದು.
- ನಂತರ ಎಂದಿನಂತೆ ಸಾಸಿವೆ ಮತ್ತು ಕರಿಬೇವಿನ ಸೊಪ್ಪು, ಉದ್ದಿನ ಬೇಳೆ, ಕಡಲೆ ಬೇಳೆಯನ್ನು ಒಗ್ಗರಣೆ ಮಾಡಿಕೊಂಡು ಚಟ್ನಿ ಜೊತೆಗೆ ಮಿಕ್ಸ್ ಮಾಡಿದರೆ. ದೋಸೆ ಅಥವಾ ಇಡ್ಲಿ ಜೊತೆಗೆ ಚಟ್ನಿ ಸವಿಯಲು ಸಿದ್ಧ.
ಒಣ ಮೆಣಸಿನಕಾಯಿ ಚಟ್ನಿ ಮಾಡಲು ಬೇಕಾಗಿರುವ ಸಾಮಾಗ್ರಿಗಳು
- ಒಣ ಮೆಣಸಿನಕಾಯಿ - 6
- ಹುಣಸೆಹಣ್ಣು - ನಿಂಬೆ ಗಾತ್ರ
- ಕೊತ್ತಂಬರಿ ಬೀಜ - 1 ಚಮಚ
- ಜೀರಿಗೆ - 1/2 ಚಮಚ
- ಟೊಮೆಟೊ ಹಣ್ಣು - 1
- ಅರಿಶಿನ ಪುಡಿ - 1/2 ಚಮಚ
- ಕಡಲೆಕಾಯಿ - 4 ಟೀಸ್ಪೂನ್
- ಉಪ್ಪು, ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು
![]()
ಚಟ್ನಿ
ಒಣ ಮೆಣಸಿನಕಾಯಿ ಚಟ್ನಿ ಮಾಡುವ ವಿಧಾನ
- ಮೊದಲು ಟೊಮೆಟೊಗಳನ್ನು ತೊಳೆದು ಸ್ವಚ್ಛಗೊಳಿಸಿ. ನಂತರ ಅವುಗಳನ್ನು ನುಣ್ಣಗೆ ಕತ್ತರಿಸಿಟ್ಟುಕೊಳ್ಳಿ.
- ಅದಾದ ಬಳಿಕ, ಒಂದು ಕಪ್ನಲ್ಲಿ ಸ್ವಲ್ಪ ನೀರಿನೊಂದಿಗೆ ನಿಂಬೆ ಗಾತ್ರದ ಹುಣಸೆಹಣ್ಣು ಸೇರಿಸಿ, ಹುಣಸೆ ನೀರನ್ನು ತಯಾರಿಸಿ.
- ಈಗ ಬಾಣಲೆಯನ್ನು ಪಾತ್ರೆ ಇಟ್ಟು 4 ಸ್ಪೂನ್ ಕಡಲೆಬೇಳೆಯನ್ನು ಎಣ್ಣೆ ಹಾಕಿ ಹುರಿದು, ತಣ್ಣಗಾಗಿಸಿ ಅದನ್ನು ಸ್ವಚ್ಛಗೊಳಿಸಿ.
- ಈಗ ಅದೇ ಪ್ಯಾನ್ ಅನ್ನು ಸ್ವಲ್ಪ ಎಣ್ಣೆಯಿಂದ ಬಿಸಿ ಮಾಡಿ. ಎಣ್ಣೆ ಆರಿದ ನಂತರ ಒಣ ಮೆಣಸಿನಕಾಯಿ ಹಾಕಿ ಹುರಿಯಿರಿ.
![]()
ಚಟ್ನಿ
- ನಂತರ ಅದನ್ನು ಮಿಕ್ಸರ್ ಜಾರ್‌ಗೆ ವರ್ಗಾಯಿಸಿ, ನುಣ್ಣಗೆ ಪುಡಿಮಾಡಿ.
- ನಂತರ ಅದೇ ಬಾಣಲೆಯಲ್ಲಿ ಕೊತ್ತಂಬರಿ ಸೊಪ್ಪು, ಜೀರಿಗೆ, ಕತ್ತರಿಸಿದ ಟೊಮೆಟೊ, ಉಪ್ಪು ಮತ್ತು ಅರಿಶಿನ ಪುಡಿಯನ್ನು ಸ್ವಲ್ಪ ಎಣ್ಣೆ ಹಾಕಿ.
- ಈ ಮಿಶ್ರಣವನ್ನು ಮೆಣಸಿನಕಾಯಿಯೊಂದಿಗೆ ಮಿಶ್ರಣ ಮಾಡಿ ಮತ್ತು ರುಬ್ಬಿಕೊಳ್ಳಿ.
- ನಂತರ ಈ ಮಿಕ್ಸರ್ ಜಾರ್‌ನಲ್ಲಿ ಹುರಿದ ಕಡಲೆಕಾಯಿಯನ್ನು ಸೇರಿಸಿ ಮತ್ತು ಅವುಗಳನ್ನು ಕೂಡ ರುಬ್ಬಿಕೊಳ್ಳಿ. ಪದಾರ್ಥಗಳು ಚೆನ್ನಾಗಿ ಪುಡಿಯಾದಾಗ ಸ್ವಲ್ಪ ನೀರು ಸೇರಿಸಿ ಮತ್ತು ಮೆಣಸಿನಕಾಯಿ ಪುಡಿ ಹಾಕಿ ರುಬ್ಬಿಕೊಳ್ಳಿ.
- ಈ ಮಸಾಲೆಯುಕ್ತ ಅದ್ದುವನ್ನು ದೋಸೆ, ಇಡ್ಲಿ ಅಥವಾ ಸಾಂಬಾರ್ ಅನ್ನದೊಂದಿಗೆ ಬೌಲ್‌ನಲ್ಲಿ ಆನಂದಿಸಬಹುದು. ಯಾವುದಾದರೂ ಇದ್ದರೆ ಸ್ವಲ್ಪ ತುಪ್ಪ ಸೇರಿಸಿ.