Cooking Tips: ಬೇಳೆ ಕಾಳುಗಳ ರೆಸಿಪಿ ಮಾಡುವಾಗ ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ

ಮನೆಯಲ್ಲಿ ಯಾವಾಗಲೂ ಒಂದೇ ರೀತಿಯ ಪಾಕ ವಿಧಾನ ಅನುಸರಿಸಲಾಗುತ್ತದೆ. ಕೆಲ ವಿಧಾನಗಳು ನೀವು ಮಾಡುವ ದಾಲ್ ರೆಸಿಪಿ ಅಥವಾ ಕಾಳುಗಳ ರೆಸಿಪಿಯನ್ನು ಮತ್ತಷ್ಟು ಟೇಸ್ಟಿ ಆಗಿಸುತ್ತವೆ. ವಿಭಿನ್ನ ಮತ್ತು ರುಚಿಕರ ದಾಲ್‌ ಮಾಡಲು ಕೆಲವು ಪದಾರ್ಥಗಳನ್ನು ಅದರಲ್ಲಿ ಸೇರಿಸಿದರೆ ಅದರ ಸುವಾಸನೆ ಮತ್ತು ಟೇಸ್ಟ್ ಹೆಚ್ಚುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಆಹಾರ (Food) ಎಷ್ಟೇ ರುಚಿಕರವಾಗಿದ್ರೂ (Tasty) ಸಹ ದಿನವೂ (Daily) ಒಂದೇ ರೀತಿಯ ಆಹಾರ ತಿನ್ನೋಕೆ ಬೋರ್ (Bore) ಆಗುತ್ತೆ. ಭಾರತೀಯ ಮನೆಗಳ (Indian Family) ದೈನಂದಿನ ಆಹಾರ ಪದಾರ್ಥಗಳಲ್ಲಿ ಬೇಳೆ ಕಾಳು (Pulses) ರೆಸಿಪಿ (Recipe) ಕೂಡ ಒಂದು. ವಿವಿಧ ರೀತಿಯ ಬೇಳೆ ಕಾಳುಗಳ ಸಾಂಬಾರು, ಪಲ್ಯ ದಿನವೂ ಮಾಡಿ ಸವಿಯುವುದು ಭಾರತೀಯ ಅಡುಗೆ ಪದ್ಧತಿಯಲ್ಲಿ ಮುಖ್ಯವಾಗಿದೆ. ಕೆಲವರಂತೂ ದಿನವೂ ಬೇಳೆ ಕಾಳುಗಳ ದಾಲ್ ನ್ನು ಸವಿಯಲು ಸಾಕಷ್ಟು ಇಷ್ಟ ಪಡತ್ತಾರೆ. ಆದರೆ ಹೆಚ್ಚಿನ ಜನರು ಪ್ರತಿದಿನ ಒಂದೇ ಆಹಾರ ಸೇವನೆಯಿಂದ ಬೇಸರಗೊಳ್ತಾರೆ. ನೀವೂ ದಿನವೂ ವಿವಿಧ ಬೇಳೆ ಕಾಳುಗಳ ರೆಸಿಪಿ ತಿನ್ನಲು ಇಷ್ಟ ಪಟ್ಟರೆ, ಅದನ್ನು ಮತ್ತಷ್ಟು ರುಚಿಕರವಾಗಿಸುವ ಹಲವು ಮಾರ್ಗಗಳು ಇವೆ.  

    ದಾಲ್ ರೆಸಿಪಿ ಟೇಸ್ಟಿಯಾಗಿಸಲು ಹೀಗೆ ಮಾಡಿ

    ಕೆಲ ವಿಧಾನಗಳು ನೀವು ಮಾಡುವ ದಾಲ್ ರೆಸಿಪಿ ಅಥವಾ ಕಾಳುಗಳ ರೆಸಿಪಿಯನ್ನು ಮತ್ತಷ್ಟು ಟೇಸ್ಟಿ ಆಗಿಸುತ್ತವೆ. ವಿಭಿನ್ನ ಮತ್ತು ರುಚಿಕರ ದಾಲ್‌ ಮಾಡಲು ಕೆಲವು ಪದಾರ್ಥಗಳನ್ನು ಅದರಲ್ಲಿ ಸೇರಿಸಿದರೆ ಅದರ ಸುವಾಸನೆ ಮತ್ತು ಟೇಸ್ಟ್ ಹೆಚ್ಚುತ್ತದೆ.

    ಮನೆಯಲ್ಲಿ ಯಾವಾಗಲೂ ಒಂದೇ ರೀತಿಯ ಪಾಕ ವಿಧಾನ ಅನುಸರಿಸಲಾಗುತ್ತದೆ. ದಾಲ್ ಭಾರತೀಯರಿಗೆ ಪ್ರಮುಖ ಆಹಾರವಾಗಿದೆ. ಹಾಗಾದ್ರೆ ದಾಲ್ ನ್ನು ಹೆಚ್ಚು ರುಚಿಕರವಾಗಿಸಲು ಯಾವ ಪದಾರ್ಥಗಳನ್ನು ಬಳಸುವುದು ಉತ್ತಮ ಅನ್ನೋದನ್ನ ನೋಡೋಣ.

    ಇದನ್ನೂ ಓದಿ: ಚಯಾಪಚಯ ಹೆಚ್ಚಿಸಲು ಮಸಾಲೆಯುಕ್ತ ಪದಾರ್ಥಗಳು ಬಹಳ ಒಳ್ಳೆಯದಂತೆ

    ಮೆಂತ್ಯವನ್ನು ದಾಲ್ ಗೆ ಸೇರಿಸಿ

    ಹೆಚ್ಚಿನ ತರಕಾರಿಗಳಲ್ಲಿ ಕಸೂರಿ ಮೇತಿ ಅಂದ್ರೆ ಮೆಂತ್ ಸೇರಿಸುವುದು ಪರಿಮಳ ಹೆಚ್ಚಿಸುತ್ತದೆ. ಜೊತೆಗೆ ಉತ್ತಮ ಸ್ವಾದ ನೀಡುತ್ತದೆ. ದಾಲ್ ಮಾಡುವಾಗ ಸೊಪ್ಪನ್ನು ಬಳಸಿದರೆ, ಅದಕ್ಕೆ ಸ್ವಲ್ಪ ಮೆಂತ್ಯ ಕಾಳು ರುಬ್ಬಿದ ಅಥವಾ ಹಸಿ ಮೆಂತ್ಯ ಸೊಪ್ಪನ್ನು ಹಾಕಿ. ಅದರ ರುಚಿ ಇನ್ನಷ್ಟು ಹೆಚ್ಚಾಗುತ್ತದೆ. ಇದನ್ನು ಬಹಳ ಮಿತವಾಗಿ ಬಳಸಬೇಕು.

    ದಾಲ್ ಮಾಡುವಾಗ ಬೆಣ್ಣೆ ಸೇರಿಸಿ

    ಢಾಬಾ ಶೈಲಿಯ ದಾಲ್ ಎಲ್ಲರಿಗೂ ಫೇವರಿಟ್ ಆಗಿರುತ್ತೆ. ನಿಮಗೂ ಇಷ್ಟವಾಗಿದ್ದರೆ, ದಿನನಿತ್ಯದ ಅಡುಗೆಗೆ ಸ್ವಲ್ಪ ಉದ್ದಿನಬೇಳೆ ಸೇರಿಸಿ ಮತ್ತು ಅದನ್ನು ಬೇಯಿಸಿ. ಅದಕ್ಕೆ ಬೆಣ್ಣೆ ಸೇರಿಸಿ. ಹೀಗೆ ಮಾಡುವುದರಿಂದ ನಿಮ್ಮ ದಾಲ್‌ನಲ್ಲಿ ರುಚಿ ಇನ್ನಷ್ಟು ಹೆಚ್ಚುತ್ತದೆ. ಜೊತೆಗೆ ಒಣ ಕೆಂಪು ಮೆಣಸಿನಕಾಯಿ, ಇಂಗು, ಹಸಿರು ಮೆಣಸಿನಕಾಯಿ, ಜೀರಿಗೆ, ಈರುಳ್ಳಿ ಮತ್ತು ಟೊಮೆಟೊವನ್ನು ಹದವಾಗಿ ಸೇರಿಸಿ. ಅದು ಸಂಪೂರ್ಣವಾಗಿ ಢಾಬಾ ರುಚಿ ನೀಡುತ್ತದೆ.

    ದಾಲ್ ಗೆ ಮೊಸರು ಸೇರಿಸಿ

    ನೀವು ಪಂಜಾಬಿ ಶೈಲಿಯ ದಾಲ್ ತಿನ್ನಲು ಇಷ್ಟ ಪಟ್ಟರೆ ಅದರ ಮೇಲೆ ಮೊಸರನ್ನು ಸಹ ಬಳಸಿ. ನೀವು ಕಪ್ಪು ಬೇಳೆಕಾಳುಗಳ ರೆಸಿಪಿ ತಿನ್ನಲು ಇಷ್ಟ ಪಟ್ಟರೆ ಮೊಸರು ಸೇರಿಸಿ. ದಾಲ್ ದಪ್ಪವಾಗಿರಬೇಕು ಎಂಬುದನ್ನು ನೆನಪಿಡಿ. ತೆಳ್ಳಗಿನ ದಾಲ್ ಅಥವಾ ತೊಗರಿ ಬೇಳೆ ಪ್ರಯೋಗಿಸಬೇಡಿ. ಇದು ಕಪ್ಪು ಕಾಳುಗಳ ರೆಸಿಪಿಗೆ ಮಾತ್ರ. ಮೊಸರನ್ನು ಮಿತವಾಗಿ ಬಳಸಿ.

    ದಾಲ್ ಗೆ ಶೇಂಗಾ ಅಥವಾ ಶೇಂಗಾ ಪುಡಿ ಸೇರಿಸಿ

    ಗುಜರಾತಿ ಶೈಲಿಯ ದಾಲ್ ಮಾಡಲು ಮಸಾಲೆ ಜೊತೆಗೆ ಶೇಂಗಾ ಅಥವಾ ಪುಡಿ ಸೇರಿಸಿ. ಶುಂಠಿ, ಹಸಿಮೆಣಸಿನಕಾಯಿ, ಬೆಲ್ಲ, ಕೋಕಂ, ಕೊತ್ತಂಬರಿ ಸೊಪ್ಪು, ಶೇಂಗಾ, ಗೆಣಸು, ಉಪ್ಪನ್ನು ಕೆಲವು ಮನೆಗಳಲ್ಲಿ ಬೇಳೆ ಬೇಯಿಸುವಾಗ ಹಾಕುತ್ತಾರೆ. ನಂತರ ಅದನ್ನು ಕುಕ್ಕರ್‌ನಲ್ಲಿ ಬೇಯಿಸಲಾಗುತ್ತದೆ. ಇದೆಲ್ಲವೂ ದಾಲ್‌ಗೆ ವಿಭಿನ್ನ ರುಚಿಯನ್ನು ತರುತ್ತದೆ.

    ಇದನ್ನೂ ಓದಿ: ವಿಟಮಿನ್ ಬಿ 12 ಕೊರತೆಯಿಂದ ಯಾವೆಲ್ಲಾ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ?

     ದಾಲ್ ತಡ್ಕಾ ಮಾಡುವಾಗ ಮಸಾಲಾ ಸೇರಿಸಿ

    ದಾಲ್ ತಡ್ಕಾ ಮಾಡುವಾಗ ವಿವಿಧ ಕಾಳುಗಳು ಮತ್ತು ಕೆಲವು ಮಸಾಲೆ ಬಳಸುತ್ತಾರೆ. ದಾಲ್ ಹದಗೊಳಿಸಲು ಬಳಸುವ ದ್ವಿದಳ ಧಾನ್ಯಗಳಲ್ಲಿ ಹೆಸರು ಬೇಳೆ ಅಥವಾ ತೊಗರಿ ಬೇಳೆ ಬಳಸುತ್ತಾರೆ. ರೆಸಿಪಿಗೆ ತಡ್ಕಾ ಮಸಾಲಾ ಪುಡಿ ಬಳಸಿ. ಇದು ರುಚಿಯನ್ನು ಹೆಚ್ಚಿಸುತ್ತದೆ.
    Published by:renukadariyannavar
    First published: