Kitchen Tricks: ಮೊಟ್ಟೆ ಒಡೆದಾಗ ಚಿಪ್ಪಿನ ಚೂರುಗಳು ಬಿದ್ದರೆ ಸುಲಭವಾಗಿ ಹೊರ ತೆಗೆಯಲು ಹೀಗೆ ಮಾಡಿ

ಮೊಟ್ಟೆಯ ಚಿಪ್ಪನ್ನು ಈ ವಿಧಾನ ಅನುಸರಿಸಿ ಸುಲಭವಾಗಿ ತೊಡೆದು ಹಾಕಬಹುದು ಎಂದು ಈ ಇಬ್ಬರು ಬಾಣಸಿಗರು ತಮ್ಮ ಸ್ವಅನುಭವದಿಂದ ಹೇಳಿದ್ದಾರೆ.

ಚಿಪ್ಪಿನ ಚೂರುಗಳನ್ನು ತೆಗೆಯುವ ವಿಧಾನ

ಚಿಪ್ಪಿನ ಚೂರುಗಳನ್ನು ತೆಗೆಯುವ ವಿಧಾನ

  • Share this:

    ಮೊಟ್ಟೆ ಆಹಾರ ಪದಾರ್ಥಗಳಲ್ಲಿ ಹೆಚ್ಚು ಪೌಷ್ಟಿಕಾಂಶ ಹೊಂದಿರುವ ಪದಾರ್ಥ. ಇದರಲ್ಲಿನ ಹಳದಿ ಭಾಗ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಿದರೂ, ಬಿಳಿಭಾಗ ಸೇವನೆಯಿಂದ ಸಾಕಷ್ಟು ಆರೋಗ್ಯಕರ ಪ್ರಯೋಜನಗಳಿವೆ. ಮೊಟ್ಟೆಯಲ್ಲಿ ಆಮ್ಲೆಟ್, ಎಗ್‍ ಬುರ್ಜಿ, ಎಗ್ ರೈಸ್ - ಹೀಗೆ ನಾನಾ ಆಹಾರಗಳನ್ನು ತಯಾರಿಸಲಾಗುತ್ತದೆ. ಆದರೆ ಮೊಟ್ಟೆಯ ಚಿಪ್ಪನ್ನು ಬಿಡಿಸುವುದೇ ಒಂದು ಸವಾಲು.ಹೆಸ್ಟನ್ ಬ್ಲೂಮೆಂಥಾಲ್ ಅವರ ಜೊತೆ ಕೆಲಸ ಮಾಡಿದ ಪ್ರಖ್ಯಾತ ಬ್ರಿಟಿಷ್ ಮೂಲದ ಬಾಣಸಿಗರೊಬ್ಬರು ಮೊಟ್ಟೆಯ ಚಿಪ್ಪುಗಳನ್ನು ತೆಗೆದುಹಾಕುವುದು ಹೇಗೆ ಎಂಬ ಬಗ್ಗೆ ಸರಳ ತಂತ್ರವನ್ನು ಹಂಚಿಕೊಂಡಿದ್ದಾರೆ.ಮೊಟ್ಟೆಯ ಬಿಳಿಭಾಗದಿಂದ ಸಣ್ಣ ಸಣ್ಣ ಚೂರುಗಳನ್ನು ತೆಗೆಯಲು ಮೊಟ್ಟೆ ಚಿಪ್ಪಿನ ಅರ್ಧದಷ್ಟು ಭಾಗ ಬಳಸುವುದು ಸುಲಭ ಮತ್ತು ತ್ವರಿತ ಮಾರ್ಗವಾಗಿದೆ ಎಂದು ಮೆಲ್ಬೋರ್ನ್‍ನ ಸಿಟಿ ಲಾರ್ಡರ್ನ ಮುಖ್ಯ ಚಾರ್ಕುಟೇರಿ ಬ್ರಿಟಿಷ್ ಮೂಲದ ಬಾಣಸಿಗ ರಾಬಿ ಬೆಲ್ ಹೇಳಿದ್ದಾರೆ.


    ಮೊಟ್ಟೆಯಿಂದ ಎಗ್‍ಶೆಲ್ ತೆಗೆದುಹಾಕಲು ಉತ್ತಮ ಮಾರ್ಗವೆಂದರೆ ಹೊಸದಾಗಿ ಬಿರುಕು ಬಿಟ್ಟ ಶೆಲ್‍ನ ಅರ್ಧದಷ್ಟು ಭಾಗವನ್ನು ಬಳಸುವುದು. ಇದು ಅತ್ಯಂತ ಉತ್ತಮವಾದ ಸಲಹೆಯಾಗಿದ್ದು, ಪ್ರತಿ ಬಾರಿಯೂ ಕೆಲಸ ಮಾಡುತ್ತದೆ ಎಂದು ಅವರು ಟಿಕ್‍ಟಾಕ್ ವಿಡಿಯೋದಲ್ಲಿ ಹೇಳಿದ್ದಾರೆ.


    ಈ ವಿಡಿಯೋವನ್ನು 30,000ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ ಮತ್ತು ಸಣ್ಣ ಚಿಪ್ಪುಗಳನ್ನು ತೆಗೆದುಹಾಕಲು ಯಾವಾಗಲೂ ತನ್ನ ಬೆರಳುಗಳನ್ನು ಬಳಸುತ್ತಾನೆ ಎಂದು ಹಲವರು ಒಪ್ಪಿಕೊಳ್ಳುತ್ತಾರೆ. ಈ ವಿಡಿಯೋ ಬಗ್ಗೆ ಹಲವರು ಕಮೆಂಟ್ ಮಾಡಿದ್ದು, ಇದನ್ನು ಯಾರಾದರೂ ಮೊದಲು ನಿಮಗೆ ಏಕೆ ಹೇಳಲಿಲ್ಲ? ಎಂದು ಹೇಳಿದರೆ, ಇನ್ನೊಬ್ಬರು ನನಗೆ ಇದು ಯಾಕೆ ತಿಳಿದಿಲ್ಲ..? ಎಂದು ತಮ್ಮನ್ನೇ ಪ್ರಶ್ನಿಸಿಕೊಂಡಿದ್ದಾರೆ. ಇದನ್ನು ಅಡುಗೆ ಶಾಲೆಯಲ್ಲಿ ಏಕೆ ಕಲಿಸಲಿಲ್ಲ,,? ಎಂದು ಕೇಳಿದ್ದಾರೆ. ಆದರೂ, ಕೆಲವರು ಇದೊಂದು ಸಾಮಾನ್ಯ ಜ್ಞಾನ ಎಂದು ಸೂಚಿಸಿದ್ದಾರೆ.


    ಇದನ್ನೂ ಓದಿ: Mint Leaves Beauty Tips: ಪುದೀನನ ಹೀಗೆ ಬಳಸಿದರೆ ಕಪ್ಪು ಕಲೆ ಮಾಯವಾಗಿ ತ್ವಚೆಯ ಬಣ್ಣ ಬದಲಾಗುತ್ತೆ

    ಮೊಟ್ಟೆಯ ಬಿಳಿಭಾಗದಿಂದ ಸಣ್ಣ ಚಿಪ್ಪುಗಳನ್ನು ತೆಗೆಯಲು ಸುಲಭವಾದ ಮತ್ತು ತ್ವರಿತವಾದ ಮಾರ್ಗವೆಂದರೆ ಅವುಗಳನ್ನು ಅರ್ಧ ಚಿಪ್ಪುಗಳಿಂದ ತೆಗೆಯುವುದು ಎಂದು ಉನ್ನತ ಬಾಣಸಿಗ ರಾಬಿ ಬೆಲ್ ಹೇಳಿದ್ದರೂ ಇದನ್ನು ಹಂಚಿಕೊಂಡವರಲ್ಲಿ ಇವರು ಮೊದಲೇನು ಅಲ್ಲ. ಬ್ರಿಟಿಷ್ ಬಾಣಸಿಗ ಜೇಮೀ ಆಲಿವರ್ ಈ ಹಿಂದೆಯೇ ಮೊಟ್ಟೆಯ ಮುರಿದ ಚಿಪ್ಪನ್ನು ಹೇಗೆ ತೆಗೆದುಹಾಕಬೇಕು ಎಂಬುದನ್ನು ಬಹಿರಂಗಪಡಿಸಿದರು. ನಾವೆಲ್ಲರೂ ಅದನ್ನು ಮಾಡಿದ್ದೇವೆ. ನಾವು ಆಮ್ಲೆಟ್‌ ಮತ್ತು ಕೇಕ್ ತಯಾರಿಸುವಾಗ ಮೊಟ್ಟೆಗಳನ್ನು ಬಳಸುತ್ತೇವೆ. ಆಗ ಅಕಸ್ಮಾತ್ ಮೊಟ್ಟೆಗಳ ಚಿಪ್ಪುಗಳು ಬಿದ್ದಿವೆ ಎಂದು ಜೇಮಿ ಹೇಳಿದರು.


    ನೀವು ಬಿದ್ದಿರುವ ಚಿಪ್ಪನ್ನು ತೆಗೆಯಲು ಕೈ ಬಳಸಿದರೆ ಆ ಸಣ್ಣ ಸಣ್ಣ ಚೂರುಗಳು ಕೈಗೆ ಸಿಗುವುದಿಲ್ಲ. ಇದು ಕಿರಿ ಕಿರಿ ಉಂಟು ಮಾಡುತ್ತದೆ. ನೀವು ನಂಬುತ್ತೀರೋ ಇಲ್ಲವೋ ತಿಳಿದಿಲ್ಲ. ಆದರೆ ಮೊಟ್ಟೆಯ ಚಿಪ್ಪನ್ನು ಮೇಲೆ ಹೇಳಿದ ವಿಧಾನ ಅನುಸರಿಸಿ ಸುಲಭವಾಗಿ ತೊಡೆದು ಹಾಕಬಹುದು ಎಂದು ಈ ಇಬ್ಬರು ಬಾಣಸಿಗರು ತಮ್ಮ ಸ್ವಅನುಭವದಿಂದ ಹೇಳಿದ್ದಾರೆ.

    First published: