Jaggery: ನೀವು ಬಳಸುವ ಬೆಲ್ಲ ಎಷ್ಟು ಶುದ್ಧವಾಗಿದೆ? ಬಿಳಿ ಬಣ್ಣದ ಬೆಲ್ಲದಲ್ಲಿ ಕೆಮಿಕಲ್ಸ್​​ ಜಾಸ್ತಿ ಅಂತಾರೆ ತಜ್ಞರು..!

ಬೆಲ್ಲದಲ್ಲಿ ಸಾಕಷ್ಟು ಆರೋಗ್ಯಕರ ಪ್ರಯೋಜನಗಳಿವೆ. ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ, ರಕ್ತ ಸಂಚಾರ ಸುಗಮವಾಗುತ್ತದೆ, ಋತುಸ್ರಾವದ ನೋವನ್ನು ಕಡಿಮೆಗೊಳಿಸುತ್ತದೆ.

ಬೆಲ್ಲ

ಬೆಲ್ಲ

  • Share this:
ಬೆಲ್ಲ(Jaggery) ಒಂದು ಶಕ್ತಿವಾಹಕ. ಇಂದಿಗೂ ಕೆಲವು ಗ್ರಾಮಗಳ ಮನೆಗಳಲ್ಲಿ ಹೊರಗಡೆಯಿಂದ ದಣಿವಾಗಿ ಬಂದವರಿಗೆ ಒಂದು ಲೋಟ ನೀರು ಮತ್ತು ಬೆಲ್ಲ ಕೊಡುವ ಸಂಪ್ರದಾಯವಿದೆ. ಏಕೆಂದರೆ ಇದು ತಕ್ಷಣವೇ ದೇಹಕ್ಕೆ ಶಕ್ತಿ ನೀಡಿ ಆಯಾಸವನ್ನು ಕಡಿಮೆ ಮಾಡುತ್ತದೆ. ಇನ್ನು ಅಡುಗೆ ಮನೆಯಲ್ಲಿ ಟೀ, ಕಾಫಿ, ಸಿಹಿ ಪದಾರ್ಥಗಳಲ್ಲಿ ಬೆಲ್ಲ, ಸಕ್ಕರೆಗೆ ಅಗ್ರಸ್ಥಾನ. ಇವೆರಡು ಇಲ್ಲದೇ ಯಾವ ಸಿಹಿ ಅಡುಗೆಗಳು ಪೂರ್ಣಗೊಳ್ಳುವುದೇ ಇಲ್ಲ. ಇತ್ತೀಚಿನ ದಿನಗಳಲ್ಲಿ ಎಲ್ಲಾ ವಯೋಮಾನದವರಿಗೂ ಹೊಂದಿಕೆಯಾಗಲಿ ಎಂದು ಆರೋಗ್ಯದ(Health) ದೃಷ್ಟಿಯಿಂದ ಜನರು ಸಕ್ಕರೆ ಬಳಕೆ ಕಡಿಮೆ ಮಾಡಿ ಬೆಲ್ಲವನ್ನು ಯಥೇಚ್ಛವಾಗಿ ಬಳಸಲಾಗುತ್ತಿದೆ. ಬೆಲ್ಲದಲ್ಲಿ ಖನಿಜಾಂಶ, ಮೆಗ್ನೀಷಿಯಂ, ಪೊಟ್ಯಾಶಿಯಂ, ಮ್ಯಾಂಗನೀಸ್ ಅಂಶ ಹೆಚ್ಚಾಗಿರುತ್ತದೆ. ಸಕ್ಕರೆ(sugar)ಯ ಪರ್ಯಾಯವಾಗಿ ಬಳಕೆಯಾಗುತ್ತಿರುವ ಬೆಲ್ಲದಲ್ಲೂ ಹಲವು ವಿಧಗಳಿವೆ. ಹೌದು ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಬೆಲ್ಲಗಳು ದೊರಕುತ್ತದೆ. ಬೆಲ್ಲಕ್ಕೆ ಹಿಂದಿಯಲ್ಲಿ ಗುರ್, ತೆಲುಗಿನಲ್ಲಿ ಬೆಲ್ಲಮ್, ತಮಿಳಿನಲ್ಲಿ ವೆಲ್ಲಮ್, ಮಲಯಾಳಿಯಲ್ಲಿ ಶರ್ಕರ, ಕನ್ನಡದಲ್ಲಿ ಬೆಲ್ಲ, ಮರಾಠಿಯಲ್ಲಿ ಗುಲ್ ಎಂದು ಕರೆಯುತ್ತಾರೆ.

ಈ ಕಾಲದಲ್ಲಿ ಎಲ್ಲಾ ಆಹಾರ ಪದಾರ್ಥಗಳು ರಾಸಾಯನಿಕಮಯವಾಗುತ್ತಿವೆ. ಇದಕ್ಕೆ ಬೆಲ್ಲವೂ ಹೊರತಾಗಿಲ್ಲ. ಹಾಗಾದರೆ ಬೆಲ್ಲದಲ್ಲಿ ರಾಸಾಯನಿಕ ಇದೆಯೋ ಇಲ್ಲವೋ ಎಂಬುದನ್ನು ಪತ್ತೆ ಹಚ್ಚುವುದು ಹೇಗೆ..? ಹಾಗಾದ್ರೆ ಬಾಣಸಿಗ ಪಂಕಜ್ ಬದೌರಿಯಾ(Chef Pankaj Bhadouria) ಎಂಬುವವರು ಶುದ್ಧವಾದ ಬೆಲ್ಲ ಯಾವುದು.. ಹೇಗೆ ಪತ್ತೆ ಹಚ್ಚುವುದು ಎಂಬುದರ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಪುಟದಲ್ಲಿ ಅಪ್‍ಲೋಡ್ ಮಾಡಿದ್ದಾರೆ.

ಇದನ್ನೂ ಓದಿ:Cooking Oil: ನೀವು ಬಳಸುವ ಅಡುಗೆ ಎಣ್ಣೆ‌ ಎಷ್ಟು ಶುದ್ಧವಾಗಿದೆ? ಮನೆಯಲ್ಲೇ ಪರೀಕ್ಷಿಸಬಹುದು, ಹೀಗೆ ಮಾಡಿ
ಬೆಲ್ಲ ಸ್ವಚ್ಛಗೊಳಿಸಲು ಸೋಡಾ ಮತ್ತು ಇತರ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಸಾಮಾನ್ಯವಾಗಿ ಬೆಲ್ಲ ಬಳಸುವವರು ಗಾಢ ಕಡು ಕಂದು ಬಣ್ಣದ ಬೆಲ್ಲ ಬಳಸಿ, ಸ್ವಲ್ಪ ಹಳದಿ ಬಣ್ಣ ಇರುವ ಬೆಲ್ಲದಿಂದ ದೂರ ಇರಿ. ತಿಳಿ ಹಳದಿ ಬಣ್ಣದ ಬೆಲ್ಲ ನಮ್ಮನ್ನು ಆಕರ್ಷಿಸಬಹುದು. ಆದರೆ ಗಾಢ ಕಂದು ಬಣ್ಣಕ್ಕಿಂತ ಸ್ವಲ್ಪ ಹಳದಿ ರೂಪದ ಬೆಲ್ಲದಲ್ಲಿ ರಾಸಾಯನಿಕಗಳು ಯಥೇಚ್ಛವಾಗಿರುತ್ತದೆ ಎಂದು ವಿವರಿಸಿದರು.

ಬಾಣಸಿಗನ ಪ್ರಕಾರ, ಬಿಳಿ ಅಥವಾ ತಿಳಿ ಕಂದು ಬೆಲ್ಲವನ್ನು ರಾಸಾಯನಿಕಗಳು ಮತ್ತು ಕೃತಕ ಬಣ್ಣಗಳನ್ನು ಬಳಸಿ ಕಲಬೆರಕೆ ಮಾಡಬಹುದು. ಇವುಗಳಲ್ಲಿ ಕ್ಯಾಲ್ಸಿಯಂ ಕಾರ್ಬೋನೇಟ್ ಮತ್ತು ಸೋಡಿಯಂ ಬೈಕಾರ್ಬನೇಟ್ ಸೇರಿವೆ. ಬೆಲ್ಲದ ತೂಕ ಹೆಚ್ಚಿಸಲು ಸಂಸ್ಕರಿಸುವಾಗ ಕ್ಯಾಲ್ಸಿಯಂ ಕಾರ್ಬೋನೇಟ್ ಸೇರಿಸಲಾಗುತ್ತದೆ, ಸೋಡಿಯಂ ಬೈಕಾರ್ಬೊನೇಟ್ ನಯವಾಗಿ ಸುಂದರವಾಗಿ ಕಾಣುವಂತೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ:ITR Filing: ಹೊಸ ವೆಬ್​ ಪೋರ್ಟಲ್​ನಲ್ಲಿ ಆನ್‌ಲೈನ್​​ ಮೂಲಕ Income Tax Return ಸಲ್ಲಿಸುವುದು ಹೇಗೆ..? ಇಲ್ಲಿದೆ ವಿವರ

ಕಡು ಕಂದು ಅಥವಾ ಕಪ್ಪು ಬಣ್ಣದ ಬೆಲ್ಲವು ರಾಸಾಯನಿಕ-ಮುಕ್ತವಾಗಿದೆ ಮತ್ತು ಇದು ಅತ್ಯಂತ ಸಾವಯವ, ರಾಸಾಯನಿಕ-ಮುಕ್ತ ಬೆಲ್ಲ ಎಂದು ಹೇಳಿದರು. ಏಕೆಂದರೆ ಕಬ್ಬಿನ ರಸ ಕುದಿಸಿದಾಗ ಗಾಢ ಕಂದು ಅಥವಾ ಕಪ್ಪು ಬೆಲ್ಲ ನಮಗೆ ಸಿಗುತ್ತದೆ. ಆದರೆ ಅದು ಕೊಂಚ ಆಕರ್ಷಕವಾಗಿ ಕಾಣಲು ರಾಸಾಯನಿಕಗಳನ್ನು ಸೇರಿಸಿದಾಗ, ಅದು ಹೆಚ್ಚು ಬಿಳಿಯಾಗಿರುತ್ತದೆ ಎಂದು ಅವರು ಉಲ್ಲೇಖಿಸಿದ್ದಾರೆ.

ಬೆಲ್ಲದಲ್ಲಿ ಸಾಕಷ್ಟು ಆರೋಗ್ಯಕರ ಪ್ರಯೋಜನಗಳಿವೆ. ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ, ರಕ್ತ ಸಂಚಾರ ಸುಗಮವಾಗುತ್ತದೆ, ಋತುಸ್ರಾವದ ನೋವನ್ನು ಕಡಿಮೆಗೊಳಿಸುತ್ತದೆ. ರಕ್ತದೊತ್ತಡ, ಸಂಧಿನೋವು ಕಡಿಮೆ ಮಾಡುತ್ತದೆ. ಇನ್ನು ತೂಕ ಇಳಿಕೆಯಲ್ಲಿ ಇದು ರಾಮಬಾಣ.
Published by:Latha CG
First published: