ವಿಪರೀತ ಸಿಟ್ಟು ನಿಮಗೆ ಬರುತ್ತಿದೆಯೇ? ಒಂದೇ ನಿಮಿಷದಲ್ಲಿ ನಿಮ್ಮನ್ನು ಶಾಂತಗೊಳಿಸುತ್ತವೆ ಈ ಟಿಪ್ಸ್


Updated:January 12, 2018, 9:27 AM IST
ವಿಪರೀತ ಸಿಟ್ಟು ನಿಮಗೆ ಬರುತ್ತಿದೆಯೇ? ಒಂದೇ ನಿಮಿಷದಲ್ಲಿ ನಿಮ್ಮನ್ನು ಶಾಂತಗೊಳಿಸುತ್ತವೆ ಈ ಟಿಪ್ಸ್

Updated: January 12, 2018, 9:27 AM IST
ಇಂದಿನ ಬಿಡುವಿಲ್ಲದ ಕೆಲಸ ನಮ್ಮ ಮೆಲೆ ಅದೆಷ್ಟು ಪ್ರಭಾವ ಬೀರುತ್ತದೆ ಎಂದರೆ ಇದರ ಪರಿಣಾಮವಾಗಿ ನಾವು ಸಿಟ್ಟಿನ ದಾಸರಾಗುತ್ತೇವೆ. ಆದರೆ ನಮ್ಮ ಕೋಪಕ್ಕೆ ಗುರಿಯಾಗುವುದು ತಪ್ಪಿಲ್ಲದ ಅಮಾಯಕರು. ಬೈಸಿಕೊಂಡರು ತಮ್ಮ ತಪ್ಪೇನು ಎಂಬುವುದನ್ನು ತಿಳಿಯದಅಗುತ್ತಾರೆ. ಹೀಗಿರುವಾಗ ನಮ್ಮನ್ನು ನಾವು ನಾವು ಕಂಟ್ರೋಲ್ ಮಾಡಿಕೊಳ್ಳುವುದು ಹೇಗೆ? ಇದಕ್ಕೆ ಸಿಂಪಲ್ ಟಿಪ್ಸ್ ಇಲ್ಲವೆ

ಕೋಪ ಬರುತ್ತಿದ್ದಂತೆಯೇ ಎಣಿಕೆ ಆರಂಭಿಸಿ. ಪ್ರತಿ ಒಂದು ಸಮಖ್ಯೆ ಎಣಿಸುವಾಗ ಹಾಸ್ಯಾಸ್ಪದ ವಿಚಾರಗಳನ್ನು ನೆನಪಿಸಿಕೊಳ್ಳಲು ಪ್ರಯತ್ನಿಸಿ. ಹೀಗೆ ಮಾಡುವುದರಿಂದ ಕೋಪ ದೂರವಾಗುವುದರೊಂದಿಗೆ ನೀವು ಹಸನ್ಮುಖಿಗಳಾಗುತ್ತೀರಿ ಅಲ್ಲದೇ ನೀವು ಕೋಪಗೊಂಡ ಕ್ಷಣವನ್ನು ಮರೆಯಲು ಸಾಧ್ಯವಾಗುತ್ತದೆ.

ವಿನಾ ಕಾರಣ ನಿಮ್ಮ ಗೆಳೆಯರ ಮೇಲೆ ರೇಗಾಡುವುದರಿಂದ, ಅಥವಾ ವಸ್ತುಗಳನ್ನೆಸೆಯುವುದರಿಂದ ಯಾವುದೇ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಒಂದು ವೇಳೆ ಈ ರೀತಿಯ ವರ್ತನೆ ನೀವು ತೋರಿದರೆ ಇದು ಬೆರೆಯವರ ಕೋಪಕ್ಕೂ ಕಾರಣವಾಗುವ ಸಾಧ್ಯತೆಗಳಿವೆ. ಹೀಗಾಗಿ ಸಿಟ್ಟು ಬಂದ ವೇಳೆ ಏಕಾಂತವಾಗಿರಿ. ಆಗ ನೀವು ಅದೆಷ್ಟು ಬೇಕಾದರೂ ಕೋಪಿಸಿಕೊಳ್ಳಬಹುದು ಇಲ್ಲವೇ ಅಳುವಿನ ರೂಪದಲ್ಲಿ ಹೊರಹಾಕಬಹುದು.

ಆಫೀಸ್'ನಲ್ಲಿ ನಿಮ್ಮ ದಿನ ಚೆನ್ನಾಗಿರಲಿಲ್ಲ ಎಂದು ಸಿಟ್ಟಾಗಬಹುದು. ಇಂತಹ ಸಂದರ್ಭಗಳಲ್ಲಿ ನಿಮ್ಮ ಆಫೀಸ್'ನ ಚಿಂತೆಯನ್ನು ಸಾಧ್ಯವಾದಷ್ಟು ಮನೆಯಿಂದ ದೂರವಿಡಲು ಪ್ರಯತ್ನಿಸಿ. ನಿಮ್ಮನ್ನು ನೀವೇ ಸಂತೈಸಿಕೊಳ್ಳಿ. ಇದು ನಿಮಗೆ ಉತ್ತಮ ಭಾವನೆ ಮೂಡಿಸುವುದರೊಂದಿಗೆ, ಆಫೀಸ್ ಚಿಂತೆ ಮರೆಯಲು ಸಹಾಯ ಮಾಡುತ್ತದೆ.

ದೈಹಿಕ ವ್ಯಾಯಾಮವೂ ಕೋಪ ಕಡಿಮೆ ಮಾಡಿಕೊಳ್ಳಲು ಉತ್ತಮ. ಇದರಿಂದಾಗಿ ಮೆದುಳಿನಿಂದ ಎಂಡೋರ್ಫಿನ್ ಬಿಡುಗಡೆಯಾಗುತ್ತದೆ. ಇದು ನಮ್ಮನ್ನು ನಾವು ಪ್ರೀತಿಸಲು ಕಾರಣವಾಗುತ್ತದೆ. ಇಲ್ಲವಾದಲ್ಲಿ ಕೋಪ ತರಿಸುವ ಕ್ಷಣವನ್ನು ಎದುರಿಸುವ ಸಾಮರ್ಥ್ಯ ನಮ್ಮಲ್ಲಿ ಹೆಚ್ಚಾಗುತ್ತದೆ.

ನಿಮ್ಮ ಕೋಪ ಕಂಟ್ರೋಲ್ ಮಾಡಲು ಸಾಧ್ಯವೇ ಇಲ್ಲ, ಇದರಿಂದ ಸಂಬಂಧಗಳಲ್ಲಿ ಬಿರುಕು ಮೂಡುತ್ತಿದೆ ಎಂದರೆ ಕೌನ್ಸಲರ್'ನ ಸಹಾಯ ಪಡೆದುಕೊಳ್ಳಿ. ಇಲ್ಲವೆಂದಾದರೆ ನಿಮ್ಮ ತಂದೆ-ತಾಯಿ, ಅಣ್ಣ- ಅಕ್ಕ ಇಲ್ಲವೇ ನಿಮ್ಮ ಗೆಳೆಯರ ಬಳಿ ಮನಬಿಚ್ಚಿ ಮಾತನಾಡಿ..
First published:January 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ