ಕೂದಲು ಉದುರುವಿಕೆ ಸಮಸ್ಯೆಯನ್ನು ತಡೆಗಟ್ಟಲು ಹೀಗೆ ಮಾಡಿ

zahir | news18
Updated:March 9, 2019, 12:31 PM IST
ಕೂದಲು ಉದುರುವಿಕೆ ಸಮಸ್ಯೆಯನ್ನು ತಡೆಗಟ್ಟಲು ಹೀಗೆ ಮಾಡಿ
ಸಾಂದರ್ಭಿಕ ಚಿತ್ರ
  • News18
  • Last Updated: March 9, 2019, 12:31 PM IST
  • Share this:
ಸ್ತ್ರೀ ಹಾಗೂ ಪುರುಷರಲ್ಲಿಬ್ಬರಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆಗಳಲ್ಲಿ ಕೂದಲು ಉದುರುವಿಕೆ ಕೂಡ ಒಂದು. ಇದಕ್ಕೆ ಮುಖ್ಯ ಕಾರಣ ವಂಶವಾಹಿಯೇ ಆಗಿದ್ದರೂ ಸಹ, ನಮ್ಮ ಜೀವನ ಶೈಲಿಯು ಕೂಡ ಈ ಸಮಸ್ಯೆಗೆ ಮತ್ತೊಂದು ಕಾರಣ. ದೇಹದಲ್ಲಿ ಹಾರ್ಮೊನ್ ಅಸಮತೋಲನ, ಪೋಷಕಾಂಶಗಳ ಕೊರತೆ, ನೆತ್ತಿಯಲ್ಲಿ ರಕ್ತ ಪರಿಚಲನೆ ಕಡಿಮೆಯಾಗುವುದು..ಹೀಗೆ ಹತ್ತು ಹಲವು ಕಾರಣಗಳಿಂದ ಕೂದಲು ಉದುರುವಿಕೆಯ ಸಮಸ್ಯೆ ಕಾಣಿಸುತ್ತದೆ.

ಕೂದಲು ಉದುರುವಿಕೆಯನ್ನು ತಡೆಗಟ್ಟಲು ಅನೇಕ ವಿಧಾನಗಳನ್ನು ಹಾಗೂ ಮನೆ ಮದ್ದುಗಳಿದ್ದರೂ, ಅವೆಲ್ಲಕ್ಕಿಂತ ಮೊದಲು ಕೆಲ ಎಚ್ಚರಿಕೆ ವಹಿಸುವುದು ಉತ್ತಮ. ಪ್ರತಿ ನಿತ್ಯ ನಾವು ಕೂದಲಿನ ಮೇಲೆ ಕಾಳಜಿವಹಿಸುವುದರಿಂದ ಕೂದಲು ಉದುರುವುದನ್ನು ತಡೆಗಟ್ಟಬಹುದು. ಕೂದಲು ಪೋಷಣೆಗೆ ಕೆಲ ಸಾಮಾನ್ಯ ಟಿಪ್ಸ್​ಗಳನ್ನು ಇಲ್ಲಿ ನೀಡಲಾಗಿದ್ದು, ಇದನ್ನು ಪಾಲಿಸುವ ಮೂಲಕ ಸಾಧ್ಯವಾದಷ್ಟು ಕೂದಲು ಉದುರುವಿಕೆಯನ್ನು ತಡೆಯಬಹುದಾಗಿದೆ.

- ಸಾಮಾನ್ಯವಾಗಿ ಸ್ತ್ರೀಯರು ತಲೆ ಬಾಚಿಕೊಳ್ಳುವಾಗ ಕೂದಲನ್ನು ಎಳೆಯುವ ಅಭ್ಯಾಸ ರೂಢಿಸಿಕೊಂಡಿದ್ದಾರೆ. ಇದರಿಂದ ಕೂದಲ ಬುಡವು ಸಡಿಲಗೊಳ್ಳುತ್ತಾ ಹೋಗುತ್ತದೆ. ಇದರ ಬಗ್ಗೆ ಸ್ವಲ್ಪ ಎಚ್ಚರವಹಿಸುವುದು ಉತ್ತಮ. ಹಾಗೆಯೇ ಉದ್ದ ಕೂದಲಿರುವವರು ನಿದ್ದೆ ಮಾಡುವಾಗ ಕೂದಲನ್ನು ಬಾಚುವುದನ್ನು ಮರೆಯಬೇಡಿ.

- ಕೂದಲಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದಂತೆ ಶ್ಯಾಂಪೂ ಮೊರೆ ಹೋಗುವವರೇ ಹೆಚ್ಚು. ಆದರೆ ಈ ವೇಳೆ ರಾಸಾಯನಿಕ ಶ್ಯಾಂಪೂ ಬದಲಿಗೆ, ನೈಸರ್ಗಿಕ ಮದ್ದು ಅಥವಾ ಹರ್ಬಲ್ ಶ್ಯಾಂಪೂಗಳನ್ನು ಬಳಸುವುದು ಉತ್ತಮ.

- ಬಿಸಿ ನೀರಿನಿಂದ ತಲೆ ತೊಳೆಯುವ ಅಭ್ಯಾಸವನ್ನು ಬಿಟ್ಟುಬಿಡಿ. ಏಕೆಂದರೆ ಬಿಸಿ ನೀರಿನಿಂದ ತಲೆಸ್ನಾನ ಮಾಡುವುದರಿಂದ ಕೂದಲಿನ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಇದರಿಂದ ಕೂದಲಿನಲ್ಲಿ ಶೀಘ್ರ ಒಣಗುವಿಕೆ ಸಮಸ್ಯೆ ಕಾಣಿಸುತ್ತದೆ. ಅಲ್ಲದೆ ಕೋಶಾಂಶಗಳು ನಿರ್ಜೀವವಾಗಿ ಉದುರುವಿಕೆ ಸಮಸ್ಯೆ ಉಂಟಾಗುತ್ತದೆ. ಹೀಗಾಗಿ ತಣ್ಣೀರಿನಿಂದ ತಲೆಸ್ನಾನವನ್ನು ಮಾಡುವುದು ಉತ್ತಮ.

- ನಿಮ್ಮ ದಿನನಿತ್ಯದ ಆಹಾರದ ಮೇಲೂ ಗಮನವಿರಲಿ. ಏಕೆಂದರೆ ನೀವು ಸೇವಿಸುವ ಆಹಾರವು ಕೂದಲಿಗೆ ಪೋಷಕಾಂಶವನ್ನು ಒದಗಿಸುತ್ತದೆ. ಸಾಧ್ಯವಾದಷ್ಟು ಜಂಕ್​ ಫುಡ್​ಗಳಿಂದ ದೂರವಿರಿ. ಬದಲಿಗೆ ಸೋರೆಕಾಯಿಂದ ಮಾಡಿದ ಪಲ್ಯ ಪದಾರ್ಥಗಳ ಸೇವನೆ ಹೆಚ್ಚಿಸಿ. ಹಾಗೆಯೇ ಸೋರೆಕಾಯಿ ರಸದಿಂದ ಕೂದಲನ್ನು ತೊಳೆಯುವುದರಿಂದ ಕೂದಲು ಗಟ್ಟಿಯಾಗುತ್ತದೆ. ಸೋರೆಕಾಯಿ ರಸವನ್ನು ತಲೆಗೆ ಹಚ್ಚಿ ಅರ್ಧಗಂಟೆ ಬಿಟ್ಟು ತೊಳೆದರೆ ಕೂದಲು ಉದುರುವಿಕೆ ಸಮಸ್ಯೆಗೆ ಪರಿಹಾರ ಕಾಣಬಹುದು.

ಇದನ್ನೂ ಓದಿ: ರಂಗೇರಿದ ಲೋಕಸಭಾ ಚುನಾವಣೆ: ಉಪ್ಪಿ ಸ್ಪರ್ಧಿಸಲ್ಲ, ಅಖಾಡದಲ್ಲಿದ್ದಾರೆ ಪ್ರಜಾಕೀಯ ಅಭ್ಯರ್ಥಿಗಳು

- ಕೂದಲು ಒಣಗಿಸಲು ಹೇರ್​ ಡ್ರೈಯರ್​ ಬಳಸಬೇಡಿ. ಇದರಿಂದ ಕೂದಲ ಬುಡಕ್ಕೆ ಹೆಚ್ಚಿನ ಶಾಖ ತಗುಲಿ ಉದುರುವಿಕೆ ಸಮಸ್ಯೆ ಎದುರಾಗುತ್ತದೆ. ಹಾಗೆಯೇ ಕೂದಲಿಗೆ ದೀರ್ಘಕಾಲದವರೆಗೆ ಟವೆಲ್​ ಕಟ್ಟಬೇಡಿ. ಸ್ನಾನಕ್ಕೂ 1 ಗಂಟೆಗೂ ಮುನ್ನ ತೆಂಗಿನ ಎಣ್ಣೆಯಿಂದ ತಲೆ ಮಸಾಜ್ ಮಾಡಿಕೊಳ್ಳಿ. ಇದರಿಂದ ರಕ್ತ ಪರಿಚಲನೆ ಹೆಚ್ಚಾಗುತ್ತದೆ. ಅಲ್ಲದೆ ಕೂದಲು ಉದುರುವಿಕೆ ಕಡಿಮೆಯಾಗುತ್ತದೆ.

ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿನ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ: ತಿಂಗಳ ವೇತನ 80 ಸಾವಿರ ರೂ.


First published: March 9, 2019, 12:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading