Vada Recipe: ನಿಮಗೆ ವಡೆ ಅಂದ್ರೆ ಇಷ್ಟಾನಾ? ಇಲ್ಲಿವೆ ನೋಡಿ ಕೆಲವು ಸುಲಭವಾದ ವಡೆ ಪಾಕವಿಧಾನಗಳು

ನೀವು ನಿಮಿಷಗಳಲ್ಲಿ ಮೆದು ವಡೆಗಳನ್ನು ತಯಾರಿಸಲು ತ್ವರಿತ ಮತ್ತು ಸುಲಭ ಮಾರ್ಗಗಳಿವೆ ಎಂದು ನಿಮಗೆ ತಿಳಿದಿದೆಯೇ? ಇಲ್ಲಿ ನಾವು ನಿಮಗೆ ಕೆಲವು ಸುಲಭವಾದಮೆದು ವಡೆ ಪಾಕವಿಧಾನಗಳ ಬಗ್ಗೆ ಹೇಳುತ್ತೇವೆ.

 ವಡಾ

ವಡಾ

  • Share this:
ದಕ್ಷಿಣ ಭಾರತದ ಉಪಾಹಾರಗಳಲ್ಲಿ (South Indian Food) ತುಂಬಾನೇ ಜನಪ್ರಿಯವಾದವುಗಳಲ್ಲಿ ಗರಿಗರಿಯಾದ ವಡೆ (Vada) ಸಹ ಒಂದು ಎಂದು ಹೇಳಿದರೆ ತಪ್ಪಾಗುವುದಿಲ್ಲ. ದೋಸೆ ಮತ್ತು ಇಡ್ಲಿಯಷ್ಟು ಜನರು ಇದನ್ನು ಪ್ರತಿ ದಿನ ಇಷ್ಟ ಪಡದೇ ಇದ್ದರೂ ಸಹ ಗರಿಗರಿಯಾದ ವಡೆಗೂ ಸಹ ತನ್ನದೇ ಆದ ಫ್ಯಾನ್ಸ್ ಇದ್ದಾರೆ ಎಂದು ಹೇಳಬಹುದು. ಈ ಬಿಸಿ ಬಿಸಿಯಾದ ಮತ್ತು ಗರಿಗರಿಯಾದ ವಡೆವನ್ನು ಬಿಸಿ ಬಿಸಿ ಸಾಂಬಾರ್ ನಲ್ಲಿ ಮುಳುಗಿಸಿ ನಂತರ ಅದನ್ನು ಮುಳ್ಳಿನ ಚಮಚದೊಂದಿಗೆ (Fork) ತುಂಡುಗಳನ್ನಾಗಿ ಮಾಡಿಕೊಂಡು ಚಟ್ನಿಯಲ್ಲಿ ಅದ್ದಿಕೊಂಡು ತಿನ್ನುವ ಮಜಾನೆ ಬೇರೆ ಬಿಡಿ. ಕೆಲವರು ಈ ವಡೆವನ್ನು ಬಿಸಿ ಬಿಸಿ ಸಾಂಬಾರ್ ನಲ್ಲಿ ಮುಳುಗಿಸಿಕೊಂಡು ತಿನ್ನುತ್ತಾರೆ, ಅವರಿಗೆ ಚಟ್ನಿಯ ಅವಶ್ಯಕತೆಯೇ ಇರುವುದಿಲ್ಲ.

ಈ ವಡೆಯನ್ನು ಸಹ ನಾವು ಅನೇಕ ರೀತಿಯಲ್ಲಿ ಮಾಡಿಕೊಳ್ಳಬಹುದು. ಆದರೆ ಮನೆಯಲ್ಲಿಮೆದು ವಡೆಗಳನ್ನು ತಯಾರಿಸುವ ವಿಷಯಕ್ಕೆ ಬಂದಾಗ, ಅದು ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ ಎಂಬುದು ಅನೇಕರ ಅಭಿಪ್ರಾಯವಾಗಿರುತ್ತದೆ. ಮೊದಲಿಗೆ, ನೀವು ಬೇಳೆಯನ್ನು ನೆನೆಸಿ, ಅಕ್ಕಿಯೊಂದಿಗೆ ಮಿಶ್ರಣ ಮಾಡಿ ಮತ್ತು ಅವುಗಳನ್ನು ಹುರಿಯುವ ಮೊದಲು ಒಂದು ದಿನ ಹುದುಗಿಸಬೇಕು. ಇದು ಸುದೀರ್ಘ ಪ್ರಕ್ರಿಯೆಯಾಗಿದ್ದರೂ, ನೀವು ನಿಮಿಷಗಳಲ್ಲಿ ಮೆದು ವಡೆಗಳನ್ನು ತಯಾರಿಸಲು ತ್ವರಿತ ಮತ್ತು ಸುಲಭ ಮಾರ್ಗಗಳಿವೆ ಎಂದು ನಿಮಗೆ ತಿಳಿದಿದೆಯೇ? ಇಲ್ಲಿ ನಾವು ನಿಮಗೆ ಕೆಲವು ಸುಲಭವಾದಮೆದು ವಡೆ ಪಾಕವಿಧಾನಗಳ ಬಗ್ಗೆ ಹೇಳುತ್ತೇವೆ.

ಇದನ್ನೂ ಓದಿ: Breakfast Recipe: ಬೆಳಗಿನ ಉಪಹಾರಕ್ಕೆ ಮಕ್ಕಳಿಗಾಗಿ ಹೆಲ್ದಿ ಪಾಲಕ್ ಕಿಚಡಿ

ಇಲ್ಲಿವೆ ನೋಡಿ 5 ತ್ವರಿತ ಮತ್ತು ಸುಲಭವಾಗಿ ಮಾಡಿಕೊಳ್ಳುವಮೆದು ವಡೆ ಪಾಕವಿಧಾನಗಳು:

1. ಪೋಹಾ (ಅವಲಕ್ಕಿ)ಮೆದು ವಡೆ
ರಾತ್ರಿಯಿಡೀ ನೆನೆಸಬೇಕಾದ ಬೇಳೆಗೆ ಅವಲಕ್ಕಿ ಅತ್ಯುತ್ತಮ ಬದಲಿಯಾಗಿದೆ. ನಿಮ್ಮ ಅಡುಗೆಮನೆಯಲ್ಲಿರುವ ಡಬ್ಬಿಯಲ್ಲಿ ಅವಲಕ್ಕಿ ಇದ್ದರೆ ಅದನ್ನು ಹೊರ ತೆಗೆಯಿರಿ ಮತ್ತು ಅದಕ್ಕೆ ಮೊಸರು ಸೇರಿಸಿಕೊಂಡು ನೀವು ಈ ಕುರುಕಲು ವಡೆಗಳನ್ನು ಕನಿಷ್ಠ ಸಿದ್ಧತೆ ಮತ್ತು ಪದಾರ್ಥಗಳೊಂದಿಗೆ ತ್ವರಿತವಾಗಿ ತಯಾರಿಸಬಹುದು.

2. ಸೂಜಿ ಮೆದು ವಡೆ
ಕೆಲವು ವಸ್ತುಗಳನ್ನು ಬದಲಾಯಿಸಿ ಮತ್ತು ಕೆಲವು ತ್ವರಿತ ಸೂಜಿ ವಡೆಯನ್ನು ಮಾಡಿಕೊಳ್ಳಿರಿ. ದಕ್ಷಿಣ ಭಾರತದ ಅನೇಕ ಊಟಗಳಿಗೆ ಸೂಜಿ ರವಾ ಒಂದು ಅದ್ಭುತ ಬದಲಿಯಾಗಿದೆ ಮತ್ತು ಭಕ್ಷ್ಯದ ಗರಿಗರಿಯನ್ನು ಹೆಚ್ಚಿಸಲು ಈ ರವಾ ಸಹಾಯ ಮಾಡುತ್ತದೆ. ಈ ಪಾಕವಿಧಾನವು ತಯಾರಿಸಲು ತುಂಬಾ ಸರಳವಾಗಿದೆ ಮತ್ತು ತೊಂದರೆ-ಮುಕ್ತವಾಗಿದೆ

3. ವೆಜಿಟೆಬಲ್ (ತರಕಾರಿಗಳ) ಮೆದು ವಡೆ
ಕ್ರಂಚ್ ಗಾಗಿ ಕ್ಯಾರೆಟ್ ಮತ್ತು ಎಲೆಕೋಸು ಸೇರಿಸಿದ ಸುವಾಸನೆ ಭರಿತ ಮೇದು ವಡೆಯನ್ನು ಒಮ್ಮೆ ನೀವು ಹಾಗೆಯೇ ಕಲ್ಪಿಸಿಕೊಳ್ಳಿ. ಹೌದು, ಅಂತಹ ಪಾಕವಿಧಾನವಿದೆ ಇದು. ನಾವು ಸಹ ಅದನ್ನು ಪ್ರಯತ್ನಿಸಿದೆವು. ಸಾಂಪ್ರದಾಯಿಕ ಮೇದು ವಡೆಯನ್ನು ಗಜರ್ ಪಟ್ಟಾ ಗೋಭಿ ವಡೆ ಪಾಕವಿಧಾನದಿಂದ ಸಂಪೂರ್ಣವಾಗಿ ವಿಭಿನ್ನವಾದ ರುಚಿಯನ್ನು ನೀಡಲಾಗುತ್ತದೆ. ಈ ವಡೆಗಳು ನಿಮ್ಮ ಸಂಜೆಯ ಚಹಾದೊಂದಿಗೆ ಪರಿಪೂರ್ಣವಾದ ಜೋಡಿ ಎಂದು ಹೇಳಬಹುದು.

ಇದನ್ನೂ ಓದಿ:  Tea With Snacks: ಯಾವ ಚಹಾದ ಜೊತೆ ಯಾವ ಆಹಾರ ಪದಾರ್ಥಗಳನ್ನು ಸೇವನೆ ಮಾಡಬಾರದು?

4. ಕೀಟೋ ವಡೆ
ಈ ವಡೆ ಪಾಕವಿಧಾನದಲ್ಲಿ ಬಾದಾಮಿ ಹಿಟ್ಟು, ತೆಂಗಿನ ಹಿಟ್ಟು, ಸೈಲಿಯಂ ಹೊಟ್ಟು ಮತ್ತು ಕ್ಸಾಂಥನ್ ಗಮ್ ಇವೆಲ್ಲವನ್ನೂ ಈ ಕೀಟೋ ಪಾಕವಿಧಾನದಲ್ಲಿ ಬಳಸಲಾಗುತ್ತದೆ. ಈ ಪದಾರ್ಥಗಳು ಕೀಟೋ ಡಯಟ್ ಗೆ ಬಳಸಲಾಗುತ್ತದೆ, ಆದ್ದರಿಂದಲೇ ಇದನ್ನು ಈ ಹೆಸರಿನಿಂದ ಕರೆಯಲಾಗುತ್ತದೆ.

5. ಬ್ರೆಡ್ ವಡೆ
ಈ ಬ್ರೆಡ್ ಮೆದು ವಡೆ ಪಾಕವಿಧಾನವನ್ನು ತಯಾರಿಸಲು ನಿಮಗೆ ಬ್ರೆಡ್, ಆಲೂಗಡ್ಡೆ, ಸೂಜಿ ರವೆ, ಮೊಸರು, ಅಕ್ಕಿ ಹಿಟ್ಟು ಮತ್ತು ಮಸಾಲೆಗಳಂತಹ ಸಾಮಾನ್ಯ ಅಡುಗೆಮನೆಯಲ್ಲಿ ಬಳಸುವ ಪದಾರ್ಥಗಳು ಬೇಕಾಗುತ್ತವೆ. ಹಿಟ್ಟನ್ನು ತಯಾರಿಸಿದ ನಂತರ, ಮಾಡಲು ಉಳಿದಿರುವುದು ವಡೆಗಳನ್ನು ಗರಿಗರಿಯಾದ ತನಕ ಚೆನ್ನಾಗಿ ಎಣ್ಣೆಯಲ್ಲಿ ಹುರಿಯಿರಿ. ನೀವು ಕೇವಲ 30 ನಿಮಿಷಗಳಲ್ಲಿಯೇ ರಾತ್ರಿ ಊಟಕ್ಕೆ ರುಚಿಕರವಾದ ವಡೆಗಳನ್ನು ತಯಾರಿಸಿಕೊಳ್ಳಬಹುದು.
Published by:Ashwini Prabhu
First published: