ನೀವು ಕುಡಿಯುವ ಹಾಲು ಕಲಬೆರಕೆಯಾಗಿದ್ದರೆ ತಿಳಿಯುವುದು ಹೇಗೆ?

ನೀವು ಕಲಬೆರಕೆ ಹಾಲು ಸೇವಿಸುತ್ತಿದ್ದರೆ ನಿಮ್ಮ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಬಹುದು. ಹಾಗಾಗಿ ಅಂಗಡಿಯಿಂದ ಹಣ ಕೊಟ್ಟು ತರುವ ಪ್ಯಾಕೆಟ್​ ಹಾಲು ಶುದ್ಧವೋ, ಕಲಬೆರಕೆಯೋ ಎಂದು ತಿಳಿಯಲು ಟಿಪ್ಸ್​ವೊಂದನ್ನು ಇಲ್ಲಿ ನೀಡಲಾಗಿದೆ.

ಹಾಲು

ಹಾಲು

 • Share this:
  ಪ್ರತಿದಿನ ಒಂದು ಲೋಟ ಹಾಲು ಸೇವಿಸುದರಿಂದ ದೇಹಕ್ಕೆ ಕ್ಯಾಲಿಯಂ ಅಂಶ ಸಿಗುತ್ತದೆ. ನಮ್ಮ ಆರೋಗ್ಯವು ಚೆನ್ನಾಗಿರುತ್ತದೆ. ಆದರೆ ಪ್ರತಿದಿನ ಹಾಲು ಕುಡಿಯುತ್ತಿರುವುದೇನೋ ಸರಿ, ಕುಡಿಯುತ್ತಿರುವ ಹಾಲು ಕಲಬೆರಕೆಯಾಗಿದ್ದರೆ!. ತಿಳಿಯುವುದು ಹೇಗೆ?.

  ನೀವು ಕಲಬೆರಕೆ ಹಾಲು ಸೇವಿಸುತ್ತಿದ್ದರೆ ನಿಮ್ಮ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಬಹುದು. ಹಾಗಾಗಿ ಅಂಗಡಿಯಿಂದ ಹಣ ಕೊಟ್ಟು ತರುವ ಪ್ಯಾಕೆಟ್​ ಹಾಲು ಶುದ್ಧವೋ, ಕಲಬೆರಕೆಯೋ ಎಂದು ತಿಳಿಯಲು ಟಿಪ್ಸ್​ವೊಂದನ್ನು ಇಲ್ಲಿ ನೀಡಲಾಗಿದೆ.

  ಹಾಲಿಗೆ ನೀರು, ಯೂರಿಯಾ, ಸಿಂಥೇಟಿಕ್ಸ್​, ಪಿಷ್ಠ, ವಾಷಿಂಗ್​ ಪೌಡರ್​, ರಿಫೈನ್ಡ್​​ ಎಣ್ಣೆ ಮೊದಲಾವುದಗಳನ್ನು ಸೇರಿಸಿ ಕಲಬೆರಕೆ ಹಾಳು ತಯಾರಿಸುತ್ತಾರೆ. ನೋಡಲು ಹಾಲಿನಂತೆ ಕಾಣುತ್ತಾದರು ಇದನ್ನು ಸೇವಿಸಿದರೆ ಆರೋಗ್ಯ ಸಮಸ್ಯೆ ಖಂಡಿತಾ.

  - ಪ್ಯಾಕೆಟ್​ ಹಾಲಿನ ಮೇಲೆ ಪರಿಶುದ್ಧ ಹಾಲಿನ ಒಂಡೆರಡು ಹನಿಯನ್ನು ಹಾಕಿ. ನಂತರ ಹಾಲಿನ ಹನಿಬಿದ್ದ ಜಾಗದಲ್ಲಿ ಬಿಳಿಯ ಗುರುತು ಕಾಣಿಸಿಕೊಂಡರೆ ಈ ಹಾಲು ಸೇವಿಸಲು ಯೋಗ್ಯವೆಂದು, ಗುರುತು ಮೂಡಿಸದೇ ಇದ್ದರೆ ಅದು ಕಲಬೆರಕೆಯ ಹಾಳು ಎನ್ನಬಹುದು.

  - ಒಂದು ಚಿಕ್ಕ ಬೌಲ್​ ತೆಗೆದುಕೊಂಡು ಅದಕ್ಕೆ ಪ್ಯಾಕೆಟ್​ ಹಾಲು ಮತ್ತು ಸೋಯಾಬಿನ್​ ಪೌಡರ್​ ಹಾಕಲಬೇಕು. ನಂತರ ಅದನ್ನು ಮಿಶ್ರಣ ಮಾಡಬೇಕು. ಸ್ವಲ್ಪ ಹೊತ್ತು ಬಿಟ್ಟು ಕೆಂಪು ಲಿಟ್ಮನ್​ ಪೇಪರ್​ ತೆಗೆದುಕೊಂಡು ಬೌಲಿಗೆ ಅದ್ದಬೇಕು. ಒಂದು ವೇಲೆ ಕಾಗದ ನೀಲಿ ಬಣ್ಣಕ್ಕೆ ತಿರುಗಿದರೆ ಯೂರಿಯಾ ಅಂಶಬಿದೆ ಎಂದು ತಿಳಿಯುತ್ತದೆ.

  - ಇನ್ನು ಹಾಲಿಗೆ ಅಯೋಡಿನ್​ ಹಾಕಿದರೆ ಅದು ಕೆಲವೇ ಸೆಕೆಂಡ್​ ನೀಲಿ ಬಣ್ಣಕ್ಕೆ ತಿರುಗುತ್ತದೆ. ಹಾಗಿದ್ದರೆ  ಷಿಷ್ಟ ಬೆರೆಸಿದ್ದಾರೆ ಎಂದು ತಿಳಯುತ್ತದೆ,

  - ಸ್ವಲ್ಪ ಹಾಲು ತೆಗೆದುಕೊಂಡ 0.1 ಬಿಎಸ್​ಪಿ ಸೇರಿಸಿ ಮಿಶ್ರಣ ಮಾಡಿದರೆ ಅದರ ಬಣ್ಣ ಕೆನ್ನೇರಳೆ ಬಣ್ಣಕ್ಕೆ ತಿರುಗುತ್ತದೆ. ಒಂದು ವೇಳೆ ಈ ರೀತಿ ಕಂಡುಬಂದರೆ ಸೋಪಿನ ಪುಡಿ ಮಿಶ್ರಣ ಮಾಡಿದ್ದಾರೆ ಎಂದು ತಿಳಿದುಬರುತ್ತದೆ
  Published by:Harshith AS
  First published: