Viral Fever: ವೈರಲ್ ಫೀವರ್ ನಿಂದ ಹೈರಾಣಾಗಿ ಹೋಗಿದ್ದೀರಾ? ಮನೆಯಲ್ಲಿಯೇ ಈ ಮದ್ದು ಮಾಡಿ ಸೇವಿಸಿ

Viral Fever Home Remedies : ವೈರಲ್ ಫೀವರ್ ಸೂಕ್ತ ಔಷಧಿಗಳನ್ನು ತೆಗೆದುಕೊಂಡರೆ ತಕ್ಕ ಮಟ್ಟಿಗೆ ಗುಣ ಕಾಣಬಹುದು. ಕೆಲವೊಂದು ರೀತಿಯ ಜ್ವರ ಕೇವಲ ಮಾತ್ರೆ, ಇಂಜೆಕ್ಷನ್, ಆಂಟಿ - ಬಯೋಟಿಕ್ ಔಷಧಿಗಳಿಗೆ ಹೊರಟು ಹೋದರೆ ಇನ್ನು ಕೆಲವು ವೈರಲ್ ಜ್ವರ ಹೋಗುವುದೇ ಇಲ್ಲ. ಏಕೆಂದರೆ ದೇಹದಲ್ಲಿ ಸೇರಿರುವ ವೈರಸ್ ಗಳು ಯಾವುದೇ ಕಾರಣಕ್ಕೂ, ಯಾವುದೇ ರೀತಿಯ ಆಂಟಿ - ಬಯೋಟಿಕ್ ಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ

ಫೀವರ್

ಫೀವರ್

 • Share this:
  ಮಳೆಗಾಲ(Rainy season) ಹಾಗೂ ಚಳಿಗಾಲದಲ್ಲಿ(Winter) ಅಂದ್ರೆ ಸಾಕು ಬೇಡ ಬೇಡ ಅಂತ ಅಂದ್ರೂ ರೋಗಗಳು(Health problems) ನಮ್ಮನ್ನು ಹುಡುಕಿಕೊಂಡು ಬರುತ್ತವೆ.. ಅದರಲ್ಲೂ ಕೋವಿಡ್(Covid-19) ರೋಗ ಭಯ ಹುಟ್ಟಿಸುತ್ತಿರುವ ಸಮಯದಲ್ಲಿಯೇ(Time) ವೈರಲ್ ಫೀವರ್(Viral Fever) ಹಾವಳಿ ಕೂಡ ಅಧಿಕವಾಗಿದೆ.. ಅದರಲ್ಲೂ ಮಕ್ಕಳಿಗೆ(Children) ವೈರಲ್ ಫೀವರ್ ಹಾವಳಿ ಅಧಿಕವಾಗಿ ಕಾಡುತ್ತಿದ್ದು ಇದರಿಂದ ಸಾಕಪ್ಪ ಸಾಕು ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ..ವಿಪರೀತ ಬಿಸಿ, ನಡುಕ, ಸುಸ್ತು, ಗಂಟಲಲ್ಲಿ ಕೆರೆತ, ಕಣ್ಣು ಕೆಂಪಾಗುವುದು, ಕೆಮ್ಮು, ಗಂಟುಗಳ ನೋವು, ತ್ವಚೆಯ ಮೇಲೆ ಗುಳ್ಳೆಗಳು, ಸುಸ್ತು, ಮಾಂಸಖಂಡಗಳ ನೋವು, ನೆಗಡಿ, ತಲೆನೋವು ಇವೆಲ್ಲಾ ಕಾಣಿಸಿಕೊಂಡರೆ ಇದು ವೈರಲ್‌ ಫೀವರ್‌ ಲಕ್ಷಣ ಎಂಬುದು ನೀವು ತಿಳಿದುಕೊಳ್ಳಬೇಕು. ಆದರೆ ಈ ರೋಗ ಬಂದಾಗ ಭಯ ಪಡುವ ಅವಶ್ಯಕತೆ ಇಲ್ಲ. ಬದಲಾಗಿ ಡಾಕ್ಟರ್‌ ಬಳಿ ಹೋಗಬೇಕಾಗಿಯೂ ಇಲ್ಲ. ಮನೆಯಲ್ಲೇ ಸಿಗುವ ಔಷಧ ಸೇವಿಸಿ ಗುಣ ಮುಖರಾಗಬಹುದು.

  ವೈರಲ್ ಫೀವರ್ ಗೆ ಇದೆ ಮನೆ ಮದ್ದು

  ವೈರಲ್ ಫೀವರ್ ಸೂಕ್ತ ಔಷಧಿಗಳನ್ನು ತೆಗೆದುಕೊಂಡರೆ ತಕ್ಕ ಮಟ್ಟಿಗೆ ಗುಣ ಕಾಣಬಹುದು. ಕೆಲವೊಂದು ರೀತಿಯ ಜ್ವರ ಕೇವಲ ಮಾತ್ರೆ, ಇಂಜೆಕ್ಷನ್, ಆಂಟಿ - ಬಯೋಟಿಕ್ ಔಷಧಿಗಳಿಗೆ ಹೊರಟು ಹೋದರೆ ಇನ್ನು ಕೆಲವು ವೈರಲ್ ಜ್ವರ ಹೋಗುವುದೇ ಇಲ್ಲ. ಏಕೆಂದರೆ ದೇಹದಲ್ಲಿ ಸೇರಿರುವ ವೈರಸ್ ಗಳು ಯಾವುದೇ ಕಾರಣಕ್ಕೂ, ಯಾವುದೇ ರೀತಿಯ ಆಂಟಿ - ಬಯೋಟಿಕ್ ಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ. ಅಂತಹ ಸಮಯದಲ್ಲಿ ಕೆಲವೊಂದು ರೀತಿಯ ಮನೆ ಮದ್ದುಗಳು ಬಹಳ ಉಪಯೋಗಕ್ಕೆ ಬರುತ್ತದೆ.

  1) ದಾಲ್ಚಿನ್ನಿ ಅಥವಾ ಚಕ್ಕೆ

  ಮಸಾಲೆ ಪದಾರ್ಥಗಳಲ್ಲಿ ಬಹಳ ಹೆಸರು ಮಾಡಿರುವ ದಾಲ್ಚಿನ್ನಿ ಅಥವಾ ಚಕ್ಕೆ ಎಂದು ಕರೆಯಲ್ಪಡುವ ಈ ಮಸಾಲೆ ವಸ್ತು ವೈರಲ್ ಜ್ವರಗಳಿಗೆ ಒಳ್ಳೆಯ ಔಷಧಿ ಎಂದು ಸಾಬೀತು ಮಾಡಿದೆ. ಯಾವುದೇ ರೀತಿಯ ನೆಗಡಿ, ಶೀತ, ಕೆಮ್ಮು, ಗಂಟಲು ನೋವು, ಗಂಟಲು ಕೆರೆತ ಮತ್ತು ಗಂಟಲಿನಲ್ಲಿ ಕಫ ಇದ್ದಂತಹ ಸಂದರ್ಭದಲ್ಲಿ 1 ಟೀ ಸ್ಪೂನ್ ನಷ್ಟು ದಾಲ್ಚಿನ್ನಿ ಪುಡಿಯನ್ನು 2 ಏಲಕ್ಕಿ ಮೊಗ್ಗುಗಳ ಜೊತೆ ಚೆನ್ನಾಗಿ ನೀರಿನಲ್ಲಿ ಕುದಿಸಿ ನಂತರ ಅದನ್ನು ಸೋಸಿ ಕುಡಿದರೆ ಎಲ್ಲಾ ರೀತಿಯ ಸಮಸ್ಯೆಗಳಿಗೆ ಬಹಳ ಬೇಗನೆ ಮುಕ್ತಿ ಸಿಗುತ್ತದೆ.

  2)ತುಳಸಿ

  ತುಳಸಿ ಗಿಡ ಎಂದರೆ ಸಾಕು ನಾವು ಭಕ್ತಿ ಪರವಶರಾಗುತ್ತೇವೆ. ಏಕೆಂದರೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ತುಳಸಿ ಗಿಡಕ್ಕೆ ವಿಶೇಷ ಸ್ಥಾನಮಾನ ಕೊಟ್ಟು ಲಕ್ಷ್ಮಿ ದೇವತೆಗೆ ಹೋಲಿಸಲಾಗಿದೆ. ದೈವೀ ಸ್ವರೂಪವಾದ ತುಳಸಿ ಗಿಡ ಕೇವಲ ಪೂಜೆಗೆ ಅಷ್ಟೇ ಸೀಮಿತವಾಗಿಲ್ಲ ವೈರಲ್ ಜ್ವರದಿಂದ ಮುಕ್ತಿ ಪಡೆಯಲು ತುಳಸಿ ಎಲೆಗಳು ಬಹಳಷ್ಟು ಸಹಾಯ ಮಾಡುತ್ತವೆ. ಇದಕ್ಕಾಗಿ 5-7 ತುಳಸಿ ಎಲೆಗಳು ಮತ್ತು ಒಂದು ಚಮಚ ಲವಂಗದ ಪುಡಿಯನ್ನು ಒಂದು ಲೀಟರ್ ನೀರಿನಲ್ಲಿ ಚೆನ್ನಾಗಿ ಕುದಿಸಿ. ನಂತರ ಅದನ್ನು ಫಿಲ್ಟರ್ ಮಾಡಿ ಮತ್ತು ಪ್ರತಿ ಎರಡು ಗಂಟೆಗಳಿಗೊಮ್ಮೆ ಅರ್ಧ ಕಪ್ ಪ್ರಮಾಣದಲ್ಲಿ ಸೇವಿಸಿ.

  ಇದನ್ನೂ ಓದಿ: ಬದಲಾದ ವಾತಾವರಣದಲ್ಲಿ ಶೀತ- ಜ್ವರ ಬರಬಾರದು ಅಂದ್ರೆ ಆಹಾರಗಳನ್ನು ತಿನ್ನಿ

  3)ಅಮೃತಬಳ್ಳಿ

  ಜ್ವರ ಮತ್ತು ನೋವನ್ನು ನಿವಾರಿಸಲು ಅಮೃತಬಳ್ಳಿ ಚೆನ್ನಾಗಿ ಕೆಲಸ ಮಾಡುತ್ತದೆ. ಇದಕ್ಕಾಗಿ, 4-6 ಮೀಟರ್ ಉದ್ದದ ಅಮೃತಬಳ್ಳಿ ಅನ್ನು ಅರ್ಧ ಲೀಟರ್ ನೀರಿನಲ್ಲಿ ಕುದಿಸಿ. ನಂತರ ಅದನ್ನು ಫಿಲ್ಟರ್ ಮಾಡಿ ಮತ್ತು 3-4 ಬಾರಿ ಸಣ್ಣ ಪ್ರಮಾಣದಲ್ಲಿ ಸೇವಿಸಿ.

  4)ಶುಂಠಿ ಮತ್ತು ಜೇನು ತುಪ್ಪ

  ಈ ಎರಡೂ ಆಹಾರ ಪದಾರ್ಥಗಳು ಪ್ರತಿಯೊಬ್ಬರ ಮನೆಯಲ್ಲೂ ಇದ್ದೇ ಇರುತ್ತವೆ. ಶುಂಠಿಯಲ್ಲಿ ಅನಲ್ಗೆಸಿಕ್, ಆಂಟಿ - ಇನ್ಫಾಮೇಟರಿ, ಮತ್ತು ಆಂಟಿ - ಆಕ್ಸಿಡೆಂಟ್ ಗುಣ ಲಕ್ಷಣಗಳಿದ್ದು ವೈರಲ್ ಜ್ವರ ಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತವೆ. ಅದರಲ್ಲೂ ಜೇನು ತುಪ್ಪದ ಜೊತೆ ಸೇರಿದರೆ ಇದರ ಶಕ್ತಿ ಇನ್ನಷ್ಟು ಉಜ್ವಲಗೊಳ್ಳುತ್ತದೆ. ಏಕೆಂದರೆ ಜೇನು ತುಪ್ಪದಲ್ಲಿ ಸಹ ಆಂಟಿ - ಆಕ್ಸಿಡೆಂಟ್ ಗುಣ ಲಕ್ಷಣಗಳಿದ್ದು, ನಮ್ಮ ದೇಹದಲ್ಲಿ ಸೇರಿರುವ ಯಾವುದೇ ರೀತಿಯ ಕೆಟ್ಟ ಬ್ಯಾಕ್ಟೀರಿಯಾಗಳನ್ನು ದೇಹದಿಂದ ಹೊರ ಹಾಕುತ್ತವೆ. ಇದರಿಂದಲೂ ಸಹ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಜ್ವರ ಜಾಸ್ತಿ ಆಗದಂತೆ ತಡೆಯುತ್ತದೆ.

  5)ಮೆಂತ್ಯ ನೀರು

  ವೈರಲ್ ಜ್ವರದಲ್ಲಿ ಮೆಂತ್ಯ ನೀರನ್ನು ಕುಡಿಯುವುದು ಪ್ರಯೋಜನಕಾರಿ. ಇದಕ್ಕಾಗಿ, ಕೆಲವು ಮೆಂತ್ಯ ಬೀಜಗಳನ್ನು ಒಂದು ಲೋಟ ನೀರಿನಲ್ಲಿ ನೆನೆಸಿ ಮತ್ತು ರಾತ್ರಿಯಿಡೀ ಇರಿಸಿ. ಬೆಳಗ್ಗೆ ಈ ನೀರನ್ನು ಫಿಲ್ಟರ್ ಮಾಡಿ ಮತ್ತು ಪ್ರತಿ ಎರಡು ಗಂಟೆಗಳಿಗೊಮ್ಮೆ ಸಣ್ಣ ಪ್ರಮಾಣದಲ್ಲಿ ಕುಡಿಯಿರಿ.

  ಇದನ್ನೂ ಓದಿ: ಚಳಿಗಾಲದ ಜ್ವರಕ್ಕೆ ಮನೆಯಲ್ಲಿಯೇ ಇದೆ ನೈಸರ್ಗಿಕ ಮದ್ದು

  6)ಒಣದ್ರಾಕ್ಷಿ

  ಒಣದ್ರಾಕ್ಷಿವೈರಲ್ ಜ್ವರದಲ್ಲಿ ಉತ್ತಮ ಪರಿಹಾರವನ್ನು ನೀಡುತ್ತದೆ. ನೀವು ಎರಡು ಚಮಚ ಗೋಡಂಬಿಯನ್ನು ಒಂದು ಕಪ್ ನೀರಿನಲ್ಲಿ ಹಾಕಿ ಕೆಲವು ಗಂಟೆಗಳ ಕಾಲ ನೆನೆಸಿಡಿ. ನಂತರ ಒಣದ್ರಾಕ್ಷಿಗಳನ್ನು ಆ ನೀರಿನಲ್ಲಿಯೇ ಪುಡಿಮಾಡಿ. ನಂತರ ಅದರಲ್ಲಿ ಸ್ವಲ್ಪ ನಿಂಬೆಹಣ್ಣಿನ ರಸವನ್ನು ಬೆರೆಸಿ ಎರಡು ಬಾರಿ ಕುಡಿಯಿರಿ.
  Published by:ranjumbkgowda1 ranjumbkgowda1
  First published: