UTI Remedy: ಮೂತ್ರನಾಳದ ಸೋಂಕಿಗೆ ನಿಮ್ಮ ಮನೆಯಲ್ಲಿದೆ ಪರಿಹಾರ, ಈ ವಸ್ತುಗಳನ್ನು ಬಳಸಿ ಸಾಕು

Home remedies for UTI: ಆರೋಗ್ಯವನ್ನು ಎಷ್ಟು ಕಾಪಾಡಿಕೊಂಡರೂ ಸಾಲದು. ನಾವು ತಿನ್ನುವ ಆಹಾರದಿಂದಲೂ ಅನಾರೋಗ್ಯಕ್ಕೆ ತುತ್ತಾಗುವಂತಹ ಸಂಭವ ಹೆಚ್ಚಿರುತ್ತದೆ. ಅದರಲ್ಲಿಯೂ ಯಟಿಐ ಸಮಸ್ಯೆ ಕೂಡ ಒಂದು. ಮೊದಲೇ ವೈದ್ಯರಲ್ಲಿ ಹೋಗುವ ಬದಲು ಮನೆಮದ್ದು ಮಾಡಿಕೊಳ್ಳುವುದು ಉತ್ತಮ. ಹಾಗಾದರೆ, ಯಾವ ಮನೆಮದ್ದು ಸಹಾಯ ಮಾಡುತ್ತದೆ ಎಂಬುದು ಇಲ್ಲಿದೆ.

ಸಾಂದರ್ಬಿಕ ಚಿತ್ರ

ಸಾಂದರ್ಬಿಕ ಚಿತ್ರ

  • Share this:
ಮನುಷ್ಯನ ಆರೋಗ್ಯವು ಬಹಳ ಸೂಕ್ಷ್ಮ. ಆದ್ದರಿಂದ ಎಷ್ಟೇ ಜಾಗರೂಕರಾಗಿದ್ದರೂ ಕೂಡ ಸಾಕಾಗುವುದಿಲ್ಲ. ಅನಾರೋಗ್ಯ ಕಂಡಕೂಡಲೇ ವೈದ್ಯರನ್ನು (Doctor) ಕಾಣುವ ಬದಲು, ಮೊದಲಿಗೆ ನಾವೇ ಮನೆಮದ್ದನ್ನು  (Home remedies) ಮಾಡಿಕೊಳ್ಳುವುದು ಉತ್ತಮ. ಇದರ ಪರಿಣಾಮ ಆಗಲಿಲ್ಲವೆಂದಾಗ ಮಾತ್ರ ವೈದ್ಯರನ್ನು ಕಾಣುವುದು ಒಳ್ಳೆಯದು. ಅದೇ ರೀತಿಯಾಗಿ ಮೂತ್ರನಾಳದ ಸೋಂಕು (UTI) ಕೂಡ. ಇದರ ಅಡ್ಡ ಪರಿಣಾಮಗಳು ನೂರಾರು. ಇದಕ್ಕಾಗಿಯೇ ಒಂದಷ್ಟು ಮನೆಮದ್ದನ್ನು ಸ್ವತಃ ನಾವೇ ಮಾಡಿಕೊಳ್ಳುವುದು ಉತ್ತಮ. ಇದರ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ.

ಮೂತ್ರನಾಳದ ಸೋಂಕು (UTI ) ಪುರುಷರು ಹಾಗೂ ಮಹಿಳೆಯರಲ್ಲಿ ಇಬ್ಬರಲ್ಲಿಯೂ ಕಂಡು ಬರುತ್ತದೆ. ಅದರಲ್ಲೂ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಈ ಸಮಸ್ಯೆಗೆ ಕೆಲವು ಮನೆಮದ್ದನ್ನು ಇಲ್ಲಿ ನೀಡಲಾಗಿದೆ.

ನಿಮ್ಮ ಮೂತ್ರದ ವ್ಯವಸ್ಥೆಯ ಯಾವುದೇ ಭಾಗಗಳಿಗಾದರೂ ಸೋಂಕು ಸಂಭವಿಸಬಹುದಾದ ಸೋಂಕಾಗಿದೆ. ಅದು ನಿಮ್ಮ ಮೂತ್ರಪಿಂಡ, ಮೂತ್ರಕೋಶ, ಮೂತ್ರನಾಳವನ್ನು ಒಳಗೊಂಡಿರುತ್ತದೆ. ಅದರಲ್ಲೂ ಮಹಿಳೆಯರಿಗೆ ಮೂತ್ರನಾಳದ ಸೋಂಕು ಕಾಣುವುದು ಅಧಿಕ. ಇದು ದೇಹದಲ್ಲಿ ಕಂಡುಬರುವ ಎರಡನೇ ಸಾಮಾನ್ಯ ಸೋಂಕಾಗಿದ್ದು, ಬಹುತೇಕ ಮಹಿಳೆಯರು ಈ ಸೋಂಕಿಗೆ ತುತ್ತಾಗುತ್ತಾರೆ.

ಹಲವಾರು ವೈದೈಯರು ಇದಕ್ಕೆ ಪ್ರಥಮ ಚಿಕಿತ್ಸೆಯ ಬಗ್ಗೆ ತಿಳಿಸಿದ್ದಾರೆ. ಕಡಿಮೆ ನೀರು ಕುಡಿಯುವುದು, ಹುಳಿ, ಮಸಾಲೆಯುಕ್ತ ಆಹಾರ, ಸಕ್ಕರೆ ಭರಿತ ಆಹಾರ ಮತ್ತು ಕೆಫೀನ್,ಕಾರ್ಬೊನೇಟೆಡ್ ಪಾನೀಯಗಳು, ಕಾಫಿ, ಚಾಕೋಲೇಟ್ ಹೀಗೆ ಅತಿಯಾದ ಸೇವನೆಯಿಂದಾಗಿ UTI (Urinary Tract Infection) ಇನ್ನಷ್ಟು ಹೆಚ್ಚಾಗುತ್ತದೆ. ಆಯುರ್ವೇದದ ಪ್ರಕಾರ, ಪಿತ್ತವನ್ನು ಉಲ್ಬಣಗೊಳಿಸುವ ಯಾವುದಾದರೂ ಯುಟಿಐಗೆ ಕಾರಣವಾಗಬಹುದು. ಆದ್ದರಿಂದ ಅಂತಹ ಆಹಾರಗಳನ್ನು ತಪ್ಪಿಸಬೇಕು.

ಇದನ್ನೂ ಓದಿ: Weight Loss Tips: ತೂಕ ಇಳಿಬೇಕು ಅಂದ್ರೆ ಈಗ್ಲೇ ಈ 5 ಅಭ್ಯಾಸಗಳನ್ನು ನಿಲ್ಲಿಸಿ

UTI ನ ತೀವ್ರ ಲಕ್ಷ್ಣಣಗಳೇನು?
ಈ ಸಮಸ್ಯೆಯಲ್ಲಿ ಬಳಲುತ್ತಿದ್ದವರಿಗೆ ಆಗಾಗ ಮೂತ್ರ ವಿಸರ್ಜಿಸುವ ಪರಿಸ್ಥಿತಿ ಎದರಾಗುತ್ತಿರುತ್ತದೆ. ಇದೊಂದು ಮೊದಲ ಲಕ್ಷಣ ಎನ್ನಬಹುದು. ಮೂತ್ರವನ್ನು ವಿಸರ್ಜಿಸುವಾಗ ನೋವು, ಉರಿ ಅನುಭವಿಸಬಹುದು. ಹೊಟ್ಟೆಯ ಕೆಳಭಾಗ ಅಂದರೆ ಕಿಬ್ಬು ಹೊಟ್ಟೆಯ ಭಾಗದಲ್ಲಿ ನೋವು ಕಂಡುಬರುತ್ತದೆ. ಹಾಗೂ ಮೂತ್ರದಲ್ಲಿ ನೊರೆ ಇರುವುದು ಕೂಡ ಒಂದಾದ ಲಕ್ಷಣ. ಮೂತ್ರಪಿಂಡದ ಸೋಂಕು ಜ್ವರ, ಶೀತ, ವಾಕರಿಕೆ ಮತ್ತು ವಾಂತಿಗೆ ಕಾರಣವಾಗುತ್ತದೆ. ಮೂತ್ರನಾಳದಲ್ಲಿನ ಈ ಸೋಂಕು ಮೂತ್ರ ವಿಸರ್ಜನೆಯ ಸಮಯದಲ್ಲಿ ಉರಿಯುವಿಕೆಗೆ ಕಾರಣವಾಗಬಹುದು.

ಮನೆಮದ್ದುಗಳು ಯಾವುದು?
ನಮ್ಮ ಜೊತೆಯಲ್ಲಿಯೇ ಮನೆಯಲ್ಲಿಯೇ ಈ ಎಲ್ಲಾ ಸಾಮಾಗ್ರಿಗಳು ಇರುತ್ತವೆ. ಇದರಿಂದ ನಾನಾರೀತಿಯ ಮದ್ದುಗಳನ್ನು ತಯಾರಿಸಿ ಸೇವಿಸುವುದರಿಂದ ಮೊದಲ ಹಂತದ ಸಮಸ್ಯೆಯನ್ನು ಪರಿಹರಿಸಲು ಸಾಧ್ಯ.

ಅಕ್ಕಿ ನೀರು
ಯುಟಿಐ ಸ್ರವಿಸುವಿಕೆ, ಬೆನ್ನು ನೋವು, ತುರಿಕೆ ಹಾಗೂ ಕಿಬ್ಬು ಹೊಟ್ಟೆಯ ನೋವು ನಿವಾರಣೆಗೆ ಅಕ್ಕಿ ನೀರು ಸಹಕಾರಿಯಾಗಿದೆ ಎಂದು ಆಯುರ್ವೇದ ವೈದ್ಯರು ಹೇಳುತ್ತಾರೆ. ಅಕ್ಕಿ ನೀರನ್ನು 6 ರಿಂದ 8 ಗಂಟೆಗಳ ಕಾಲ ಮಾತ್ರ ಸಂಗ್ರಹಿಸಬಹುದು ಎಂಬುದು ನೆನಪಲ್ಲಿರಲಿ. ಹಾಗಾಗಿ ಪ್ರತಿದಿನ ತಾಜಾ ಅಕ್ಕಿ ನೀರನ್ನು ತಯಾರಿಸುವುದು ಉತ್ತಮವಾದ ಆಯ್ಕೆಯಾಗಿದೆ.

ಇದನ್ನು ಹೇಗೆ ತಯಾರಿಸುವುದು: ಬೇಕಾದಷ್ಟು ಅಕ್ಕಿಯನ್ನು ಚೆನ್ನಾಗಿ ತೊಳೆದು ಒಂದು ಪಾತ್ರೆಯಲ್ಲಿ ಹಾಕಿ, ನೀರಿನ ಜೊತೆ ಮಿಶ್ರಿಣ ಮಾಡಬೇಕು. ಅಕ್ಕಿ ಚೆನ್ನಾಗಿ ನೆನೆದ ನಂತರ ಆ ನೀರನ್ನು ಮಾತ್ರ ಸೋಸಿ ಕುಡಿಯಬೇಕು.

ನೆಲ್ಲಿಕಾಯಿ ಜ್ಯೂಸ್
ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಇದರಲ್ಲಿ ವಿಟಮಿನ್ ಸಿ ಅಂಶವು ಇರುವುದರಿಂದ ಕೂದಲು ಮತ್ತು ಹಲ್ಲಿಗೂ ಉತ್ತಮ. ನೆಲ್ಲಿಕಾಯಿ ಸುಲಭವಾಗಿ ಮಾರುಕಟ್ಟೆಗಳಲ್ಲಿ ಲಭ್ಯವಿರುತ್ತದೆ.
ತಯಾರಿಸುವುದು ಹೇಗೆ ?
ನೆಲ್ಲಿಕಾಯಿಯ ಬೀಜದಿಂದ ಬೇರ್ಪಡಿಸಿ, ಬೇಕಾದಷ್ಟು ಉಪ್ಪು ಮತ್ತು ಸಕ್ಕರೆಯನ್ನು ಮಿಶ್ರಣ ಮಾಡಿ ನಂತರ ಸೇವಿಸಬೇಕು.

ಇದನ್ನೂ ಓದಿ: Stomach Tumor: ಹೊಟ್ಟೆಯಲ್ಲಿ ಗಡ್ಡೆಗಳು ಹೇಗೆ ರೂಪುಗೊಳ್ಳುತ್ತವೆ, ಮೆಸೆಂಟೆರಿಕ್ ಗಡ್ಡೆ ಎಂದರೇನು?

ಕೊತ್ತೊಂಬರಿ ಬೀಜದ ನೀರು
ಕೊತ್ತೊಂಬರಿ ಬೀಜದ ನೀರು ದೇಹಕ್ಕೆ ಬಹಳ ತಂಪು. ಹಾಗೂ ಕಣ್ಣಿನ ತೊಂದರೆಗಳಿಗೂ ಕೂಡ ಇದು ರಾಮಬಾಣ. ಆದುದರಿಂದ ಕೊತ್ತೊಂಬರಿ ಬೀಜದ ನೀರು ಸೇವಿಸುವುದರಿಂದ ಯುಟಿಐ ತೊಂದರಯಿಂದ ಪರಿಹಾರ ಪಡೆಯಬಹುದು.
ತಯಾರಿಸುವ ವಿಧಾನ : ಕೊತ್ತೊಂಬರಿ ಬೀಜ ನೀರಿನಲ್ಲಿ ಕನಿಷ್ಠ 5 ಗಂಟೆಗಳ ಕಾಲವಾದರೂ ನೆನೆಯಬೇಕು. ಆಗ ಮಾತ್ರ ಅದರ ರಸವು ಬಿಡಲು ಸಹಕಾರಿಯಾಗುತ್ತದೆ. ತದನಂತರ ಆ ನೀರನ್ನು ಬೀಜಗಳಿಂದ ಬೇರ್ಪಡಿಸಿ, ನೀರಿಗೆ ಮಾತ್ರ ಒಂದಷ್ಟು ಉಪ್ಪನ್ನು ಮಿಶ್ರಣ ಮಾಡಿ ಸೇವಿಸಬೇಕು. ಇದರಿಂದ ಮೂತ್ರ ವಿಸರ್ಜನೆಯನ್ನು ಮಾಡುವಾಗ ಆಗುವ ನೋವು ಮತ್ತು ದುರ್ವಾಸನೆಗಳನ್ನು ತಡೆಯಲು ಸಾಧ್ಯ.

ಇತರ ಪಾನೀಯಗಳು:
ಇವುಗಳ ಜೊತೆಗೆ ಎಳನೀರು, ಕಬ್ಬಿನ ಜ್ಯೂಸ್ ಮತ್ತು ಎಳ್ಳಿನ ಪದಾರ್ಥಗಳನ್ನು ಸೇವಿಸುವುದರಿಂದ ಮೂತ್ರನಾಳದ ಸಮಸ್ಯೆಯಿಂದ ಪಾರಾಗಬಹುದು.

ನೋಡಿದ್ರಲ್ಲಾ ಯಾವ ರೀತಿಯ ಮನೆ ಮದ್ದುಗಳನ್ನು ಬಳಸಿದರೆ ಮೂತ್ರನಾಳದ ಸಮಸ್ಯೆಗಳಿಗೆ ಮೊದಲ ಹಂತದಲ್ಲಿ ರೋಗ ನಿವಾರಣೆ ಆಗುತ್ತದೆ ಎಂದು. ನೀವು ಕೂಡ ಒಮ್ಮೆ ಟ್ರೈ ಮಾಡಿ ನೋಡಿ.
First published: