Home Decorating: ಈ ಸೂಪರ್ ಐಡಿಯಾ ಬಳಸಿ ಮನೆಯನ್ನು ಅಲಂಕರಿಸಿ..

Simple Life Hacks: ಕನ್ನಡಿಗಳು ಜಾಗವನ್ನು ಪ್ರಕಾಶಮಾನವಾಗಿ ಮಾಡುತ್ತದೆ. ಏಕೆಂದರೆ ಅವು ಕೋಣೆಯ ಸುತ್ತಲೂ ಬೆಳಕನ್ನು ನೀಡುತ್ತದೆ. ಆದರೆ ಅದನ್ನು ಸರಿಯಾದ ಜಾಗದಲ್ಲಿ ಇರಿಸಬೇಕು.  ಅನಗತ್ಯ ಎನಿಸಿದ, ಈಗಾಗಲೇ ಉಪಯೋಗಿಸಿದ ಹಾಗೂ  ಅವಧಿ ಮೀರಿರುವ, ವಸ್ತುಗಳನ್ನು ಇಟ್ಟುಕೊಳ್ಳಬೇಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ವೃತ್ತಿಪರ ಹೋಮ್  ಡೆಕೋರೇಟರ್​ಗಳಿಗೆ(Home Decorator) ಮನೆಯನ್ನು ಹೇಗೆ ಸಿಂಪಲ್ ಆಗಿ ಡೆಕೋರೇಟ್ ಮಾಡಬಹುದು ಎಂಬುದು ತಿಳಿದಿರುತ್ತದೆ. ಆದರೆ ಅವರ ಬಳಿ ಮನೆಯನ್ನು ಅಲಂಕಾರ ಮಾಡಿಸುವುದು ಅಷ್ಟು ಸುಲಭವಲ್ಲ. ಅವರಿಗೆ ನೀಡುವಷ್ಟು ಹಣ ಸಹ ಇರದೆ ಇರಬಹುದು. ಮನೆಯ ಒಳಾಂಗಣ (Interior)ಸುಂದರವಾಗಿರಬೇಕು ಎಂಬುದು ಪ್ರತಿಯೊಬ್ಬರ ಬಯಕೆ ಹಾಗೂ ಇದಕ್ಕಾಗಿ ಅತಿ ಹೆಚ್ಚಿನ ಆಸಕ್ತಿ ವಹಿಸಲಾಗುತ್ತದೆ.  ಮನೆಯ ಒಳಗಿನ ವಾತಾವರಣ ಮನಸ್ಸಿಗೆ ನೆಮ್ಮದಿ ಹಾಗೂ ಶಾಂತಿಯನ್ನು ನೀಡುವಂತಿರಬೇಕು. ಮನೆಯ ಒಳಾಂಗಣವನ್ನು ಕೊಂಚ ಬದಲಾವಣೆಗಳಿಗೆ ಆಗಾಗ ಒಳಪಡಿಸಿ ಹೊಸತನವನ್ನೂ ತರುತ್ತಿರಬೇಕು. ಹಳೆಯ ಮತ್ತು ಅನಗತ್ಯ ವಸ್ತುಗಳನ್ನು ತೆಗೆದು ಬೇರೆ ವಸ್ತುಗಳನ್ನು ಇಟ್ಟು ಸುಂದರಗೊಳಿಸಬಹುದು.  

ಹಾಗಾದ್ರೆ ನೀವೆ ಮನೆಯನ್ನು ಅಲಂಕಾರ ಮಾಡಿಕೊಳ್ಳುವುದು ಹೇಗೆ ಎಂಬುದು ಇಲ್ಲಿದೆ.

ನಿಮ್ಮ ಮನೆಯು ಆರ್ಕಷಕವಾಗಿ ಕಾಣಬೇಕು ಎಂದರೆ ಮೊದಲು ಮುಂಭಾಗದ ಬಾಗಿಲಿಗೆ ಉತ್ತಮವಾದ ಬಣ್ಣವನ್ನು ಹಾಕಿ ಜೊತೆಗೆ ಅದಕ್ಕೆ  ಸುಂದರವಾಗಿರುವ  ವಸ್ತುಗಳನ್ನು ಅದಕ್ಕೆ ಅಂಟಿಸುವುದರಿಂದ ಹೆಚ್ಚು ಸುಂದರವಾಗಿ ಕಾಣುತ್ತದೆ. ಅನೇಕ ಸಂಸ್ಕೃತಿಗಳಲ್ಲಿ ಕೆಂಪು ಒಂದು ಅದೃಷ್ಟದ ಬಣ್ಣ ಎಂದು ಹೇಳಲಾಗುತ್ತದೆ.  ಕೆಂಪು ಬಣ್ಣ ಹಾಕಿದರೆ ಸ್ವಾಗತ ಎಂದು ಅರ್ಥ.

ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಸ್ಟೇಜರ್ ಕ್ರಿಸ್ಟೋಫರ್ ಬ್ರೈನಿಂಗ್ ಪ್ರಕಾರ, ಕಿತ್ತಳೆ ಮತ್ತು ಹಳದಿ ಎರಡೂ ಬಣ್ಣಗಳು ಸಂತೋಷವನ್ನು ಸೂಚಿಸುತ್ತದೆ. ಬಾಗಿಲು ಹಳೆಯದಾಗಿದ್ದರೆ ಅದನ್ನು ಬದಲಾಯಿಸಿ.

ಇದನ್ನೂ ಓದಿ: ಮನಿ ಪ್ಲ್ಯಾಂಟ್​ನ ಈ ದಿಕ್ಕುಗಳಲ್ಲಿ ಇಟ್ರೆ ಅಪಾಯ ಕಟ್ಟಿಟ್ಟ ಬುತ್ತಿ- ಯಾವ ದಿಕ್ಕಿನಲ್ಲಿಡಬೇಕು? ಇಲ್ಲಿದೆ..

ಮನೆಯ ಗೋಡೆಗಳಿಗೆ ಬಣ್ನವನ್ನು ಹಚ್ಚುವಾಗ ಎಚ್ಚರವಹಿಸಬೇಕು. ಕೆಲವೊಂದು ಬಣ್ಣಗಳು ಸೂಕ್ತವಾಗುವುದಿಲ್ಲ. ಹಾಗಾಗಿ ಲೈಟ್ ಕಲರ್​ಗಳನ್ನು ಗೋಡೆಗಳಿಗೆ ಹಚ್ಚಿ.  ಒಂದು ವೇಳೆ ಗೋಡೆಗಳಲ್ಲಿ ಬಿರುಕು  ಬಂದಿದ್ದರೆ ಅಥವಾ ಹಳೆಯ ಬಣ್ಣ ಸಿಪ್ಪೆ ಎದ್ದು ಅಸಹ್ಯವಾಗಿ ಕಾಣಿಸುತ್ತಿದ್ದರೆ,  ನಿಮ್ಮ ಬಳಿ ಹಣವಿಲ್ಲದಿದ್ದರೆ ಮನೆಯ ಕಪಾಟು ಅಥವಾ ಬೇರಾವುದೋ ವಸ್ತುವನ್ನು ಇದಕ್ಕೆ ಅಡ್ಡವಾಗಿ ಇಡಿ.

ಗೋಡೆಗೆ ಫೋಟೋಗಳನ್ನು  ನೇತು ಹಾಕಿ. ಇಲ್ಲವೇ ಈಗ ಹಲವಾರು ಸ್ಟಿಕರ್​ಗಳು ಲಭ್ಯವಿದೆ, ಅದನ್ನು ಗೋಡೆಗೆ ಹಾಕುವುದು ಗೋಡೆಯ ಅಂದವನ್ನು ಹೆಚ್ಚು ಮಾಡುತ್ತದೆ.  ನಿಮ್ಮ  ಎಲ್ಲಾ ವಸ್ತುಗಳು ಒಂದೇ ಕೋಣೆಯಲ್ಲಿ ಇರದಂತೆ, ಬದಲಿಗೆ ಮನೆಯ ಇತರ ಕೋಣೆಗಳಲ್ಲಿ ಇಡಿ. ಈ ಮೂಲಕ ಒಂದೆ ಕಡೆ ಹೆಚ್ಚು ವಸ್ತುಗಳು ಸಂಗ್ರಹ ಮಾಡದಿದ್ದರೆ, ಮನೆ ವಿಶಾಲವಾಗಿ ಇರುವಂತೆ ಕಾಣಿಸಲು ಸಾಧ್ಯವಾಗುತ್ತದೆ.

ಮನೆಯ ಇತರ ಭಾಗಗಳಿಗಿಂತ ಲೀವಿಂಗ್ ರೂಂ ಬಹಳ ಮುಖ್ಯ. ಅದರಲ್ಲಿಯೊ ಸೋಪಾ, ಕುರ್ಚಿ ಅಂದವಾಗಿ ಕಾಣಬೇಕು. ಅವುಗಳಲ್ಲಿಯಾವುದಾದರು ಒಂದು ಹರಿದು ಹೋಗಿದ್ದರೆ ಅಥವಾ ಮುರಿದಿದ್ದರೆ, ಅದಕ್ಕೆ ಒಂದು ಸುಂದರವಾದ ಬಟ್ಟೆಯನ್ನು ಮುಚ್ಚುವ ಮೂಲಕ ಅಂದಗಾಣಿಸಿ.

ಕನ್ನಡಿಗಳು ಜಾಗವನ್ನು ಪ್ರಕಾಶಮಾನವಾಗಿ ಮಾಡುತ್ತದೆ. ಏಕೆಂದರೆ ಅವು ಕೋಣೆಯ ಸುತ್ತಲೂ ಬೆಳಕನ್ನು ನೀಡುತ್ತದೆ. ಆದರೆ ಅದನ್ನು ಸರಿಯಾದ ಜಾಗದಲ್ಲಿ ಇರಿಸಬೇಕು.  ಅನಗತ್ಯ ಎನಿಸಿದ, ಈಗಾಗಲೇ ಉಪಯೋಗಿಸಿದ ಹಾಗೂ  ಅವಧಿ ಮೀರಿರುವ, ವಸ್ತುಗಳನ್ನು ಇಟ್ಟುಕೊಳ್ಳಬೇಡಿ.

ಇದನ್ನೂ ಓದಿ: ಯಾವುದೇ ಶ್ಯಾಂಪು, ಟ್ರೀಟ್​ಮೆಂಟ್​ ಮಾಡಿದ್ರೂ ತಲೆಹೊಟ್ಟು ಸಮಸ್ಯೆಯೇ; ಹಾಗಾದ್ರೆ ತಜ್ಞರಿಂದಲೇ ಇದೆ ಉತ್ತರ

ನಿಮ್ಮ ಮನೆಯ ಸ್ವಚ್ಚತೆಗೆ ಹೆಚ್ಚು ಅದ್ಯತೆ ನೀಡಿ.  ಮನೆ ಎಷ್ಟು ಸ್ವಚ್ಛವಾಗಿರುತ್ತದೆಯೋ ಅಷ್ಟು ಸುಂದರವಾಗಿ ಕಾಣುತ್ತದೆ.  ಪ್ರತಿಯೊಂದು ಕೊಠಡಿಯೂ ಮೂರು ರೀತಿಯ ಬೆಳಕನ್ನು ಹೊಂದಿರಬೇಕು: ಆಂಬಿಯೆಂಟ್, ಇದು ಒಟ್ಟಾರೆ ಪ್ರಕಾಶವನ್ನು ನೀಡುತ್ತದೆ ಮತ್ತು ಹೆಚ್ಚಾಗಿ ಸೀಲಿಂಗ್ ಫಿಕ್ಚರ್‌ಗಳಿಂದ ಬರುತ್ತದೆ.  ಟಾಸ್ಕ್, ಇದು ಸಾಮಾನ್ಯವಾಗಿ ಕಿಚನ್ ಐಲ್ಯಾಂಡ್ ಅಥವಾ ಓದುವ ಮೂಲೆ ಮೇಲೆ ಕಂಡುಬರುತ್ತದೆ. ಮತ್ತೊಮದು ಹೆಚ್ಚು ಅಲಂಕಾರಿಕವಾಗಿ ಕಾಣುವ ಲೈಟ್​ಗಳು.
Published by:Sandhya M
First published: