ಪ್ರತಿಯೊಬ್ಬರೂ ಕೆಲಸದಲ್ಲಿ ಒತ್ತಡವನ್ನು ಎದುರಿಸುತ್ತಾರೆ. ಕೆಲವೊಮ್ಮೆ ಆ ಒತ್ತಡಗಳು ಹೆಚ್ಚಿನ ದಿನದವರೆಗೆ ಇರುತ್ತದೆ. ಹಲವಾರು ಯೋಜನೆಗಳು ನಿಮ್ಮ ತಲೆ ಮೇಲೆ ಇರುತ್ತದೆ, ನಿಮಗೆ ಸಮಯ ಸಾಕಾಗುತ್ತಿಲ್ಲ ಎಂದು ಅನಿಸುತ್ತದೆ. ಇದು ನಿಮ್ಮ ವೈಯಕ್ತಿಕ ಜೀವನದ ಮೇಲೆ ಕೂಡ ಪರಿಣಾಮ ಬೀರುತ್ತದೆ. ಯಾವಾಗಲು ಚಿಂತೆ, ಒತ್ತಡ ನಿಮ್ಮ ಬದುಕನ್ನು ಬದಲಾಯಿಸುತ್ತದೆ. ವೈಯಕ್ತಿಕ ಮತ್ತು ವೃತ್ತಿ ಬದುಕಿನ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಈ ಗ ಜಗತ್ತು ಬದಲಾಗಿದೆ, ವೇಗವಾಗಿ ಸಾಗುತ್ತಿರುವಾಗ ವೈಯಕ್ತಿಕ ಮತ್ತು ವೃತ್ತಿಪರ ಜೀವನವನ್ನು ಸಮತೋಲನಗೊಳಿಸುವುದು ಹೆಚ್ಚು ಕಷ್ಟವಾಗುತ್ತಿದೆ. ಕೆಲಸದ ಒತ್ತಡ ಹಲವಾರು ಜನರ ಸಂಬಂಧಗಳನ್ನು ಹಾಳು ಮಾಡಿದೆ. ಆದ್ದರಿಂದ ನಿಮ್ಮ ಕೆಲಸವು ನಿಮ್ಮ ಸಂಬಂಧವನ್ನು ಹಾಳುಮಾಡುತ್ತಿದೆ ಎಂಬುದನ್ನು ಹೇಗೆ ತಿಳಿಯುವುದು ಇಲ್ಲಿದೆ.
1 ಯಾರೊಂದಿಗೆ ಬೆರೆಯಲು ಮನಸ್ಸಾಗುವುದಿಲ್ಲ
ನಿಮ್ಮ ಮನಸ್ಸು ಎಲ್ಲೋ ಕಳೆದು ಹೋದಂತೆ ಭಾಸವಾಗುತ್ತದೆ. ಯಾರು ಬೇಡ, ಯಾವುದೂ ಬೇಡ ಎಂಬ ಭಾವ ಆವಸರಿಸುತ್ತದೆ. ನಿಮಗೆ ಮೊದಲಿನ ಹಾಗೆ ಮನೆಯವರೊಂದಿಗೆ ಹಾಗೂ ಸ್ನೇಹಿತರೊಂದಿಗೆ ಒಳ್ಳೆಯ ಸಮಯ ಕಳೆಯಲು ಸಾಧ್ಯವಾಗುವುದಿಲ್ಲ. ಇದು ಒಳ್ಳೆಯ ಸೂಚನೆಯಲ್ಲ. ನೀವು ಮನೆಗೆ ಬಂದಾಗ ಸಹ ಕೆಲಸ ಮಾಡುತ್ತಿದ್ದರೇ, ಹಾಗೂ ವಾರಾಂತ್ಯದಲ್ಲಿ ಕೂಡ ಕೆಲಸದಲ್ಲಿ ಮಗ್ನರಾಗಿದ್ದರೇ, ನಿಮ್ಮ ಸಂಗಾತಿಯೊಡನೆ ಒಳ್ಳೆಯ ಸಮಯ ಕಳೆಯಲು ಸಾಧ್ಯವಾಗುವುದಿಲ್ಲ.
2. ಶಕ್ತಿ ಕಳೆದುಕೊಂಡಂತೆ ಭಾಸವಾಗುತ್ತದೆ
ನಿಮಗೆ ಕೆಲಸ ಹೆಚ್ಚಾದಾಗ ಒತ್ತಡ ಹೆಚ್ಚಾಗುತ್ತದೆ, ಅದು ನಿಮ್ಮ ಶಕ್ತಿಯನ್ನು ಕುಗ್ಗಿಸುತ್ತದೆ. ನಿಮ್ಮ ಕೆಲಸದ ಸ್ಥಳದ ವಾತಾವರಣ ನಿಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ನೀವು ಉತ್ಸಾಹ ಕಳೆದುಕೊಳ್ಳುತ್ತೀರ, ಮನೆಯಲ್ಲಿ ನಿಮ್ಮ ಸಂಗಾತಿಯೊಡನೆ ಮಾತನಾಡಲು, ಬೆರೆಯಲು ನಿಮಗೆ ಸಾಧ್ಯವಾಗುವುದಿಲ್ಲ. ಆಯಾಸ, ಹಿಂಸೆ ನಿಮ್ಮಲ್ಲಿ ಜಡತ್ವವನ್ನು ಉಂಟು ಮಾಡುತ್ತದೆ.
3. ಆಫೀಸ್ ಒತ್ತಡವನ್ನು ಮನೆಗೆ ತೆಗೆದುಕೊಂಡು ಹೋಗುವುದು
ನೀವು ಕೆಲಸದ ಒತ್ತಡವನ್ನು ಮನೆಗೆ ತೆಗೆದುಕೊಂಡು ಹೋಗುವುದು ಒಳ್ಳೆಯ ಅಭ್ಯಾಸವಲ್ಲ. ಅದು ನಿಮಗೆ ಹೆಚ್ಚು ಕಿರಿ ಕಿರಿ ಉಂಟು ಮಾಡುತ್ತದೆ. ನಿಮ್ಮ ಒತ್ತಡ ಮನೆಗೆ ಬಂದಾಗ ಅದು ಕುಟುಂಬಸ್ಥರ ಮೇಲೂ ಪರಿಣಾಮ ಬೀರುತ್ತದೆ. ನೀವು ನಿಮ್ಮ ಒತ್ತಡವನ್ನು ಸಂಗಾತಿಯ ಮೇಲೆ ಹಾಕುತ್ತೀರಾ, ಇದು ನಿಮ್ಮ ಸಂಬಂಧವನ್ನು ಹಾಳು ಮಾಡುತ್ತದೆ.
ಇದನ್ನೂ ಓದಿ: ಜಿಮ್ಗೆ ಹೋಗ್ತಿದ್ದೀರಾ? ಹಾಗಾದ್ರೆ ಈ ನಿಯಮಗಳನ್ನು ಪಾಲಿಸಿ
4. ಕೆಲಸದ ಬಗ್ಗೆಯೇ ಮಾತನಾಡುವುದು
ನಿಮ್ಮ ಸಂಗಾತಿಯೊಂದಿಗೆ ಕೆಲಸ ವಿಚಾರ ಹೊರತುಪಡಿಸಿ ಬೇರೆ ಏನು ಮಾತನಾಡದಿದ್ದರೆ ಇದು ಕೆಟ್ಟ ಸೂಚನೆ. ಕೆಲಸವನ್ನು ಅಲ್ಲಿಯೇ ಬಿಟ್ಟು ಬನ್ನಿ. ಮನೆಯಲ್ಲಿ ನಿಮ್ಮ ಸಂಗಾತಿ ಜೊತೆ ಬೇರೆ ವಿಚಾರಗಳನ್ನು ಮಾತನಾಡಿ. ತಮಾಷೆ ವಿಚಾರಗಳನ್ನು ಹಂಚಿಕೊಳ್ಳಿ. ಹೆಚ್ಚಿನ ಜನರು ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನವನ್ನು ನಿಭಾಯಿಸುವಲ್ಲಿ ವಿಫಲರಾಗುತ್ತಿದ್ದಾರೆ.
5. ಸಂಗಾತಿ ಬದಲಾವಣೆಯ ಸೂಚನೆ ನೀಡಿದರೆ
ಇದು ನಿಮ್ಮ ಸಂಬಂಧ ತುಂಬಾ ಹಾಳಾಗಿದೆ ಎಂಬುದರ ಕೊನೆಯ ಸೂಚನೆ. ಅವರು ನಿಮ್ಮ ವರ್ತನೆಯ ಬಗ್ಗೆ ಪದೇ ಪದೇ ಕಳವಳ ವ್ಯಕ್ತಪಡಿಸಿದರೆ, ಹಾಗೂ ನಿಮ್ಮ ಜೊತೆ ಹೆಚ್ಚು ಸಮಯ ಕಳೆಯಬೇಕು ಎಂದು ಬಯಸಿದರೆ ನೀವು ಎಚ್ಚೆತ್ತುಕೊಳ್ಳಬೇಕು .
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ