ಕೆಲವರು ಇರ್ತಾರೆ, ಯಾವಾಗ್ಲೂ ಮುಖವನ್ನು ಹರಳೆಣ್ಣೆ ಕುಡಿದವರಂತೆ ಮಾಡಿಕೊಂಡಿರುತ್ತಾರೆ. ಅವರ ಬಳಿಗೆ ಹೋಗಿ ಮಾತನಾಡುವುದಕ್ಕೂ ಏನೋ ಕಸಿವಿಸಿ. ಆದರೆ ಅವರನ್ನು ಮಾತನಾಡಿಸಿ ಸ್ವಲ್ಪ ಸಮಯ ಕಳೆದ ಮೇಲೆ ತಿಳಿಯುತ್ತದೆ. ಇವರು ನಿಜವಾಗಿಯೂ ಅದ್ಭುತ ವ್ಯಕ್ತಿತ್ವದವರು (Amazing Personality) ಅಂತಾ. ಒಂದು ವೇಳೆ ನೀವು ಅಂತಹ ವಿಚಿತ್ರ ಅಥವಾ ಸಂಕೀರ್ಣ ವ್ಯಕ್ತಿತ್ವದವರೇ (Different Personalityಆದರೂ ಅದ್ಭುತ ವ್ಯಕ್ತಿ (Amazing Person) ಆಗಿದ್ದೀರಾ? ಹಾಗಾದ್ರೆ ಅದನ್ನು ತಿಳಿದುಕೊಳ್ಳುವುದು ಹೇಗೆ? ಅನ್ನೋದಕ್ಕೆ ಈ ಕೆಳಗಿನ 10 ಗುಣಗಳು (Qualities) ನಿಮ್ಮ ಬಳಿ ಇದೆಯೇ ನೋಡಿ.
1. ಜನರು ನಿಮ್ಮನ್ನು ಅಥವಾ ನಿಮ್ಮ ಉದ್ದೇಶವನ್ನು ತಪ್ಪಾಗಿ ಅರ್ಥೈಸಿಕೊಳ್ಳುವರು.
ನಿಮ್ಮನ್ನು ನೀವು ಜನರಿಗೆ ಅರ್ಥಮಾಡಿಸುವಲ್ಲಿ ಸಾಕಷ್ಟು ಬಾರಿ ಸೋತಿರುತ್ತೀರಿ. ಇದಕ್ಕೆ ನಿಮ್ಮ ಸಂವಹನವೂ ಕಾರಣವಾಗಿರಬಹುದು. ಆದ್ದರಿಂದ ನೀವು ಏನೇ ಹೇಳಿದರೂ ಸ್ಪಷ್ಟವಾಗಿರಲಿ, ನೇರವಾಗಿರಲಿ. ಸರಿಯಾಗಿ ಕೇಳಿಸಿಕೊಂಡು ವಿವರಿಸಿ.
2. ನಿಮ್ಮದೇ ಗುಂಪು ಹುಡುಕುವುದು
ಪ್ರತಿಯೊಬ್ಬರಿಗೂ ಸಮಾನ ಮನಸ್ಕ ಸ್ನೇಹವಲಯದಲ್ಲಿದ್ದರೇ ಅದು ಕಂಫರ್ಟ್. ನಿಮಗೆ ಇದನ್ನು ಹುಡುಕಲು ಕಷ್ಟವಾಗುತ್ತಿದ್ದರೆ ತೊಂದರೆ ಇಲ್ಲ ಅದಕ್ಕಾಗಿ ಸಮಯ ತೆಗೆದುಕೊಳ್ಳಿ. ಬಹುತೇಕರು ಎಲ್ಲರೊಟ್ಟಿಗೆ ಬೆರೆಯುತ್ತಾರೆ. ಆದರೆ ಅಂತರಂಗದಲ್ಲಿ ಅವರು ಒಂಟಿಯಾಗಿರುತ್ತಾರೆ. ತಮ್ಮದೇ ಬಳಗವನ್ನು ಪ್ರತಿ ಗ್ರೂಪ್ನಲ್ಲೂ ಹುಡುಕುತ್ತಿರುತ್ತಾರೆ.
3. ನಿಮ್ಮ ಆಲೋಚನ ಲಹರಿ
ಸುಮ್ಮನೇ ಯಾವುದೋ ಸ್ನೇಹಬಳಗದಲ್ಲಿ ಇದ್ದೂ ಇಲ್ಲದಂತೆ ಗುರುತಿಸಿಕೊಳ್ಳುವುದಕ್ಕಿಂತಲೂ ನಿಮ್ಮದೇ ಆಲೋಚನೆ ಹೊಂದಿದವರೊಟ್ಟಿಗೆ ನಿಮಗೆ ಸ್ನೇಹ ರುಚಿಸುತ್ತದೆ. ನಿಮಗೆ ಕಲೆ ಬಗ್ಗೆ ಮಾತನಾಡಲು ಇಷ್ಟ, ನಿಮ್ಮ ಗ್ರೂಪ್ ರಾಜಕೀಯ ಮಾತನಾಡುತ್ತಿದ್ದರೆ ಖಂಡಿತಾ ನಿಮಗೆ ಕಷ್ಟವಾಗಬಹುದು. ಆದರೆ ಯೋಚಿಸಬೇಡಿ ಅದಕ್ಕೆ ಸಮಯವಿದೆ.
4. ನಿಮ್ಮ ಭಾವನೆ ವ್ಯಕ್ತಪಡಿಸಲು ಕಷ್ಟವಾಗಬಹುದು
ನಿಮ್ಮ ಆಲೋಚನೆ ಬೇರೆ ಇದ್ದಾಗ ನಿಮ್ಮ ಭಾವನೆ ಸುಲಭದಲ್ಲಿ ವ್ಯಕ್ತವಾಗಲ್ಲ. ನಿಮ್ಮ ಬಗ್ಗೆ ತಿಳಿಯದವರಿಗೆ ನಿಮ್ಮ ಆಲೋಚನೆ ಅರ್ಥ ಮಾಡಿಸುವುದು ಕಷ್ಟವೇ ಸರಿ. ಆದರೂ ನೀವು ಧೈರ್ಯ ಮಾಡಿ ಮುಂದುವರೆಯಬೇಕು. ಅವರು ನಿಮ್ಮಂತೆ ಇದ್ದರೆ ಖಂಡಿತಾ ನಿಮ್ಮನ್ನು ಅರ್ಥ ಮಾಡಿಕೊಳ್ಳುವರು.
5. ನೀವು ತುಂಬಾ ಸೂಕ್ಷ್ಮ ವ್ಯಕ್ತಿತ್ವದವರು
ನೀವು ತುಂಬಾ ಆಳವಾದ ವ್ಯಕ್ತಿತ್ವ ಉಳ್ಳವರು. ಆದರೆ ಜನರು ನಿಮ್ಮನ್ನು ಬಹಳ ಆಲೋಚಿಸುವವರು, ಸೂಕ್ಷ್ಮ ವ್ಯಕ್ತಿತ್ವದವರು ಎಂದು ಬ್ರ್ಯಾಂಡ್ ಮಾಡುತ್ತಾರೆ. ಅದನ್ನು ನಿರ್ಲಕ್ಷಿಸಿ ಮುನ್ನಡೆಯಿರಿ. ಕೆಲವು ಗುಣಗಳು ಅನನ್ಯ.
6. ನಿಮ್ಮ ಅಭಿಪ್ರಾಯಗಳು ಶಾಕಿಂಗ್ ಎನಿಸಬಹುದು
ನೀನು ನಿಜ ಹೇಳುತ್ತಿರುವೆಯಾ? ಅದು ಹೇಗೆ ನೀನು ಹಾಗೇ ಮಾಡಲು ಸಾಧ್ಯ? ನಿನಗೆ ಈ ಆಲೋಚನೆ ಹೇಗೆ ಬರುತ್ತೋ? ನೀನು ಹೀಗೆ ಹೇಳುವೆ ಎಂದು ನಾನು ಅಂದುಕೊಂಡಿರಲಿಲ್ಲ. ನಾನು ಈ ದೃಷ್ಟಿಕೋನದಲ್ಲಿ ಆಲೋಚಿಸಿರಲಿಲ್ಲ ಎನ್ನುವ ಮಾತುಗಳು ನಿಮ್ಮ ಕುರಿತು ಬರುತ್ತವೆ. ಅದನ್ನು ನಿರ್ಲಕ್ಷಿಸಿ ಬಿಡಬೇಕು.
7. ನಿಮ್ಮ ವ್ಯಕ್ತಿತ್ವ ಮರೆಮಾಚುವಿಕೆ
ಕೆಲವು ಬಾರಿ ನಿಮ್ಮ ಭಾವೋದ್ರೇಕತೆಯನ್ನು ಭದ್ರವಾಗಿಟ್ಟುಕೊಳ್ಳುವುದು. ನಿಮ್ಮದಲ್ಲದ ವ್ಯಕ್ತಿತ್ವ ಪ್ರದರ್ಶನ ಮಾಡುತ್ತ ನಿಮ್ಮ ವ್ಯಕ್ತಿತ್ವ ಮರೆಮಾಚುವುದು ಮಾಡಬೇಡಿ. ಹೀಗೆ ಮಾಡುವುದರಿಂದ ನಿಮ್ಮಂತೆ ಇರುವ ಸ್ನೇಹ ವಲಯವನ್ನು ಪಡೆಯಲು ಸಾಧ್ಯವಾಗದಿರಬಹುದು.
8. ಅಮುಖ್ಯವಾದ ವಿಷಯಗಳಲ್ಲಿ ಅನಾಸಕ್ತಿ
ನಿಮಗೆ ಇಷ್ಟವಾಗದ ಮುಖ್ಯ ಎನಿಸದ ಸಂಭಾಷಣೆಗಳಲ್ಲಿ ತೊಡಗುವುದನ್ನು ನೀವು ನಿಯಂತ್ರಿಸುತ್ತೀರಿ. ಆದರೆ ಜನರಿಗೆ ಸಣ್ಣ ಮಾತುಗಳೇ ಬಹಳ ಇಷ್ಟ. ನೀವು ಅದರಿಂದ ದೂರ ಉಳಿದರೆ ನೀವು ಸಂಕೀರ್ಣ ವ್ಯಕ್ತಿತ್ವದವರು ಎನ್ನುತ್ತಾರೆ. ಆಳವಾದ ಮಾತುಕತೆ ಮತ್ತು ಅಮುಖ್ಯ ಸಂಭಾಷಣೆಯಲ್ಲಿ ಸಮತೋಲನ ಸಾಧಿಸಿ.
9. ನೀವು ಸಂಕೀರ್ಣ ಅಥವಾ ಅಥರ್ವಾಗಲ್ಲ
ಚಿಕ್ಕ ಪುಟ್ಟ ಬೇಡದ ವಿಷಯಗಳ ಚರ್ಚೆಯಲ್ಲಿ ನೀವು ದೂರ ಉಳಿದಾಗ ಜನರು ನಿಮ್ಮನ್ನು ಸಂಕೀರ್ಣ ಎಂದು ಬಿಡಬಹುದು. ಆದರೆ ಅದು ನಿಮ್ಮ ವ್ಯಕ್ತಿತ್ವ. ಆದಷ್ಟು ಅದನ್ನು ಮೃದುವಾಗಿ ಎದುರಿಸಿ. ಏಕೆಂದರೆ ನೀವು ಅನನ್ಯರು ಎನ್ನುವುದು ತಿಳಿಯದ ಜನರಿರುವರು.
10. ಸಾಮಾಜಿಕ ನಿಯಮ ಅನುಸರಣೆ ಕಷ್ಟ
ಪ್ರತಿಯೊಬ್ಬರೂ ತಮ್ಮಂತೆ ಎಲ್ಲರೂ ಇರಬೇಕು ಎಂದು ಭಾವಿಸುತ್ತಾರೆ. ಆದರೆ ಇದು ಕಷ್ಟ. ಕೆಲವು ನಿಯಮಗಳೊಟ್ಟಿಗೆ ನಡೆದಾಗ ಸಹಜತೆ ಅನಿಸುತ್ತದೆ. ಆದರೆ ನೀವು ಅದನ್ನು ವಿರೋಧಿಸಿದಾಗ ವಿಚಿತ್ರವಾಗಿ ಕಾಣುತ್ತೀರಾ ಅಷ್ಟೇ. ಈ ಗುಣಗಳು ನಿಮಗೆ ಇದ್ದರೆ ಯೋಚಿಸಬೇಡಿ. ನೀವು ಅನನ್ಯತೆಯ ಆಗರ. ನಿಮ್ಮನ್ನು ಅರ್ಥಮಾಡಿಕೊಳ್ಳುವುದು ಕೆಲವರಿಗೆ ಇಷ್ಟ. ಬದಲಾವಣೆ ನಿಮಗೆ ಬೇಕಿದ್ದರೆ ನೋಡಿ ಯೋಚಿಸಿ. ಆದರೆ ನಿಮ್ಮ ತನದಲ್ಲಿನ ಒಳ್ಳೆಯತನ ಬಿಡಬೇಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ