Relationship Tips: ನಿಮ್ಮ ಸಂಗಾತಿ ಹೀಗೆ ವರ್ತಿಸುತ್ತಿದ್ರೆ ಅವರಿಗೆ ಸಂಬಂಧದಲ್ಲಿ ಆಸಕ್ತಿ ಇಲ್ಲ ಎಂದರ್ಥ

Relationship Advice: ಸಾಮಾನ್ಯವಾಗಿ ದಂಪತಿಗಳು ತಮ್ಮಲ್ಲಿರುವ ಎಲ್ಲವನ್ನೂ ಪರಸ್ಪರ ಹಂಚಿಕೊಳ್ಳಲು ಬಯಸುತ್ಥಾರೆ. ಸಣ್ಣ ವಿಷಯಗಳಿಂದ ಹಿಡಿದು ದೊಡ್ಡ ವಿಷಯಗಳವರೆಗೆ ಅವರಿಗೆ ಸಂಬಂಧಿಸಿದ ರಹಸ್ಯಗಳನ್ನು ಸಹ ಹಂಚಿಕೊಳ್ಳುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಒಂದು ಸಂಬಂಧದಲ್ಲಿ (Relationship)  ಸಣ್ಣ ಪುಟ್ಟ ಕಲಹಗಳು ಸಹಜ. ಅದು ಮದುವೆ ಆಗಿರಲಿ ಅಥವಾ ಕೇವಲ ಪ್ರೀತಿಯ ಸಂಬಂಧವಿರಲಿ ಇರಿಸುಮುರಿಸು ಸಹಜ. ಕೆಲವರು ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಆದರೆ ಇದೇ ಜಗಳ (Fight) ಒಂದು ಸಂಬಂಧ ಮುರಿಯಲು ಕಾರಣವಾಗುತ್ತದೆ. ಎಲ್ಲರ ಬಾಂಧವ್ಯದಲ್ಲೂ ಒಂದಿಷ್ಟು ಖುಷಿಯ ಕ್ಷಣಗಳಿವೆ. ಇನ್ನೂ ಕೆಲವು ನೋವಿನ ಕ್ಷಣಗಳು ಸಹ ಇರುತ್ತದೆ. ಒಂದು ಸಂಬಂಧದಲ್ಲಿ ನಾವು ಪ್ರೀತಿಸುವ ವ್ಯಕ್ತಿಗಳು ನಮ್ಮನ್ನ ಪ್ರೀತಿಸದಿದ್ದರೆ ಅದು ನಿಜಕ್ಕೂ ಕೆಟ್ಟ ಅನುಭವವನ್ನು ನೀಡುತ್ತದೆ. ಕೆಲವೊಂದು ಸಂದರ್ಭದಲ್ಲಿ ನಿಮ್ಮ ಸಂಗಾತಿಯೂ ನೇರವಾಗಿ ಸಂಬಂಧವನ್ನು ಮುರಿಯುತ್ತಾರೆ. ಆದರೆ ಇನ್ನೂ ಕೆಲವು ಸಂದರ್ಭದಲ್ಲಿ ಅವರ ಭಾವನೆಗಳನ್ನು ಹೇಳಲಾಗದೆ ವಿಚಿತ್ರವಾಗಿ ವರ್ತಿಸುತ್ತಾರೆ. ಅವರ ಆ ವರ್ತನೆಗಳು ಹಲವಾರು ವಿಚಾರಗಳನ್ನು ಸಾರಿ ಹೇಳುತ್ತೇವೆ.

ಯಾವುದೇ ಸಂಬಂಧ ಮುರಿದಾಗ ಅಂದರೆ ಇಬ್ಬರು ಬ್ರೇಕಪ್ ಆದಾಗ ನೋವು ಸಹಜ. ಹೆಚ್ಚಿನ ದಿನಗಳ ಕಾಲ ಬೇಸರದಲ್ಲಿ ದಿನಗಳನ್ನು ಕಳೆಯ ಬೇಕಾಗುತ್ತದೆ. ಆದರೆ ಬ್ರೇಕಪ್ ಧಿಡೀರ್​ ಎಂದು ಆದಾಗ ಹೆಚ್ಚು ನೋವಾಗುತ್ತದೆ. ಆದರೆ ನಿಮಗೆ ಮೊದಲೇ ಅದರ ಸೂಚನೆ ಲಭಿಸಿದರೆ ಮಾನಸಿಕವಾಗಿ ಗಟ್ಟಿಯಾಗಿರಬಹುದು. ಹಾಗಾದರೆ ನಿಮ್ಮ ಸಂಗಾತಿ ನಿಮ್ಮಿಂದ ದೂರಾಗುತ್ತಿದ್ದಾರೆ ಎಂಬುದ ತಿಳಿಯಲು ಕೆಲ ಸಲಹೆಗಳು ಇಲ್ಲಿದೆ.

ಯಾವುದೇ ಭಾವನಾತ್ಮಕ ಸಂಬಂಧವಿರುವುದಿಲ್ಲ

ಸಂಬಂಧವನ್ನು ಉಳಿಸಲು ಭಾವನಾತ್ಮಕ ಸಂಪರ್ಕ ಅಗತ್ಯ. ಇದು ಇಲ್ಲದಿದ್ದರೆ ಸಂಬಂಧ ಉಳಿಸಿಕೊಳ್ಳುವುದು ಬಹಳ ಕಷ್ಟ. ನಿಮ್ಮ ಸಂಬಂಧವು ಕೊನೆಗೊಳ್ಳುವ ಪ್ರಮುಖ ಲಕ್ಷಣವೆಂದರೆ ನೀವು ಇನ್ನು ಮುಂದೆ ದುರ್ಬಲರಾಗಿರುವುದಿಲ್ಲ ಹಾಗೂ ಸಂಗಾತಿ ಜೊತೆ ಭಾವಾನಾತ್ಮಕ ಸಂಬಂಧವನ್ನು ಹೊಂದಿರುವುದಿಲ್ಲ. ಸಂತೋಷದ ಸಮಯವನ್ನು ಕಳೆಯುವುದಿಲ್ಲ. ಅವರೊಂದಿಗೆ ಮುಕ್ತವಾಗಿ ಯಾವ ವಿಚಾರಗಳನ್ನೂ ಹಂಚಿಕೊಳ್ಳುವುದಿಲ್ಲ.

ಇದನ್ನೂ ಓದಿ: ಮೊದಲ ಬಾರಿ ಡೇಟಿಂಗ್ ಹೋಗಿ ಬಂದ್ಮೇಲೆ ನೀವು ಈ ಕೆಲಸ ಮಾಡಲೇಬೇಕು

ಯಾವುದನ್ನೂ ನಿಮ್ಮ ಜೊತೆ ಹಂಚಿಕೊಳ್ಳುವುದಿಲ್ಲ 

ಸಾಮಾನ್ಯವಾಗಿ ದಂಪತಿಗಳು ತಮ್ಮಲ್ಲಿರುವ ಎಲ್ಲವನ್ನೂ ಪರಸ್ಪರ ಹಂಚಿಕೊಳ್ಳಲು ಬಯಸುತ್ತಾರೆ. ಸಣ್ಣ ವಿಷಯಗಳಿಂದ ಹಿಡಿದು ದೊಡ್ಡ ವಿಷಯಗಳವರೆಗೆ ಅವರಿಗೆ ಸಂಬಂಧಿಸಿದ ರಹಸ್ಯಗಳನ್ನು ಸಹ ಹಂಚಿಕೊಳ್ಳುತ್ತಾರೆ. ಇಬ್ಬರ ನಡುವಿನ ವಿಶ್ವಾಸ ಹಾಗಿರುತ್ತದೆ. ಆದರೆ ನಿಮ್ಮ ಸಂಗಾತಿ ನಿಮ್ಮ ಬಗ್ಗೆ ಆಸಕ್ತಿ ತೋರಿಸದೆ, ಯಾವುದೇ ವಿಚಾರಗಳನ್ನು ಹಂಚಿಕೊಳ್ಳದೇ ಇದ್ದರೆ ಅಥವಾ ನೀವು ಅವರನ್ನ ಪ್ರಶ್ನೆ ಮಾಡಿದಾಗ ಯಾವುದೋ ಒಂದು ಕಾರಣವನ್ನು ಹೇಳುತ್ತಾರೆ.

ಸಾಮಾನ್ಯವಾಗಿ ಸಂಬಂಧದಲ್ಲಿ ಮನಸ್ತಾಪ ಉಂಟಾದಾಗ ಇತರರನ್ನು ಸಂತೋಷಪಡಿಸುವುದು ಮತ್ತು ಅವರಿಗೆ ಪ್ರೀತಿಯನ್ನು ತೋರಿಸುವುದು ಸಹಜ. ಆದರೆ ನೀವು ಇತರರೊಂದಿಗೆ ಸಮಯ ಕಳೆಯಲು ಪ್ರಯತ್ನಿಸುತ್ತಿದ್ದರೆ ಹಾಗೂ ಅವರಿಗೆ ಪ್ರೀತಿಯನ್ನು ತೋರಿಸುತ್ತಿದ್ದರೂ ಸಹ ಅವರಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದರೆ ಅವರು ನಿಮ್ಮ ಬಗ್ಗೆ ಆಸಕ್ತಿ ಹೊಂದಿಲ್ಲ ಎಂದು ಅರ್ಥ.

ನಿಮ್ಮಿಬ್ಬರಿಗೂ ಇಷ್ಟವಾಗುವ ಕೆಲಸಗಳನ್ನು ಒಟ್ಟಿಗೆ ಮಾಡುವುದರಿಂದ ಸಂಬಂಧ ಗಟ್ಟಿಯಾಗುತ್ತದೆ. ಆದರೆ ಮೊದಲು ಮಾಡುತ್ತಿದ್ದ ಹಾಗೆ ಈಗ ನಿಮ್ಮ ಸಂಗಾತಿ ನಿಮ್ಮ ನೆಚ್ಚಿನ ವಿಚಾರಗಳ ಬಗ್ಗೆ ಗಮನ ನೀಡುತ್ತಿಲ್ಲ ಎಂದರೆ ಅವರು ನಿಮ್ಮಿಂದ ದೂರಾಗಲು ಬಯಸಿದ್ದಾರೆ ಎಂದು ಅರ್ಥ. ಹಾಗೆಯೇ ಮೊದಲು ಲೈಗಿಂಕವಾಗಿ ಆತ್ಮೀಯರಾಗಿದ್ದ ನೀವಿಬ್ಬರೂ ಈಗ ಅದರ ಹೆಸರು ಎತ್ತುತ್ತಿಲ್ಲ ಎಂದರೆ ನಿಜಕ್ಕೂ ನೀವು ಯೋಚನೆ ಮಾಡಲೇಬೇಕು.

ಇದನ್ನೂ ಓದಿ: ಅಪ್ಪಿ ತಪ್ಪಿ ಈ ರೀತಿಯ ಹುಡುಗರನ್ನ ಲವ್ ಮಾಡ್ಬೇಡಿ

ಸಾಮಾನ್ಯವಾಗಿ ದಂಪತಿಗಳು ಅಥವಾ ಪ್ರೇಮಿಗಳು ತಮ್ಮ ಭವಿಷ್ಯ ಹೀಗೇ ಇರಬೇಕೆಂದು ಕನಸು ಕಾಣುವುದು ಸಹಜ. ವರ್ಷದಿಂದ ವರ್ಷಕ್ಕೆ ಇದು ಹೇಗಿರಬೇಕು ಎಂಬುದನ್ನ ಬದಲಾಯಿಸಿ, ಯೋಜನೆಗಳನ್ನು ಮಾಡುತ್ತಾರೆ. ಆದರೆ ನಿಮ್ಮಿಬ್ಬರ ಭವಿಷ್ಯದ ಬಗ್ಗೆ ನೀವು ಏನು ಹೇಳುತ್ತೀರಿ ಎಂಬುದನ್ನು ನಿಮ್ಮ ಸಂಗಾತಿ ಕಾಳಜಿ ವಹಿಸದಿದ್ದರೆ ಅಥವಾ ಅದರ ಬಗ್ಗೆ ಆಸಕ್ತಿ ತೋರಿಸದಿದ್ದರೆ ನಿಮ್ಮ ಸಂಬಂಧವು ಮುರಿದು ಹೋಗುವತ್ತ ಸಾಗುತ್ತಿದೆ ಎಂದು ಅರ್ಥ.
Published by:Sandhya M
First published: