Anant Chaturdashi: ಅನಂತ ಚತುರ್ದಶಿ ದಿನದ ಮಹತ್ವವೇನು? ಪೂಜೆಯ ವಿಧಾನ ಹೇಗೆ? ಇಲ್ಲಿದೆ..

Significance Of Anant Chaturdashi: ಸತತ 14 ವರ್ಷಗಳ ಕಾಲ ಈ ಉಪವಾಸವನ್ನು ಆಚರಿಸುವುದರಿಂದ  ವೈಕುಂಠ ಲೋಕದಲ್ಲಿ ಸ್ಥಾನ ಸಿಗುತ್ತದೆ ಎನ್ನುವ ನಂಬಿಕೆ ಜನರಲ್ಲಿದೆ.  ಅನಂತ ಚತುರ್ದಶಿ ಹಬ್ಬವು ಗಣೇಶ ಚತುರ್ಥಿಯ  ಕೊನೆಯ ದಿನ ಎನ್ನಲಾಗುತ್ತದೆ. ಈ ದಿನವೇ ಗಣೇಶ ವಿಸರ್ಜನೆಯನ್ನು ಮಾಡಲಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಅನಂತ ಚತುರ್ದಶಿಯನ್ನು9Anant Chaturdashi) ಹಿಂದೂ ಧರ್ಮದಲ್ಲಿ ಬಹಳ ಮುಖ್ಯ  ದಿನ ಎಂದು  ಆಚರಣೆ ಮಾಡಲಾಗುತ್ತದೆ. ಈ ದಿನ ಉಪವಾಸವನ್ನು ಆಚರಿಸುವ ಮೂಲಕ, ಎಲ್ಲಾ ತೊಂದರೆಗಳಿಂದ ಮುಕ್ತಿ ಪಡೆಯಬಹುದು ಎನ್ನುವ ನಂಬಿಕೆ ಜನರಲ್ಲಿದೆ. ಜೂಜಾಟದಲ್ಲಿ ಪಾಂಡವರು ತಮ್ಮ ಸಾಮ್ರಾಜ್ಯವನ್ನು ಕಳೆದುಕೊಂಡಾಗ, ಶ್ರೀಕೃಷ್ಣನ ಸಲಹೆಯಂತೆ ಅನಂತ ಚತುರ್ದಶಿಯಂದು ಉಪವಾಸ  ಮಾಡಿದರು ನಂತರ ಪಾಂಡವರು ಮತ್ತೆ ಸಾಮ್ರಾಜ್ಯವನ್ನು ಪಡೆದರು ಎಂದು ಹೇಳಲಾಗುತ್ತದೆ.  ಶುಕ್ಲ ಪಕ್ಷದ ಚತುರ್ದಶಿ ದಿನವನ್ನು ಅನಂತ ಚತುರ್ದಶಿ ಎಂದು  ಆಚರಣೆ ಮಾಡಲಾಗುತ್ತದೆ. ಭಗವಾನ್ ವಿಷ್ಣುವಿನ (Lord Vishnu)ಶಾಶ್ವತ ರೂಪವನ್ನು ಪೂಜಿಸಲು ಈ ದಿನ ಅತ್ಯಂತ ಪ್ರಮುಖ ದಿನ. ಈ ದಿನ ವಿಷ್ಣುವಿನ ಭಕ್ತರು ಇಡೀ ದಿನ ಉಪವಾಸ ಮಾಡಿ,  ಪೂಜೆಯ ಸಮಯದಲ್ಲಿ ಪವಿತ್ರ ದಾರವನ್ನು ಕೈಗೆ ಕಟ್ಟಿಕೊಳ್ಳುತ್ತಾರೆ.

ಸತತ 14 ವರ್ಷಗಳ ಕಾಲ ಈ ಉಪವಾಸವನ್ನು ಆಚರಿಸುವುದರಿಂದ  ವೈಕುಂಠ ಲೋಕದಲ್ಲಿ ಸ್ಥಾನ ಸಿಗುತ್ತದೆ ಎನ್ನುವ ನಂಬಿಕೆ ಜನರಲ್ಲಿದೆ.  ಅನಂತ ಚತುರ್ದಶಿ ಹಬ್ಬವು ಗಣೇಶ ಚತುರ್ಥಿಯ  ಕೊನೆಯ ದಿನ ಎನ್ನಲಾಗುತ್ತದೆ. ಈ ದಿನವೇ ಗಣೇಶ ವಿಸರ್ಜನೆಯನ್ನು ಮಾಡಲಾಗುತ್ತದೆ.

ಈ ಬಾರಿಯ ಪೂಜೆಯ ಸಮಯ ಹೀಗಿದೆ.

2021 ರ ಅನಂತ ಚತುರ್ದಶಿ ಹಬ್ಬವನ್ನು ಈ ಬಾರಿ ಸೆಪ್ಟೆಂಬರ್‌ 19 ರಂದು ಭಾನುವಾರ ಆಚರಿಸಲಾಗುತ್ತದೆ. ಬೆಳಿಗ್ಗೆ 06:08 ರಿಂದ ಸೆಪ್ಟೆಂಬರ್‌ 20 ರಂದು ಸೋಮವಾರ ಬೆಳಿಗ್ಗೆ 05:28 ರವರೆಗೆ ಈ ಶುಭ ಮುಹೂರ್ತವಿದೆ.

2021 ರ ಸೆಪ್ಟೆಂಬರ್ 19, ರಂದು ಬೆಳಿಗ್ಗೆ 5:59 ರಿಂದ ಚತುರ್ದಶಿ ಆರಂಭವಾಗಿ ಸೆಪ್ಟೆಂಬರ್ 20, ರಂದು ಸೋಮವಾರ ಬೆಳಿಗ್ಗೆ 05:28 ಕ್ಕೆ ಮುಕ್ತಾಯವಾಗುತ್ತದೆ.

ಇದನ್ನೂ ಓದಿ: ಸಿಂಹರಾಶಿಯವರಿಗೆ ಈ ವಾರ ಶುಭ ಸುದ್ಧಿಗಳು ಹೆಚ್ಚು, ನಿಮ್ಮ ರಾಶಿಯ ಈ ವಾರದ ಭವಿಷ್ಯ ಏನಿದೆ ನೋಡಿ?..

ಚತುರ್ದಶಿಯಂದು ಉಪವಾಸ ಮಾಡುವುದರ ಜೊತೆಗೆ, ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರವನ್ನು ಪಠಿಸಬೇಕು. ಭಕ್ತರು ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರವನ್ನು ಪಠಿಸುವುದರಿಂದ ಅಥವಾ ಅದನ್ನು  ಕೇಳುವುದರಿಂದ ಭಕ್ತರ ಬೇಡಿಕೆಗಳು ಪೂರ್ಣಗೊಳ್ಳುತ್ತವೆ ಎಂಬ ನಂಬಿಕೆ ಇದೆ.

ಗಣೇಶ ಚತುರ್ಥಿಯ ದಿನದಂದು ಕೂರಿಸಲಾಗುವ ಗಣೇಶನನ್ನು ಅನಂತ ಚತುರ್ದಶಿಯ ದಿನ ವಿಸರ್ಜನೆ ಮಾಡಲಾಗುತ್ತದೆ. ಇದರ ಹಿಂದೆ ಒಂದು ಪೌರಾಣಿಕ ಕಥೆಯಿದೆ, ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ತಿಥಿಯಲ್ಲಿ ವೇದವ್ಯಾಸರು ಮಹಾಭಾರತ ಕಥೆಯನ್ನು ಭಗವಾನ್‌ ಗಣೇಶನಿಗೆ ಹೇಳಿದನು. ಕಥೆಯನ್ನು ವಿವರಿಸುವಾಗ, ವೇದವ್ಯಾಸರು ತನ್ನ ಕಣ್ಣುಗಳನ್ನು ಮುಚ್ಚಿ ಮತ್ತು ಸತತ 10 ದಿನಗಳ  ಕಾಲ ನಿರಂತರವಾಗಿ ಗಣೇಶನಿಗೆ ಕಥೆ ಹೇಳಿದ್ದಾರೆ.

ಇದನ್ನೂ ಓದಿ: ಅನಂತ ಚತುರ್ದಶಿಯ ಈ ದಿನ ಈ ರಾಶಿಗೆ ಲಾಭ ತರಲಿದ್ದಾನೆ ಶನಿ; ಇಲ್ಲಿದೆ 12 ರಾಶಿಗಳ ದಿನಭವಿಷ್ಯ

10 ನೇ ದಿನ, ವೇದವ್ಯಾಸರು ಕಣ್ಣು ತೆರೆದಾಗ, ಗಣೇಶನು ಒಂದೇ ಸ್ಥಳದಲ್ಲಿ ಕುಳಿತು ನಿರಂತರವಾಗಿ ಕಥೆಯನ್ನು ಬರೆದಿರುವುದರಿಂದ ದೇಹದ ಉಷ್ಣತೆ ಏರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಗಣಪತಿಗೆ ತಂಪು ಮಾಡಲು ವೇದವ್ಯಾಸರ  ಅಣತಿಯಂತೆ ಗಣಪತಿ ಮಹಾಭಾರತವನ್ನು ಬರೆಯುತ್ತಿದ್ದ ಸ್ಥಳದಲ್ಲಿ ಅಲಕಾನಂದ ಮತ್ತು ಸರಸ್ವತಿ ನದಿಗಳ ಸಂಗಮವಾಗುತ್ತದೆ. ಈ ಉಗಮದ ದಿನವನ್ನು ಅನಂತ ಚತುರ್ದಶಿ ಎಂದು ಆಚರಣೆ ಮಾಡಲಾಗುತ್ತದೆ.
Published by:Sandhya M
First published: